ಅಕ್ಷಯ ತದಿಗೆಯು ಅವಿನಾಶೀ ತತ್ತ್ವದ ಪ್ರತೀಕವಾಗಿದೆ. ಈ ಶುಭದಿನದಂದು (೧೪.೫.೨೦೨೧ ರಂದು) ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಚೈತನ್ಯಮಯ ವಾತಾವರಣದಲ್ಲಿ ಶಾಸ್ತ್ರೋಕ್ತವಾಗಿ ಧರ್ಮಧ್ವಜದ ಪೂಜೆಯನ್ನು ಮಾಡಲಾಯಿತು. ನಂತರ ಶಂಖ ಹಾಗೂ ಗಂಟೆಯನಾದ ಘೋಷ ಸಹಿತ ಧ್ವಜಾರೋಹಣವನ್ನು ಮಾಡಲಾಯಿತು. ಈ ವಿಧಿಯ ಪೌರೋಹಿತ್ಯವನ್ನು ಸನಾತನದ ಪುರೋಹಿತರಾದ ಶ್ರೀ. ಅಮರ ಜೋಶಿ ಮತ್ತು ಶ್ರೀ. ಚೈತನ್ಯ ದೀಕ್ಷಿತ ಇವರು ನಿರ್ವಹಿಸಿದ್ದರು.
ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧರ್ಮಧ್ವಜದ ಒಂದು ಬದಿಯಲ್ಲಿ ಪ್ರಭು ಶ್ರೀರಾಮನ ಚಿತ್ರ, ಮತ್ತೊಂದು ಬದಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರ ಪ್ರಭು ಶ್ರೀರಾಮನ ಸ್ವರೂಪದಲ್ಲಿರುವ ಚಿತ್ರವನ್ನು ಹಾಕುವಂತೆ ಆಜ್ಞೆ ನೀಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು. ‘ಈ ಧರ್ಮಧ್ವಜವು ಹಿಂದೂ ರಾಷ್ಟ್ರವು ಸಮೀಪಿಸುತ್ತಿರುವುದರ ಪ್ರತೀಕವಾಗಿದೆ. ಈ ಧರ್ಮಧ್ವಜದ ಸ್ಥಾಪನೆಯಿಂದ ಎಲ್ಲ ಕಡೆಗಳಲ್ಲಿ ಹಿಂದೂ ಧರ್ಮದ ಕೀರ್ತಿ ಹೆಚ್ಚಾಗಲಿದೆ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗವು ಸಿಗಲಿದೆ’, ಎಂದು ಸಪ್ತರ್ಷಿಗಳು ಆಶೀರ್ವಚನವನ್ನು ನೀಡಿದ್ದರು.
ಧ್ವಜಪೂಜೆಯನ್ನು ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಜೊತೆ ಸನಾತನದ ಪುರೋಹಿತ ಸಾಧಕರು (ಗೋಲಾಕಾರದಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ಧ್ವಜವನ್ನು ತೋರಿಸಲಾಗಿದೆ.)
ಧ್ವಜಸ್ಥಾಪನೆಯ ಅಂತರ್ಗತ ಉಪದೇಶದ / ಅಭಿಮಂತ್ರಣ ವಿಧಿಯನ್ನು ಮಾಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜವನ್ನು ಸ್ಪರ್ಶಿಸಿದಾಗ ಅವರಿಗೆ ಅದು ಅತ್ಯಂತ ಸಜೀವವಾಗಿದೆ ಎಂದು ಅನಿಸಿತು. ‘ಶ್ರೀಗುರುಗಳ ಚರಣಗಳನ್ನೇ ಸ್ಪರ್ಶಿಸುತ್ತಿದ್ದೇನೆ’, ಎಂದು ಅತ್ಯಂತ ಸ್ಪಷ್ಟವಾಗಿ ಅರಿವಾಯಿತು. ಧ್ವಜಸ್ಥಾಪನೆಯ ವಿಧಿಯು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಂತಹ ಆಧ್ಯಾತ್ಮಿಕ ಅಧಿಕಾರಿ ವಿಭೂತಿಗಳಿಂದ ನೆರವೇರಿದುದರಿಂದ ಆ ಧ್ವಜಕ್ಕೆ ಜಾಗೃತಿ ಬಂದಿತು. ಅನಂತರ ಅದರ ಕಾರ್ಯವು ಆರಂಭವಾಗಿ ವಾತಾವರಣದಲ್ಲಿ ಪ್ರಕ್ಷೇಪಿಸತೊಡಗಿತು.
ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀ ಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಾಸ್ತವ್ಯದಿಂದ ಸನಾತನದ ರಾಮನಾಥಿ ಆಶ್ರಮವು ಸಾಕ್ಷಾತ್ ಭೂವೈಕುಂಠವಾಗಿದೆ. ಮಹರ್ಷಿಗಳು ಅವರ ಅವತಾರತ್ವದ ಗೌರವವನ್ನು ಮಾಡುವುದರೊಂದಿಗೆ ಈ ಪಾವನ ಆಶ್ರಮದ ಮಹಾತ್ಮೆಯನ್ನೂ ಆಗಾಗ ವೃದ್ಧಿಸಿದ್ದಾರೆ. ಮೂಲದಲ್ಲಿಯೇ ಚೈತನ್ಯಮಯವಾಗಿರುವ ಆಶ್ರಮದ ಮೇಲೆ ಮಹರ್ಷಿಗಳು ಇಲ್ಲಿಯವರಿಗೆ ಕಳಶ ಸ್ಥಾಪನೆ, ಸಾಧಕರ ರಕ್ಷಣೆಗಾಗಿ ಆಶ್ರಮದ ವಾಸ್ತುವಿನ ಮೇಲೆ ಧ್ವಜಸ್ಥಾಪನೆ, ಆಶ್ರಮದ ಪ್ರವೇಶದ್ವಾರದಲ್ಲಿ ಗಜಸ್ಥಾಪನೆ, ಕಮಲಪೀಠದ ಮೇಲಿನ ದೀಪಲಕ್ಷ್ಮೀಯ ಸ್ಥಾಪನೆ ಇವುಗಳಂತಹ ವಿವಿಧ ವಿಧಿಗಳನ್ನು ಮಾಡಿಸಿ ಈ ವಾಸ್ತುವಿಗೆ ಸ್ಥೂಲದಲ್ಲಿಯೂ ವೈಕುಂಠದ ರೂಪವನ್ನೇ ಪ್ರಾಪ್ತ ಮಾಡಿ ಕೊಟ್ಟಿದ್ದಾರೆ. ಆಶ್ರಮದ ಪರಿಸರದಲ್ಲಿ ಈಗ ಧರ್ಮಧ್ವಜವು ಸಡಗರದಿಂದ ಹಾರಾಡುತ್ತಿದೆ. ಪರಾತ್ಪರಗುರುದೇವರ ಕೃಪೆಯಿಂದ ಮತ್ತು ಮಹರ್ಷಿಗಳ ಆಶೀರ್ವಾದದಿಂದ ಹಿಂದೂ ರಾಷ್ಟ್ರದ ವಿಜಯಧ್ವಜವೂ ಶೀಘ್ರದಲ್ಲಿ ಹಾರಾಡುವುದು, ಇದು ನಿಶ್ಚಿತ ! |