ಆಡುಸೋಗೆ ಚೂರ್ಣ
ಅ. ಗುಣಧರ್ಮ ಮತ್ತು ಉಪಯೋಗ
ಈ ಔಷಧಿಯು ತಂಪು ಗುಣಧರ್ಮದ್ದಾಗಿದ್ದು ಪಿತ್ತ ಮತ್ತು ಕಫ ನಾಶಕವಾಗಿದೆ. ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
---|---|---|
1. ಮೂಗಿನಿಂದ ರಕ್ತ ಬರುವುದು, ಉಷ್ಣತೆಯ ರೋಗಗಳು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ಮತ್ತು ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) | 1 ಚಮಚ ಆಡುಸೋಗೆಯ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ 2 – 3 ಸಲ ನೀರಿನೊಂದಿಗೆ ಸೇವಿಸಬೇಕು. | 7 ದಿನಗಳು |
2. ಕಫದೊಂದಿಗೆ ಕೆಮ್ಮು ಮತ್ತು ಉಬ್ಬಸ (ಅಸ್ಥಮಾ) | 1 ಚಮಚ ಆಡುಸೋಗೆಯ ಚೂರ್ಣ, ಅರ್ಧ ಚಮಚ ಶುಂಠಿ ಅಥವಾ ಪಿಪ್ಪಲಿಯ ಚೂರ್ಣ, 2 ಚಮಚ ಜೇನು ತುಪ್ಪ ಇವುಗಳನ್ನು ಬೆರೆಸಿ ದಿನದಲ್ಲಿ 5 – 6 ಸಲ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು | 7 ದಿನಗಳು |
3. ಕ್ಷಯರೋಗದ (ಟಿ.ಬಿ) ಉಪಚಾರಕ್ಕೆ ಸಹಾಯಕ | ಬೆಳಗ್ಗೆ ಮತ್ತು ಸಾಯಂಕಾಲ 1 ಚಮಚ ಆಡುಸೋಗೆಯ ಚೂರ್ಣ, 1 ಚಮಚ ತುಪ್ಪ ಮತ್ತು 1 ಚಮಚ ಸಕ್ಕರೆಯ ಮಿಶ್ರಣವನ್ನು ಮಾಡಿ ಸೇವಿಸಬೇಕು, ನಂತರ ಒಂದು ಬಟ್ಟಲು ಬಿಸಿನೀರು ಕುಡಿಯಬೇಕು. | 1 ರಿಂದ 3 ತಿಂಗಳು |
4. ದಡಾರ ಮತ್ತು ಸಿಡಬು ಹಾಗೆಯೇ ಜ್ವರಬರಿಸುವ ಇತರ ಸೋಂಕು ರೋಗಗಳು | ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ಆಡುಸೋಗೆಯ ಚೂರ್ಣ ಮತ್ತು ಅರ್ಧ ಚಮಚ ಜೇಷ್ಟಮಧು ಚೂರ್ಣ ಇವುಗಳ ಮಿಶ್ರಣವನ್ನು ಮಾಡಿ ನೀರಿನೊಂದಿಗೆ ಸೇವಿಸಬೇಕು | 7 ದಿನಗಳು |
5. ಯಾವುದೇ ರೀತಿಯ ಗಾಯ (ಹುಣ್ಣು) | ದಿನದಲ್ಲಿ 2 ಸಲ ಬಿಸಿಮಾಡಿ ಆರಿಸಿದ ನೀರಿನಲ್ಲಿ ಆಡುಸೋಗೆಯ ಚೂರ್ಣವನ್ನು ಕಲಿಸಿ ಗಾಯಕ್ಕೆ ಹಚ್ಚಬೇಕು. | 7 ದಿನಗಳು |
ಆ. ಸೂಚನೆ
8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)