ಲಘುಮಾಲಿನಿ ವಸಂತ (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧವು ಶರೀರದಲ್ಲಿರುವ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
ಶರೀರದೊಳಗಿರುವ ಜ್ವರ, ಸ್ಪ್ಲೀನ ದೊಡ್ಡದಾಗುವುದು, ಪದೇ ಪದೇ ಕಾಡುವ ಅತಿಸಾರ, ಶರೀರ ಕ್ಷೀಣವಾಗುವುದು, ಮೂಲವ್ಯಾಧಿ, ಹಸಿವಾಗದಿರುವುದು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು, ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು, ಮತ್ತು ಕಣ್ಣುಗಳ ರೋಗ | ಬೆಳಗ್ಗೆ ಮತ್ತು ಸಾಯಂಕಾಲ 1-2 ಮಾತ್ರೆಗಳನ್ನು 1 ಚಿಟಿಕೆ ಪಿಪ್ಪಲಿ ಚೂರ್ಣ ಮತ್ತು 1 ಚಮಚ ಜೇನುತುಪ್ಪದೊಂದಿಗೆ / 1 ಚಿಕ್ಕ ಬಟ್ಟಲು ಹಾಲಿನೊಂದಿಗೆ ಸೇವಿಸಬೇಕು. ಈ ಔಷಧಿ ಸೇವಿಸುವ ಮೊದಲು ಮತ್ತು ನಂತರ ಸಾಧಾರಣ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು-ಕುಡಿಯಬಾರದು. | 1 ರಿಂದ 3 ತಿಂಗಳು |
ಮಳೆಗಾಲ ಮತ್ತು ಬೇಸಿಗೆಯಲ್ಲಿ ತಂಪು ಗಾಳಿಯ ಸ್ಪರ್ಶದಿಂದ ಮೈಯಲ್ಲಿ ಪಿತ್ತವೃದ್ಧಿಯಾಗುವುದು ಮತ್ತು ಮೈ ತುರಿಕೆ | ದಿನದಲ್ಲಿ 2-3 ಬಾರಿ 2-4 ಮಾತ್ರೆಗಳನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಸೇವಿಸಬೇಕು. ಇದರೊಂದಿಗೆ ರಾತ್ರಿ ಮಲಗುವಾಗ ಸ್ವಲ್ಪ ನೀರಿನಲ್ಲಿ 1 ಚಮಚ ತ್ರಿಫಲಾ ಚೂರ್ಣವನ್ನೂ ಸೇವಿಸಬೇಕು. ಬೆಳಗ್ಗೆ ಸ್ನಾನದ ಮೊದಲು ಕಾಲು ಚಮಚ ಕಾಳು ಮೆಣಸಿನ ಚೂರ್ಣವನ್ನು ತುಪ್ಪದಲ್ಲಿ ಕಲಸಿ ಇಡೀ ಶರೀರಕ್ಕೆ ಹಚ್ಚಿಕೊಳ್ಳಬೇಕು. |
7 – 15 ದಿನಗಳು |
ಚಿಕ್ಕ ಮಕ್ಕಳ ಜ್ವರ | 3 ವರ್ಷಗಳ ವರೆಗಿನ ಮಕ್ಕಳಿಗೆ ಅರ್ಧ ಮಾತ್ರೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 1 ಮಾತ್ರೆಯನ್ನು ದಿನದಲ್ಲಿ 2-3 ಬಾರಿ ಅರ್ಧ ಚಮಚ ಜೇನುತುಪ್ಪದೊಂದಿಗೆ ನೀಡಬೇಕು. | 5 ದಿನ |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.
3. ಬಾಯಿ ಹುಣ್ಣು ಮತ್ತು ಮೈ ಉರಿ ಈ ಲಕ್ಷಣಗಳಿರುವಾಗ ಈ ಔಷಧವನ್ನು ಸೇವಿಸಬಾರದು
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)