ಸೂತಶೇಖರ ರಸ (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ರೋಗ ಪಿತ್ತದ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
ಆಮ್ಲಪಿತ್ತ, ವಾಂತಿ, ಹೊಟ್ಟೆ ನೋವು, ಕಡಿಮೆ ಜೀರ್ಣಶಕ್ತಿ, ಅತಿಸಾರ (ಭೇದಿ), ಬಾಯಿ ಹುಣ್ಣು, ತಲೆತಿರುಗುವಿಕೆ, ತಲೆನೋವು, ಬಿಕ್ಕಳಿಕೆ, ಉಬ್ಬಸ, ಜ್ವರ, ಶರೀರ ಕ್ಷೀಣವಾಗುವುದು, ಶರೀರದ ಮೇಲೆ ಪಿತ್ತದ ಗುಳ್ಳೆ ಏಳುವುದು, ಪಿತ್ತದಿಂದ ನಿದ್ದ ಬರದಿರುವುದು, ಅಧಿಕ ರಕ್ತದೊತ್ತಡ ಇಂತಹ ರೋಗಗಳಿಗೆ ಹಾಗೆಯೇ ಮೆದುಳು ಮತ್ತು ಹೃದಯಕ್ಕೆ ಹಿತಕರ | ದಿನದಲ್ಲಿ 2-3 ಸಲ 1-2 ಮಾತ್ರೆಗಳನ್ನು 2 ಗುಟುಕು ನೀರಿನೊಂದಿಗೆ / ಅರ್ಧ ಚಿಕ್ಕ ಬಟ್ಟಲು ಹಾಲು ಮತ್ತು 1 ಚಮಚ ತುಪ್ಪದೊಂದಿಗೆ / ಅರ್ಧ ಚಮಚ ಜೇನುತುಪ್ಪ ಮತ್ತು 1 ಚಮಚ ತುಪ್ಪದೊಂದಿಗೆ ಸೇವಿಸಬೇಕು. ಮಾತ್ರೆ ಸೇವಿಸುವ ಮೊದಲು ಮತ್ತು ನಂತರ 1 ಗಂಟೆ ಏನನ್ನೂ ತಿನ್ನಬಾರದು-ಕುಡಿಯಬಾರದು. | ತಾತ್ಕಾಲಿಕ ಅಥವಾ 40 ದಿನ |
ತೀವ್ರ ಹೊಟ್ಟೆ ನೋವು ಅಥವಾ ತೀವ್ರ ತಲೆ ನೋವು | ಪ್ರತಿ ಅರ್ಧ ಗಂಟೆಗೊಮ್ಮೆ 1 ಮಾತ್ರೆ ಕಾಲು ಚಮಚ ಜೇನು ತುಪ್ಪದಲ್ಲಿ ಬೆರೆಸಿ ಸೇವಿಸಬೇಕು | ಹೆಚ್ಚೆಂದರೆ 10 ಮಾತ್ರೆಗಳು |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.
3. ಮೈ ಮತ್ತು ಕೈಕಾಲುಗಳ ಉರಿ, ಮೈಯಲ್ಲಿ ಉಗಿ ಬಂದಹಾಗೆ ಅನಿಸುವುದು, ಕಣ್ಣುಗಳು ಬಿಸಿಯಾಗುವುದು ಇತ್ಯಾದಿ ತೀವ್ರ ಉಷ್ಣತೆಯ ಲಕ್ಷಣಗಳು ಕಾಣಿಸಿದರೆ ಔಷಧವನ್ನು ಸೇವಿಸಬಾರದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)