ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.
ಇಲ್ಲಿಯವರೆಗೆ ಈ ಲೇಖನಮಾಲೆಯಲ್ಲಿ ನಾವು ವಿವಿಧ ವಿಪತ್ತುಗಳು ಮತ್ತು ಅವುಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಅಂಶಗಳನ್ನು ನೋಡಿದೆವು. ಈ ಲೇಖನದಲ್ಲಿ ಈ ಎಲ್ಲ ವಿಪತ್ತುಗಳ ಸಂದರ್ಭದಲ್ಲಿ ಕೆಲವು ಸಾಮಾನ್ಯ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ವಿಪತ್ತುಗಳು ಬರುವ ಮೊದಲು ಕೆಲವು ಸಿದ್ಧತೆಗಳನ್ನು ಮಾಡಬೇಕು.
3. ವಿವಿಧ ವಿಪತ್ತುಗಳ ಸಂದರ್ಭದಲ್ಲಿ ಸಾಮಾನ್ಯ ಸೂಚನೆಗಳು
ವಿವಿಧ ವಿಪತ್ತುಗಳ ಸಮಯದಲ್ಲಿ ಸಾಮಾನ್ಯವಾಗಿ ಮಾಡಬೇಕಾದ ಕೆಲವು ಸಮಾನ ಕೃತಿಗಳಿರುತ್ತವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಿದ್ಧತೆಯನ್ನು ಮಾಡಿದರೆ ತಮ್ಮ ತಮ್ಮ ಕುಟುಂಬದವರ ಮತ್ತು ನೆರೆಹೊರೆಯವರ ರಕ್ಷಣೆಯಾಗಬಹುದು, ಹಾಗೆಯೇ ಅತಿ ಕಡಿಮೆ ಹಾನಿಯಾಗಿ ಮತ್ತು ತೊಂದರೆಗಳೂ ಕಡಿಮೆಯಾಗುವವು.
3 ಅ. ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ? ಎಂಬುದರ ಅಭ್ಯಾಸವನ್ನು (ಪ್ರ್ಯಾಕ್ಟಿಸ್) ಮಾಡಿ !
1. ತುರ್ತುಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೇಗೆ ಹೋಗಬೇಕು ಅಥವಾ ಮನೆಯಲ್ಲಿಯೇ ಸುರಕ್ಷಿತ ಸ್ಥಳದಲ್ಲಿ ಸುರಕ್ಷಿತವಾಗಿ ಹೇಗಿರಬೇಕು, ಹಾಗೆಯೇ ಪ್ರಥಮೋಪಚಾರವನ್ನು ಹೇಗೆ ಮಾಡಬೇಕು, ಇವುಗಳ ಬಗ್ಗೆ ಕುಟುಂಬದವರೆಲ್ಲರೂ ತರಬೇತಿಯನ್ನು ಪಡೆಯಬೇಕು ಹಾಗೂ ನಿಯಮಿತವಾಗಿ ಅದರ ಪ್ರತ್ಯಕ್ಷ ಅಭ್ಯಾಸವನ್ನು (ಪ್ರ್ಯಾಕ್ಟೀಸ್) ಮಾಡಬೇಕು.
2. ಆಪತ್ಕಾಲದ ಪರಿಸ್ಥಿತಿಯಲ್ಲಿ ಕುಟುಂಬದೊಂದಿಗೆ ನೆರೆಹೊರೆಯವರೂ ಏನು ಮಾಡಬೇಕು, ಎಂಬುದರ ಬಗ್ಗೆ ಅವರೊಂದಿಗೆ ಚರ್ಚೆಯನ್ನು ಮಾಡಿ ಆಪತ್ಕಾಲದಲ್ಲಿ ಯಾವ ಕೃತಿಗಳನ್ನು ಮಾಡಬೇಕು ಅಥವಾ ಯಾವ ಕೃತಿಗಳನ್ನು ಮಾಡಬಾರದು ಎಂಬುದನ್ನು ನಿರ್ಧರಿಸಿ, ಅದರ ಅಭ್ಯಾಸವನ್ನೂ (ಪ್ರ್ಯಾಕ್ಟೀಸ್) ಮಾಡಬೇಕು. ಗ್ಯಾಸ್ ಸಿಲಿಂಡರ್, ವಿದ್ಯುತ್ ಪ್ರವಾಹ, ನೀರಿನ ನಳ್ಳಿ ಮುಂತಾದವುಗಳ ಮುಖ್ಯ ಸ್ವಿಚ್ (ಮೇನ್ ಸ್ವಿಚ್) ಬಂದ್ ಮಾಡುವ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು.
3 ಆ. ತುರ್ತುಪರಿಸ್ಥಿತಿಗಾಗಿ ಚೀಲ (Emergency Kit)
ಆಪತ್ಕಾಲದಲ್ಲಿ ಇದನ್ನು ನಿಮ್ಮ ಜೊತೆಗೆ ತೆಗೆದುಕೊಂಡು ನೀವು ಮನೆಯಿಂದ ಹೊರಗೆ ಬರಬಹುದು. ಕಿಟ್ ಇಡುವ ಒಂದು ಸ್ಥಳವನ್ನು ನಿರ್ಧರಿಸಿಬೇಕು ಮತ್ತು ಅದು ಎಲ್ಲರಿಗೂ ಗೊತ್ತಿರಬೇಕು. ಇದರಲ್ಲಿ
1. ಬ್ಯಾಟರಿಗಳಿಂದ ಉರಿಯುವ ಟಾರ್ಚ್
2. ಹೆಚ್ಚುವರಿ ಬ್ಯಾಟರಿಗಳು (ಬ್ಯಾಟರಿ ಸೆಲ್)
3. ಬ್ಯಾಟರಿಗಳಿಂದ ನಡೆಯವ ರೇಡಿಯೋ
4. ಪ್ರಥಮೋಪಚಾರ ಸಾಹಿತ್ಯದ ಪೆಟ್ಟಿಗೆ ಅಥವಾ ಚೀಲ
5. ಕನಿಷ್ಟ 3 ದಿನಗಳಿಗೆ ಬೇಕಾಗುವಷ್ಟು ಒಣ ತಿನಿಸು ಹಾಗೂ ಕುಡಿಯುವ ನೀರು
6. ಒದ್ದೆಯಾಗದಂತಹ ಪೆಟ್ಟಿಗೆಯಲ್ಲಿ ಅಥವಾ ಪ್ಲ್ಯಾಸ್ಟಿಕಿನ ಚೀಲದಲ್ಲಿ ಮೇಣದ ಬತ್ತಿ ಮತ್ತು ಬೆಂಕಿಪೆಟ್ಟಿಗೆ
7. ಚೂರಿ (ಚಾಕು)
8. ಕ್ಲೋರಿನ್‌ನ ಮಾತ್ರೆಗಳು (ನೀರನ್ನು ಶುದ್ಧೀಕರಿಸಲು)
9. ಮಹತ್ವದ ಕಾಗದಪತ್ರಗಳು (ರೇಶನ್ ಕಾರ್ಡ್, ಆಧಾರ ಕಾರ್ಡ್ ಇತ್ಯಾದಿ)
10. ನಗದು ಹಣ
11. ಹಗ್ಗ
ಆಪತ್ತಿನ ಸ್ವರೂಪಕ್ಕನುಸಾರ ಮತ್ತು ತಮ್ಮ ಆವಶ್ಯಕತೆಗಳಿಗನುಸಾರ ಇದರಲ್ಲಿ ಇತರ ವಸ್ತುಗಳನ್ನಿಡಬೇಕು. ಉದಾಹರಣೆಗೆ ಪ್ರತಿದಿನ ಬೇಕಾಗುವ ಔಷಧಗಳು. ಇವೆಲ್ಲ ವಸ್ತುಗಳನ್ನು ಒಂದು ಚೀಲದಲ್ಲಿ (ಬ್ಯಾಗದಲ್ಲಿ) ತುಂಬಿ ಅದನ್ನು ಕುಟುಂಬದ ಪ್ರತಿಯೊಬ್ಬರಿಗೂ ಗೊತ್ತಿರುವ ಸ್ಥಳದಲ್ಲಿ ಇಡಬೇಕು.
3 ಇ. ಆಪತ್ಕಾಲದಲ್ಲಿ ಯಾರಾದರೂ ಕುಟುಂಬದವರಿಂದ ಬೇರೆಯಾದರೆ ಪುನಃ ಭೇಟಿಯಾಗಲು ಏನು ಮಾಡಬೇಕು ?
ಭೂಕಂಪ, ನೆರೆ ಇತ್ಯಾದಿಗಳಲ್ಲಿ ಚಿಕ್ಕ ಮಕ್ಕಳು ಮನೆಯಲ್ಲಿ ಅಥವಾ ಮನೆಯ ಹೊರಗಿದ್ದರೆ, ಅವರು ಕಾಣೆಯಾಗಬಹುದು. ಇಂತಹ ಸಮಯದಲ್ಲಿ ನಿರ್ದಿಷ್ಟವಾಗಿ ಏನು ಮಾಡಬೇಕು ? ಎಂಬುದನ್ನು ಮಕ್ಕಳಿಗೆ ಮೊದಲೇ ಹೇಳಿಡಬೇಕು. ಅವರು ನಮ್ಮ ಸಂಪರ್ಕದಲ್ಲಿ ಹೇಗಿರಬಹುದು ಎಂಬುದರ ನಿಯೋಜನೆಯನ್ನು ಮಾಡಬೇಕು. ಇಂತಹ ಸಮಯದಲ್ಲಿ ಎಲ್ಲಿ ಒಟ್ಟಿಗೆ ಸೇರಬಹುದು ಎಂಬ ಎರಡು ಸ್ಥಾನಗಳನ್ನು ನಿರ್ಧರಿಸಬೇಕು. ಮೊದಲನೇ ಸ್ಥಳ ಮನೆಯ ಸಮೀಪವೇ ಇರಬೇಕು. ಎರಡನೇ ಸ್ಥಳ ಮನೆಯಿಂದ ಸ್ವಲ್ಪ ದೂರ ಇರಬೇಕು.
3 ಈ. ಆಪತ್ಕಾಲೀನ ಪರಿಸ್ಥಿತಿಯ ತಯಾರಿಯೆಂದು ತಮ್ಮ ವಾಹನವನ್ನು ಸರಿ ಮಾಡಿಟ್ಟುಕೊಳ್ಳಬೇಕು !
ವಾಹನ ದುರುಸ್ತಿ ಮಾಡುವವರಿಂದ (ಮೆಕಾನಿಕ್) ತಮ್ಮ ವಾಹನದ ಈ ಕೆಳಗಿನ ವಿಷಯಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು.
1. ಬ್ಯಾಟರಿ ಮತ್ತು ಇಗ್ನಿಶನ್ (ವಾಹನವನ್ನು ಸ್ಟಾರ್ಟ್ ಮಾಡುವ) ತಂತ್ರಾಂಶ
2. ಬ್ರೇಕ್
3. ಎಕ್ಝಾಸ್ಟ್ ಸಿಸ್ಟಮ್
4. ಇಂಧನ ಮತ್ತು ಏರ್ ಫಿಲ್ಟರ್
5. ಹಿಟರ್ ಮತ್ತು ವೈಪರ್
6. ಹೆಡ್ ಲೈಟ್ಸ್ ಮತ್ತು ಅಪಾಯವನ್ನು ತೋರಿಸುವ ಹೊಳೆಯುವ ದೀಪಗಳು
7. ತೈಲ (ಆಯಿಲ್)
8. ಪೆಟ್ರೋಲ್ ಅಥವಾ ಡಿಸಲ್ ಟಾಂಕಿ ತುಂಬಿಸಿಡಬೇಕು
9. ಒಳ್ಳೆಯ ಟಯರ್‌ಗಳನ್ನು ಹಾಕಿಸಿಕೊಳ್ಳಬೇಕು
3 ಉ. ವಾಹನದಲ್ಲಿ ಪ್ರವಾಸ ಮಾಡುವಾಗ ವಹಿಸಬೇಕಾದ ಜಾಗರೂಕತೆ !
ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದರೆ, ವಿದ್ಯುತ್ ಆಘಾತ (ಶಾಕ್) ಆಗುವ ಸಾಧ್ಯತೆ ಇರುತ್ತದೆ. ತರಬೇತಿ ಹೊಂದಿದ ವ್ಯಕ್ತಿಗಳು ಆ ತಂತಿಗಳನ್ನು ತೆಗೆಯುವವರೆಗೆ ವಾಹನದಲ್ಲಿಯೇ ಕುಳಿತಿರಬೇಕು. ಆಪತ್ಕಾಲದ ಪರಿಸ್ಥಿತಿಯಲ್ಲಿ ವಾಹನವನ್ನು ಚಲಾಯಿಸುವಾಗ ಅದನ್ನು ನಿಯಂತ್ರಿಸಲು ಕಠಿಣವಾದರೆ ಸುರಕ್ಷಿತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕಿಡಬೇಕು.
3 ಊ. ಸರಕಾರದ ಆದೇಶ ಹಾಗೂ ಸೂಚನೆಗಳನ್ನು ಪಾಲಿಸಿ !
ದೂರದರ್ಶನ ಮತ್ತು ರೇಡಿಯೋಗಳ ಮಾಧ್ಯಮದಿಂದ ಭೂಕಂಪ ಅಥವಾ ನೆರೆಯ ಸಂದರ್ಭದಲ್ಲಿನ ಹೊಸ ಮಾಹಿತಿಯನ್ನು ನಿರಂತರವಾಗಿ ನೀಡಲಾಗುತ್ತದೆ. ಇವುಗಳ ಮೂಲಕ ನೀಡಲಾಗುವ ವಾರ್ತೆಗಳನ್ನು ಮತ್ತು ಸೂಚನೆಗಳನ್ನು ಕೇಳಬೇಕು.
3 ಋ. ಸರಕಾರಿ ಖಾತೆಗಳ ಸಹಾಯ ಪಡೆಯಿರಿ !
ಆಪತ್ಕಾಲದ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನರಿಗೆ ಸಹಾಯ ಮಾಡಲು ಸರಕಾರ, ಸೈನ್ಯ, ಪೊಲೀಸರು, ರಾಜ್ಯ ಮೀಸಲು ಪಡೆ, ರೆಡ್ ಕ್ರಾಸ್, ಅಗ್ನಿಶಮನ ಪಡೆ ಮುಂತಾದವರು ಸಮರೋಪಾದಿಯಲ್ಲಿ ಕಾರ್ಯವನ್ನು ಮಾಡುತ್ತಿರುತ್ತಾರೆ. ತಮ್ಮ ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯ ಪಡೆಯಲು 112 ಕ್ರಮಾಂಕವನ್ನು ಸಂಪರ್ಕಿಸಬೇಕು. ಇದರ ಜೊತೆಗೆ ಕೆಲವು ಸ್ಥಳಗಳಲ್ಲಿ ಸ್ವಯಂಸೇವಕ ಸಂಘಟನೆಗಳು ಕೂಡ ಸಕ್ರಿಯವಾಗಿರುತ್ತವೆ. ಆಪತ್ಕಾಲದ ಪರಿಸ್ಥಿತಿಯಲ್ಲಿ ಇವರಿಂದ ಸಹಾಯ ಪಡೆಯಿರಿ !
3 ಎ. ಗಾಳಿ ಸುದ್ದಿಗಳ ಮೇಲೆ ವಿಶ್ವಾಸವಿಡಬಾರದು !
ಆಪತ್ಕಾಲದ ಪರಿಸ್ಥಿತಿಯಲ್ಲಿ ಶಾಂತವಾಗಿದ್ದು ಕೃತಿಗಳನ್ನು ಮಾಡಬೇಕು ಮತ್ತು ಇತರರಿಗೆ ಧೈರ್ಯ ತುಂಬಬೇಕು. ಗಾಳಿಸುದ್ದಿಗಳನ್ನು ನಂಬಬಾರದು.
3 ಏ. ತಮ್ಮ ಆಸ್ತಿಯ ವಿಮೆ ಮಾಡಿಡಬೇಕು !
ಯಾರಿಗೆ ಸಾಧ್ಯವಿದೆಯೋ, ಅವರು ತಮ್ಮ ಆಸ್ತಿಯ ಯೋಗ್ಯ ವಿಮೆಯನ್ನು ಮಾಡಿಡಬೇಕು, ಅದರಲ್ಲಿ ನೈಸರ್ಗಿಕ ವಿಪತ್ತು ಇತ್ಯಾದಿಗಳ ಸಂದರ್ಭದಲ್ಲಿ ಪರಿಹಾರ ಸಿಗುವಂತಿರಬೇಕು.
3 ಐ. ಇತರರಿಗೆ ಸಹಾಯ ಮಾಡುವುದು
1. ಇತರರಿಗೆ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರುವುದು ಮಹತ್ವದ್ದಾಗಿದೆ : ಮಾನವೀಯತೆಯ ದೃಷ್ಟಿಯಿಂದ ಸಹಾಯಕ್ಕೆ ಧಾವಿಸುವ ಜನರ ಪ್ರವೃತ್ತಿಯು ಒಳ್ಳೆಯದಾಗಿದ್ದರೂ, ಸಮಯದ ಅರಿವಿಟ್ಟುಕೊಂಡು ಮತ್ತು ನಮ್ಮಲ್ಲಿ ಯಾವುದರ ಕೌಶಲ್ಯವಿದೆ ಎಂಬುದರ ವಿಚಾರ ಮಾಡಿ ನಂತರವೇ ಸಹಾಯಕ್ಕಾಗಿ ಹೋಗುವುದು ಒಳ್ಳೆಯದಾಗಿದೆ. ತುರ್ತುಪರಿಸ್ಥಿತಿಯಲ್ಲಿ ಅತೀ ಉತ್ಸಾಹವನ್ನು ತೋರಿಸುವ ವೀರರನ್ನು ನಿಯಂತ್ರಿಸಬೇಕಾಗುತ್ತದೆ.
2. ಪ್ರಥಮೋಪಚಾರ : ಗಾಯಗೊಂಡಿರುವ ವ್ಯಕ್ತಿಗೆ ಮೊದಲು ಯೋಗ್ಯ ಪ್ರಥಮೋಪಚಾರವನ್ನು ನೀಡಬೇಕು. ವ್ಯಕ್ತಿ ಅಂತ್ಯಾವಸ್ಥೆಯಲ್ಲಿದ್ದರೆ ಮಾತ್ರ ಅವರನ್ನು ಅಲ್ಲಿಂದ ತಕ್ಷಣ ಸರಿಯಾದ ಸ್ಥಳಕ್ಕೆ ಸಾಗಿಸಬೇಕು.