‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ನಾಮಜಪದಿಂದ ನಿರ್ಗುಣ ಸ್ಥಿತಿಗೆ ಹೋಗಲು ಸಹಾಯವಾಗಲಿರುವುದು

Article also available in :

೧. ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪದ ಮಹತ್ವ
೧ಅ. ನಾಮಜಪದ ಪ್ರಯೋಗವನ್ನು ಮಾಡಿ!
೨. ಕೆಟ್ಟ ಶಕ್ತಿಗಳ ತೊಂದರೆ ಇರುವವರು ಯಾವ ನಾಮಜಪ ಮಾಡಬೇಕು ?
೩. ಭಕ್ತಿಯೋಗಿ ಮತ್ತು ಜ್ಞಾನಯೋಗಿಗಳು ಯಾವ ನಾಮಜಪ ಮಾಡಬೇಕು ?
೪. ‘ನಿರ್ವಿಚಾರ’ ಈ ನಾಮಜಪವನ್ನು ಮಾಡುವಾಗ ಭಾವವಿಡುವ ಆವಶ್ಯಕತೆ ಇಲ್ಲ
೫. ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯಲ್ಲಿನ ನಾಮಜಪಕ್ಕೆ ‘ನಿರ್ವಿಚಾರ’ ಈ ನಾಮಜಪವನ್ನು ಜೋಡಿಸುವುದು
೬. ಯಾವ ಮುದ್ರೆ ಮಾಡಬೇಕು ?
೭. ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಮಾಡುವಾಗ ಸಾಧಕರು ಯಾವ ಅಂಶಗಳನ್ನು ಗಮನದಲ್ಲಿಡಬೇಕು ?
೮. ‘ನಿರ್ವಿಚಾರ’ ನಾಮಜಪವು ಎಲ್ಲ ಮಟ್ಟದ ಸಾಧಕರಿಗಾಗಿ ಏಕಿದೆ ?
೯. ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಅನಂತ ಅನಂತ ಕೃತಜ್ಞತೆಗಳು !

 

೧. ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪದ ಮಹತ್ವ

(ಪರಾತ್ಪರ ಗುರು) ಡಾ. ಆಠವಲೆ

‘ಮನಸ್ಸು ಎಲ್ಲಿಯವರೆಗೆ ಕಾರ್ಯನಿರತವಾಗಿದೆ, ಅಲ್ಲಿಯವರೆಗೆ ಮನೋಲಯವಾಗುವುದಿಲ್ಲ. ಮನಸ್ಸು ನಿರ್ವಿಚಾರವಾಗಲು ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ಭಾವಜಾಗೃತಿ ಇತ್ಯಾದಿ ಎಷ್ಟೇ ಪ್ರಯತ್ನ ಮಾಡಿದರೂ, ಮನಸ್ಸು ಕಾರ್ಯನಿರತವಾಗಿರುತ್ತದೆ. ಹಾಗೆಯೇ ಯಾವುದಾದರೊಂದು ದೇವತೆಯ ನಾಮಜಪವನ್ನು ಅಖಂಡವಾಗಿ ಮಾಡಿದರೂ, ಮನಸ್ಸು ಕಾರ್ಯನಿರತವಾಗಿರುತ್ತದೆ ಮತ್ತು ಮನಸ್ಸಿನಲ್ಲಿ ದೇವರ ಸ್ಮರಣೆ, ಭಾವ ಇತ್ಯಾದಿಗಳು ಬರುತ್ತವೆ. ತದ್ವಿರುದ್ಧ ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಅಖಂಡವಾಗಿ ಮಾಡಿದರೆ, ಮನಸ್ಸಿಗೆ ಬೇರೆ ಏನೂ ನೆನಪಾಗುವುದಿಲ್ಲ. ಇದರ ಕಾರಣವೆಂದರೆ ಅಧ್ಯಾತ್ಮದ ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’  ಎಂಬ ನಿಯಮಕ್ಕನುಸಾರ ಈ ನಾಮಜಪದಿಂದ ಮನಸ್ಸು ಆ ಶಬ್ದದೊಂದಿಗೆ ಏಕರೂಪವಾಗಿ ನಿರ್ವಿಚಾರವಾಗುತ್ತದೆ, ಅಂದರೆ ಮೊದಲು ಮನೋಲಯ, ನಂತರ ಬುದ್ಧಿಲಯ, ಅನಂತರ ಚಿತ್ತಲಯ ಮತ್ತು ಕೊನೆಗೆ ಅಹಂಲಯವಾಗುತ್ತದೆ. ಆದುದರಿಂದ ನಿರ್ಗುಣ ಸ್ಥಿತಿಗೆ ಬೇಗನೆ ಹೋಗಲು ಸಹಾಯವಾಗುತ್ತದೆ.


ಮುಂದಿನ ಪ್ರಯೋಗವನ್ನು ಮಾಡಿ !

೧. ಯಾವುದೇ ವಸ್ತುವಿನ ಕಡೆಗೆ ನೋಡಿ ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಮಾಡುವಾಗ ಏನೆನಿಸುತ್ತದೆ ಎಂದು ಗಮನಿಸಿ. ‘ಆನಂದದಾಯಕ ವಸ್ತುವಿನ ಕಡೆಗೆ ನೋಡಿ ಆನಂದವಾಗುವುದಿಲ್ಲ’, ಹಾಗೆಯೇ ‘ದುಃಖದಾಯಕ ವಸ್ತುವಿನ ಕಡೆಗೆ ನೋಡಿ ದುಃಖವೂ ಆಗುವುದಿಲ್ಲ’, ಎಂದು ನಮ್ಮ ಗಮನಕ್ಕೆ ಬರುತ್ತದೆ.

೨. ಸಾಧಕರು ‘ನಿರ್ವಿಚಾರ’ ಈ ನಾಮಜಪ ಅಥವಾ ಆ ನಾಮಜಪವನ್ನು ಮಾಡಲು ಕಠಿಣವೆನಿಸುತ್ತಿದ್ದರೆ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಕೆಲವು ತಿಂಗಳು ಪ್ರತಿದಿನ ಹೆಚ್ಚೆಚ್ಚು ಸಮಯ ಮಾಡಬೇಕು ಮತ್ತು ಏನೆನಿಸುತ್ತದೆ’, ಎಂದು sankalak.goa<@>gmail.com ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು ಅಥವಾ ಲಿಖಿತ ಸ್ವರೂಪದಲ್ಲಿ ‘ಸೌ. ಭಾಗ್ಯಶ್ರೀ ಸಾವಂತ, ಸನಾತನ ಆಶ್ರಮ, 24/B ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ. ಪಿನ್ ಕೊಡ್ 403401’ ಈ ವಿಳಾಸಕ್ಕೆ ಕಳುಹಿಸಬೇಕು.

ಕಾಲಾಂತರದಲ್ಲಿ ಈ ನಾಮಜಪವನ್ನು ಮಾಡಲು ಸಾಧ್ಯವಾಗತೊಡಗಿದರೆ, ಇದೇ ನಾಮಜಪವನ್ನು ಮುಂದೆ ಸತತವಾಗಿ ಮುಂದುವರಿಸಬೇಕು. ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವು ‘ಗುರುಕೃಪಾಯೋಗಾನುಸಾರ ಸಾಧನಾಮಾರ್ಗ’ದ ಕೊನೆಯ ನಾಮಜಪವಾಗಿದೆ !

 

೨. ಕೆಟ್ಟ ಶಕ್ತಿಗಳ ತೊಂದರೆ ಇರುವವರು

ಕೆಟ್ಟ ಶಕ್ತಿಗಳ ತೀವ್ರ, ಮಧ್ಯಮ ಮತ್ತು ಮಂದ ತೊಂದರೆ ಇರುವ ಸಾಧಕರು ಅವರಿಗೆ ಆಧ್ಯಾತ್ಮಿಕ ಉಪಾಯಗಳಿಗಾಗಿ ಹೇಳಲಾದ ನಾಮಜಪವನ್ನೇ ಮಾಡಬೇಕು. ಇದರ ಕಾರಣವೆಂದರೆ ಆ ಸಾಧಕರಿಗಾಗಿ ಕೆಟ್ಟ ಶಕ್ತಿಗಳ ತೊಂದರೆಯು ದೂರವಾಗುವುದೇ ಮಹತ್ವದ್ದಾಗಿದೆ. ಆದುದರಿಂದ ಅವರು ಉಪಾಯಗಳ ಕಾಲಾವಧಿಯು ಪೂರ್ಣವಾದ ನಂತರವೂ ಉಪಾಯಗಳಲ್ಲಿ ಬಂದ ನಾಮಜಪಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಉಳಿದ ಸಮಯದಲ್ಲಿ ಬರುವಾಗ-ಹೋಗುವಾಗ ಮಾಡಬೇಕು.

 

೩. ಭಕ್ತಿಯೋಗಿ ಮತ್ತು ಜ್ಞಾನಯೋಗಿ

ದೇವರ ನಾಮಜಪದಲ್ಲಿ ಭಕ್ತಿಯು ಇರಬಹುದು, ಆದರೆ ಜ್ಞಾನಯೋಗದಲ್ಲಿ ಮನಸ್ಸಿನ ನಿರ್ವಿಚಾರ ಸ್ಥಿತಿಯು ಇರುವುದರಿಂದ ನಿರ್ವಿಚಾರ ಸ್ಥಿತಿಯ ಲಾಭವಾಗುತ್ತದೆ; ಏಕೆಂದರೆ ಅಧ್ಯಾತ್ಮದಲ್ಲಿ ಕೊನೆಗೆ ನಿರ್ಗುಣ, ನಿರ್ವಿಚಾರ ಸ್ಥಿತಿಗೆ ಹೋಗುವುದಿರುತ್ತದೆ. ಭಕ್ತಿಯೋಗಿಗಳಿಗೂ ಕೊನೆಗೆ ಸಗುಣ ಭಕ್ತಿಯಿಂದ ನಿರ್ಗುಣ ಭಕ್ತಿಯತ್ತ ಹೋಗಬೇಕಾಗುತ್ತದೆ. ಆದುದರಿಂದ ಭಕ್ತಿಯೋಗಿಯಾಗಿರಲಿ ಅಥವಾ ಜ್ಞಾನಯೋಗಿಯಾಗಿರಲಿ ಅಥವಾ ಇತರ ಯಾವುದೇ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡುವವರಾಗಿರಲಿ, ಎಲ್ಲರಿಗೂ ‘ನಿರ್ವಿಚಾರ’ ಈ ನಾಮಜಪದಿಂದ ಲಾಭವಾಗಲಿದೆ.

 

೪. ‘ನಿರ್ವಿಚಾರ’ ಈ ನಾಮಜಪವನ್ನು ಮಾಡುವಾಗ ಭಾವವಿಡುವ ಆವಶ್ಯಕತೆ ಇಲ್ಲದಿರುವುದು

ನಾಮಜಪವನ್ನು ಭಾವಪೂರ್ಣವಾಗಿ ಮಾಡುವುದರಿಂದ ಭಾವದಿಂದ ದೊರಕುವ ಈಶ್ವರನ ಆಶೀರ್ವಾದಿಂದ ಪ್ರಗತಿಯು ಬೇಗನೆ ಆಗುತ್ತದೆ. ಬುದ್ಧಿಯಿಂದ ಭಾವಪೂರ್ಣ ನಾಮಜಪವನ್ನು ಮಾಡುವುದು ಜ್ಞಾನಯೋಗಿಗಳಿಗೆ ಕಠಿಣವಾಗುತ್ತದೆ; ಆದುದರಿಂದ ಅವರಿಗಾಗಿ ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಮಾಡುವುದು ಸುಲಭವಾಗುತ್ತದೆ. ಸ್ವಲ್ಪದರಲ್ಲಿ ‘ನಿರ್ವಿಚಾರ’ಈ ನಾಮಜಪವನ್ನು ಮಾಡುವುದು ಎಲ್ಲರಿಗೂ ಸಹಜಸಾಧ್ಯವಾಗಿದೆ.

 

೫. ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯಲ್ಲಿನ ನಾಮಜಪಕ್ಕೆ ‘ನಿರ್ವಿಚಾರ’ ಈ ನಾಮಜಪವನ್ನು ಜೋಡಿಸುವುದು

ಇಲ್ಲಿಯವರೆಗೆ ಸಾಧಕರು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ಮೂಲಕ ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದರು; ಆದರೆ ಅದಕ್ಕಾಗಿ ಅನೇಕ ವರ್ಷಗಳು ಬೇಕಾಗುತ್ತವೆ. ದೋಷಗಳು ಹೆಚ್ಚಾಗಿದ್ದರೆ ಅವುಗಳನ್ನು ದೂರ ಮಾಡಲು ಅನೇಕ ಜನ್ಮಗಳೂ ಬೇಕಾಗಬಹುದು. ಈ ಪದ್ಧತಿಯಿಂದ ಒಂದೊಂದು ದೋಷವನ್ನು ದೂರ ಮಾಡಲು ಪ್ರಯತ್ನಿಸುವುದರೊಂದಿಗೆ ಅದಕ್ಕೆ ‘ನಿರ್ವಿಚಾರ’ ಈ ನಾಮಜಪವನ್ನು ಜೋಡಿಸಿದರೆ ಒಂದೇ ಬಾರಿಗೆ ಅನೇಕ ಸ್ವಭಾವದೋಷಗಳು ಕಡಿಮೆಯಾಗುತ್ತವೆ. ಆದುದರಿಂದ ಪ್ರಗತಿಯೂ ಬೇಗನೆ ಆಗುತ್ತದೆ. ಸದ್ಯ ಸಾಧನೆಗಾಗಿ ಕಲಿಯುಗದಲ್ಲಿನ ಮುಂದಿನ ಕಾಲವು ಬಹಳ ಕಡಿಮೆ ಇದೆ. ಆದುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಲು ‘ನಿರ್ವಿಚಾರ’ ಈ ನಾಮಜಪವು ಸಹಾಯ ಮಾಡುತ್ತದೆ. ಇದರಿಂದ ‘ಏಕ ಸಾಧೈ ಸಬ ಸಾಧೈ, ಸಬ್ ಸಾಧೈ ಸಬ್ ಜಾಯ್ |’ ಈ ಹಿಂದಿ ವಚನದ ಸ್ಮರಣೆಯಾಗುತ್ತದೆ.

 

೬. ಮುದ್ರೆ

ಈ ನಾಮಜಪದೊಂದಿಗೆ ಪ್ರತ್ಯೇಕವಾಗಿ ಮುದ್ರೆ ಮಾಡುವ ಆವಶ್ಯಕತೆ ಇಲ್ಲ; ಆದರೆ ಯಾರಿಗಾದರೂ ಮುದ್ರೆ ಮಾಡುವ ಆವಶ್ಯಕತೆಯೆನಿಸಿದರೆ ಅನುಕೂಲವೆನಿಸಿದ ಮುದ್ರೆಯನ್ನು ಮಾಡಬಹುದು.’

– (ಪರಾತ್ಪರ ಗುರು) ಡಾ. ಆಠವಲೆ

ನಿರ್ವಿಚಾರ

 

ಶ್ರೀ ನಿರ್ವಿಚಾರಾಯ ನಮಃ |

 

ಓಂ ನಿರ್ವಿಚಾರ

 

‘ನಿರ್ವಿಚಾರ’ ಸಹಿತ ದೇವತೆಗಳ ನಾಮಜಪ, ಸ್ತೋತ್ರ, ಶ್ಲೋಕ ಮುಂತಾದ ಆಡಿಯೋ ಉಚಿತವಾಗಿ ಕೇಳಿ. ಇಂದೇ ‘ಸ ನಾತನ ಚೈತನ್ಯವಾಣಿ’ ಆ್ಯಪ್ ಡೌನ್‌ಲೋಡ ಮಾಡಿ – https://www.sanatan.org/Chaitanyavani

 

೭. ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಮಾಡುವಾಗ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಇಲ್ಲಿಯವರೆಗೆ ಸಾಧಕರಿಗೆ ಬೆಳಗ್ಗೆ ಅಥವಾ ರಾತ್ರಿ ೯.೩೦ ರಿಂದ ೧೦ ಈ ಸಮಯದಲ್ಲಿ ಕುಳಿತು ಧ್ಯಾನ ಅಥವಾ ನಾಮಜಪವನ್ನು ಮಾಡಲು ಹೇಳಲಾಗಿತ್ತು. ಇನ್ನು ಮುಂದೆ ಸಾಧಕರು ಈ ಸಮಯದಲ್ಲಿ ಕುಳಿತು ಧ್ಯಾನ ಅಥವಾ ನಾಮಜಪವನ್ನು ಮಾಡುವ ಆವಶ್ಯಕತೆ ಇಲ್ಲ.

೨. ‘ಕೊರೊನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಆಧ್ಯಾತ್ಮಿಕ ಬಲವು ದೊರಕಬೇಕು’, ಎಂಬುದಕ್ಕಾಗಿ ಹೇಳಲಾದ ನಾಮಜಪ (‘ಶ್ರೀ ದುರ್ಗಾದೇವ್ಯೈ ನಮಃ |’ (೩ ಬಾರಿ) – ‘ಶ್ರೀ ಗುರುದೇವ ದತ್ತ |’ – ‘ಶ್ರೀ ದುರ್ಗಾದೇವ್ಯೈ ನಮಃ |’ (೩ ಬಾರಿ) – ‘ಓಂ ನಮಃ ಶಿವಾಯ |’) ಪ್ರತಿದಿನ ೧೦೮ ಸಲ ಒಂದು ಸ್ಥಳದಲ್ಲಿ ಕುಳಿತುಕೊಂಡು ಮಾಡಬೇಕು. ಹಾಗೆಯೇ ಕೊರೊನಾದ ಲಕ್ಷಣಗಳಿದ್ದರೆ ಜವಾಬ್ದಾರ ಸಾಧಕರಿಗೆ ಕೇಳಿ ಆವಶ್ಯಕತೆಗನುಸಾರ ಈ ಜಪವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು.

೩. ಸಾಧಕರು ಕುಲದೇವತೆಯ ನಾಮಜಪವನ್ನು ಮಾಡುತ್ತಿದ್ದರೆ ಅಂತಹವರು ಇಚ್ಛೆಗನುಸಾರ ಅದೇ ಜಪವನ್ನು ಮುಂದುವರಿಸಬಹುದು; ಆದರೆ ಅವರಿಗೆ ಮುಂದಿನ ಹಂತದ ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವನ್ನು ಮಾಡಬೇಕೆನಿಸಿದರೆ, ಅವರು ಈ ನಾಮಜಪವನ್ನು ಮಾಡಬಹುದು.

೪. ಸಮಷ್ಟಿಗಾಗಿ ನಾಮಜಪವನ್ನು ಮಾಡುವ ಸಂತರು ಮತ್ತು ಸಾಧಕರು : ಕೆಲವು ಸಂತರು ಸಮಷ್ಟಿಗಾಗಿ ಕೆಲವು ಗಂಟೆ ನಾಮಜಪವನ್ನು ಮಾಡುತ್ತಾರೆ, ಹಾಗೆಯೇ ಶೇ. ೬೦ ಕ್ಕಿಂತ ಹೆಚ್ಚು ಮಟ್ಟವಿರುವ ಕೆಲವು ಸಾಧಕರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಪ್ರಸಾರದ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗ ಅದರಲ್ಲಿನ ಕೆಟ್ಟ ಶಕ್ತಿಗಳ ಅಡಚಣೆಗಳು ದೂರವಾಗಲು ನಾಮಜಪವನ್ನು ಮಾಡುತ್ತಾರೆ. ಅವರು ಸಹ ಆವಶ್ಯಕವಾದ ಪ್ರಾರ್ಥನೆಯನ್ನು ಮಾಡಿ ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಇದೇ ನಾಮಜಪವನ್ನು ಮಾಡಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೫.೨೦೨೧)

 

೮. ‘ನಿರ್ವಿಚಾರ’ ನಾಮಜಪವು ಎಲ್ಲ ಮಟ್ಟದ ಸಾಧಕರಿಗಾಗಿ ಏಕಿದೆ ?

ಗುರುಕೃಪಾಯೋಗದಲ್ಲಿ ‘ಸಾಧನೆಯ ಆರಂಭದಲ್ಲಿ ಕುಲದೇವತೆ ಮತ್ತು ದತ್ತ ಇವರ ನಾಮಜಪವನ್ನು ಮಾಡಬೇಕು’, ಎಂದು ಹೇಳಲಾಗಿದೆ. ಹಾಗೆಯೇ ಗುರುಕೃಪಾಯೋಗದ ಒಂದು ತತ್ತ್ವವೆಂದರೆ ‘ಮಟ್ಟಕ್ಕನುಸಾರ ಸಾಧನೆ.’ ಹೀಗಿರುವಾಗ ‘ನಿರ್ವಿಚಾರ’ ಇದು ‘ಗುರುಕೃಪಾಯೋಗದಲ್ಲಿನ ಎಲ್ಲಕ್ಕಿಂತ ಕೊನೆಯ ನಾಮಜಪ’ವನ್ನು ‘ಆರಂಭದ ಸಾಧಕರಿಂದ ಸಂತರವರೆಗಿನ ಯಾರೂ ಮಾಡಬಹುದು’, ಎಂದು ಏಕೆ ಕೊಡಲಾಗಿದೆ ?’, ಎಂಬ ಪ್ರಶ್ನೆಯು ಕೆಲವರ ಮನಸ್ಸಿನಲ್ಲಿ ಬರಬಹುದು. ಇದರ ಉತ್ತರವು ಮುಂದಿನಂತಿದೆ.

ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧನೆಯ ವಿವಿಧ ಹಂತಗಳನ್ನು ಪೂರ್ಣ ಮಾಡಬೇಕಾಗುತ್ತದೆ. ಉದಾ. ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಾವಜಾಗೃತಿ, ತ್ಯಾಗ ಮತ್ತು ಪ್ರೀತಿ. ‘ನಾಮಜಪ’ ಈ ಹಂತವನ್ನು ಪೂರ್ಣ ಮಾಡಿ ‘ಅಖಂಡವಾಗಿ ನಾಮಜಪ ಆಗುವುದು’ ಈ ಸ್ಥಿತಿಗೆ ಬರಲು ಸಾಧಕನಿಗೆ ೧೦ ರಿಂದ ೧೫ ವರ್ಷಗಳು ಬೇಕಾಗುತ್ತವೆ. ಇದರಲ್ಲಿ ೪-೫ ವರ್ಷಗಳಲ್ಲಿ ಕೇವಲ ಶೇಕಡಾ ೪-೫ ರಷ್ಟು ಪ್ರಗತಿಯಾಗಬಹುದು. ಅನಂತರ ಅವನು ಸಾಧನೆಯ ‘ಸತ್ಸಂಗ’ದ ಹಂತಕ್ಕೆ ಬರುತ್ತಾನೆ. ಈ ವೇಗದಿಂದ ಸಾಧನೆಯಲ್ಲಿ ಮುಂದೆ ಹೋಗಲಿಕ್ಕಿದ್ದರೆ ಒಂದು ಜನ್ಮದಲ್ಲಿ ಸಾಧನೆಯು ಪೂರ್ಣತ್ವಕ್ಕೆ ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಸಾಧಕನು ಸಾಧನೆಯ ಯಾವ ಮಟ್ಟದಲ್ಲಿರುವನೋ, ಅದರ ಮುಂದಿನ ಹಂತದ ಸ್ವಲ್ಪ ಸ್ವಲ್ಪ ಪ್ರಯತ್ನವನ್ನು ಮಾಡುತ್ತಿದ್ದರೆ ಸಾಧಕನ ಪ್ರಗತಿಯಾಗುವ ಪ್ರಮಾಣವು ಹೆಚ್ಚಾಗುತ್ತದೆ, ಉದಾ. ನಾಮಜಪವನ್ನು ಮಾಡುವಾಗಲೇ ‘ಸತ್ಸಂಗ’ ಈ ಹಂತದ ಪ್ರಯತ್ನವನ್ನೂ ಮಾಡಿದರೆ, ಆಧ್ಯಾತ್ಮಿಕ ಪ್ರಗತಿಯ ವೇಗವು ಹೆಚ್ಚಾಗುತ್ತದೆ. ಇದೇ ತತ್ತ್ವದ ಆಧಾರದಲ್ಲಿ ಗುರುಕೃಪಾಯೋಗದಲ್ಲಿ ಪ್ರಾಥಮಿಕ ಹಂತದ ಸಾಧಕನಿಗೆ ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮ, ಸತ್ಸಂಗ, ಸತ್ಸೇವೆ, ಭಾವಜಾಗೃತಿ, ತ್ಯಾಗ ಮತ್ತು ಪ್ರೀತಿ ಈ ಎಂಟು ಹಂತಗಳನ್ನು ಒಟ್ಟಾಗಿ ಪ್ರಯತ್ನವನ್ನು ಮಾಡಲು ಹೇಳಲಾಗುತ್ತದೆ. ಆದುದರಿಂದ ಈ ಯೋಗದಲ್ಲಿ ಇತರ ಸಾಧನಾಮಾರ್ಗಗಳಿಗಿಂತ ಪ್ರಗತಿಯು ಬೇಗನೆ ಆಗುತ್ತದೆ.

ಇದೇ ವಿಷಯವು ‘ನಿರ್ವಿಚಾರ’ ಈ ನಾಮಜಪದ ಬಗ್ಗೆಯೂ ಅನ್ವಯಿಸುತ್ತದೆ. ಈ ಜಪವಾಗಲು ಸಾಧಕನ ಆಧ್ಯಾತ್ಮಿಕ ಮಟ್ಟವು ಕಡಿಮೆಪಕ್ಷ ಶೇ. ೬೦ ರಷ್ಟಿರುವುದು, ಅಂದರೆ ಅವನ ಮನೋಲಯದ ಆರಂಭವಾಗುವುದು ಆವಶ್ಯಕವಾಗಿದೆ. ಅನಂತರ ಆ ಸಾಧಕನು ನಿರ್ವಿಚಾರ ಸ್ಥಿತಿಗೆ ಹೋಗಬಹುದು; ಆದರೆ ಅವನು ಪ್ರಾರಂಭದಿಂದಲೇ ‘ನಿರ್ವಿಚಾರ’ ಈ ನಾಮಜಪವನ್ನು ಆರಂಭಿಸಿದರೆ, ಅವನ ಮನಸ್ಸಿನ ಮೇಲೆ ಈ ನಾಮಜಪದ ಅಲ್ಪಸ್ವಲ್ಪ ಸಂಸ್ಕಾರವು ಬೇಗನೆ ಆಗಿ ಒಂದೊಂದಾಗಿ ಎಂಟು ಹಂತಗಳ ಸಾಧನೆಯನ್ನು ಮಾಡಿ ಮುಂದೆ ಮನೋಲಯದ ಹಂತಕ್ಕೆ ಹೋಗಲು ಬೇಕಾಗುವ ಕಾಲಾವಧಿಯ ತುಲನೆಯಲ್ಲಿ ಕಡಿಮೆ ಸಮಯದಲ್ಲಿ ಅವನು ಈ ಹಂತವನ್ನು ತಲುಪಬಹುದು.

ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟದ ಸಾಧಕನು ಯಾವ ನಾಮಜಪವನ್ನು ಮಾಡಬೇಕು ?

‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಾವು ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು. ಈ ನಾಮಜಪವನ್ನು ಮಾಡಲು ಸಾಧ್ಯವಾಗತೊಡಗಿದರೆ ಅದನ್ನು ನಿರಂತರ ಮಾಡಬೇಕು. ಏಕೆಂದರೆ ಕೊನೆಗೆ ಸಾಧನೆಯ ಮುಂದಿನ ಮಟ್ಟವನ್ನು ತಲುಪಿ ಪೂರ್ಣ ಸಮಯ ಅದೇ ನಾಮಜಪವನ್ನು ಮಾಡುವುದಿರುತ್ತದೆ.

ಕೇವಲ ‘ನಿರ್ವಿಚಾರ’ ಜಪ ಮಾಡುವುದು ಸಾಧ್ಯವಾಗದಿದ್ದರೆ ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಬೇಕು !

‘ಕೆಲವು ಸಾಧಕರಿಗೆ ಕೇವಲ ‘ನಿರ್ವಿಚಾರ’ ಈ ಜಪವನ್ನು ಮಾಡುವುದು ಕಠಿಣವಾಗಬಹುದು. ಆಗ ಅವರು ‘ಓಂ ನಿರ್ವಿಚಾರ’ ಈ ನಾಮಜಪವನ್ನು ಮಾಡಿ ನೋಡಬೇಕು.
‘ಓಂ’ ನಲ್ಲಿ ಸಾಮರ್ಥ್ಯ ಮತ್ತು ಶಕ್ತಿ ಇದೆ. ಆದುದರಿಂದ ‘ನಿರ್ವಿಚಾರ’ ಈ ನಾಮಜಪದ ಆರಂಭದಲ್ಲಿ ‘ಓಂ’ ಜೋಡಿಸಿದರೆ ಅದರ ಉಚ್ಚಾರದಿಂದ ‘ನಿರ್ವಿಚಾರ’ ಈ ನಾಮಜಪದ ಪರಿಣಾಮವು ಬೇಗನೆ ಆಗಲು ಸಹಾಯವಾಗುತ್ತದೆ.

ಯಾರಿಗೆ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವು ಸುಲಭವಾಗಿ ಆಗುತ್ತದೆಯೋ, ಅವರು ಅದೇ ನಾಮಜಪವನ್ನು ಮುಂದುವರಿಸಬೇಕು.’

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

 

೯. ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಅನಂತ ಅನಂತ ಕೃತಜ್ಞತೆಗಳು !

ಕುಲದೇವತೆಯ ಸಗುಣ ಉಪಾಸನೆಯ ನಾಮಜಪದಿಂದ ಗುರುಕೃಪಾಯೋಗಾನುಸಾರ ಸಾಧನಾಮಾರ್ಗದ ಕೊನೆಯ ‘ನಿರ್ವಿಚಾರ’ ಈ ನಿರ್ಗುಣ ಸ್ಥಿತಿಗೆ ಕರೆದುಕೊಂಡು ಹೋಗುವ ನಾಮಜಪದವರೆಗೆ ಸಾಧಕರ ಸಾಧನಾಪ್ರವಾಸವನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಅನಂತ ಅನಂತ ಕೃತಜ್ಞತೆಗಳು !

‘ಕುಲದೇವತೆಯ ಉಪಾಸನೆಯನ್ನು ಮಾಡಿದರೆ ಕುಲದೇವತೆಯು ಮುಂದೆ ಉಪಾಸಕನನ್ನು ಶಿಷ್ಯನ ಹಂತದವರೆಗೆ ಕರೆದುಕೊಂಡು ಹೋಗುತ್ತಾರೆ; ಇದಕ್ಕಾಗಿಯೇ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಗುರುಕೃಪಾಯೋಗಾನುಸಾರ ಸಾಧನೆಯ ಆರಂಭದಲ್ಲಿ ಕುಲದೇವತೆಯ ನಾಮಜಪವನ್ನು ಮಾಡಲು ಹೇಳಿದರು. ಸಾಧನೆಯ ಆ ಹಂತವು ಪೂರ್ಣವಾದ ನಂತರ ಅವರು ಕಾಲಾನುಸಾರ ವಿವಿಧ ಜಪಗಳನ್ನು ನೀಡಿದರು, ಉದಾ. ಕೆಟ್ಟ ಶಕ್ತಿಗಳ ತೊಂದರೆಗಳ ನಿರ್ಮೂಲನೆಗಾಗಿ ಸಪ್ತದೇವತೆಗಳ ಜಪ, ಪಂಚಮಹಾಭೂತಗಳ ಜಪ, ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಪೋಷಕವಾಗಿರುವ ಭಗವಾನ ಶ್ರೀಕೃಷ್ಣನ ಜಪ ಇತ್ಯಾದಿ ಮತ್ತು ಅದನ್ನು ಮಾಡಲು ಹೇಳಿ ಪರಾತ್ಪರ ಗುರು ಡಾಕ್ಟರರು ಕಾಲಾನುಸಾರ ಆವಶ್ಯಕವಾದ ತತ್ತ್ವಗಳ ಉಪಾಸನೆಯನ್ನು ಸಾಧಕರಿಂದ ಮಾಡಿಸಿಕೊಂಡರು. ಕಳೆದ ವರ್ಷದಾದ್ಯಂತ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಆಧ್ಯಾತ್ಮಿಕ ಬಲ ಸಿಗಲೆಂದು ಅವರು ಸಾಧಕರಿಗೆ ‘ಶ್ರೀ ವಿಷ್ಣವೇ ನಮಃ |’, ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಮತ್ತು ‘ಶ್ರೀ ಭವಾನಿದೇವ್ಯೈ ನಮಃ |’, ಈ ನಾಮಜಪವನ್ನು ಮಾಡಲು ಹೇಳಿದರು. ಇದರೊಂದಿಗೆ ಪರಾತ್ಪರ ಗುರು ಡಾಕ್ಟರರು ‘ಶೂನ್ಯ’, ‘ಮಹಾಶೂನ್ಯ’, ‘ನಿರ್ಗುಣ’ ಮತ್ತು ‘ಓಂ’ ಈ ನಿರ್ಗುಣ ಸ್ತರದ ಹೊಸ ಜಪಗಳ ಮಾಧ್ಯಮದಿಂದ ಸಾಧಕರನ್ನು ಸಾಧನೆಯ ಮುಂದುಮುಂದಿನ ಹಂತಗಳ ಅನುಭೂತಿಯನ್ನು ನೀಡಿದರು. ಈಗ ಪರಾತ್ಪರ ಗುರು ಡಾಕ್ಟರರು ಗುರುಕೃಪಾಯೋಗಾನುಸಾರ ಸಾಧನಾಮಾರ್ಗದ ಕೊನೆಯ ‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ |’ ಈ ಜಪವನ್ನು ಹೇಳಿ ಸಾಧಕರ ಮನೋಲಯ, ಬುದ್ಧಿಲಯ, ಚಿತ್ತಲಯ ಮತ್ತು ಕೊನೆಗೆ ಅಹಂಲಯ ಈ ಸಾಧನೆಯ ಅಂತಿಮ ಧ್ಯೇಯದ ಕಡೆಗೆ ವೇಗದಿಂದ ಮಾರ್ಗಕ್ರಮಣ ಮಾಡಿಸಿಕೊಳ್ಳುತ್ತಿದ್ದಾರೆ.

ಸಾಧನೆಗೆ ಕುಲದೇವತೆಯ ಸಗುಣ ಉಪಾಸನೆಯ ಜಪದಿಂದ ಆರಂಭ ಮಾಡಿ ಪರಾತ್ಪರ ಗುರುದೇವರು ಸಾಧಕರನ್ನು ಈಗ ನಿರ್ಗುಣ ಸ್ತರದಲ್ಲಿ ನಿರ್ವಿಚಾರ ಸ್ಥಿತಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ರೀತಿ ಸಾಧಕರ ಸಾಧನೆಯ ಸ್ಥಿತಿಗನುಸಾರ, ತೊಂದರೆಗನುಸಾರ ಮತ್ತು ಕಾಲಾನುಸಾರ ನಾಮಜಪವನ್ನು ಮಾಡಲು ಹೇಳಿ ಸಾಧಕರಿಗೆ ಅಧ್ಯಾತ್ಮದ ಮುಂದುಮುಂದಿನ ಸ್ಥಿತಿಗೆ ಕರೆದುಕೊಂಡು ಹೋಗುವ ತ್ರಿಕಾಲಜ್ಞಾನಿ ಪರಾತ್ಪರ ಗುರು ಡಾ. ಆಠವಲೆಯವರು ಅದ್ವಿತೀಯರಾಗಿದ್ದಾರೆ ! ಕಾಲದ ಪ್ರತಿಕೂಲತೆ ಎಷ್ಟು ತೀವ್ರವಾಗಿ ಹೆಚ್ಚಾಗುತ್ತಿದೆಯೋ, ಅದರ ಅನಂತ ಪಟ್ಟುಗಳಲ್ಲಿ ಸಾಧಕರ ಮೇಲೆ ಗುರುದೇವರು ಕೃಪೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅಖಿಲ ಮನುಕುಲದ ಉದ್ಧಾರಕ್ಕಾಗಿ ಕಲಿಯುಗದಲ್ಲಿ ಪೃಥ್ವಿಯ ಮೇಲೆ ಅವತರಿಸಿದ ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಎಲ್ಲ ಸದ್ಗುರುಗಳು, ಸಂತರು ಮತ್ತು ಸಾಧಕರ ವತಿಯಿಂದ ಅನಂತ ಅನಂತ ಕೃತಜ್ಞತೆಗಳು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೧೩.೫.೨೦೨೧)

‘ನಿರ್ವಿಚಾರ’ ಸಹಿತ ದೇವತೆಗಳ ನಾಮಜಪ, ಸ್ತೋತ್ರ, ಶ್ಲೋಕ ಮುಂತಾದ ಆಡಿಯೋ ಉಚಿತವಾಗಿ ಕೇಳಿ. ಇಂದೇ ‘ಸ ನಾತನ ಚೈತನ್ಯವಾಣಿ’ ಆ್ಯಪ್ ಡೌನ್‌ಲೋಡ ಮಾಡಿ – https://www.sanatan.org/Chaitanyavani

Leave a Comment