ಆಮಲಕ (ನೆಲ್ಲಿಕಾಯಿ) ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧಿ ತಂಪು ಗುಣಧರ್ಮದ್ದಾಗಿದ್ದು, ವಾತ, ಪಿತ್ತ ಮತ್ತು ಕಫವನ್ನು ಸಮತೋಲನೆಗೆ ತರುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ಕೂದಲು ಉದುರುವುದು ಮತ್ತು ಬಿಳಿಯಾಗುವುದು | ನೆಲ್ಲಿಕಾಯಿ, ಅಮೃತಬಳ್ಳಿ ಮತ್ತು ನೆಗ್ಗಿಲು (ಗೋಕ್ಷುರ) ಇವುಗಳ ಸಮಭಾಗ ಚೂರ್ಣದ 1 ಚಮಚ ಮಿಶ್ರಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು | 3 ತಿಂಗಳು |
2. ಕೂದಲು ಕಪ್ಪಾಗಲು | ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. ಇದರ ಜೊತೆಗೆ ಕಬ್ಬಿಣದ ಕಡಾಯದಲ್ಲಿ (ಬಾಣಿಯಲ್ಲಿ) 2 ರಿಂದ 4 ಚಮಚ ನೆಲ್ಲಿಕಾಯಿ ಚೂರ್ಣವನ್ನು ಸ್ವಲ್ಪ ನೀರಿನಲ್ಲಿ ಇಡೀ ರಾತ್ರಿ ನೆನೆಯಲು ಇಡಬೇಕು ಬೆಳಗ್ಗೆ ಕಪ್ಪಾಗಿರುವ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಬೇಕು, ನಂತರ ಕೂದಲುಗಳನ್ನು ತೊಳೆದುಕೊಳ್ಳಬೇಕು. ಈ ರೀತಿ ವಾರದಲ್ಲಿ 2 ಸಲ ಮಾಡಬಹುದು. | ನಿಯಮಿತ |
3. ತಲೆನೋವು | ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣ 1 ಚಮಚ ತುಪ್ಪ ಮತ್ತು 1 ಚಮಚ ಕಲ್ಲುಸಕ್ಕರೆಯನ್ನು ತಿನ್ನಬೇಕು | 3 ರಿಂದ 5 ದಿನ |
4. ತಲೆ ಬಿಸಿಯಾಗುವುದು | ತೊಂದರೆಯಾದಾಗ ನಮಗೆ ಬೇಕಾದಷ್ಟು ನೆಲ್ಲಿಕಾಯಿ ಚೂರ್ಣವನ್ನು ಹಾಲಿನಲ್ಲಿ ಅರೆದು ಅದನ್ನು ಹಣೆಯ ಮೇಲೆ ಹಚ್ಚಿಕೊಳ್ಳಬೇಕು. ಒಂದು ಗಂಟೆಯ ನಂತರ ಅದನ್ನು ಬಿಸಿನೀರಿನಿಂದ ತೊಳೆಯಬೇಕು | ತಾತ್ಕಾಲಿಕ |
5. ಕಣ್ಣಿನ ರೋಗಗಳು | ರಾತ್ರಿ ಮಲಗುವಾಗ 1 ಚಮಚ ಚೂರ್ಣವನ್ನು ಅರ್ಧ ಚಮಚ ತುಪ್ಪ ಮತ್ತು 1 ಚಮಚ ಜೇನುತುಪ್ಪದೊಂದಿಗೆ ಸೇವಿಸಬೇಕು | 3 ತಿಂಗಳು |
6. ಮೂಗಿನಿಂದ ರಕ್ತ ಬರುವುದು | ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ನೆಲ್ಲಿಕಾಯಿ ಚೂರ್ಣವನ್ನು ಅರ್ಧ ಬಟ್ಟಲು ನೀರಿನೊಂದಿಗೆ ಸೇವಿಸಬೇಕು ಮತ್ತು ನಮಗೆ ಬೇಕಾದಷ್ಟು ನೆಲ್ಲಿಕಾಯಿ ಚೂರ್ಣವನ್ನು ತುಪ್ಪದಲ್ಲಿ ಹುರಿದು ಅದರಲ್ಲಿ ಸ್ವಲ್ಪ ಮಜ್ಜಿಗೆಯನ್ನು ಹಾಕಿ ಅದನ್ನು ಹಣೆಯ ಮೇಲೆ ದಪ್ಪದಾಗಿ ಹಚ್ಚಿಕೊಳ್ಳಬೇಕು. 1 ಗಂಟೆಯ ನಂತರ ಅದನ್ನು ನೀರಿನಿಂದ ತೊಳೆಯಬೇಕು. | 3 ರಿಂದ 5 ದಿನ |
7. ಬಾಯಿ ಒಣಗುವುದು | 10 ಒಣ ದ್ರಾಕ್ಷಿ ಮತ್ತು 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಒಟ್ಟಿಗೆ ಅರೆದು ಚಟ್ಣಿಯನ್ನು ಮಾಡಬೇಕು, ಅದರ ಸಣ್ಣ ಸಣ್ಣ ಗುಳುಗೆಗಳನ್ನು ಮಾಡಿ ಅವುಗಳನ್ನು ದಿನದಲ್ಲಿ 3 – 4 ಸಲ ಜಗಿದು ತಿನ್ನಬೇಕು. | 7 ದಿನ |
8. ಪಿತ್ತದಿಂದ ವಾಂತಿ ಆಗುವುದು | 1 ಚಮಚ ನೆಲ್ಲಿಕಾಯಿ ಚೂರ್ಣ, ಅರ್ಧ ಚಮಚ ಅರೆದ ಚಂದನ ಮತ್ತು ಅರ್ಧ ಚಮಚ ಜೇನುತುಪ್ಪನ್ನು ಒಟ್ಟಿಗೆ ಜಗಿದು ತಿನ್ನಬೇಕು. | ತಾತ್ಕಾಲಿಕ |
9. ಮಲಬದ್ಧತೆ | ಎರಡೂ ಸಲ ಊಟದ ಮೊದಲು 1 ಚಮಚ ನೆಲ್ಲಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 15 ದಿನ |
10. ಮಧುಮೇಹ | ಬೆಳಗ್ಗೆ ಮತ್ತು ಸಾಯಂಕಾಲ 1 ಚಮಚ ನೆಲ್ಲಿಕಾಯಿ ಚೂರ್ಣ ಮತ್ತು 1 ಚಮಚ ಹಸಿ ಅರಶಿಣದ ತುಂಡುಗಳನ್ನು ಒಣಗಿಸಿ ಮಾಡಿದ ಚೂರ್ಣವನ್ನು ಒಂದು ಬಟ್ಟಲು ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. | 3 ತಿಂಗಳು |
11. ಮೂತ್ರದ ಬಣ್ಣ ಬದಲಾಗುವುದು ಅಥವಾ ಮುಸುಕಾಗುವುದು, ಮೂತ್ರನಾಳದಲ್ಲಿ ಉರಿ, ಮೂತ್ರ ಕಡಿಮೆಯಾಗುವುದು, ಹಾಗೂ ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) | 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ, ಅದರಲ್ಲಿ ಬೆಳಗ್ಗೆ ಅರ್ಧ ಚಮಚ ಜೀರಿಗೆ ಪುಡಿ ಮತ್ತು ಒಂದು ಚಮಚ ಕಲ್ಲುಸಕ್ಕರೆ ಹಾಕಿ ಸೇವಿಸಬೇಕು. ಇದೇ ರೀತಿ ಬೆಳಗ್ಗೆ ನೆಲ್ಲಿಕಾಯಿ ಚೂರ್ಣವನ್ನು ನೆನೆಸಿ ಸಾಯಂಕಾಲ ಸೇವಿಸಬೇಕು. | 5 ರಿಂದ 7 ದಿನ |
12. ಕೈಕಾಲುಗಳು ಉರಿಯುವುದು, ತಲೆತಿರುಗುವುದು, ಕಣ್ಣುಗಳ ಮುಂದೆ ಕತ್ತಲು ಕವಿಯುವುದು ಮತ್ತು ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು | ದಿನದಲ್ಲಿ 2 – 3 ಸಲ 1 ಚಮಚ ನೆಲ್ಲಿಕಾಯಿ ಚೂರ್ಣ ಮತ್ತು 1 ಚಮಚ ಕಲ್ಲುಸಕ್ಕರೆ 1 ಬಟ್ಟಲು ನೀರಿನೊಂದಿಗೆ ಸೇವಿಸಬೇಕು | 7 ದಿನ |
13. ಕಜ್ಜಿ (ಹುರಕು, ಸ್ಕೇಬೀಜ್) | ದಿನದಲ್ಲಿ 2 – 3 ಸಲ ನಮಗೆ ಬೇಕಾಗುವಷ್ಟು ನೆಲ್ಲಿಕಾಯಿ ಚೂರ್ಣವನ್ನು ನೀರಿನಲ್ಲಿ ಕಲಿಸಿ ಹುರಕಿನ ಮೇಲೆ ಹಚ್ಚಬೇಕು ಮತ್ತು ಒಂದು ಗಂಟೆಯ ನಂತರ ಅದನ್ನು ಬಿಸಿನೀರಿನಿಂದ ತೊಳೆದುಕೊಳ್ಳಬೇಕು | 5 ರಿಂದ 7 ದಿನ |
14. ಸಮಯಕ್ಕಿಂತ ಮೊದಲೇ ವೃದ್ಧಾಪ್ಯ ಬರಬಾರದೆಂದು, ಹಾಗೆಯೇ ಶರೀರ ನಿರೋಗಿಯಾಗಿರಲು | ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಅನಂತರ ಅರ್ಧ ಗಂಟೆ ಏನೂ ತಿನ್ನುವುದು ಕುಡಿಯುವುದು ಮಾಡಬಾರದು. | 3 ತಿಂಗಳು |
ಆ. ಸೂಚನೆ
8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)