ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನಿಖರವಾದ ರೂಪ ಯಾವುದು, ಭಾವದ ಲಕ್ಷಣ ಯಾವುದು, ಎಷ್ಟು ವಿಧಗಳಿವೆ, ಭಾವಜಾಗೃತಗೊಳಿಸಲು ಏನೇನು ಪ್ರಯತ್ನಗಳಾಗಬೇಕು, ಭಾವಜಾಗೃತಿಯ ಹಂತಗಳು ಯಾವುವು ಮುಂತಾದ ಮಾಹಿತಿ ಗೊತ್ತಿರುವುದಿಲ್ಲ. ಈ ಮಾಹಿತಿಯು ಜಿಜ್ಞಾಸು ಮತ್ತು ಸಾಧಕರಿಗೆ ಸಿಗಬೇಕು ಎಂದು ಈ ಲೇಖನಗಳನ್ನು ನೀಡುತ್ತಿದ್ದೇವೆ.
ಕೇವಲ ಮನುಷ್ಯರಷ್ಟೇ ಅಲ್ಲ, ಎಲ್ಲ ಪ್ರಾಣಿಮಾತ್ರರು ಸಹ ಹೆಚ್ಚು ಹೆಚ್ಚು ಸುಖ ಸಿಗಬೇಕೆನ್ನುವುದಕ್ಕಾಗಿಯೇ ಚಡಪಡಿಸುತ್ತಿರುತ್ತವೆ. ಇರುವೆಗೆ ಆಹಾರದ ಒಂದೊಂದು ಕಣವನ್ನು ಸೇರಿಸಲು ಬಹಳ ಸಂಘರ್ಷ ಮಾಡಬೇಕಾಗುತ್ತದೆ. ಆದರೆ ಅದು ಅದನ್ನು ಸತತವಾಗಿ ಮಾಡುತ್ತಲೇ ಇರುತ್ತದೆ. ಏಕೆಂದರೆ ಅದರಲ್ಲಿ ಅದು ಆನಂದವನ್ನು ಪಡೆಯುತ್ತದೆ. ಇಷ್ಟು ಚಿಕ್ಕ ಜೀವ ಸಹ ಆನಂದಪ್ರಾಪ್ತಿಯ ಹಿಂದೆ ಓಡುತ್ತಿರುತ್ತದೆ ಎಂದು ನಮ್ಮ ಇದರಿಂದ ಗಮನಕ್ಕೆ ಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸಹ ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಮೂಲಕ ಸುಖ ಭೋಗಿಸಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ಈಗ ಹೇಳಿದ ಕೆಲವು ಉದಾಹರಣೆಗಳಲ್ಲಿ ಹೇಳಿರುವ ಸುಖವು ತಾತ್ಕಾಲಿಕವಾಗಿದೆ ಮತ್ತು ಇನ್ನೊಂದೆಡೆ ಆತ್ಮಸುಖ ಅರ್ಥಾತ್ ಆನಂದವು ಚಿರಂತನ ಮತ್ತು ಸರ್ವೋಚ್ಚ ಮಟ್ಟದ್ದಾಗಿದೆ ಎಂದು ತಿಳಿಯುತ್ತದೆ.
ಈ ಆನಂದವನ್ನು ಮಾತ್ರ ಪರಮಾನಂದ ಸ್ವರೂಪನಾದ ದೇವರೇ ನೀಡಬಲ್ಲರು. ಏಕೆಂದರೆ, ನಾವೆಲ್ಲರೂ ಸುಖ ದುಃಖದ ಚಕ್ರದಲ್ಲಿ ಸಿಲುಕಿಕೊಂಡಿದ್ದೇವೆ. ಆದರೆ ಈಶ್ವರನು ಮಾತ್ರ ಸುಖ ದುಃಖದ ಆಚೆಗಿದ್ದಾನೆ. ಅವನ ಸ್ವರೂಪವು ಸತ್-ಚಿತ್-ಆನಂದಸ್ವರೂಪವಾಗಿದೆ.
ಹಾಗಾಗಿ ನಿಜವಾದ ಆನಂದವು ಈಶ್ವರನ ಸ್ಮರಣೆಯಲ್ಲಿದೆ. ನೀವು ನಿಮ್ಮ ಇಷ್ಟದೇವರ ಉಪಾಸನೆಯನ್ನು ಮಾಡುತ್ತಿರಬಹುದು, ಕೆಲವರು ಗುರುಗಳ ಮಾರ್ಗದರ್ಶನವನ್ನು ಸಹ ಪಡೆದಿರಬಹುದು ಅಥವಾ ಅಧ್ಯಾತ್ಮದ ವಿಷಯದಲ್ಲಿ ಕಥೆ-ಕೀರ್ತನೆಗಳನ್ನು ಕೇಳಿರಬಹುದು. ಕೆಲವರು ಧ್ಯಾನ ಮಾಡುತ್ತಿರಬಹುದು, ಕೆಲವರು ನಾಮಜಪ ಮಾಡುತ್ತಿರಬಹುದು. ಇವೆಲ್ಲವೂ ಅಧ್ಯಾತ್ಮಕ್ಕೆ ಸಂಬಂಧಿತವಾಗಿದೆ. ಆದರೆ ಇದೆಲ್ಲವನ್ನು ನಾವು ಕೆಲವು ಕ್ಷಣಗಳಿಗಾಗಿ, ಕೆಲವು ಗಂಟೆಗಳಿಗಾಗಿ ಮಾಡಬಲ್ಲೆವು. ಆದರೆ ಪ್ರತಿಯೊಂದು ಕ್ಷಣ ಮಾಡುವುದು ಸಾಧ್ಯವಾಗದು. ನಾವು ಈ ಆನಂದವನ್ನು ಅಷ್ಟೇ ಸಮಯಕ್ಕಾಗಿ ಸೀಮಿತವಾಗಿಡದೇ ದಿನವಿಡೀ ಪ್ರತಿಯೊಂದು ಕ್ಷಣ ಅಂದರೆ 24 ಗಂಟೆಗಳ ಕಾಲ ಅನುಭವಿಸುವಂತಾಗಬೇಕು. ಆದರೆ ಆ ಆನಂದವು ಯಾವಾಗ ಸಿಗುತ್ತದೆ? ನಾವು ನಿರಂತರವಾಗಿ ಈಶ್ವರನ ಸ್ಮರಣೆಯನ್ನು ಮಾಡಿದಾಗ ಮಾತ್ರ ಅದು ಸಿಗುತ್ತದೆ. ಆನಂದಸ್ವರೂಪ ಈಶ್ವರನನ್ನು ಸತತವಾಗಿ ಸ್ಮರಿಸಿದಾಗ ಈ ಆನಂದದ ಸಂಸ್ಕಾರವು ನಮ್ಮ ಮೇಲಾಗುತ್ತದೆ.
ದೇವರ (ಈಶ್ವರನ) ಸ್ಮರಣೆಯನ್ನು ಮಾಡುವುದು ಇದರ ಇನ್ನೊಂದು ಹೆಸರೇ ಭಾವ!
ದೇವರ (ಈಶ್ವರನ) ಬಗ್ಗೆ ನಮಗಿರುವ ಅರಿವು, ಅವರ ನಿತ್ಯ ಸ್ಮರಣೆ ಅಥವಾ ಪ್ರೇಮ ಇವುಗಳೇ ಭಾವವಾಗಿದೆ ಮತ್ತು ಇದರ ಮಾಧ್ಯಮದಿಂದ ನಾವು ಈಶ್ವರನೊಂದಿಗೆ ಜೋಡಿಸಲ್ಪಡಬಹುದು ಎಂದು ದೃಢವಾಗುತ್ತದೆ.
ಭಾವದ ಮಹತ್ವವನ್ನು ನಾವೀಗ ತಿಳಿದುಕೊಂಡೆವು. ಆದರೆ ಆ ಭಾವವನ್ನು ಜಾಗೃತವಾಗಿಡುವುದು ಸಹ ಆವಶ್ಯಕವಾಗಿದೆ. ಭಾವಜಾಗೃತಿಗಾಗಿ ಹೇಗೆ ಪ್ರಯತ್ನ ಮಾಡಬೇಕು ಇದನ್ನು ನಾವೀಗ ತಿಳಿದುಕೊಳ್ಳೋಣ.
ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು?
ನಾವು ಹೇಗೆ ಸ್ಥೂಲದಲ್ಲಿ ಶರೀರದಿಂದ ಕಾರ್ಯವನ್ನು ಮಾಡುತ್ತೇವೆಯೋ ಅದೇ ಕೃತಿಯನ್ನು ಮನಸ್ಸಿನಿಂದ ಮಾಡುವುದು ಅರ್ಥಾತ್ ಮನಸ್ಸಿನ ಸ್ತರದಲ್ಲಿ ಮಾಡುತ್ತೇವೆ. ವ್ಯಾವಹಾರಿಕ ಭಾಷೆಯಲ್ಲಿ ಇದಕ್ಕೆ ‘ಕಲ್ಪನೆ ಮಾಡುವುದು’ ಎನ್ನುತ್ತಾರೆ. ನಾವು ನಮ್ಮ ಶರೀರದಿಂದ ಎಲ್ಲವನ್ನು ಮಾಡಲಾರೆವು, ಅದಕ್ಕೆ ಮಿತಿಯಿರುತ್ತದೆ. ಆದರೆ ನಾವು ಅದೇ ಕೃತಿಯನ್ನು ಮನಸ್ಸಿನ ಸ್ತರದಲ್ಲಿ ಮಾಡಬಲ್ಲೆವು. ಏಕೆಂದರೆ ಮನಸ್ಸಿಗೆ ಯಾವುದೇ ಬಂಧನವಿಲ್ಲ. ಉದಾಹರಣೆಗೆ ‘ಕುಲದೇವರ ದೇವಸ್ಥಾನಕ್ಕೆ ಹೋಗಬೇಕು’ ಎಂದು ನಮಗೆ ಅನಿಸಿದರೆ ತಕ್ಷಣ ನಾವು ಮನಸ್ಸಿನಿಂದ ಹೋಗಬಹುದು ಮತ್ತು ಕುಲದೇವರ ದರ್ಶನವನ್ನು ಸಹ ಪಡೆಯಬಹುದು. ಆದರೆ ಅದೇ ನಮಗೆ ಕುಲದೇವರ ದೇವಸ್ಥಾನಕ್ಕೆ ಪ್ರತ್ಯಕ್ಷ ಹೋಗಬೇಕಾದರೆ ಅದಕ್ಕೆ ಸ್ಥಳ, ಕಾಲ, ಇತ್ಯಾದಿ ಮಿತಿಯಿರುತ್ತದೆ. ಹಾಗಾಗಿ ಸ್ಥೂಲದಿಂದ ದರ್ಶನ ಪಡೆಯಲು ಹೋಗಲು ಆಗುವುದಿಲ್ಲ. ಆದರೆ ನಾವು ಮನಸ್ಸಿನಿಂದ ಕುಲದೇವರ ದೇವಸ್ಥಾನಕ್ಕೆ ಹೋಗಬಹುದು ಮತ್ತು ದರ್ಶನ ಸಹ ಪಡೆಯಬಹುದು. ಇದರಿಂದ ಭಾವಜಾಗೃತಿಯ ಪ್ರಯತ್ನಗಳಿಗೆ ಬಹಳ ಮಹತ್ವವಿದೆ ಎಂದು ತಿಳಿಯುತ್ತದೆ.
ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ವಾಸ್ತವ್ಯವಿರುತ್ತದೆ. ಎಲ್ಲಿ ಭಾವ ಇರುತ್ತದೆಯೋ ಅಲ್ಲಿ ದೇವರ ಅಸ್ತಿತ್ವವಿರುತ್ತದೆ. ದೇವರು ನಮ್ಮ ಜೊತೆಯಲ್ಲಿಯೇ ಇದ್ದಾನೆ ಎಂಬ ಅರಿವು ಇರಲು, ನಮ್ಮ ಭಾವವು ಜಾಗೃತವಾಗಿರಲು ಆಗಾಗ ನಡುನಡುವೆ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದೊಂದು ಬಹಳ ಸುಂದರವಾದ ಮಾಧ್ಯಮವಾಗಿದೆ.
ದೇವರ ಮೂರ್ತಿಯತ್ತ ನೋಡುವಾಗ ತಕ್ಷಣ ನಮ್ಮ ಭಾವವು ಜಾಗೃತವಾಗುತ್ತದೆ ಮತ್ತು ದೇವರ ಬಗ್ಗೆ ಆತ್ಮೀಯತೆ ಅನಿಸತೊಡಗುತ್ತದೆ. ದಿನವಿಡೀ ನಾವು ಎಷ್ಟು ಹೊತ್ತು ಕಣ್ಮುಚ್ಚಿ ದೇವರ ಸ್ಮರಣೆಯನ್ನು ಮಾಡುವೆವೋ, ಅಷ್ಟು ದೇವರ ಬಗ್ಗೆ ಇರುವ ಭಾವವು ಜಾಗೃತವಾಗಿರುತ್ತದೆ ಮತ್ತು ಹೆಚ್ಚಾಗುತ್ತದೆ.
ನಾವು ಇಲ್ಲಿ ನೀಡಿರುವ ಭಾವಪ್ರಯೋಗಗಳ ಮಾಧ್ಯಮದಿಂದ ಏನನ್ನು ಅನುಭವಿಸುತ್ತೇವೆಯೋ, ದೇವರು ಸಹ ನಮಗೆ ವಿವಿಧ ಭಾವಗಳನ್ನು ಗಮನಕ್ಕೆ ತಂದುಕೊಡುವವನಿದ್ದಾನೆ. ಮತ್ತು ದೇವರು ಸಹ ಆ ಭಾವವನ್ನು ಹೆಚ್ಚಿಸುವವನೇ ಇದ್ದಾನೆ, ಅದನ್ನು ವೃದ್ಧಿಸುವವನಿದ್ದಾನೆ. ಪ್ರತಿಯೊಂದು ಕ್ಷಣ ಭಾವವನ್ನು ಹೇಗೆ ಜಾಗೃತವಾಗಿಡಬೇಕು? ದೇವರನ್ನು ಹೇಗೆ ಅನುಭವಿಸಬೇಕು? ಎಂದು ವಿವಿಧ ಭಾವಾರ್ಚನೆಗಳ ಮಾಧ್ಯಮದಿಂದ ದೇವರೇ ನಮಗೆ ಅದೆಲ್ಲವನ್ನೂ ಕಲಿಸಲಿಕ್ಕಿದ್ದಾನೆ.
ಭಾವ ಎಂದರೇನು, ಭಾವದ ಪ್ರಕಾರಗಳು ಯಾವುವು, ಭಾವದ ಹಂತಗಳು ಯಾವುವು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು – ಕ್ಲಿಕ್ ಮಾಡಿ!