ಭವರೋಗಕ್ಕಾಗಿ ಜೀವದ ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಇದೊಂದೇ ಉಪಾಯವಾಗಿದೆ. ಪ.ಪೂ. ಡಾಕ್ಟರರು (ಶ್ರೀಮನ್ನಾರಾಯಣರು) ಹೇಳಿದ ಗುರುಕೃಪಾಯೋಗ ಮತ್ತು ಅದರ ಅಂತರ್ಗತ ಮಾಡಬೇಕಾದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು, ಭವರೋಗದ ಮೇಲೆ ತಕ್ಷಣ ಪರಿಣಾಮವನ್ನು ಬೀರುವ ಏಕೈಕ ಸಂಜೀವನಿಯಾಗಿದೆ.
೧. ಗುರುಕೃಪಾಯೋಗದ ಅಷ್ಟಾಂಗ ಸಾಧನೆ ಮತ್ತು ಅದರಿಂದಾಗುವ ಲಾಭಗಳು
೧. ಸ್ವಭಾವದೋಷ ನಿರ್ಮೂಲನೆ, ೨. ಅಹಂ ನಿರ್ಮೂಲನೆ, ೩. ನಾಮಜಪ, ೪. ಸತ್ಸಂಗ. ೫. ಸತ್ಸೇವೆ, ೬. ಭಾವಜಾಗೃತಿಗಾಗಿ ಪ್ರಯತ್ನಿಸುವುದು, ೭. ಸತ್‌ಗಾಗಿ ತ್ಯಾಗ, ೮. ಪ್ರೀತಿ (ನಿರಪೇಕ್ಷ ಪ್ರೇಮ), ಈ ಎಂಟು ಅಂಶಗಳನ್ನು ಅಳವಡಿಸಿಕೊಳ್ಳಲು ವ್ಯಕ್ತಿಯು ಪ್ರತಿದಿನ ಮಾಡಬೇಕಾದ ಸಂಖ್ಯಾತ್ಮಕ ಮತ್ತು ಗುಣಾತ್ಮಕ ಪ್ರಯತ್ನವೆಂದರೆ ವ್ಯಷ್ಟಿ ಸಾಧನೆ. ಸಾಧಕನಿಗೆ ವ್ಯಷ್ಟಿ ಸಾಧನೆಯಿಂದಾಗುವ ಕೆಲವು ಲಾಭಗಳನ್ನು ಇಲ್ಲಿ ನೀಡುತ್ತಿದ್ದೇನೆ.
(ಅಂಶ ೧ ಅ. ರಲ್ಲಿ ಮೇಲಿನ ೮ ಅಂಶಗಳ ಸಮಾವೇಶವಿದೆ.)
೧ ಅ. ಎಲ್ಲ ಯೋಗಗಳನ್ನು ಸಾಧಿಸುವುದು
೧ ಅ ೧. ಕರ್ಮಯೋಗ (ಸೇವೆ ಮತ್ತು ನಾಮಜಪ) : ಸೇವೆಯನ್ನು ಮಾಡುವಾಗ ಅದು ಶ್ರೀ ಗುರುಗಳಿಗೆ ಅಪೇಕ್ಷಿತವಿದ್ದಂತೆ ಆಗಲು ಸಾಧಕನು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುತ್ತಾನೆ. ಆಗ ಅವನು ಈಶ್ವರನಿಗೆ ಕರ್ತುತ್ವವನ್ನು ಅರ್ಪಿಸುತ್ತಾನೆ. ಅವನು ಸೇವೆಯನ್ನು ಮಾಡಿದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಅವನು ಕರ್ಮಫಲವನ್ನು ಈಶ್ವರನಿಗೆ ಅರ್ಪಿಸುತ್ತಿರುತ್ತಾನೆ. ಸೇವೆಯನ್ನು ಮಾಡುವಾಗ ಅವನ ನಾಮಜಪವು ನಡೆದಿರುತ್ತದೆ. ಆದುದರಿಂದ ಸಾಧಕನು ಮಾಡಿದ ಕರ್ಮವು ಅವನಿಗೆ ಬಂಧನಕಾರಿಯಾಗುವುದಿಲ್ಲ (ಅಂಟಿಕೊಳ್ಳುವುದಿಲ್ಲ, ಅಂದರೆ ಅಕರ್ಮ ಕರ್ಮವಾಗುತ್ತದೆ).
೧ ಅ ೨. ಜ್ಞಾನಯೋಗ (ಸತ್ಸಂಗ ಮತ್ತು ಅಹಂ ಶೂನ್ಯತೆ) : ಜೀವನದಲ್ಲಿ ಘಟಿಸುವ ಪ್ರತಿಕೂಲ ಪ್ರಸಂಗ ಮತ್ತು ಪರಿಸ್ಥಿತಿ, ಭೇಟಿಯಾಗುವ ವ್ಯಕ್ತಿಗಳು, ಪ್ರಾಣಿ, ವಸ್ತು, ನಿಸರ್ಗ ಇವರೆಲ್ಲರಿಂದ ಸಾಧಕನು ಸತತವಾಗಿ ಕಲಿಯುತ್ತಿರುತ್ತಾನೆ. ಆದುದರಿಂದ ಅವನಿಗೆ ಜ್ಞಾನವು ಸಿಗುತ್ತದೆ ಮತ್ತು ಕಲಿಕೆಯ ಆನಂದವೂ ಸಿಗುತ್ತದೆ. ಅವನು ಸತತ ಶಿಷ್ಯಭಾವದಲ್ಲಿರುವುದರಿಂದ ಅವನಲ್ಲಿ ಜ್ಞಾನದ ಅಹಂ ಹುಟ್ಟುವುದಿಲ್ಲ.
೧ ಅ ೩. ಭಕ್ತಿಯೋಗ (ಭಾವಜಾಗೃತಿ, ತ್ಯಾಗ ಮತ್ತು ಪ್ರೀತಿ) : ಭಾವಜಾಗೃತಿಗಾಗಿ ಪ್ರಯತ್ನ, ಸತ್‌ಗಾಗಿ ತ್ಯಾಗ, ಪ್ರೀತಿ, ನಾಮಜಪ ಇವುಗಳಿಂದ ಸಾಧಕನು ಸತತವಾಗಿ ಈಶ್ವರನ ಅನುಸಂಧಾನದಲ್ಲಿರುತ್ತಾನೆ. ಈಶ್ವರನ ಸತತ ಸ್ಮರಣೆಯಿಂದ ಅವನಿಗೆ ಭಕ್ತಿಯೋಗವು ಸಾಧ್ಯವಾಗುತ್ತದೆ ಮತ್ತು ಅವನು ಈಶ್ವರನೊಂದಿಗೆ ಏಕರೂಪನಾಗುತ್ತಾನೆ.
೧ ಅ ೪. ಸಹಜ ಯೋಗ (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ) : ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ಗಾಂಭೀರ್ಯದಿಂದ ಮಾಡುತ್ತಾರೆ. ಸತತವಾಗಿ ಕಠೋರ ಪ್ರಯತ್ನಗಳನ್ನು ಮಾಡಿದ ನಂತರ ದೇವರ ಕೃಪೆಯಿಂದಲೇ ಅವರ ಸ್ವಭಾವದೋಷಗಳು ಮತ್ತು ಅಹಂ ಕಡಿಮೆಯಾಗುತ್ತವೆ. ಈ ಪ್ರಕ್ರಿಯೆಯನ್ನು ಅವನಿಗೆ ಜನ್ಮವಿಡಿ ಮತ್ತು ಕೆಲವೊಮ್ಮೆ ಅನೇಕ ಜನ್ಮಗಳಲ್ಲಿಯೂ ಮಾಡಬೇಕಾಗುತ್ತದೆ. ಅನಂತರ ಅವನ ಸಾಧನೆಯು ಚೆನ್ನಾಗಿ ನಡೆಯತೊಡಗುತ್ತದೆ ಮತ್ತು ಅವನ ಅಂತರ್ಮನವು ಸತತವಾಗಿ ಚೈತನ್ಯದೊಂದಿಗೆ ಜೋಡಿಸಲ್ಪಡುತ್ತದೆ. ಈ ರೀತಿ ಸಂಸಾರದಲ್ಲಿನ ಎಲ್ಲ ಕೆಲಸಗಳನ್ನು ಮಾಡುತ್ತಿರುವಾಗಲೂ ಸಾಧಕನು ಈಶ್ವರನ ಸತತ ಅನುಸಂಧಾನದಲ್ಲಿ, ಅಂದರೆ ಸಂಸಾರದಿಂದ ಅಲಿಪ್ತನಾಗುತ್ತಾನೆ.
೨. ಜೀವದ ಸಾತ್ತ್ವಿಕತೆಯು ಹೆಚ್ಚಾಗುವುದು
ವಿವಿಧ ಯೋಗ ಸಾಧನೆಗಳಿಂದ ಜೀವದ ಸಾತ್ತ್ವಿಕತೆಯು ಹೆಚ್ಚಾಗಿ ಜೀವದ ಸಪ್ತದೇಹಗಳು ಶುದ್ಧವಾಗುತ್ತವೆ. ಅದರಲ್ಲಿ ಶಕ್ತಿ, ಜ್ಞಾನ, ಆನಂದವು ಹೆಚ್ಚಾಗಿ ಜೀವಕ್ಕೆ ಪರಿಪೂರ್ಣತೆಯು ಬರತೊಡಗುತ್ತದೆ. ಅವನಿಂದಾಗುವ ತಪ್ಪುಗಳು ಕಡಿಮೆಯಾಗುತ್ತದೆ. ಅವನಲ್ಲಿರುವ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ.
೩. ಶಿಷ್ಯನ ಗುಣಗಳನ್ನು ತನ್ನಲ್ಲಿ ಬೆಳೆಸಿಕೊಳ್ಳುವುದು
ಸಾಧಕನಿಗೆ ಆಜ್ಞಾಪಾಲನೆ ಮಾಡುವುದು, ನಮ್ರತೆಯಿಂದ ವರ್ತಿಸುವುದು, ಸೇವಾಭಾವ, ಕೃತಜ್ಞತಾಭಾವ ಮತ್ತು ಶರಣಾಗತ ಭಾವವನ್ನು ಅಳವಡಿಸಿಕೊಳ್ಳುವುದು, ಪ್ರೀತಿ ಮತ್ತು ತ್ಯಾಗ ಮಾಡುವುದು ಮತ್ತು ಪರೇಚ್ಛೆಯಿಂದ ಹಾಗು ಈಶ್ವರೇಚ್ಛೆಯಿಂದ ವರ್ತಿಸುವುದು ಇವು ಸಾಧ್ಯವಾಗತೊಡಗುತ್ತವೆ. ಈ ರೀತಿಯಲ್ಲಿ ಸಾಧನೆಯಿಂದ ಸಾಧಕನಲ್ಲಿ ಅಮೂಲ್ಯ ಮತ್ತು ಸಕಾರಾತ್ಮಕ ಪರಿವರ್ತನೆಯಾಗುತ್ತದೆ. ಈ ರೀತಿ ವ್ಯಷ್ಟಿ ಸಾಧನೆಯಿಂದ ಸಾಧಕನು ಉತ್ತಮ ಸಾಧಕನಾಗುತ್ತಾನೆ ಮತ್ತು ಮುಂದೆ ಶಿಷ್ಯಪದವಿಗೆ ಪಾತ್ರನಾಗುತ್ತಾನೆ.
೪. ಈಶ್ವರನ ತಾರಕ-ಮಾರಕ ರೂಪದೊಂದಿಗೆ ಏಕರೂಪವಾಗುವುದು
ಪ್ರೀತಿ ಮತ್ತು ಭಾವ ಈ ಗುಣಗಳಿಂದ ಈಶ್ವರನ ತಾರಕ ರೂಪದೊಂದಿಗೆ ಮತ್ತು ಕ್ಷಾತ್ರಭಾವವು ಹೆಚ್ಚಾದ ನಂತರ ಈಶ್ವರನ ಮಾರಕ ರೂಪದೊಂದಿಗೆ ಏಕರೂಪವಾಗುವ ಕ್ಷಮತೆಯು ಸಾಧಕನಿಗೆ ಪ್ರಾಪ್ತವಾಗುತ್ತದೆ.
– ಸೌ. ಶಾಲಿನಿ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೮.೨೦೨೦)