ಪಿಪ್ಪಲಿ (ಹಿಪ್ಪಲಿ) ಚೂರ್ಣ

Article also available in :

ಪಿಪ್ಪಲಿ (ಹಿಪ್ಪಲಿ) ಚೂರ್ಣ

ಅ. ಗುಣಧರ್ಮ ಮತ್ತು ಉಪಯೋಗ

ಪಿಪ್ಪಲಿ, ಹಿಪ್ಪಲಿ, hippali

ಈ ಔಷಧಿಯು ವಾತ ಮತ್ತು ಕಫ ನಾಶಕವಾಗಿದ್ದು, ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರ ಜೊತೆಗೆ ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ತೆಗೆದುಕೊಳ್ಳುವ ಪದ್ಧತಿ ಕಾಲಾವಧಿ
1. ರಕ್ತದೊತ್ತಡ (ಬಿ.ಪಿ) ಕಡಿಮೆಯಾಗುವುದು, ಮೈ ತಣ್ಣಗಾಗುವುದು ತುಂಬಾ ಚಳಿಯಾಗುವುದು 2 ಚಿಟಿಕೆಯಷ್ಟು ಪಿಪ್ಪಲಿ ಚೂರ್ಣವನ್ನು 1 ಚಮಚ ಹಸಿ ಶುಂಠಿಯ ರಸದಲ್ಲಿ ಬೆರೆಸಿ ನೆಕ್ಕಬೇಕು ತಾತ್ಕಾಲಿಕ (ಆ ಸಮಯಕ್ಕೆ ಮಾತ್ರ)
2. ಕೆಮ್ಮು, ದಮ್ಮು, ಎದೆಯಲ್ಲಿ ಕಫವಾಗುವುದು, ಬಾಯಿಗೆ ರುಚಿ ಇಲ್ಲದಿರುವುದು, ಹಸಿವೇ ಆಗದಿರುವುದು, ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಆಗುವುದು 2 ಚಿಟಿಕೆಯಷ್ಟು ಪಿಪ್ಪಲಿ ಚೂರ್ಣ, ಅರ್ಧ ಚಮಚ ತುಪ್ಪ ಮತ್ತು 1 ಚಮಚದಷ್ಟು ಜೇನುತುಪ್ಪನ್ನು ಒಟ್ಟಿಗೆ ಬೆರೆಸಿ ದಿನದಲ್ಲಿ 2 – 3 ಸಲ ನೆಕ್ಕಬೇಕು 5 ರಿಂದ 7 ದಿನ
3. ಮಲಬದ್ಧತೆ (ಕಾನಸ್ಟಿಪೇಶನ್) ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಚಿಟಿಕೆ ಪಿಪ್ಪಲಿ ಚೂರ್ಣ ಮತ್ತು 1 ಚಮಚ ತ್ರಿಫಲ ಚೂರ್ಣವನ್ನು ಬೆರೆಸಿ ಅರ್ಧ ಕಪ್ ಬಿಸಿನೀರಿನೊಂದಿಗೆ ಸೇವಿಸಬೇಕು 5 ರಿಂದ 7 ದಿನ
4. ಹಳೆಯ ಜ್ವರ (ಬಹಳ ದಿನಗಳಿಂದ ಬರುತ್ತಿರುವ ಜ್ವರ) 2 ಚಿಟಿಕೆ ಪಿಪ್ಪಲಿ ಚೂರ್ಣವನ್ನು 1 ಚಮಚ ಜೇನು ತುಪ್ಪದೊಂದಿಗೆ ದಿನದಲ್ಲಿ 3 ಸಲ ಸೇವಿಸಬೇಕು 7 ದಿನ
5. ‘ಹೈಪೋಥೈರಾಯಿಡ್’, ಶ್ವಸನವ್ಯೂಹದ ರೋಗಗಳು, ಗರ್ಭಾಶಯದಲ್ಲಿನ ಗಡ್ಡೆಗಳು (ಫೈಬ್ರಾಯಿಡ್), ಅಂಡಾಶಯದ ಗಡ್ಡೆಗಳು (ಓವೇರಿಯನ್ ಸಿಸ್ಟ), ಇತ್ಯಾದಿಗಳಿಗೆ `ವರ್ಧಮಾನ ಪಿಪ್ಪಲಿ ರಸಾಯನ’ವು ಉಪಯುಕ್ತವಾಗಿದೆ ಸೂರ್ಯೋದಯದ ಸಮಯದಲ್ಲಿ 1 ಬಟ್ಟಲು ಹಾಲಿನಲ್ಲಿ ಅರ್ಧ ಗ್ರಾಮ್ (1/8 ಚಮಚ) ಚೂರ್ಣವನ್ನು ಬೆರೆಸಿ ಕುದಿಸಿ, ಅದರಲ್ಲಿ 1 ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು. ನಂತರ 1 ಗಂಟೆ ಏನೂ ತಿನ್ನಬಾರದು ಅಥವಾ ಕುಡಿಯಬಾರದು. ನಂತರ ಚೂರ್ಣದ ಪ್ರಮಾಣವನ್ನು ಪ್ರತಿದಿನ ಅರ್ಧ ಗ್ರಾಮ್‌ದಂತೆ ಹೆಚ್ಚಿಸಿ, 9 ನೇ ದಿನದಿಂದ ಹಿಡಿದು ಪ್ರತಿದಿನ ಅರ್ಧ ಗ್ರಾಮ್ ಕಡಿಮೆ ಮಾಡಬೇಕು. ಈ ಉಪಚಾರದ ಹೊರತು ಪಿಪ್ಪಲಿ ಚೂರ್ಣವನ್ನು ನಿರಂತರವಾಗಿ 8 ದಿನಗಳಿಗಿಂತ ಹೆಚ್ಚು ಉಪಯೋಗಿಸಬಾರದು 15 ದಿನ

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

2. ಮಧುಮೇಹ ಇದ್ದವರು ಔಷಧಿಯನ್ನು ಜೇನುತುಪ್ಪ ಅಥವಾ ಸಕ್ಕರೆಯ ಜೊತೆಗೆ ತೆಗೆದುಕೊಳ್ಳದೇ ನೀರಿನೊಂದಿಗೆ ತೆಗೆದುಕೊಳ್ಳಬೇಕು ಅಥವಾ ಕೇವಲ ಅಗಿದು ತಿನ್ನಬೇಕು.

3. ಉಷ್ಣತೆಯ ಲಕ್ಷಣಗಳು (ಉಷ್ಣ ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ಮೈಕೈ ಉರಿಯುವುದು, ಉರಿ ಮೂತ್ರ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆ ಸುತ್ತುವಿಕೆ ಇತ್ಯಾದಿ) ಇರುವಾಗ ಮತ್ತು ಬೇಸಿಗೆ ಮತ್ತು ಮಳೆಗಾಲದ ನಂತರ ಬರುವ ಶರದ ಋತು (ಅಕ್ಟೋಬರ್‌ನ ಹೀಟ್) ವಿನ ಕಾಲಗಳಲ್ಲಿ ಪಿಪ್ಪಲಿಯನ್ನು ಆದಷ್ಟು ಉಪಯೋಗಿಸಬಾರದು ಅಥವಾ ಬಳಕೆ ಕಡಿಮೆ ಮಾಡಬೇಕು.

4. ಉಷ್ಣತೆ ಹೆಚ್ಚಾದರೆ ಪಿಪ್ಪಲಿಯ ಸೇವನೆ ನಿಲ್ಲಿಸಿ 1 – 2 ದಿನ, 1 ಲೋಟ ನಿಂಬೆಹಣ್ಣಿನ ಶರಬತ್ತನ್ನು ದಿನದಲ್ಲಿ 2 ಬಾರಿ ಕುಡಿಯಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

2 thoughts on “ಪಿಪ್ಪಲಿ (ಹಿಪ್ಪಲಿ) ಚೂರ್ಣ”

  1. ಒಂದು ಚಿಟಿಕೆ ಎಂದರೆ ಪ್ರಮಾಣ ಗ್ರಾಂಗಳಲ್ಲಿ ತಿಳಿಸಲು ಸಾಧ್ಯ ವೇ. ದಯವಿಟ್ಟು ತಿಳಿಸಿ. ಚಿಟಿಕೆ ಪ್ರಮಾಣ ವನ್ನು ಹಲವು ರೀತಿಯಲ್ಲಿ ಹೇಳುತ್ತಾರೆ. ನನ್ನ ಆಲೋಚನೆಯಂತೆ ಹೆಬ್ಬೆರಳು ಮತ್ತು ತರ್ಜನಿ ಬೆರಳುಗಳನ್ನು ಒತ್ತಿ ಹಿಡಿದಾಗ ಅದರ ಮಧ್ಯೆ ಬರುವ ಪ್ರಮಾಣ ಅದು ತುಂಬಾ ಕಡಿಮೆ ಇರುತ್ತದೆ, ಸರಿಯೆ. ಇಲ್ಲವಾದರೆ ಹೇಗೆ ತೆಗೆದುಕೊಳ್ಳಬೇಕು ತಿಳಿಸಿ.

    Reply
    • ನಮಸ್ಕಾರ
      ಒಂದು ಚಿಟಿಕೆ ಅಂದರೆ ಸಾಧರಣ ೨೫೦ ಮಿಲಿಗ್ರಾಂ ಎಂದು ತೆಗೆದುಕೊಳ್ಳಬಹುದು.

      Reply

Leave a Comment