ನೆರೆಪೀಡಿತ ಕ್ಷೇತ್ರದಲ್ಲಿ ವಾಸಿಸುವವರಿಗೆ ಮಹತ್ವದ ಲೇಖನ…
ಬಿರುಗಾಳಿ, ಭೂಕುಸಿತ, ಭೂಕಂಪ, ನೆರೆ, ಮೂರನೇ ಮಹಾಯುದ್ಧ ಇಂತಹ ಆಪತ್ಕಾಲದ ಪರಿಸ್ಥಿತಿಯು ಯಾವುದೇ ಕ್ಷಣ ಉದ್ಭವಿಸಬಹುದು. ಇಂತಹ ಸ್ಥಿತಿಯಲ್ಲಿ ‘ಯಾವ ಯೋಗ್ಯ ಕೃತಿಗಳನ್ನು ಮಾಡಬೇಕು ?’ ಎಂಬ ಜ್ಞಾನವಿಲ್ಲದ ಕಾರಣ ಸರ್ವಸಾಮಾನ್ಯ ವ್ಯಕ್ತಿಯು ಗೊಂದಲಕ್ಕೀಡಾಗುತ್ತಾನೆ ಮತ್ತು ಮಾನಸಿಕ ಸ್ಥೈರ್ಯ ಕುಸಿಯುತ್ತದೆ. ಕೆಲವು ಪ್ರಸಂಗಗಳಲ್ಲಿ ಜನರು ಅಯೋಗ್ಯ ಕೃತಿಗಳನ್ನು ಮಾಡುವುದು ಅಥವಾ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಯವುದೇ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ದೈನಂದಿನ ಜೀವನದಲ್ಲಿ ನಾಮಜಪ ಮುಂತಾದ ಸಾಧನೆಯ ಪ್ರಯತ್ನಗಳನ್ನು ಮಾಡಿ ಆತ್ಮಬಲವನ್ನು ಹೆಚ್ಚಿಸುವುದು ಆವಶ್ಯಕವಾಗಿದೆ.
‘ಆಪತ್ಕಾಲದ ಸ್ಥಿತಿಯಲ್ಲಿಯೂ ಸಾಧನೆಯ ಪ್ರಯತ್ನಗಳನ್ನು ಹೇಗೆ ಮಾಡಬೇಕು ?’, ಇದರ ಬಗೆಗಿನ ಅಂಶಗಳನ್ನು ಕೆಳಗೆ ಕೊಡಲಾಗಿದೆ.
೧. ದೇವರಿಗೆ ಪ್ರಾರ್ಥನೆಯನ್ನು ಮಾಡುವುದು
ಭಗವಾನ ಶ್ರೀಕೃಷ್ಣ, ಗ್ರಾಮದೇವತೆ, ಸ್ಥಾನದೇವತೆ ಮತ್ತು ವಾಸ್ತುದೇವತೆಗೆ ಪ್ರತಿ ೧೫ ನಿಮಿಷಗಳಿಗೊಮ್ಮೆ ಅಥವಾ ಅರ್ಧ ಗಂಟೆಗೊಮ್ಮೆ, ‘ಹೇ ದೇವತೆ, ನಾನು ನಿನಗೆ ಶರಣಾಗಿದ್ದೇನೆ, ನೀನೇ ನನ್ನನ್ನು ಕಾಪಾಡು. ನಿನ್ನ ನಾಮಜಪ ನನ್ನಿಂದ ಸತತವಾಗಿ ಆಗಲಿ. ನನ್ನ ಕುಟುಂಬದವರ ಸುತ್ತಲೂ ಮತ್ತು ನಮ್ಮ ಮನೆಯ ಸುತ್ತಲೂ ನಿನ್ನ ನಾಮಜಪದ ಸಂರಕ್ಷಣಾ ಕವಚ ನಿರ್ಮಾಣವಾಗಲಿ’ ಎಂದು ಮನಃಪೂರ್ವಕ ಪ್ರಾರ್ಥನೆ ಮಾಡಬೇಕು.
೨. ಹೆಚ್ಚೆಚ್ಚು ನಾಮಜಪ ಮಾಡುವುದು
ದಿನವಿಡೀ ಹೆಚ್ಚೆಚ್ಚು ಸಮಯ ಭಗವಾನ ಶ್ರೀಕೃಷ್ಣನ, ಕುಲದೇವತೆಯ ಅಥವಾ ಇಷ್ಟದೇವತೆಯ ನಾಮಜಪಿಸಬೇಕು. ಕಲಿಯುಗದಲ್ಲಿ ‘ದೇವರ ಹೆಸರೇ ಆಧಾರವಾಗಿರುವುದರಿಂದ ಮನಸ್ಸಿನಲ್ಲಿ ನಾಮಜಪ ಮಾಡುತ್ತಿರಬೇಕು. ಸಾಧ್ಯವಿದ್ದರೆ ಸಂಚಾರವಾಣಿಯಲ್ಲಿ (ಮೊಬೈಲ್) ಅಥವಾ ಸ್ಪೀಕರ್ನಲ್ಲಿ ನಾಮಜಪವನ್ನು ಹಚ್ಚಿಡಬೇಕು. ಇದರಿಂದ ನಾಮಜಪ ಮಾಡಲು ನೆನಪಾಗುವುದು.
೩. ಇತರರಿಗೆ ಸಹಾಯ ಮಾಡುವಾಗ ನಮ್ಮ ಭಾವ ಹೇಗಿರಬೇಕು ?
ಇಂತಹ ಆಪತ್ತುಗಳಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಬೇಕು, ಹಾಗೆಯೇ ಮಾನಸಿಕ ಆಧಾರವನ್ನು ನೀಡಿ ಭಗವಂತನ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಸಾಮಾಜಿಕ ಬಂಧುತ್ವವನ್ನು ಪಾಲಿಸುವುದು ಪ್ರತಿಯೊಬ್ಬರ ಧರ್ಮಕರ್ತವ್ಯವೇ ಆಗಿದೆ; ಆದರೆ ಇತರರಿಗೆ ಸಹಾಯ ಮಾಡುವಾಗ ‘ನಾನು ಸಹಾಯ ಮಾಡುತ್ತಿಲ್ಲ. ದೇವರೇ ನನ್ನಿಂದ ಇದನ್ನು ಮಾಡಿಸಿಕೊಳ್ಳುತ್ತಿದ್ದಾನೆ’ ಎಂಬ ಭಾವದಿಂದ ನಾಮಜಪ ಮಾಡುತ್ತಾ ಸಹಾಯ ಮಾಡಬೇಕು. ಇದರಿಂದ ನಮ್ಮ ಮನಸ್ಸಿನಲ್ಲಿ ಕರ್ತೃತ್ವದ ವಿಚಾರಗಳು ಬರುವುದಿಲ್ಲ, ಹಾಗೆಯೇ ಆ ವ್ಯಕ್ತಿಯೊಂದಿಗೆ ಕೊಡುಕೊಳ್ಳುವ ಲೆಕ್ಕಾಚಾರವೂ ನಿರ್ಮಾಣವಾಗುವುದಿಲ್ಲ.
೪. ಸ್ವಭಾವದೋಷ ಮತ್ತು ಅಹಂನ ತೀವ್ರತೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದು
ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಪುಟ್ಟ ಕಾರಣಗಳಿಂದಾಗಿ ಮನಸ್ಸು ವಿಚಲಿತವಾಗುವುದು, ಕಾಳಜಿ ಅನಿಸುವುದು, ಹಾಗೆಯೇ ಹೆದರಿಕೆಯಾಗಿ ಅಸ್ವಸ್ಥತೆ ನಿರ್ಮಾಣವಾಗುವುದು ಮುಂತಾದ ಸ್ವಭಾವದೋಷಗಳ ಪ್ರಕಟೀಕರಣವಾಗುವ ಸಾಧ್ಯತೆ ಇರುತ್ತದೆ. ಇಂತಹ ಪ್ರಸಂಗಗಳಲ್ಲಿ ಯೋಗ್ಯ ಸ್ವಯಂಸೂಚನೆಗಳನ್ನು ನೀಡಿದರೆ ಎದುರಾದ ಪರಿಸ್ಥಿತಿಯಿಂದ ಹೊರಗೆ ಬರಲು ಸಹಾಯವಾಗುತ್ತದೆ.
೪ ಆ. ಕಾಳಜಿ ಅನಿಸುತ್ತಿದ್ದಲ್ಲಿ ಮುಂದಿನಂತೆ ಸ್ವಯಂಸೂಚನೆಯನ್ನು ಕೊಡಬಹುದು ! (ಆ ೨ ಸ್ವಯಂಸೂಚನೆಯ ಪದ್ಧತಿ)
ಪ್ರಸಂಗ : ಅತಿವೃಷ್ಟಿಯಿಂದಾಗಿ ಊರೆಲ್ಲ ನೀರು ತುಂಬಿರುವುದು.
ಸ್ವಯಂಸೂಚನೆ : ಯಾವಾಗ ಊರಿನ ನೆರೆಯ ಸ್ಥಿತಿಯನ್ನು ನೋಡಿ ‘ಈಗ ನಮ್ಮ ಮತ್ತು ನಮ್ಮ ಮನೆಯ ಸ್ಥಿತಿ ಏನಾಗುವುದು ?’, ಎಂಬ ಕಾಳಜಿಯ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುವವೋ, ಆಗ ‘ನಾನು ವರ್ತಮಾನಕಾಲದಲ್ಲಿದ್ದರೆ, ಈ ಸಮಸ್ಯೆಯನ್ನು ಎದುರಿಸಬಹುದು. ಭಗವಂತನಿಗೂ ಇದೇ ಇಷ್ಟವಾಗುವುದು. ಮನೆಯಲ್ಲಿರುವ ಸಾಮಾನುಗಳನ್ನು ಪ್ರವಾಹದ ನೀರಿನಿಂದ ರಕ್ಷಿಸಲು ಸುರಕ್ಷಿತ ಸ್ಥಳದಲ್ಲಿಡುವುದು ಹಾಗೂ ಕುಟುಂಬದವರಿಗೆ ಸಹಾಯ ಮಾಡುವುದು ಮತ್ತು ಆಧಾರ ನೀಡುವುದು; ಇವು ವರ್ತಮಾನಕಾಲದಲ್ಲಿನ ನನ್ನ ಕರ್ತವ್ಯ ಮತ್ತು ಸಾಧನೆಯಾಗಿದೆ’ ಎಂಬುದರ ಅರಿವಯ ನನಗಾಗುವುದು ಮತ್ತು ನಾನು ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆಗಾಗ ಕಲಿಯಲು ಸಿಗುವ ಅಂಶಗಳನ್ನು ಕಲಿತುಕೊಂಡು ನಾಮಜಪ ಮಾಡುತ್ತಾ ಯೋಗ್ಯ ಕೃತಿಗಳನ್ನು ಮಾಡುವೆನು.
೪ ಆ. ಹೆದರಿಕೆಯಾಗುತ್ತಿದ್ದರೆ ಮುಂದಿನಂತೆ ಪ್ರಸಂಗದ ಅವಲೋಕನ ಮಾಡುವುದು ಆವಶ್ಯಕವಾಗಿದೆ ! (ಅ ೩ ಸ್ವಯಂಸೂಚನಾ ಪದ್ಧತಿ)
ಯಾವ ಪ್ರಸಂಗದ ಬಗ್ಗೆ ಹೆದರಿಕೆ ಅನಿಸುತ್ತದೆಯೋ, ಆ ಪ್ರಸಂಗವನ್ನು ಎದುರಿಸುವ ಮೊದಲು ಅ ೩ ಈ ಸ್ವಯಂಸೂಚನೆಯ ಪದ್ಧತಿಗನುಸಾರ ಪ್ರಸಂಗದ ಅಭ್ಯಾಸ ಮಾಡಬೇಕು. ಈ ಸ್ವಯಂಸೂಚನೆಯ ಉದಾಹರಣೆಯನ್ನು ಕೆಳಗೆ ನೀಡಲಾಗಿದೆ.
ಪ್ರಸಂಗ : ‘ಬಹಳ ಊರುಗಳಲ್ಲಿ ನೆರೆಯ ಸ್ಥಿತಿಯಿದೆ’, ಇದರ ಬಗೆಗಿನ ವಾರ್ತೆಯನ್ನು ನಾನು ದೂರಚಿತ್ರವಾಹಿನಿಯಲ್ಲಿ ನೋಡಿದೆ. ತದನಂತರ ‘ನಮ್ಮ ಮನೆಯ ಬಳಿಯೂ ನದಿಯಿದೆ, ಆ ನದಿಗೂ ನೆರೆ ಬರಬಹುದು. ನೆರೆ ಬಂದರೆ ನಮಗೆ ಯಾವುದಾದರೊಂದು ಸುರಕ್ಷಿತ ಸ್ಥಳಕ್ಕೆ ಹೋಗಲು ಹೇಳುವರು. ಬೇರೆ ಕಡೆಗೆ ಹೋಗಲು ನನಗೆ ಆಗಬಹುದೇ ?’ ಎಂಬ ವಿಚಾರದಿಂದ ಭಯವೆನಿಸಿತು.
ಸ್ವಯಂಸೂಚನೆ :
ಅ. ನಮ್ಮ ಮನೆಯ ಬಳಿಯಿರುವ ನದಿಗೆ ನೆರೆ ಬಂದಿರುವುದರಿಂದ ನಗರ ಪಾಲಿಕೆಯ ಸಿಬ್ಬಂದಿಗಳು ನಮಗೆ ಬೇರೆ ಕಡೆಗೆ ಹೋಗಲು ಹೇಳಿದ್ದಾರೆ.
ಆ. ‘ಈ ಸ್ಥಿತಿಯಿಂದ ನನ್ನನ್ನು ಯಾವುದೇ ಸಮಸ್ಯೆಗಳಾಗದೇ ಹೊರಗೆ ತೆಗೆಯಬೇಕೆಂದು’ ನಾನು ದೇವರಿಗೆ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ.
ಇ. ಆವಶ್ಯಕವಿರುವಷ್ಟು ಸಾಮಾನುಗಳನ್ನು ತೆಗೆದುಕೊಂಡು ಕುಟುಂಬದವರೊಂದಿಗೆ ನಾನು ಮನೆಯಿಂದ ಹೊರಗೆ ಹೋಗುತ್ತಿದ್ದೇನೆ.
ಈ. ‘ಆಪತ್ಕಾಲದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು?’ ಎಂಬುದನ್ನು ತಿಳಿದಿರುವ ಕೆಲವರು ನನ್ನೊಂದಿಗಿದ್ದಾರೆ. ಅವರ ಸಹಾಯದಿಂದ ನಾನು ನೆರೆಯ ನೀರಿನಲ್ಲಿ ಸುರಕ್ಷಿತ ದಾರಿಯನ್ನು ಹುಡುಕಿ ಹೋಗುತ್ತಿದ್ದೇನೆ. ಎಲ್ಲಿ ಹೆಚ್ಚು ನೀರಿದೆಯೋ, ಅಲ್ಲಿ ಜಾಗರೂಕನಾಗಿದ್ದು ಮಾರ್ಗವನ್ನು ಮಾಡಿಕೊಳ್ಳುತ್ತಿದ್ದೇನೆ. ನಾನು ಮನಸ್ಸಿನಲ್ಲಿಯೇ ಸತತವಾಗಿ ಪ್ರಾರ್ಥನೆ ಮತ್ತು ನಾಮಜಪ ಮಾಡುತ್ತಿದ್ದೇನೆ.
ಉ. ಸಮಸ್ಯೆಗಳು ಎದುರಾದಾಗ ಸಹಕಾರಿಗಳ ಸಹಾಯ ಲಭಿಸಿ ದೇವರ ಕೃಪೆಯನ್ನು ಅನುಭವಿಸುತ್ತಿದ್ದೇನೆ. ಆದುದರಿಂದ ಮನಸ್ಸಿಗೆ ಆಧಾರವೆನಿಸಿ ನನಗೆ ದೇವರ ಮೇಲಿರುವ ಶ್ರದ್ಧೆ ಹೆಚ್ಚುತ್ತಿದೆ.
ಊ. ಭಗವಂತನ ಕೃಪೆಯಿಂದ ನಾನು ಸುರಕ್ಷಿತ ಸ್ಥಳಕ್ಕೆ ತಲುಪಿದ್ದೇನೆ.
ಋ. ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ನಾನು ಎಲ್ಲ ಸಾಮಾನುಗಳನ್ನು ವ್ಯವಸ್ಥಿತವಾಗಿ ಇಡುತ್ತಿದ್ದೇನೆ.
ಭಕ್ತ ಪ್ರಹ್ಲಾದನಿಗೆ ಭಗವಂತನ ಮೇಲಿದ್ದಂತಹ ದೃಢ ಶ್ರದ್ದೆ ನಿರ್ಮಾಣವಾಗಲು ಪ್ರಯತ್ನಿಸಿ !
ಭಗವಂತನ ಮೇಲೆ ಶ್ರದ್ಧೆ ದೃಢವಾಗಿದ್ದರೆ, ಯಾವುದೇ ಸಂಕಟದಿಂದ ಪಾರಾಗಲು ಬಲ ಸಿಗುತ್ತದೆ. ಭಕ್ತ ಪ್ರಹ್ಲಾದನ ಉದಾಹರಣೆಯು ಎಲ್ಲರಿಗೆ ತಿಳಿದಿದೆ. ದೊಡ್ಡ ದೊಡ್ಡ ಸಂಕಟಗಳು ಎದುರಾದರೂ ಪ್ರಹ್ಲಾದನಿಗೆ ದೇವರ ಮೇಲಿದ್ದ ಶ್ರದ್ಧೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಪ್ರತಿ ಬಾರಿ ಅವನು ಅತ್ಯಂತ ಶ್ರದ್ಧೆಯಿಂದ ‘ನಾರಾಯಣ, ನಾರಾಯಣ’, ಎಂದು ಮೊರೆಯಿಡುತ್ತಲೇ ಇದ್ದನು. ಅವನ ಆರ್ತ ಕರೆಯನ್ನು ಕೇಳಿ ಪ್ರತ್ಯಕ್ಷ ಭಗವಂತನು ಅವನಿಗಾಗಿ ನರಸಿಂಹನ ಅವತಾರವನ್ನು ಧರಿಸಿ ಧಾವಿಸಿ ಬಂದನು.
ಈ ಉದಾಹರಣೆಯಿಂದ ‘ಮಾನವನಿಗೆ ಭಗವಂತನ ಮೇಲೆ ಎಷ್ಟು ಆಳವಾದ ಮತ್ತು ದೃಢವಾದ ಶ್ರದ್ಧೆ ಇರಬೇಕು’ ಎಂಬುದು ಗಮನಕ್ಕೆ ಬರುತ್ತದೆ. ಭಕ್ತಿಯ ಇಂತಹ ಉಚ್ಚ ಸ್ಥಿತಿಯನ್ನು ಪಡೆಯಲು ಸಾಧನೆಯ ಹೊರತು ಬೇರೆ ದಾರಿಯಿಲ್ಲ. ನಿಯಮಿತವಾಗಿ ಸಾಧನೆಯ ಪ್ರಯತ್ನಗಳನ್ನು ಮಾಡುವುದು, ಭಗವಂತನ ಮೇಲೆ ದೃಢ ಶ್ರದ್ಧೆ ನಿರ್ಮಾಣವಾಗುವುದರ ಮೊದಲ ಮೆಟ್ಟಿಲಾಗಿದೆ. ಪ್ರಹ್ಲಾದನಷ್ಟೇ ದೃಢ ಶ್ರದ್ಧೆ ನಿರ್ಮಾಣವಾಗಲು ಪ್ರಯತ್ನಿಸಿ ಎಲ್ಲರೂ ಭಗವಂತನ ಅಪಾರ ಕೃಪೆಯ ಅನುಭೂತಿಯನ್ನು ಪಡೆಯೋಣ.