‘ಆಗುವುದೆಲ್ಲ ಒಳ್ಳೆಯದಕ್ಕೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಗವಂತನ ಮೇಲೆ ಶ್ರದ್ಧೆ ಇಟ್ಟು ‘ಕೊರೋನಾ’ದಂತಹ ಭಯಾನಕ ವಿಪತ್ತನ್ನು ಎದುರಿಸಿ !

ಸದ್ಯ ‘ಕೊರೋನಾ’ದಂತಹ ಭಯಾನಕ ವಿಪತ್ತಿನಿಂದಾಗಿ ಸಂಪೂರ್ಣ ಜಗತ್ತಿನಲ್ಲಿ ಹಾಹಾಕಾರ ಎದ್ದದೆ. ಲಕ್ಷಗಟ್ಟಲೆ ಜನರಿಗೆ ಈ ರೋಗಾಣುವಿನ ಸೋಂಕು ತಗಲಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಜೀವನಾವಶ್ಯಕ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿಷಾಣುವಿನಿಂದಾಗಿ ಮನುಷ್ಯನಿಗೆ ಎಲ್ಲ ರೀತಿಯಿಂದ ಅಪಾರ ಹಾನಿಯಾಗಿದೆ. ಜನಸಾಮಾನ್ಯರು ಕೊರೋನಾದ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಪ್ರಯತ್ನ ಮಾಡುತ್ತಿದ್ದಾರೆ.

೧. ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಹುಬ್ಬೇರಿಸುವಷ್ಟು ಪ್ರಗತಿ ಮಾಡಿದರೂ, ‘ಕೊರೋನಾ’ದಂತಹ ಮಹಾಭಯಂಕರ ವಿಪತ್ತನ್ನು ತಡೆಯಲು ವಿಜ್ಞಾನಕ್ಕೂ ಮಿತಿ ಬರುವುದು

ಕೊರೋನಾದ ಈ ವಿಪತ್ತನ್ನು ನೋಡಿ ಜಗತ್ತಿನಾದ್ಯಂತ ವಿಜ್ಞಾನವಾದಿ, ಬುದ್ಧಿವಂತರು ಇತ್ಯಾದಿ ಜನರು ವಿಚಾರದಲ್ಲಿ ಮುಳುಗಿದ್ದಾರೆ. ‘ಈ ಭಯಾನಕ ಸಂಕಟ ಹೇಗೆ ಬಂದಿತು ? ಇದನ್ನು ದೂರ ಮಾಡಲು ಏನು ಉಪಾಯ ?’, ಇದರ ಬಗ್ಗೆ ವಿಜ್ಞಾನಿಗಳು ಹಗಲುರಾತ್ರಿ ಶೋಧನೆ ಮಾಡುತ್ತಿದ್ದಾರೆ ಹಾಗೂ ಬುದ್ಧಿಜೀವಿಗಳು ಅನೇಕ ವಾದಗಳನ್ನು ಮಾಡುತ್ತಿದ್ದಾರೆ. ಇವೆಲ್ಲವುಗಳ ಬಗ್ಗೆ ವಿಚಾರ ಮಾಡಿದರೆ ಒಂದು ವಿಷಯ ಗಮನಕ್ಕೆ ಬರುವುದೆನೆಂದರೆ ‘ಇಂದು ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಹುಬ್ಬೇರಿಸುವಷ್ಟು ಪ್ರಗತಿ ಮಾಡಿದರೂ ಇಂತಹ ಮಹಾಭಯಂಕರ ರೋಗವನ್ನು ನಿಯಂತ್ರಿಸಲು ವಿಜ್ಞಾನಕ್ಕೂ ಇನ್ನೂ ಸಾಧ್ಯವಾಗಲಿಲ್ಲ.’ ಇದರಿಂದಲೇ ವಿಜ್ಞಾನಕ್ಕೆ ಇರುವ ಮಿತಿ ಹೆಚ್ಚು ಸ್ಪಷ್ಟವಾಗಿ ಕಂಡು ಬರುತ್ತದೆ.

೨. ‘ನಡೆಯುತ್ತಿರುವ ಎಲ್ಲ ವಿಷಯಗಳ ಕರ್ತಾರ ಜಗತ್ ನಿಯಂತ್ರಕ ಭಗವಂತನಾಗಿದ್ದರಿಂದ ನಮ್ಮ ಒಳಿತಿಗಾಗಿಯೇ ಪ್ರತಿಯೊಂದು ಘಟನೆಯನ್ನು ನಿರ್ಮಿಸುತ್ತಿದ್ದಾನೆ’, ಎಂಬ ಶ್ರದ್ಧೆಯಿಂದ ವರ್ತಮಾನ ಸ್ಥಿತಿಯನ್ನು ಸ್ಥಿರವಾಗಿ ಎದುರಿಸಿ !

ವ್ಯವಹಾರದ ದೃಷ್ಟಿಯಲ್ಲಿ ವಿಚಾರ ಮಾಡಿದರೆ ಪ್ರತಿಯೊಂದು ಪ್ರಸಂಗದತ್ತ ಒಳ್ಳೆಯ ಹಾಗೂ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ; ಆದರೆ ಚಿರಂತನ ಸತ್ಯವೆಂದರೆ, ಭಗವಂತನು ನಿರ್ಮಿಸಿದ ಸೃಷ್ಟಿಯು ಈಶ್ವರನ ನೀತಿ-ನಿಯಮಗಳಿಗನುಸಾರ ನಡೆಯುತ್ತದೆ. ನಡೆಯುವ ಎಲ್ಲ ಘಟನೆಗಳ ಮಾಡುವವನು ಜಗತ್ ನಿಯಂತ್ರಕ ಭಗವಂತನಾಗಿದ್ದು ನಮ್ಮ ಒಳ್ಳೆಯದಕ್ಕಾಗಿಯೇ ಎಲ್ಲವನ್ನು ಮಾಡುತ್ತಿರುತ್ತಾನೆ.

ಇಂದು ಈ ಘಟನೆಗಳಲ್ಲಿ ‘ಕಾಲದ ಆಚೆ ಏನು ನಡೆಯುತ್ತಿದೆ ?’, ಅದೇರೀತಿ ಅದರ ಹಿಂದಿನ ಕಾರ್ಯಕಾರಣಭಾವವು ನಮಗೆ ಅರ್ಥವಾಗುವುದಿಲ್ಲ. ಆದ್ದರಿಂದ ‘ಮೇಲು ಮೇಲಿನ ಘಟನೆಗಳನ್ನು ನೋಡಿ ಅದರ ಬಗ್ಗೆ ಬುದ್ಧಿಯಿಂದ ತರ್ಕ-ವಿತರ್ಕ ಮಾಡುವುದನ್ನು ತಡೆಯಬೇಕು. ಭಗವಂತನ ಇಚ್ಛೆ ಇಲ್ಲದೇ ಎಲೆಯೂ ಅಲುಗಾಡುವುದಿಲ್ಲ, ಹೀಗಿರುವಾಗ ಇಂತಹ ಘಟನೆಯ ನಡೆಯುವ ಹಿಂದೆ ಯಾವುದಾದರೂ ದೈವೀ ಆಯೋಜನೆ ಇರಲು ಸಾಧ್ಯವಿಲ್ಲವೇ ? ಆದ್ದರಿಂದ ಸಾಧಕರು ‘ಇವೆಲ್ಲವುಗಳಿಂದ ಭಗವಂತನು ಏನು ಕಲಿಸುತ್ತಿದ್ದಾನೆ ?’, ಎಂಬುದನ್ನು ಅರಿತುಕೊಳ್ಳಿ. ಸಾಧನೆ ಮಾಡಿದರೆ ಕಠಿಣ ಪ್ರಸಂಗದಲ್ಲಿ ಈಶ್ವರನ ಕೃಪೆಯಿಂದ ಸ್ಥಿರ ಹಾಗೂ ಆನಂದದಿಂದ ಇರಲು ಸಾಧ್ಯವಾಗುತ್ತದೆ ಹಾಗೂ ಕಾಲಾಂತರದಲ್ಲಿ ಎಲ್ಲ ಪ್ರಸಂಗಗಳ ಕಾರ್ಯಕಾರಣಭಾವವನ್ನೂ ಭಗವಂತ ಗಮನಕ್ಕೆ ತಂದು ಕೊಡುತ್ತಾನೆ.

ಸಾಧಕರೇ, ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ಬುದ್ಧಿಯಿಂದ ತರ್ಕ-ವಿತರ್ಕ ಮಾಡುವುದಕ್ಕಿಂತ ‘ಆಗುವುದೆಲ್ಲ ಒಳ್ಳೆಯದಕ್ಕೆ’ ಎಂಬ ದೃಢ ಶ್ರದ್ಧೆಯಿಂದ ಸಾಧನೆಯನ್ನು ಹೆಚ್ಚಿಸಿ ಆನಂದವಾಗಿರಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೪.೨೦೨೦)

Leave a Comment