ಈ ಲೇಖನಮಾಲೆಯಲ್ಲಿ ನಾವು ಸಾಧನೆಯ ಪ್ರಯತ್ನಗಳ ಸಮೀಕ್ಷೆಯನ್ನು ಮಾಡಲಿದ್ದೇವೆ. ನಾವು ಇಲ್ಲಿಯ ತನಕ ಪ್ರತಿದಿನ ಕುಲದೇವರು ಮತ್ತು ದತ್ತಾತ್ರೇಯ ದೇವರ ನಾಮಜಪದ ಮಹತ್ವವನ್ನು ಅರಿತುಕೊಂಡಿದ್ದೆವು. ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು ಮತ್ತು ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮತ್ತು ಏಕೆ ಮಾಡಬೇಕು ಎಂದು ಸಹ ತಿಳಿದುಕೊಂಡಿದ್ದೆವು. ಸಾಧನೆಯ ವರದಿಯನ್ನು ನೀಡುವಾಗ ನಮ್ಮ ಪ್ರಯತ್ನಗಳು ಎಷ್ಟು ಆಗುತ್ತಿವೆ ಎಂದು ವಸ್ತುನಿಷ್ಠವಾಗಿ ಗಮನಕ್ಕೆ ಬರುತ್ತದೆ. ಅದರಿಂದ ನಮ್ಮ ಸಾಧನೆಯ ಅವಲೋಕನವನ್ನು ಮಾಡಲು ಸಾಧ್ಯವಾಗುತ್ತದೆ. ಅದರಿಂದ ನಮ್ಮ ಪ್ರಯತ್ನಗಳು ಎಲ್ಲಿ ಕಮ್ಮಿಯಾಗುತ್ತವೆ ಮತ್ತು ನಾವು ಇನ್ನು ಎಷ್ಟು ಪ್ರಯತ್ನಗಳನ್ನು ಮಾಡಬೇಕು? ಸಮಸ್ಯೆಗಳನ್ನು ಹೇಗೆ ದೂರಗೊಳಿಸಬೇಕು? ಎಂಬುವುದು ಗಮನಕ್ಕೆ ಬರುತ್ತದೆ. ಹಾಗಾಗಿ ಸಾಧನೆಯ ಈ ಸಮೀಕ್ಷೆಯು ಮಹತ್ವಪೂರ್ಣವಾಗಿದೆ. ಕೆಲವು ವಾರಗಳ ನಂತರ ತಮಗೆ ಈ ಸಮೀಕ್ಷೆಯಿಂದ ನಮ್ಮ ಪ್ರಯತ್ನಗಳಿಗೆ ದಿಶೆಯು ಸಿಗುತ್ತದೆ ಮತ್ತು ನಮಗೆ ಸಾಧನೆಯಲ್ಲಿ ಆನಂದ ಸಿಗುತ್ತಿದೆ ಎಂದು ಗಮನಕ್ಕೆ ಬರುತ್ತದೆ.
ಇಂದು ಅನೇಕ ದೊಡ್ಡ ದೊಡ್ಡ ಕಂಪನಿಗಳು ಅವರ ಕಾರ್ಯದ ಫಲನಿಷ್ಪತ್ತಿ ಹೆಚ್ಚಾಗಬೇಕೆಂದು ‘ಸ್ವಾಕ್ ಅನಾಲಿಸಿಸ್’ (SWOC – strengths, weaknesses, opportunities, challenges) ಮಾಡಲಾಗುತ್ತದೆ. ‘ಸ್ವಾಕ್ ಅನಾಲಿಸಿಸ್’ ಇದರ ಅರ್ಥವೇನು? ಅಂದರೆ ನಮ್ಮ ಸಾಮರ್ಥ್ಯ, ದೌರ್ಬಲ್ಯ ಮತ್ತು ಸವಾಲುಗಳ ಅಧ್ಯಯನವನ್ನು ಮಾಡುವುದು. ವ್ಯಷ್ಟಿ ಸಮೀಕ್ಷೆಯ ಮೂಲಕ ನಾವು ಮನಮುಕ್ತವಾಗಿ ಮತ್ತು ನಿರ್ಮಲವಾಗಿ ನಮ್ಮಿಂದಾದ ಪ್ರಯತ್ನಗಳನ್ನು ನೋಡೋಣ.
ಮೇಲೆ ನೀಡಿರುವ ಪ್ರಶ್ನೆಗಳಿಗನುಸಾರ ಕಳೆದ ಕೆಲವು ವಾರಗಳಲ್ಲಿ ಪ್ರತಿದಿನ ಕುಲದೇವರ ನಾಮಜಪ ಎಷ್ಟಾಗಿದೆ? ದತ್ತಾತ್ರೇಯ ಭಗವಂತನ ಜಪ ಎಷ್ಟಾಗಿದೆ? ತಖ್ತೆಯಲ್ಲಿ ನಾವು ಎಷ್ಟು ತಪ್ಪುಗಳನ್ನು ಬರೆದಿದ್ದೇವೆ ಮತ್ತು ಸ್ವಯಂಸೂಚನೆಯ ಸತ್ರಗಳು ಎಷ್ಟಾಗಿವೆ, ಇದನ್ನು ನೋಡೋಣ. ಏನೂ ಪ್ರಯತ್ನಗಳಾಗಿಲ್ಲವಾದರೆ ಅದನ್ನು ಸಹ ನಮೂದಿಸಿ.
ಸತ್ಸೇವೆ
ತಮ್ಮಲ್ಲಿ ಹಲವರು ನಾಮಜಪ ಮಾಡುತ್ತಿದ್ದೀರಿ. ತಮ್ಮಲ್ಲಿ ಕೆಲವರು ಹೆಚ್ಚು ಕಮ್ಮಿ ಪ್ರಮಾಣದಲ್ಲಿ ಸೇವೆಯನ್ನು ಸಹ ಮಾಡಿರಬಹುದು. ಈ ಲೇಖನದಲ್ಲಿ ನಾವು ಸತ್ಸೇವೆ ಬಗ್ಗೆ ಅರಿತುಕೊಳ್ಳುವವರಿದ್ದೇವೆ. ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ, ಸ್ವಭಾವದೋಷ ನಿರ್ಮೂಲನ, ಅಹಂನಿರ್ಮೂಲನ ಮತ್ತು ಭಾವಜಾಗೃತಿ ಇವೆಲ್ಲವೂ ಅಷ್ಟಾಂಗ ಸಾಧನೆಯ ಸ್ತರಗಳಾಗಿವೆ. ಇದರಲ್ಲಿ ನಾಮಜಪ, ಸತ್ಸಂಗದ ನಂತರ ಸತ್ಸೇವೆಯ ಸ್ತರವು ಬರುತ್ತದೆ. ಸತ್ಸೇವೆಯು ಸಾಧನೆಯ ಮುಂದಿನ ಸ್ತರವಾಗಿದೆ.
ನಾವು ಹಿಂದಿನ ಸತ್ಸಂಗದಲ್ಲಿ ಸಂಕ್ಷಿಪ್ತವಾಗಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಹತ್ವವನ್ನು ತಿಳಿದುಕೊಂಡೆವು. ವ್ಯಷ್ಟಿ ಸಾಧನೆಯ ಅರ್ಥ ಏನೆಂದರೆ ಸ್ವಂತದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಲಾಗುವ ಆವಶ್ಯಕ ಪ್ರಯತ್ನಗಳು ಮತ್ತು ಸಮಷ್ಟಿ ಸಾಧನೆಯೆಂದರೆ ಸಮಾಜದ ಉನ್ನತಿಗಾಗಿ ಮಾಡುವಂತಹ ಆವಶ್ಯಕ ಪ್ರಯತ್ನಗಳು. ಸಾಧನೆಯಲ್ಲಿ ವ್ಯಷ್ಟಿ ಸಾಧನೆಗೆ ೩೦% ಮತ್ತು ಸಮಷ್ಟಿ ಸಾಧನೆಗೆ ೭೦% ಮಹತ್ವವಿದೆ. ನಾಮಜಪ ಮತ್ತು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಎಲ್ಲ ಪ್ರಯತ್ನಗಳು ವ್ಯಷ್ಟಿ ಸಾಧನೆಯಲ್ಲಿ ಬರುತ್ತವೆ. ಸಮಷ್ಟಿ ಸಾಧನೆಯ ಮಹತ್ವು ಹೆಚ್ಚಿದ್ದರೂ ಅದು ಉತ್ತಮವಾಗಿ ಆಗಬೇಕಾದರೆ ವ್ಯಷ್ಟಿ ಸಾಧನೆಯ ಅಡಿಪಾಯವು ಗಟ್ಟಿಯಾಗಿರುವುದು ಆವಶ್ಯವಾಗಿದೆ.
ಅ. ಸತ್ಸೇವೆ ಎಂದರೇನು?
ಸತ್ಸೇವೆ ಎಂದರೆ ನಿರ್ದಿಷ್ಟವಾಗಿ ಏನು? ಸತ್ ನ ಅರ್ಥ ಏನೆಂದರೆ ಈಶ್ವರ (ಭಗವಂತ). ಸತ್ಸೇವೆ ಎಂದರೆ ಈಶ್ವರನ ಸೇವೆಯಾಗಿದೆ. ಇಂದಿನ ಕಾಲದಲ್ಲಿ ಪ್ರತ್ಯಕ್ಷ ರೂಪದಲ್ಲಿ ಈಶ್ವರನ ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಂತರ ಸೇವೆಯ ಮಹತ್ವವನ್ನು ಹೇಳಲಾಗಿದೆ. ಏಕೆಂದರೆ ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಇಂದಿನ ಭಾಷೆಯಲ್ಲಿ ಹೇಳುವುದಾದರೆ ಸಂತರು ಈಶ್ವರನ ದೂತರಾಗಿದ್ದಾರೆ. ಹೇಗೆ ಯಾವುದಾದರೊಂದು ದೇಶದ ರಾಜದೂತನು ತನ್ನ ದೇಶವನ್ನು ಪ್ರತಿನಿಧಿಸುತ್ತಾನೆಯೋ ಅದೇರೀತಿ ಸಂತರು ಪೃಥ್ವಿಯಲ್ಲಿ ಈಶ್ವರನ ಪ್ರತಿನಿಧಿಗಳಾಗಿರುತ್ತಾರೆ. ಆದರೆ ನಮಗೆ ಪ್ರತಿಯೊಂದು ಸಲ ಸಂತರ ಸೇವೆಯನ್ನು ಮಾಡುವ ಅವಕಾಶ ಸಿಗುತ್ತದೆಯೇನು? ಮಾತ್ರವಲ್ಲ ಇಂದಿನ ಕಾಲದಲ್ಲಿ ನಿಜವಾದ ಸಂತರು ಯಾರು ಎಂದು ಗುರುತಿಸುವುದು ಸಹ ಕಠಿಣವಾಗಿದೆ. ಹಾಗಾಗಿ ನಿರಂತರವಾಗಿ ಸಂತರ ಸೇವೆಯನ್ನು ಮಾಡಲು ಸಿಗುವುದು ಬಹಳ ಕಠಿಣವಾಗಿದೆ. ಇಂತಹ ಸಮಯದಲ್ಲಿ ಸತ್ಸೇವೆಯ ರೂಪದಲ್ಲಿ ಏನು ಮಾಡಬೇಕು? ಈ ಪ್ರಶ್ನೆಯು ತಮ್ಮ ಮನಸ್ಸಿನಲ್ಲಿ ಬರಬಹುದು. ಇದರ ಉತ್ತರ ಹೀಗಿದೆ – ಪ್ರತ್ಯಕ್ಷ ರೂಪದಲ್ಲಿ ಈಶ್ವರನ ಅಥವಾ ಸಂತರ ಸೇವೆಯನ್ನು ಮಾಡಲು ಅಸಂಭವವಾಗಿದ್ದರೂ ಅವರಿಗೆ ಅಪೇಕ್ಷಿತವಿದ್ದುದನ್ನು ಮಾಡುವುದು ಸಹ ಸತ್ಸೇವೆಯೇ ಆಗಿದೆ. ಈಶ್ವರ ಅಥವಾ ಸಂತರಿಗೆ ಏನು ಅಪೇಕ್ಷಿತವಿರುತ್ತದೆ? ಧರ್ಮಪ್ರಸಾರ ಮತ್ತು ಅಧ್ಯಾತ್ಮ ಪ್ರಸಾರ! ಅಧ್ಯಾತ್ಮದ ಅರ್ಥಾತ್ ಸಾಧನೆಯ ಪ್ರಸಾರವೇ ಸರ್ವೋತ್ತಮ ಸತ್ಸೇವೆಯಾಗಿದೆ.
ಆ. ಸತ್ಸೇವೆಯ ಮಹತ್ವ
ಆನಂದಪ್ರಾಪ್ತಿ ಅಥವಾ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವ ಸಾಧಕರ ದೃಷ್ಟಿಯಿಂದ ಸತ್ಸೇವೆಗೆ ಅಪಾರ ಮಹತ್ವವಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯಲ್ಲಿ ಪ್ರಯತ್ನಪೂರ್ವಕವಾಗಿ ಮಾಡಿದ ನಾಮಜಪಕ್ಕೆ ೫% ಮಹತ್ವವಿದೆ, ಸತ್ಸಂಗ ಮತ್ತು ಸಂತಸಹವಾಸಕ್ಕೆ ೩೦% ಮಹತ್ವ, ಮತ್ತು ಸತ್ಸೇವೆಗೆ ೧೦೦% ಮಹತ್ವವಿದೆ ಎಂದು ಹೇಳಿದ್ದಾರೆ. ಇದರಿಂದ ಸತ್ಸೇವೆಯ ಮಹತ್ವವು ಗಮನಕ್ಕೆ ಬರುತ್ತದೆ. ಆದರೂ ಸತ್ಸೇವೆಯ ಸ್ತರವನ್ನುಗಳಿಸಲು ಮತ್ತು ಅದು ಸಾತತ್ಯದಿಂದ ಉಳಿಯಲು ನಾಮಜಪ ಮತ್ತು ಸತ್ಸಂಗಗಳೆಂಬ ಎರಡೂ ಅಂಶಗಳು ಸಹ ಅಷ್ಟೇ ಮಹತ್ವದ್ದಾಗಿವೆ.
ಇ. ಗುರುಕೃಪೆ ಸಂಪಾದಿಸುವ ಮಾಧ್ಯಮ
ಸತ್ಸೇವೆಯ ಮೂಲಕ ಸಂತರ ಅಥವಾ ಗುರುಗಳ ಮನಸ್ಸನ್ನು ಗೆಲ್ಲಬಹುದಾಗಿದೆ. ಹಾಗೂ ಅದರ ಮೂಲಕ ಗುರುಕೃಪೆಯು ಕಾರ್ಯನಿರತವಾಗುತ್ತದೆ. ನಾವು ಈಗ ಇದರ ಒಂದು ವ್ಯಾವಹಾರಿಕ ಉದಾಹರಣೆಯನ್ನು ನೋಡೋಣ. ಯಾವುದಾದರೊಂದು ಕಾರ್ಯಕ್ರಮಕ್ಕಾಗಿ ಕೆಲವರು ಸ್ವಚ್ಛತೆಯನ್ನು ಮಾಡುತ್ತಿದ್ದಾರೆ, ಕೆಲವರು ಭೋಜನವನ್ನು ತಯಾರಿಸುತ್ತಿದ್ದಾರೆ, ಕೆಲವರು ಪಾತ್ರೆಗಳನ್ನು ತೊಳೆಯುತ್ತಿದ್ದಾರೆ, ಕೆಲವರು ಅಲಂಕಾರವನ್ನು ಮಾಡುತ್ತಿದ್ದಾರೆ. ನಾವು ಸ್ವಚ್ಛತೆಯ ಸೇವೆಯಲ್ಲಿದ್ದೇವೆ ಮತ್ತು ಯಾರೋ ಬಂದು ನಮಗೆ ಸ್ವಚ್ಛತೆಯ ಸೇವೆಯಲ್ಲಿ ಸಹಾಯ ಮಾಡತೊಡಗಿದರೆ ನಮಗೆ ಆ ವ್ಯಕ್ತಿಯ ಬಗ್ಗೆ ಏನು ಅನಿಸುತ್ತದೆ, ಅವನು ನಮ್ಮವನು ಅನಿಸುತ್ತದೆ ಅಲ್ಲವೇ? ಗುರುಗಳಿಗೆ ಅಥವಾ ಸಂತರಿಗೆ ಸಹ ಹಾಗೆ ಅನಿಸುತ್ತದೆ. ಗುರುಗಳ ಮತ್ತು ಸಂತರ ಕಾರ್ಯವೇನು? ಸಮಾಜಕ್ಕೆ ಧರ್ಮ ಮತ್ತು ಸಾಧನೆಯನ್ನು ಹೇಳಿ ಎಲ್ಲರಿಗೂ ಸಾಧನೆಯನ್ನು ಮಾಡಲು ಪ್ರೇರೆಪಿಸುವುದು, ಜೊತೆಗೆ ಅಧ್ಯಾತ್ಮ ಪ್ರಸಾರವನ್ನು ಮಾಡುವುದು. ನಾವು ಸಹ ಇದೇ ಕೆಲಸವನ್ನು ನಮ್ಮ ಕ್ಷಮತೆಗನುಸಾರ ಮಾಡತೊಡಗಿದರೆ, ಗುರುಗಳಿಗೆ ‘ಇವನು ನನ್ನವನು’ ಎಂದು ಅನಿಸುತ್ತದೆ. ಅವರಿಗೆ ಹೀಗೆ ಅನಿಸುವುದು ಎಂದರೆ ಗುರುಕೃಪೆಯ ಆರಂಭವಾಗಿದೆ. ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪೆಯು ಮಹತ್ವಪೂರ್ಣವಾಗಿರುತ್ತದೆ. ಅಧ್ಯಾತ್ಮಪ್ರಸಾರ ಹಾಗೂ ಧರ್ಮಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿವೆ.
ಈ. ಅಧ್ಯಾತ್ಮಪ್ರಸಾರ
ಕೆಲವರಿಗೆ ಹೀಗನಿಸುತ್ತದೆ, ನನಗೆ ಸರಿಯಾಗಿ ಅಧ್ಯಾತ್ಮ, ಧರ್ಮ, ಸಾಧನೆ ಇತ್ಯಾದಿ ಗೊತ್ತಿಲ್ಲದಿರುವಾಗ ನಾನು ಇತರರಿಗೆ ಹೇಗೆ ಹೇಳಲಿ? ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಇದರ ಅರ್ಥ ಏನೆಂದರೆ ಆಧ್ಯಾತ್ಮಿಕ ಜ್ಞಾನವು ಸೀಮಾತೀತವಾದುದಾಗಿದೆ. ಹಾಗಾಗಿ ಯಾರಾದರೂ ಮೊದಲು ನಾನು ಅಧ್ಯಾತ್ಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತೇನೆ; ಅದರ ನಂತರ ಅದರ ಪ್ರಸಾರ ಮಾಡುತ್ತೇನೆ, ಎಂದರೆ ಈ ಸೀಮಿತವಾಗಿರುವ ಜೀವನದಲ್ಲಿ ನಾವು ಸೀಮಾತೀತವಾದ ಅಧ್ಯಾತ್ಮಕ್ಕಾಗಿ ಸಮಯವನ್ನು ನೀಡುವುದಾದರೂ ಹೇಗೆ? ಅದನ್ನು ಯಾವಾಗ ಕಲಿಯುವುದು ಮತ್ತು ಯಾವಾಗ ಪ್ರಸಾರ ಮಾಡುವುದು? ಅಧ್ಯಾತ್ಮದಲ್ಲಿ ಯಾವುದಾದರೊಂದು ವಿಷಯವನ್ನು ಕಲಿತ ನಂತರ ಅದಕ್ಕನುಸಾರ ಕೃತಿಯನ್ನು ಮಾಡುವುದು ಮತ್ತು ಏನೆಲ್ಲ ಕಲಿಯಲು ಸಿಕ್ಕಿತೋ ಅದನ್ನು ಇತರರಿಗೆ ಕಲಿಸುವುದು ಮಹತ್ವಪೂರ್ಣವಾಗಿದೆ. ಅಧ್ಯಾತ್ಮದಲ್ಲಿ ‘ಅ’ ಗೊತ್ತಾದೊಡನೆ, ಅದನ್ನು ಇತರರಿಗೆ ಕಲಿಸಬೇಕು.
ಅನ್ನದಾನ, ಪ್ರಾಣದಾನ, ಮತ್ತು ವಿದ್ಯಾದಾನಕ್ಕಿಂತ ಧರ್ಮದಾನವು ಸರ್ವಶ್ರೇಷ್ಠವಾದ ದಾನವಾಗಿದೆ! ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇಂದು ಸಮಾಜವು ಧರ್ಮದಿಂದ ದೂರ ಹೋಗುತ್ತಿದೆ. ಹಾಗಾಗಿ ಜನರಲ್ಲಿ ಧರ್ಮದ ವಾಸ್ತವಿಕ ಪರಿಚಯವನ್ನು ಮಾಡಿಸಿಕೊಟ್ಟು ಧರ್ಮಪ್ರಸಾರ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಇಂದು ಸಮಾಜದಲ್ಲಿ ಜನರ ಬಳಿ ಹಣ, ವಾಹನ, ಬಂಗಲೆ ಇಂತಹ ಅನೇಕ ಸುಖಸೌಲಭ್ಯಗಳಿವೆ. ಆದರೆ ಅವು ಆನಂದವನ್ನು ನೀಡಲಾರವು. ವಿಜ್ಞಾನದಿಂದಾಗಿರುವ ಭೌತಿಕ ಪ್ರಗತಿಯ ಮೂಲಕ ಅನೇಕ ಸುಖಸೌಲಭ್ಯಗಳ ಅನೇಕ ಸಾಧನಗಳಿದ್ದರೂ ಅವು ತಾತ್ಕಾಲಿಕ ಅಥವಾ ಸ್ವಲ್ಪ ಸಮಯಕ್ಕಾಗಿ ನಮಗೆ ಸುಖವನ್ನು ನೀಡಬಲ್ಲವು. ಚಿರಕಾಲ ಉಳಿಯುವಂತಹ ಆನಂದವು ವಿಜ್ಞಾನದಿಂದಲ್ಲ, ಕೇವಲ ಅಧ್ಯಾತ್ಮದಿಂದಲೇ ಸಿಗಬಲ್ಲದು
ಉ. ಅಧ್ಯಾತ್ಮ ಪ್ರಸಾರದ ಮಾಧ್ಯಮಗಳು
೧. ಅಧ್ಯಾತ್ಮ ಪ್ರಸಾರ ಮಾಡುವುದರ ಅರ್ಥ ಏನು? ಅಧ್ಯಾತ್ಮ ಪ್ರಸಾರದ ರೂಪದಲ್ಲಿ ನಾವು ಆರಂಭಿಕ ಸ್ತರದಲ್ಲಿ ನಾವು ನಮ್ಮ ಬಂಧು ಬಳಗದವರಿಗೆ, ಮಿತ್ರರಿಗೆ ಹಾಗೂ ನೆರೆಹೊರೆಯವರಿಗೆ ಕುಲದೇವ ಹಾಗೂ ದತ್ತ ದೇವರ ನಾಮಜಪದ ಮಹತ್ವವನ್ನು ಹೇಳಿ ನಾಮಜಪ ಮಾಡಲು ಅವರನ್ನು ಪ್ರೇರೇಪಿಸಬಹುದು. ನಾಮಜಪದ ಮಹತ್ವವನ್ನು ಅವರಿಗೆ ಹೇಗೆ ತಿಳಿಸಬೇಕು? ಇದನ್ನು ತಾವು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ಅಥವಾ ಸ್ವಲ್ಪ ಜನರಿಗಾಗಿ ಪ್ರವಚನಗಳನ್ನು ಆಯೋಜಿಸಬಹುದು. ಸನಾತನದ ಸಾಧಕರು ಅಲ್ಲಿಗೆ ಬಂದು ಮಾಹಿತಿಯನ್ನು ನೀಡಬಲ್ಲರು. ಇಂದು ‘ಕೊರೊನಾ’ದ ಹೆಚ್ಚುತಿರುವ ಪ್ರಕೋಪದಿಂದ ಪ್ರತ್ಯಕ್ಷ ಹೊರಗೆ ಹೋಗಿ ಸೇವೆಯನ್ನು ಮಾಡಲು ಮಿತಿಯುಂಟಾಗುತ್ತದೆ. ಆದರೆ ನೀವು ಆನ್ ಲೈನ್ ಸತ್ಸಂಗಗಳನ್ನು ಸಹ ಆಯೋಜಿಸಬಹುದು.
೨. ಯಾರಿಗೆ ವಾಕ್ಚಾತುರ್ಯ ಇದೆಯೋ ಅವರು ವ್ಯಾಖ್ಯಾನಗಳ, ಪ್ರವಚನಗಳ ಹಾಗೂ ಬೈಠಕ ಮುಂತಾದ ಮಾಧ್ಯಮಗಳ ಮೂಲಕ ಅಧ್ಯಾತ್ಮ ಪ್ರಸಾರ ಮಾಡಬಹುದು. ಈಗ ಸಂಪೂರ್ಣ ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ಸತ್ಸಂಗಗಳು ನಡೆಯುತ್ತಿವೆ. ಕೆಲವು ಸತ್ಸಂಗಗಳಲ್ಲಿ ಹನುಮಾನ ಜಯಂತಿ, ರಾಮನವಮಿ ಮುಂತಾದ ಹಬ್ಬಗಳ ಸಮಯದಲ್ಲಿ ಅದರ ಮಾಹಿತಿಯನ್ನು ತಿಳಿಸುವ ಸೇವೆಯನ್ನು ಕೆಲವರು ಮಾಡಿದರು ಹಾಗೂ ಅದರಿಂದ ಅವರಿಗೆ ಆನಂದ ಸಿಕ್ಕಿದೆ ಎಂದು ಸಹ ಹೇಳಿದರು. ಇಂದು ಸಂಕಟಕಾಲವು ಆರಂಭವಾಗಿರುವುದರಿಂದ ನಾವು ಬಹಳ ಕಡಿಮೆ ಕಾಲಾವಧಿಯಲ್ಲಿ ಜನರ ತನಕ ತಲುಪುಬೇಕು ಅದಕ್ಕಾಗಿ ಅಧ್ಯಾತ್ಮ ಮತ್ತು ಸಾಧನೆಯಂತಹ ಪ್ರಭಾವಶಾಲಿ ಪದ್ಧತಿಯಿಂದ ಮಾಹಿತಿಯನ್ನು ನೀಡುವಂತಹ ವಕ್ತಾರರ ಅವಶ್ಯಕತೆಯಿದೆ.
೩. ಯಾರ ಬಳಿ ಲೇಖನದ ಕೌಶಲ್ಯವಿದೆಯೋ ಅಂತಹ ಜಿಜ್ಞಾಸುಗಳು ಲೇಖನದ ಮಾಧ್ಯಮದಿಂದ ಅಧ್ಯಾತ್ಮದ ಮಹತ್ವವನ್ನು ತಿಳಿಸಬಹುದು. ಗ್ರಂಥಗಳ ವಿಷಯವನ್ನು ಬೆರಳಚ್ಚು ಅಂದರೆ ಟೈಪಿಂಗ್ ಅಥವಾ ಅನುವಾದ ಮಾಡಬಹುದು. ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ಸರಳ, ಸುಗಮ ಭಾಷೆಯಲ್ಲಿ ಜ್ಞಾನವನ್ನು ನೀಡುವಂತಹ ಅನೇಕ ಗ್ರಂಥಗಳಿವೆ. ಯಾವುದೇ ಭಾಷೆಯಲ್ಲಿ ಪ್ರಭುತ್ವ ಇದ್ದಲ್ಲಿ ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಅಸಾಮಿಯಾ, ಗುರುಮುಖಿ, ಮಲಯಾಳಮ್ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಅನುವಾದದ ಸೇವೆಯು ಲಭ್ಯವಿದೆ.
೪. ಇಂದು ನಮ್ಮ ಜೀವನವು ಎಷ್ಟು ಅಸುರಕ್ಷಿತವಾಗಿದೆ ಎಂದರೆ ಯಾವ ಎಲ್ಲಿ ಎಂತಹ ಅಪ್ರಿಯ ಘಟನೆಯನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದಿಲ್ಲ. ಇಂತಹ ಸಮಯದಲ್ಲಿ ಸ್ವರಕ್ಷಣ ಪ್ರಶಿಕ್ಷಣವನ್ನು ಪಡೆಯುವುದು ಸಮಯದ ಆವಶ್ಯಕತೆಯಾಗಿದೆ.
೫. ಸತ್ಸೇವೆಯ ಅಂತರ್ಗತ ನಾವು ಸಮಾಜದ ಜನರನ್ನು ಸಾಪ್ತಾಹಿಕ ಸನಾತನ ಪ್ರಭಾತ ಪತ್ರಿಕೆಯ ಚಂದಾದಾರರನ್ನಾಗಿ ಮಾಡಿಸಬಹುದು. ನಾವು ‘ಸನಾತನ ಪ್ರಭಾತ’ ಮತ್ತು ಸನಾತನದ ಅಧ್ಯಾತ್ಮಕ್ಕೆ ಸಂಬಂಧಿತ ಗ್ರಂಥಗಳ ವಿತರಣೆಯನ್ನು ಸಹ ಮಾಡಬಹುದು. ಸಂಚಾರ ನಿರ್ಬಂಧದ ನಿಮಿತ್ತ ಅನೇಕ ಕಡೆಗಳಲ್ಲಿ ‘ಸನಾತನ ಪ್ರಭಾತ’ದ ಪ್ರತ್ಯಕ್ಷ ವಿತರಣೆಯು ನಿಂತುಹೊಗಿದೆ. ಆದರೆ ಧರ್ಮಪ್ರೇಮಿ ಜನರಿಗೆ ಸನಾತನ ಪ್ರಭಾತದ ಪಿಡಿಎಫ್ ಕಳಿಸಬಹುದು. ಸನಾತನ ಪ್ರಭಾತದ ಮತ್ತು ಗ್ರಂಥಗಳಲ್ಲಿ ಜ್ಞಾನಶಕ್ತಿಯಿದೆ. ಜ್ಞಾನಶಕ್ತಿಯ ಮೂಲಕ ಅನೇಕ ಜನರು ಅಧ್ಯಾತ್ಮದ ಜೊತೆಗೆ ಜೋಡಿಸಲ್ಪಡುತ್ತಾರೆ.
೬. ಇಂದು ಹೆಚ್ಚಿನವರ ಬಳಿ ಸ್ಮಾರ್ಟ್ ಫೋನ್ ಗಳಿವೆ. ನಾವು ಪ್ರತಿದಿನ ವಾಟ್ಸ್ ಆಪ್, ಟ್ವಿಟರ್, ಫೇಸ್ ಬುಕ್ ನಂತರ ಮಾಧ್ಯಮಗಳಿಂದ ಜನರಿಗೆ ಒಂದಲ್ಲ ಒಂದು ಸಂದೇಶವನ್ನು ಕಳಿಸುತ್ತೇವೆ. ನಾವು ಈಗ ಅದರ ಜೊತೆಗೆ ಸೋಶಲ್ ಮೀಡಿಯಾದ ಮೂಲಕ ಧರ್ಮ ಮತ್ತು ರಾಷ್ಟ್ರ ಜಾಗೃತಿಗೆ ಸಂಬಂದಿತ ಪೋಸ್ಟ್ ಸಹ ಕಳಿಸಿ ಧರ್ಮಪ್ರಸಾರ ಮಾಡಬಹುದು. ಯಾರ ಬಳಿಯಾದರೂ ತಾಂತ್ರಿಕ ಕೌಶಲ್ಯ ಅರ್ಥಾತ್ technical ಕೌಶಲ್ಯವಿದ್ದಲ್ಲಿ ಆ ಜಿಜ್ಞಾಸುವು ಸೋಶಲ್ ಮೀಡಿಯಾದ ಮೂಲಕ ಅಧ್ಯಾತ್ಮ ಪ್ರಸಾರವನ್ನು ಮಾಡಬಹುದು. ಅಥವಾ ಯಾರಿಗಾದರೂ ಈ ಸೇವೆಯನ್ನು ಕಲಿಯುವ ಇಚ್ಛೆಯಿದ್ದಲ್ಲಿ ಅದಕ್ಕಾಗಿ ಆನ್ ಲೈನ್ ಪ್ರಶಿಕ್ಷಣವನ್ನು ಸಹ ಆಯೋಜಿಸಬಹುದು. ಯಾರಿಗಾದರೂ ಸೋಶಲ್ ಮಿಡಿಯಾದ ಮೂಲಕ ಪ್ರಸಾರ ಹೇಗೆ ಮಾಡುವುದು ಎಂದು ಕಲಿಯಬೇಕೆನಿಸಿದ್ದಲ್ಲಿ ಅವರು ನಮ್ಮನ್ನು ಸಂಪರ್ಕಿಸಬಹುದು.
ತಮಗೆ ಯಾವುದಾದರೊಂದು ಕ್ಷೇತ್ರದಲ್ಲಿ ಕೌಶಲ್ಯ ಅಥವಾ ಅನುಭವವಿದ್ದಲ್ಲಿ ಅದನ್ನು ತಿಳಿಸಬಹುದು. ನಾವು ನಿಮ್ಮ ಕೌಶಲ್ಯದ ಅಥವಾ ಅನುಭವಕ್ಕನುಸಾರ ನಿಮಗೆ ಸೇವೆಯನ್ನು ಲಭ್ಯ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಸತ್ಸೇವೆಯ ಅನೇಕ ಮಾಧ್ಯಮಗಳಿವೆ. ‘Sky is the limit’ ಎಂದು ಹೇಳಲಾಗುತ್ತದೆ, ಇದು ಸಹ ಹಾಗೆಯೇ ರೀತಿಯಿದೆ. ಸತ್ಸೇವೆಯನ್ನು ಮಾಡುವಾಗ ಅದನ್ನು ಮನಃಪೂರ್ವಕ ಹಾಗೂ ‘ಗುರುಗಳ ಮನೋಭಿಲಷಿತವನ್ನರಿತು’ ಎಂಬ ಭಾವದಿಂದ ಸೇವೆಯನ್ನು ಮಾಡಿದರೆ ಆ ಸೇವೆಯು ಶ್ರೀವಿಷ್ಣುವಿನ ಚರಣಗಳಿಗೆ ತಲುಪುತ್ತದೆ. ಸತ್ಸೇವೆಯಲ್ಲಿ ಬಹಳ ಆನಂದವಿದೆ. ಸತ್ಸೇವೆಯ ಮೂಲಕ ಭಗವಂತನ ಜೊತೆಗೆ ಸಹಜವಾಗಿ ಸಾನಿಧ್ಯದಲ್ಲಿರಲು ಸಾಧ್ಯವಾಗುತ್ತದೆ.
ಯಾರ ಬಳಿ ಇಂದು ಸೇವೆಯು ಲಭ್ಯವಿಲ್ಲವೋ ಅಥವಾ ಸೇವೆಯನ್ನು ಮಾಡಲು ಸಮಯ ನೀಡಬಹುದೋ ಅವರು ಹೇಳಬಹುದು. ನಿತ್ಯ ಜೀವನದಲ್ಲಿ ಸ್ವಲ್ಪ ಸಮಯವನ್ನು ಅಥವಾ ರಜಾದಿನಗಳಂದು ಸಮಯವನ್ನು ನೀಡಬಹುದೇನು ಎಂದು ನೋಡಬಹುದು. ತಮಗೆ ಲಭ್ಯವಿರುವ ಸಮಯಕ್ಕೆ ಸರಿಯಾಗಿ ನಾವು ಆಯೋಜನೆ ಮಾಡಲು ಪ್ರಯತ್ನಿಸುವೆವು. ತಾವು ಈ ದೃಷ್ಟಿಯಿಂದ ಪ್ರಯತ್ನ ಮಾಡುವಿರಲ್ಲವೇ? ತಮಗೆಲ್ಲರಿಗೂ ಸೇವೆಯನ್ನು ಮಾಡಲು ಒಳ್ಳೆಯದೆನಿಸಲಿದೆ ಅಲ್ಲವೇ?