ಯಷ್ಟಿಮಧು (ಜ್ಯೇಷ್ಠಮಧ, ಅತಿಮಧುರ) ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಕಣ್ಣು, ಚರ್ಮ, ಕೂದಲು ಮತ್ತು ಗಂಟಲಿಗೆ ಹಿತಕರವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ಫಿಟ್ಸ್ ಬರುವುದು | ಬೆಳಗ್ಗೆ ಮತ್ತು ಸಾಯಂಕಾಲ 3 ಗ್ರಾಮ್ (1 ಚಮಚ) ಜ್ಯೇಷ್ಠಮಧ ಚೂರ್ಣವನ್ನು ಅರ್ಧ ಲೋಟ ಬೂದುಗುಂಬಳಕಾಯಿ ರಸದಲ್ಲಿ ತೆಗೆದುಕೊಳ್ಳಬೇಕು. | 6 ತಿಂಗಳು |
2. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಧ್ವನಿ ಬೀಳುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು | ಪ್ರತಿದಿನ 4 ಸಲ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಅಗಿದು ತಿನ್ನುವುದು. | 5 ದಿ |
3. ಒಸಡುಗಳಿಂದ ರಕ್ತ ಬರುವುದು | ಎರಡು ಸಲದ ಊಟದ ಬಳಿಕ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಮತ್ತು 1 ಚಮಚ ಕಪ್ಪು ಎಳ್ಳು ಅಗಿದು ತಿನ್ನಬೇಕು ಮತ್ತು 5 ನಿಮಿಷಗಳ ಬಳಿಕ ಬಾಯಿ ಮುಕ್ಕಳಿಸಬೇಕು. | 7 ದಿನ |
4. ಪಿತ್ತದಿಂದ ಹೊಟ್ಟೆ ತೊಳೆಸುವುದು, ಅಸ್ವಸ್ಥ ಎನಿಸುವುದು, ತಲೆ ನೋವು ಮತ್ತು ಆಮ್ಲಪಿಪಿತ್ತ ಇವುಗಳು ವಾಂತಿಯ ಮೂಲಕ ಶುದ್ಧಿಯಾಗಲು | 4 ಚಮಚ ಜ್ಯೇಷ್ಠಮಧ ಚೂರ್ಣ 2 ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು ಮತ್ತು ಸ್ನಾನಗೃಹದಲ್ಲಿ ಕುಕ್ಕುರುಗಾಲಿನಲ್ಲಿ ಅಥವಾ ಸ್ಟೂಲಿನ ಮೇಲೆ ಕುಳಿತುಕೊಂಡು ವಾಂತಿಯಾಗುವವರೆಗೆ ನಾಲಿಗೆಯ ಮೇಲೆ ಬೆರಳು ತಿಕ್ಕಬೇಕು. ಈ ಉಪಚಾರ ಅತ್ಯಾವಶ್ಯಕವಿದ್ದರೆ 6 ತಿಂಗಳಿಗೊಮ್ಮೆ ಮಾತ್ರ ಮಾಡಬೇಕು. ಬಳಿಕ 2 ದಿನ ಹಗುರವಾದ ಆಹಾರ (ರವೆ ಉಪ್ಪಿಟ್ಟು, ಶಿರಾ, ಮೆತ್ತಗಿನ ಅನ್ನ, ಅನ್ನ ತೊವ್ವೆ, ಹೆಸರು ಬೇಳೆಯ ಕಿಚ್ಚಡಿ) ಸೇವಿಸಬೇಕು. | ತಾತ್ಕಾಲಿಕ |
5. ಮಲಬದ್ಧತೆ | ಎರಡು ಸಲದ ಊಟದ ಮೊದಲು 1 ಚಮಚ ಜ್ಯೇಷ್ಠಮಧ ಚೂರ್ಣ ಮತ್ತು 1 ಚಿಟಿಕೆ ಉಪ್ಪನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 15 ದಿನ |
6. ಮುಖದ ಮೇಲೆ ಮೊಡವೆ ಆಗುವುದು | ಜ್ಯೇಷ್ಠಮಧ ಚೂರ್ಣವನ್ನು ಹಾಲಿನಲ್ಲಿ ಕಲಸಿ ಅದರ ಲೇಪವನ್ನು ಹಚ್ಚಿ ಅದು ಒಣಗಿದ ಬಳಿಕ ತೊಳೆಯಬೇಕು. | 15 ದಿನ |
7. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳು ಸೇರದಿರುವುದು ಬಾಯಿಯಲ್ಲಿ ಹುಣ್ಣಾಗುವುದು, ಮೈಯಲ್ಲಿ ಉರಿಯಾಗುವುದು, ಮೂತ್ರನಾಳದಲ್ಲಿ ಉರಿ, ಮೈಮೇಲೆ ಗುಳ್ಳೆಗಳಾಗುವುದು, ತಲೆ ಸುತ್ತುವುದು ಇತ್ಯಾದಿ) | 2 ಸಲ 1 ಚಮಚ ಜ್ಯೇಷ್ಠಮಧ ಚೂರ್ಣವನ್ನು 1 ಚಮಚ ತುಪ್ಪದಲ್ಲಿ ಸೇವಿಸಬೇಕು. | 15 ದಿನ |
8. ತೂಕ ಕಡಿಮೆಯಿರುವುದು ಮತ್ತು ಆಯಾಸ | ಬೆಳಗ್ಗೆ ಬರಿಹೊಟ್ಟೆಯಲ್ಲಿ ವ್ಯಾಯಾಮ ಮಾಡಿ 30 ನಿಮಿಷಗಳ ಬಳಿಕ 1 ಚಮಚ ಜ್ಯೇಷ್ಠಮಧ ಚೂರ್ಣವನ್ನು 1 ಕಪ್ ಹಾಲು ಮತ್ತು 2 ಚಮಚ ತುಪ್ಪದೊಂದಿಗೆ ಸೇವಿಸಬೇಕು. ನಂತರ 1 ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. | 3 ತಿಂಗಳು |
9. ಜ್ವರ | ದಿನದಲ್ಲಿ 2 ಸಲ ಅರ್ಧ ಚಮಚ ಜ್ಯೇಷ್ಠಮಧ ಚೂರ್ಣ, ಅರ್ಧ ಚಮಚ ತುಳಸಿಯ ರಸ, ಅರ್ಧ ಚಮಚ ಹಸಿಶುಂಠಿಯ ರಸ ಮತ್ತು ೧ ಚಮಚ ಜೇನುತುಪ್ಪ ಇವುಗಳ ಮಿಶ್ರಣ ತೆಗೆದುಕೊಳ್ಳಬೇಕು. | 3 ರಿಂದ ೫ ದಿನ |
10. ಬಾವು | ಸಾಕಷ್ಟು ಪ್ರಮಾಣದಲ್ಲಿ ಜ್ಯೇಷ್ಠಮಧ ಚೂರ್ಣ ತೆಗೆದುಕೊಂಡು ಅದರಲ್ಲಿ ಆವಶ್ಯಕತೆಗನುಸಾರ ಉಗುರುಬೆಚ್ಚಗಿನ ನೀರನ್ನು ಸೇರಿಸಿ ದಪ್ಪನೆಯ ಲೇಪ ಮಾಡಬೇಕು. ಒಂದು ಗಂಟೆಯ ಬಳಿಕ ಲೇಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. | 7 ದಿನ |
ಆ. ಸೂಚನೆ
1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ‘ಯಷ್ಟಿಮಧ’ದ ಅತಿಯಾದ ಸೇವನೆಯಿಂದ ವಾಂತಿಯಾಗುತ್ತದೆ, ಆದುದರಿಂದ ಅದನ್ನು ಮಿತವಾಗಿ ನೀಡಿರುವ ಪ್ರಮಾಣದಲ್ಲಿಯೇ ಸೇವಿಸಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)