ಶುಂಠಿ ಚೂರ್ಣ

Article also available in :

ಶುಂಠಿ ಚೂರ್ಣ

ಅ. ಗುಣಧರ್ಮ ಮತ್ತು ಉಪಯೋಗ

ಶುಂಠಿ (ಸುಂಠ) ಚೂರ್ಣ

ಶುಂಠಿ

ಶುಂಠಿಯ ಚೂರ್ಣವು ಉಷ್ಣಗುಣಧರ್ಮದ್ದಾಗಿದ್ದು ಅದು ಕಫ ಮತ್ತು ವಾತ ನಾಶಕವಾಗಿದೆ. ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಇದನ್ನು ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಗಳಿಗನುಸಾರ ಉಪಚಾರಗಳಲ್ಲಿ ಬದಲಾವಣೆಯಾಗಬಹುದು. ಆದುದರಿಂದ ಔಷಧಗಳನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ತೆಗೆದುಕೊಳ್ಳುವ ಪದ್ಧತಿ ಔಷಧಿಯನ್ನು ತೆಗೆದುಕೊಳ್ಳುವ ಕಾಲಾವಧಿ
1. ಚಳಿಗಾಲ ಮುಗಿದು ನಂತರ ಬರುವ ವಸಂತ ಋತುವಿನಲ್ಲಿ, ಹಾಗೆಯೇ ಮಳೆಗಾಲದಲ್ಲಿ ವಾತಾವರಣದಲ್ಲಿನ ಬದಲಾವಣೆಯಿಂದಾಗುವ ರೋಗಗಳು ಆಗಬಾರದೆಂದು 1 ಲೀಟರ್ ಕುಡಿಯುವ ನೀರಿನಲ್ಲಿ ಕಾಲು ಚಮಚ ಶುಂಠಿಯ ಚೂರ್ಣವನ್ನು ಹಾಕಿ ಸ್ವಲ್ಪ ಕುದಿಸಿ ಈ ನೀರನ್ನು ಬಾಟಲಿಯಲ್ಲಿ ಅಥವಾ ತಂಬಿಗೆಯಲ್ಲಿ ತುಂಬಿಡಬೇಕು. ಬಾಯಾರಿಕೆಯಾದಂತೆ ಈ ನೀರನ್ನು ಸ್ವಲ್ಪ-ಸ್ವಲ್ಪ ಕುಡಿಯಬೇಕು. ಚಳಿಗಾಲದಲ್ಲಿನ ಚಳಿ ಕಡಿಮೆಯಾದಾಗಿನಿಂದ ಮುಂದಿನ 15 ದಿನ, ಹಾಗೆಯೇ ಸಂಪೂರ್ಣ ಮಳೆಗಾಲದಲ್ಲಿ
2. ಶೀತ (ನೆಗಡಿ), ಕೆಮ್ಮು ಮತ್ತು ಎದೆಯಲ್ಲಿ ಕಫವಾಗುವುದು ಕಾಲು ಚಮಚ ಶುಂಠಿ, ಅರ್ಧ ಚಮಚ ತುಪ್ಪ ಮತ್ತು 1 ಚಮಚ ಜೇನುತುಪ್ಪವನ್ನು ಸೇರಿಸಿ ದಿನದಲ್ಲಿ 2-3 ಬಾರಿ ಅಗಿದು ತಿನ್ನಬೇಕು. 5 ರಿಂದ 7 ದಿನ
3. ಶೀತ (ನೆಗಡಿ)ದಿಂದ ತಲೆ ನೋವು ಬರುವುದು ಸಾಕಷ್ಟು ಪ್ರಮಾಣದಲ್ಲಿ ಶುಂಠಿ ಚೂರ್ಣದಲ್ಲಿ ಬಿಸಿ ನೀರು ಸೇರಿಸಿ, ಹಣೆಯ ಮೇಲೆ ತೆಳುವಾದ ಲೇಪ ಹಚ್ಚಿಕೊಳ್ಳಬೇಕು. 5 ರಿಂದ 7 ದಿನ
4. ಬಾಯಿಗೆ ರುಚಿ ಇಲ್ಲದಿರುವುದು, ಹಸಿವಾಗದಿರುವುದು, ಅಜೀರ್ಣವಾಗುವುದು, ಹೊಟ್ಟೆಯಲ್ಲಿ ನೋವಾಗಿ ಶೌಚವಾಗುವುದು, ಆಮಶಂಕೆ, ಭೇದಿ ಕಾಲು ಚಮಚ ಶುಂಠಿ, ಕಾಲು ಚಮಚ ತುಪ್ಪ ಮತ್ತು ಕಾಲು ಚಮಚ ಬೆಲ್ಲ ಇವುಗಳ ಮಿಶ್ರಣವನ್ನು ಮಾಡಿ ದಿನದಲ್ಲಿ 2-3 ಬಾರಿ ಸಾಧ್ಯವಾದರೆ ಊಟ ಅರ್ಧ ಗಂಟೆ ಮೊದಲು ಅಗಿದು ತಿನ್ನಬೇಕು. 2-3 ದಿನ
5. ಗಂಟಲಿನಲ್ಲಿ ಮತ್ತು ಎದೆಯಲ್ಲಿ ಉರಿಯುವುದು (ಹುಳಿ ತೇಗು), ಗಂಟಲಿನಲ್ಲಿ ಹುಳಿ ಬರುವುದು, ವಾಂತಿ ಬಂದಂತೆ ಆಗುವುದು ಮತ್ತು ವಾಂತಿಯಾಗುವುದು ಕಾಲು ಚಮಚ ಶುಂಠಿ ಮತ್ತು 1 ಚಮಚ ಪುಡಿಸಕ್ಕರೆಯ ಮಿಶ್ರಣವನ್ನು ದಿನದಲ್ಲಿ 3-4 ಬಾರಿ ಅಗಿದು ತಿನ್ನಬೇಕು. 7 ದಿನ
6. ಗ್ಯಾಸ್‌ನಿಂದ (ವಾಯು) ಎದೆಯಲ್ಲಿ ವೇದನೆಯಾಗಿ ಅಸ್ವಸ್ಥವೆನಿಸುವುದು ಮತ್ತು ಮೇಲಿಂದ ಮೇಲೆ ತೇಗು ಬರುವುದು ತೊಂದರೆಯಾದಾಗ ಕಾಲು ಚಮಚ ಶುಂಠಿ ಮತ್ತು ಅರ್ಧ ಚಮಚ ಜೇನುತುಪ್ಪದ ಮಿಶ್ರಣ ಮಾಡಿ ಮೇಲಿಂದ ಮೇಲೆ ನೆಕ್ಕಬೇಕು 2 – 3 ದಿನ
8. ಸಂಧಿವಾತ (ಸಂದಿಗಳು ಸೆಟೆದುಕೊಳ್ಳುವುದು, ಹಾಗೆಯೇ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಸಂದಿ ನೋವು ಮತ್ತು ಊದಿಕೊಳ್ಳುವುದು) ಮಧ್ಯಾಹ್ನ ಮತ್ತು ರಾತ್ರಿ ಊಟದ ಮೊದಲು ಕಾಲು ಚಮಚ ಶುಂಠಿ ಮತ್ತು 1 ಚಮಚ ಹರಳೆಣ್ಣೆಯನ್ನು ಸೇವಿಸಿದ ಮೇಲೆ ಅರ್ಧ ಬಟ್ಟಲು ಬಿಸಿ ನೀರು ಕುಡಿಯಬೇಕು. ಅನಂತರ ಕೂಡಲೇ ಊಟ ಮಾಡಬೇಕು. ಇದರೊಂದಿಗೆ ರಾತ್ರಿಯ ಊಟದ ನಂತರ ಸಾಕಾಗುವಷ್ಟು ಪ್ರಮಾಣದಲ್ಲಿ ಶುಂಠಿಯ ಚೂರ್ಣದಲ್ಲಿ ಬಿಸಿ ನೀರನ್ನು ಸೇರಿಸಿ ನೋವಿರುವ ಸಂದಿಗಳ ಮೇಲೆ ದಪ್ಪನೆಯ ಲೇಪವನ್ನು ಹಚ್ಚಬೇಕು. 15 ದಿನ
7. ಗರ್ಭವತಿ ಸ್ತ್ರೀಯರಿಗೆ ಬಂದಿರುವ ಜ್ವರ ಮತ್ತು ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಶುಂಠಿ, ಅರ್ಧ ಬಟ್ಟಲು ಹಾಲು ಮತ್ತು 1 ಬಟ್ಟಲು ನೀರು ಇವುಗಳ ಮಿಶ್ರಣವನ್ನು 1 ಬಟ್ಟಲು ಉಳಿಯುವವರೆಗೆ ಕುದಿಸಿ ಸೋಸಿ ಕುಡಿಯಬೇಕು. ಈ ಔಷಧಿಯನ್ನು ತೆಗೆದುಕೊಂಡ ನಂತರ ಸಾಧಾರಣ 1 ಗಂಟೆ ಏನನ್ನೂ ತಿನ್ನುವುದು-ಕುಡಿಯುವುದು ಮಾಡಬಾರದು. 15 ದಿನ
9. ಬಳಲಿಕೆ, ಮತ್ತು ತೂಕ ಕಡಿಮೆ ಇರುವುದು ಇಂತಹ ಸಮಸ್ಯಗಳಿಗೆ, ಹಾಗೆಯೇ ವೀರ್ಯವೃದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಶುಂಠಿ ಮತ್ತು ಅರ್ಧ ಚಮಚ ತೇಯ್ದ ಜಾಜಿಕಾಯಿಯ ಗಂಧ, 1 ಕಪ್ ಹಾಲು ಮತ್ತು 2 ಚಮಚ ತುಪ್ಪ ಇವುಗಳನ್ನು ಒಟ್ಟಿಗೆ ಮಾಡಿ ಸೇವಿಸಬೇಕು. ಈ ಔಷಧಿಯನ್ನು ತೆಗೆದುಕೊಂಡ ನಂತರ ಸಾಧಾರಣ 1 ಗಂಟೆ ಏನನ್ನೂ ತಿನ್ನುವುದು-ಕುಡಿಯುವುದು ಮಾಡಬಾರದು. 3 ತಿಂಗಳು
10. ಶುಂಠಿಯ ಇತರ ಉಪಯೋಗಗಳು ಅ. ಅಡಿಗೆಯನ್ನು ತಯಾರಿಸುವಾಗ ಮಸಾಲೆಯಂತೆ ಶುಂಠಿಯನ್ನು ಉಪಯೋಗಿಸಬಹುದು.
ಆ. ಚಹಾದಲ್ಲಿ ರುಚಿಗಾಗಿ ಶುಂಠಿಯನ್ನು ಹಾಕಬಹುದು
ಇ. ಮಧ್ಯಾಹ್ನದ ಊಟದ ನಂತರ ಮಜ್ಜಿಗೆಯನ್ನು ಕುಡಿಯುವುದಿದ್ದರೆ ಅದರಲ್ಲಿ ರುಚಿಗಾಗಿ ಶುಂಠಿ ಮತ್ತು ಪಾದ ಲವಣವನ್ನು ಹಾಕಿ ಕುಡಿಯಬಹುದು.

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

2. ಮಧುಮೇಹ ಇದ್ದವರು ಔಷಧಿಯನ್ನು ಜೇನುತುಪ್ಪ ಅಥವಾ ಸಕ್ಕರೆಯ ಜೊತೆಗೆ ತೆಗೆದುಕೊಳ್ಳದೇ ನೀರಿನೊಂದಿಗೆ ತೆಗೆದುಕೊಳ್ಳಬೇಕು ಅಥವಾ ಕೇವಲ ಅಗಿದು ತಿನ್ನಬೇಕು.

3. ಉಷ್ಣತೆಯ ಲಕ್ಷಣಗಳು (ಉಷ್ಣ ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ಮೈಕೈ ಉರಿಯುವುದು, ಉರಿ ಮೂತ್ರ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆ ಸುತ್ತುವಿಕೆ ಇತ್ಯಾದಿ) ಇರುವಾಗ ಮತ್ತು ಬೇಸಿಗೆ ಮತ್ತು ಮಳೆಗಾಲದ ನಂತರ ಬರುವ ಶರದ ಋತು (ಅಕ್ಟೋಬರ್‌ನ ಹೀಟ್) ವಿನ ಕಾಲಗಳಲ್ಲಿ ಶುಂಠಿಯನ್ನು ಆದಷ್ಟು ಉಪಯೋಗಿಸಬಾರದು ಅಥವಾ ಬಳಕೆ ಕಡಿಮೆ ಮಾಡಬೇಕು.

4. ಉಷ್ಣತೆ ಹೆಚ್ಚಾದರೆ ಶುಂಠಿಯ ಸೇವನೆ ನಿಲ್ಲಿಸಿ 1 – 2 ದಿನ, 1 ಲೋಟ ನಿಂಬೆಹಣ್ಣಿನ ಶರಬತ್ತನ್ನು ದಿನದಲ್ಲಿ 2 ಬಾರಿ ಕುಡಿಯಬೇಕು.

5. ಶುಂಠಿಯ ಲೇಪ ಒಣಗುತ್ತಾ ಬಂದ ಮೇಲೆ ಅದನ್ನು ನೀರಿನಿಂದ ತೊಳೆಯಬೇಕು. ಆ ಸ್ಥಳದಲ್ಲಿ ಉರಿಯುತ್ತಿದ್ದರೆ ಮತ್ತು ಅದನ್ನು ಸಹಿಸಲು ಸಾಧ್ಯವಾಗದಿದ್ದರೆ ಪುನಃ ಲೇಪವನ್ನು ಹಚ್ಚಬಾರದು. ಉರಿಯುವುದನ್ನು ಹೋಗಲಾಡಿಸಲು ಆ ಸ್ಥಳದಲ್ಲಿ ನಿಂಬೆಯ ರಸವನ್ನು ಉಜ್ಜಬೇಕು.

6. ಚೂರ್ಣದಲ್ಲಿ ಹುಳಗಳಾಗಬಾರದೆಂದು, ಅದನ್ನು ಶೀತಕದಲ್ಲಿಡಬೇಕು. ಇಲ್ಲದಿದ್ದರೆ ಅದನ್ನು ಒಂದು ತಿಂಗಳಿನಲ್ಲಿ ಮುಗಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

Leave a Comment