ಯೋಗರಾಜ ಗುಗ್ಗುಲು (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಉತ್ತಮ ವಾತನಾಶಕ ಔಷಧಿಯಾಗಿದೆ. ಇದರ ರೋಗಗಳಲ್ಲಿ ಆಗಬಹುದಾದ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
ವಾತದ ರೋಗಗಳು, ಅರ್ಧಾಂಗವಾಯು, ಕೈಗಳು ನಡಗುವುದು, ತಲೆತಿರುಗುವುದು, ಉಚ್ಚ ರಕ್ತದೊತ್ತಡ, ಬೊಜ್ಜು (ಸ್ಥೂಲಕಾಯ), ಸಂಧಿವಾತ (ಸಂಧಿಗಳಿಗೆ ಬಾವು ಬರುವುದು ಮತ್ತು ಸಂಧಿಗಳು ನೋಯಿಸುವುದು) ಮತ್ತು ಕೈಕಾಲುಗಳು ನೋಯಿಸುವುದು. | ದಿನದಲ್ಲಿ 2 ಮಾತ್ರೆಗಳನ್ನು 2 – 3 ಸಲ ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು | 1 ರಿಂದ 3 ತಿಂಗಳು |
ಆ. ಸೂಚನೆ
1. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ (ಹುಡಿ) ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುತ್ತದೆ.
2. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ. (11.6.2021)