ಲಾವಂಚದ (ಲಾಮಂಚ) ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ತ ಹಾಗೂ ಕಫನಾಶಕವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳು ಸೇರದಿರುವುದು ಬಾಯಿಯಲ್ಲಿ ಹುಣ್ಣಾಗುವುದು, ಮೈಯಲ್ಲಿ ಉರಿಯಾಗುವುದು, ಮೂತ್ರನಾಳದಲ್ಲಿ ಉರಿ, ಮೈಮೇಲೆ ಗುಳ್ಳೆಗಳಾಗುವುದು, ತಲೆ ಸುತ್ತುವುದು ಇತ್ಯಾದಿ) | ಬೆಳಿಗ್ಗೆ ಬರಿಹೊಟ್ಟೆಯಲ್ಲಿ 1 ಚಮಚ ಲಾವಂಚದ ಚೂರ್ಣ 1 ಕಪ್ ಹಾಲು ಮತ್ತು 1 ಚಮಚ ಕಲ್ಲುಸಕ್ಕರೆಯ ಮಿಶ್ರಣದೊಂದಿಗೆ ಸೇವಿಸಬೇಕು. ಈ ಔಷಧಿ ಸೇವಿಸಿದ ಬಳಿಕ ಸಾಧಾರಣ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು-ಕುಡಿಯಬಾರದು. | 7 ದಿನ |
2. ಹೊಟ್ಟೆ ತೊಳೆಸಿದಂತಾಗುವುದು, ವಾಂತಿ, ಬೇಧಿಯಾಗುವುದು ಮತ್ತು ಮಲದೊಂದಿಗೆ ರಕ್ತ ಬೀಳುವುದು | ಲಾವಂಚ ಚೂರ್ಣ, ಕೊರನಾರಿಗೆಡ್ಡೆಯ ಚೂರ್ಣ, ಕೊತ್ತಂಬರಿ ಪುಡಿ ಮತ್ತು ಬಡಿಸೋಪಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಬೇಕು. ಇದರ 1 ಚಮಚ ಔಷಧಿಯನ್ನು ದಿನದಲ್ಲಿ 3-4 ಸಲ 1 ಬಟ್ಟಲು ಬಿಸಿನೀರಿನೊಂದಿಗೆ ಸೇವಿಸಬೇಕು. | 3 – 4 ದಿನ |
3. ಜ್ವರ | ದಿನದಲ್ಲಿ 3-4 ಸಲ ಕಾಲು ಚಮಚ ಲಾವಂಚದ ಚೂರ್ಣವನ್ನು 1 ಬಟ್ಟಲು ಬಿಸಿನೀರಿನೊಂದಿಗೆ ಸೇವಿಸಬೇಕು. | 3 – 4 ದಿನ |
4. ಬೇಸಿಗೆಯ ದಿನಗಳಲ್ಲಿ ಉಷ್ಣತೆಯ ಸಮಸ್ಯೆಗಳು ಆಗಬಾರದೆಂದು | ಪ್ರತಿ 1 ಲೀಟರ್ ಕುಡಿಯುವ ನೀರಿನಲ್ಲಿ ಅರ್ಧ ಚಮಚದಷ್ಟು ಪ್ರಮಾಣದಲ್ಲಿ ಲಾವಂಚದ ಚೂರ್ಣವನ್ನು ಹಾಕಿಡಬೇಕು. ಬಾಯಾರಿಕೆ ಆದಾಗಲೆಲ್ಲ ಈ ನೀರನ್ನು ಸೇವಿಸಬೇಕು. | ಬೇಸಿಗೆ ಮತ್ತು ಶರದ್‌ಋತು (ಅಕ್ಟೋಬರ್ ಬಿಸಿಲು) |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)