ಪುನರ್ನವಾ ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ಇದನ್ನು ‘ಪುನರ್ನವಾ’ ಎಂದು ಕರೆಯುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ಮಲಬದ್ಧತೆ, ಮೂತ್ರದಲ್ಲಿ ಕಲ್ಲು, ಮೂತ್ರನಾಳದ ರೋಗಗಳು, ಮೂತ್ರಪಿಂಡಗಳ ಕಾರ್ಯ ಸುಧಾರಿಸಲು | 1 ಚಮಚ ಪುನರ್ನವಾ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ಎರಡೂ ಸಲ ಊಟಕ್ಕಿಂತ 30 ನಿಮಿಷಗಳ ಮುಂಚೆ ಸೇವಿಸಬೇಲು | 1 ತಿಂಗಳು |
2. ಊತ, ಬಾವು | 1 ಚಮಚ ಪುನರ್ನವಾ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ದಿನದಲ್ಲಿ 3-4 ಸಲ ಸೇವಿಸಬೇಕು. ಪುನರ್ನವಾ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಬಾವು ಬಂದಿರುವ ಜಾಗಕ್ಕೆ ಲೇಪಿಸಬೇಕು. 1 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಬೇಕು. | 7 ದಿನ |
ಆ. ಸೂಚನೆ
8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)