ಬ್ರಾಹ್ಮಿ ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ನಿದ್ರೆ ಬರದಿರುವುದು, ಫಿಟ್ಸ್ ಬರುವುದು, ಮರೆವು, ತಲೆ ಬಿಸಿಯಾಗುವುದು, ಕೋಪ ಬರುವುದು, ಕಿರಿಕಿರಿಯಾಗುವುದು, ಹಾಗೆಯೇ ಬುದ್ಧಿ ತೀಕ್ಷ್ಣವಾಗಲು | 4 ಚಮಚ ಬ್ರಾಹ್ಮಿ ಚೂರ್ಣವನ್ನು 4 ಚಿಕ್ಕ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕುದಿಸಿ, ತಣ್ಣಗಾದ ಮೇಲೆ ಅದನ್ನು ಸೂಸಿ ಬಾಟಲಿಯಲ್ಲಿ ತುಂಬಿಸಿಡಬೇಕು. ಅದಕ್ಕೆ 10 ಗ್ರಾಂ ಭಿಮಸೇನಿ ಕರ್ಪೂರದ ಹುಡಿ ಸೇರಿಸಿ. ರಾತ್ರಿ ಮಲಗುವಾಗ 1-2 ಚಮಚ ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಬೇಕು. ಮಲಗುವ ಮೊದಲು 1 ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 3 ತಿಂಗಳು |
2. ಉಷ್ಣತೆಯ ರೋಗ, ಪಿತ್ತ ಹೆಚ್ಚಾಗುವುದು, ಮತ್ತು ತಲೆ ತಿರುಗುವುದು | 1 ಚಮಚ ಬ್ರಾಹ್ಮಿ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯನ್ನು ಬೆರೆಸಿ ದಿನದಲ್ಲಿ 2-3 ಬಾರಿ ನೀರಿನೊಂದಿಗೆ ಸೇವಿಸಬೇಕು. | 7 ದಿನ |
3. ಮೂತ್ರದಲ್ಲಿ ಉರಿ ಮತ್ತು ಮೂತ್ರದ ಬಣ್ಣ ಬದಲಾಗುವುದು (ರಾಡಿಯಂತೆ) | 1 ಚಮಚ ಬ್ರಾಹ್ಮಿ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯನ್ನು ಬೆರೆಸಿ ದಿನದಲ್ಲಿ 2-3 ಬಾರಿ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 7 ದಿನ |
ಆ. ಸೂಚನೆ
8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)