ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 6)

Article also available in :

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ  ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಭೂಕಂಪಗಳು, ಸುನಾಮಿಗಳಂತೆಯೇ ಬಿಸಿಲ ಬೇಗೆಯಿಂದಲೂ ಜನಜೀವನ ತೊಂದರೆಗೀಡಾಗುತ್ತದೆ. ಇಂದು, ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ತಾಪಮಾನ ಗಣನೀಯ ಏರಿಕೆ ಕಂಡಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಲವು ವರ್ಷಗಳಿಂದ ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚಾಗುವ ಅಪಾಯವೂ ಹೆಚ್ಚಾಗುತ್ತಿದೆ. ಪ್ರತಿವರ್ಷ ಉಷ್ಣಾಘಾತ (ಹೀಟ್‌ಸ್ಟ್ರೋಕ್) ಭಾರತದಲ್ಲಿ ನೂರಾರು ಜನರ ಬಲಿ ಪಡೆಯುತ್ತದೆ. ಉಷ್ಣ ಮಾರುತ ಮತ್ತು ಉಷ್ಣಾಘಾತ ಎಂದರೇನು, ಅವುಗಳ ಪರಿಣಾಮಗಳು ಯಾವುವು, ಅವುಗಳಿಂದಾಗುವ ಕಾಯಿಲೆಗಳಾವುವು, ಭವಿಷ್ಯದಲ್ಲಿ ವಿವಿಧ ಕಾರಣಗಳಿಂದ ನಿರ್ಮಾಣವಾಗುವ ಉಷ್ಣ ಮಾರುತ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಈ ಲೇಖನವು ಪ್ರಯತ್ನಿಸುತ್ತದೆ.

ಭಾಗ 5

2. ನೈಸರ್ಗಿಕ ವಿಕೋಪಗಳು

2 ಇ. ಉಷ್ಣ ಮಾರುತ

2 ಇ 1. ಉಷ್ಣ ಮಾರುತ ಎಂದರೇನು?

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಯಲು ಪ್ರದೇಶದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದನ್ನು ಮೀರಿದರೆ, ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ಅಥವಾ ಅದನ್ನು ಮೀರಿದರೆ ಮತ್ತು ಪರ್ವತ ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದನ್ನು ಮೀರಿದರೆ ಮತ್ತು ಸರಾಸರಿ ತಾಪಮಾನವು 4.5 ರಿಂದ 6.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ, ಆಗ ಉಷ್ಣ ಮಾರುತ (Heat Wave) ಉತ್ಪತ್ತಿಯಾಗುತ್ತವೆ. ಇದರಿಂದ ಮಾನವನ ದೇಹವು ಬೆವರಿಳಿಸಿ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಆದ್ದರಿಂದ ಉಷ್ಣ ಮಾರುತ ಅಪಾಯಕಾರಿಯಾಗಿದೆ.

2 ಇ 1 ಅ. ಉಷ್ಣ ಮಾರುತದ ಪರಿಣಾಮ : 2003 ರಲ್ಲಿ ಉದ್ಭವಿಸಿದ ಉಷ್ಣ ಮಾರುತದಲ್ಲಿ 70,000 ಕ್ಕೂ ಹೆಚ್ಚು ಜನರು ಉಷ್ಣಾಘಾತದಿಂದ (ಹೀಟ್‌ಸ್ಟ್ರೋಕ್) ಸಾವನ್ನಪ್ಪಿದರು. ಹಠಾತ್ತಾಗಿ ಸಂಭವಿಸುವ ಪ್ರವಾಹ (ಫ್ಲ್ಯಾಶ್ ಫ್ಲಡ್ಸ), ಕಾಡ್ಗಿಚ್ಚು, ವಿಮಾನ ಹಾರಾಟದ ಮೇಲೆ ಪರಿಣಾಮ, ರೈಲ್ವೆ ಹಳಿಗಳ ಕರಗುವುದು ಇವು ಇತರ ಪರಿಣಾಮಗಳು.

2 ಇ 1 ಅ 1. ಉಷ್ಣ ಮಾರುತ ಉಷ್ಣಾಘಾತಕ್ಕೆ ಕಾರಣವಾಗಬಹುದು : ದೀರ್ಘಕಾಲದವರೆಗೆ ಸೂರ್ಯನ ತೀವ್ರ ಬಿಸಿಲಿನಲ್ಲಿ ತಿರುಗಾಡುವುದರಿಂದ ಅಥವಾ ತಾಪಮಾನದ ಶೀಘ್ರ ಏರಿಳಿತಗಳಿಂದ  (ಉದಾ. ಹವಾನಿಯಂತ್ರಿತ ಕೋಣೆ ಮತ್ತೆ ಬಿರುಬಿಸಿಲಿನ ನಡುವೆ ಸಂಚರಿಸುವುದರಿಂದ) ಉಂಟಾಗುವ ಸಮಸ್ಯೆ ಅಂದರೆ ಉಷ್ಣಾಘಾತ (Heatstroke). ಇದು ದೇಹದ ಉಷ್ಣತೆಯು 104 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹಠಾತ್ ಏರಿಕೆಗೆ ಕಾರಣವಾಗುತ್ತದೆ. ತಕ್ಷಣ ಇದನ್ನು ಬಗೆಹರಿಸದೇ ಬಿಟ್ಟರೆ, ವ್ಯಕ್ತಿಯ ಮೃತ್ಯು ಆಗಬಹುದು. ಇದನ್ನು ಇಂಗ್ಲಿಷ್‌ನಲ್ಲಿ ‘ಸನ್‌ಸ್ಟ್ರೋಕ್’ ಅಥವಾ ‘ಹೀಟ್‌ಸ್ಟ್ರೋಕ್’ ಎಂದು ಕರೆಯಲಾಗುತ್ತದೆ.

2 ಇ 1 ಅ 2. ಉಷ್ಣಾಘಾತದ ತೀವ್ರತೆ : 2015 ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಉಷ್ಣಾಘಾತಕ್ಕೆ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

2 ಇ 1 ಆ. ಮುಂಬರುವ ಆಪತ್ಕಾಲದಲ್ಲಿ ಉಷ್ಣ ಮಾರುತ ಏಕೆ ದೊಡ್ಡ ಅನಾಹುತವಾಗಿ ಹೊರಹೊಮ್ಮಬಹುದು? : ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಪ್ರಪಂಚದಾದ್ಯಂತ ಅನುಭವಿಸಲಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚುತ್ತಿದೆ. ಅಂಟಾರ್ಕ್ಟಿಕಾದಲ್ಲಿನ ಮಂಜು ಕರಗುತ್ತಿದೆ. ಯುರೋಪಿನಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ‘ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ’ ಎಂಬ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವೊಂದರ ಪ್ರಕಾರ, 2100 ರವರೆಗೆ ಪ್ರತಿವರ್ಷ 120 ಕೋಟಿ ಜನರಿಗೆ ಉಷ್ಣಾಘಾತದ ಬಿಸಿ ತಟ್ಟಲಿದೆ.

 

ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ

2 ಇ 1 ಇ. ಉಷ್ಣತೆಯಿಂದ ಉಂಟಾಗುವ ಕಾಯಿಲೆಗಳು : ಬೇಸಿಗೆಯ ದಿನಗಳಲ್ಲಿ ಅಥವಾ ತುಂಬಾ ಸೆಕೆಯ ವಾತಾವರಣದಲ್ಲಿ ಅಥವಾ ಉಷ್ಣ ಮಾರುತದಲ್ಲಿ, ದೈಹಿಕ ವಿಷಮ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದರ 3 ಹಂತಗಳು ಈ ಕೆಳಗಿನಂತಿವೆ.

1. ಉಷ್ಣತೆಯ ಸೆಳೆತ (Heat cramps)
2. ಉಷ್ಣತೆಯ ದಣಿವು (Heat exhaustion)
3. ಉಷ್ಣಾಘಾತ (Heatstroke)

ಉಷ್ಣತೆಯ ಸೆಳೆತ ಪ್ರಾರಂಭವಾದ ನಂತರ ಸರಿಯಾದ ಚಿಕಿತ್ಸೆಯನ್ನು ನೀಡದಿದ್ದರೆ, ಮೇಲಿನ ಕ್ರಮದಲ್ಲಿ ಒಬ್ಬರು ಮತ್ತಷ್ಟು ಗಂಭೀರ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಮೊದಲ ಅಥವಾ ಎರಡನೆಯ ಹಂತವು ಅನುಭವಿಸದೇ, ನೇರವಾಗಿ ಉಷ್ಣತೆಯ ದಣಿವು ಅಥವಾ ಹೀಟ್‌ಸ್ಟ್ರೋಕ್ ಸಹ ಸಂಭವಿಸಬಹುದು. ಈ ಮೂರು ಹಂತಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ವ್ಯಕ್ತಿಗೆ ವೈದ್ಯಕೀಯ ಸಹಾಯ ಸಿಗುವಂತೆ ಪ್ರಯತ್ನಿಸಬೇಕು. ವೈದ್ಯಕೀಯ ಸಹಾಯ ದೊರೆಯುವವರೆಗೆ ಸಾಧ್ಯವಾದಷ್ಟು ಪ್ರಥಮ ಚಿಕಿತ್ಸೆ ನೀಡಬೇಕು.

2 ಇ 1 ಇ 1. ಉಷ್ಣತೆಯ ಸೆಳೆತ (Heat cramps):

ಕೈಗಳ, ಪಿಂಡಿಕೆಗಳ, ಅಂಗಾಲುಗಳ, ಹೊಟ್ಟೆಯ ಸ್ನಾಯುಗಳಲ್ಲಿ ಸೆಳೆತ ಬರುವುದು, ಬಹಳಷ್ಟು ಬೆವರು ಬರುವುದು, ಇಂತಹ ಲಕ್ಷಣಗಳು ಕಂಡು ಬರುತ್ತವೆ. ಹೆಚ್ಚಿನ ಬಾರಿ ಶ್ರಮವಹಿಸಿ ಕೆಲಸ ಮಾಡುತ್ತಿರುವಾಗ ಅಥವಾ ಕೆಲಸ ಮಾಡಿದ ಕೆಲವು ಗಂಟೆಗಳ ನಂತರ ಇದು ಆಗಬಹುದು.

ವೈದ್ಯಕೀಯ ಸಹಾಯ ದೊರಕುವವರೆಗೆ ಇಂತಹ ರೋಗಿಯನ್ನು…

ಅ. ತಂಪು ವಾತಾವರಣವಿದ್ದಲ್ಲಿಗೆ ಸ್ಥಳಾಂತರಿಸಬೇಕು. ಅವನ ಮೇಲೆ ನೇರ ಸೂರ್ಯಪ್ರಕಾಶ ಬೀಳದಂತೆ, ಎಚ್ಚರ ವಹಿಸಬೇಕು.

ಆ. ಸೆಳೆತ ಬರುತ್ತಿರುವ ಸ್ನಾಯುವನ್ನು ಮೃದುವಾಗಿ ತಿಕ್ಕಬೇಕು. ಸೆಳೆತ ಬರುತ್ತಿರುವ ಸ್ನಾಯುವನ್ನು ನಿಧಾನವಾಗಿ ಜಗ್ಗಬೇಕು.

ಇ. ತಂಪು ನೀರು ಅಥವಾ ಆವಶ್ಯಕ ಲವಣಗಳನ್ನು ಬೆರೆಸಿದ ನೀರನ್ನು (ಇಲೆಕ್ಟಾçಲ್) ಪ್ರತಿ 15 ನಿಮಿಷಗಳಿಗೊಮ್ಮೆ ನೀಡಬೇಕು.

2 ಇ 1 ಇ 2. ಉಷ್ಣತೆಯ ದಣಿವು (Heat exhaustion):

ಇದರಲ್ಲಿ ಶರೀರದ ಒಳಗಿನ ತಾಪಮಾನ (core temperature) 101 ರಿಂದ 104 ಡಿಗ್ರಿ ಫ್ಯಾರನಹೈಟ್‌ನಷ್ಟು ಹೆಚ್ಚಾಗಬಹುದು. ಬಹಳ ಬೆವರು ಬರುತ್ತದೆ. ಚರ್ಮವು ಬೆವೆತು ತಣ್ಣಗೆ ಮತ್ತು ಬಿಳುಚಿಕೊಳ್ಳುತ್ತದೆ. ಚರ್ಮದ ಬಣ್ಣವು ಕಪ್ಪಾದರೆ, ಉಗುರುಗಳು, ತುಟಿಗಳು ಮತ್ತು ಕೆಳಗಿನ ರೆಪ್ಪೆಗಳನ್ನು ಜಗ್ಗಿ ನೋಡಿದರೆ ಅಲ್ಲಿನ ಚರ್ಮದ ಯಾವಾಗಲೂ ಇರುವ ಬಣ್ಣವು ಬದಲಾಗಿರುವುದು ಕಾಣಿಸುತ್ತದೆ. ತಲೆನೋವು, ಹೊಟ್ಟೆ ತೊಳೆಸುವುದು ಅಥವಾ ವಾಂತಿಯಾಗುವುದು, ಹಸಿವೆ ಇಲ್ಲದಿರುವುದು, ಬಹಳಷ್ಟು ನೀರಡಿಕೆಯಾಗುವುದು, ಅಶಕ್ತತೆ, ನಿರುತ್ಸಾಹ, ಸ್ನಾಯುಗಳಲ್ಲಿ ವೇದನೆಯಾಗುವುದು ಅಥವಾ ಸ್ನಾಯುಗಳಲ್ಲಿ ಸೆಳೆತ ಬರುವುದು, ಕಿರಿಕಿರಿಯಾಗುವುದು, ಚಿಂತಾಕ್ರಾAತನಾಗುವುದು, ಬವಳಿ ಬರುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ವೈದ್ಯಕೀಯ ಸಹಾಯ ದೊರಕುವವರೆಗೆ ಇಂತಹ ರೋಗಿಯನ್ನು …

ಅ. ತಂಪಾದ ಸ್ಥಳದಲ್ಲಿ ಬೆರೆಸಿ. ಇದನ್ನು ನೇರ ಸೂರ್ಯನ ಬೆಳಕಿಗೆ ಒಡ್ಡಬಾರದು.

ಆ. ಅವನ ಬಟ್ಟೆಗಳನ್ನು ಬಿಚ್ಚಿ.

ಇ. ಮುಖ, ಕುತ್ತಿಗೆ, ಎದೆ, ಕಾಲು ಇತ್ಯಾದಿಗಳಿಗೆ ಶೀತ ಮತ್ತು ಒದ್ದೆಯಾದ ಟವೆಲ್ ಅಥವಾ ಅಂತಹುದೇ ಉಡುಪುಗಳನ್ನು ಅನ್ವಯಿಸಿ.

ಈ. ದೇಹದಿಂದ ಗಾಳಿ ಬೀಸಬೇಕು, ಆದ್ದರಿಂದ ಫ್ಯಾನ್ ಅನ್ನು ಸ್ಥಾಪಿಸಬೇಕು.

ಉ. ಪ್ರತಿ 15 ನಿಮಿಷಕ್ಕೆ ತಣ್ಣೀರು ಅಥವಾ ಸೂಕ್ತವಾದ ಕ್ಷಾರೀಯ ನೀರು (500 ಮಿಲಿ ನೀರಿನಲ್ಲಿ 1 ಟೀ ಚಮಚ ಉಪ್ಪು) ನೀಡಿ. (ಏಕಕಾಲದಲ್ಲಿ ಹೆಚ್ಚು ನೀರು ಕುಡಿಯಬೇಡಿ.)

2 ಇ 1 ಇ 3. ಹೀಟ್ ಸ್ಟ್ರೋಕ್: ಶಾಖದ ಕಾರಣದಿಂದಾಗಿ ಆದಾಯದ ಆರೋಗ್ಯ ಬಿಕ್ಕಟ್ಟಿನಲ್ಲಿ ಇದು ತುರ್ತು ಪರಿಸ್ಥಿತಿ. ತಕ್ಷಣವೇ ಇಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನೀಡದಿದ್ದರೆ, ರೋಗಿಯು ಬಳಲುತ್ತಿದ್ದಾರೆ. ಇವುಗಳಲ್ಲಿ, ರೋಗಿಯ ದೇಹದ ಮುಖ್ಯ ತಾಪಮಾನವನ್ನು 104 ಡಿಗ್ರಿ ಫ್ಯಾರನ್‌ಹೀಟ್ ಅಥವಾ ಅದಕ್ಕಿಂತ ಹೆಚ್ಚಿಸಲಾಗುತ್ತದೆ. ರೋಗಿಯು ತುಂಬಾ ಗೊಂದಲಕ್ಕೊಳಗಾಗಬಹುದು, ಅವನ ಸುತ್ತಲಿನ ಪರಿಸರದ ಬಗ್ಗೆ ತಿಳಿದಿಲ್ಲ, ತಲೆತಿರುಗುವಿಕೆ, ಬಿಸಿ, ಕೆಂಪು ಮತ್ತು ಶುಷ್ಕ ಚರ್ಮ, ಬೆವರುವಿಕೆ, ತ್ವರಿತ ನಾಡಿ, ಕಡಿಮೆ ರಕ್ತದೊತ್ತಡ, ಉಸಿರಾಟದ ತೊಂದರೆ ಮತ್ತು ಮೇಲ್ನೋಟಕ್ಕೆ ನಡೆಯುವುದು, ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳು, ಮೂರ್ ting ೆ. ರೋಗಲಕ್ಷಣಗಳು ಕಂಡುಬರುತ್ತವೆ ಸೈನ್ ಇನ್.

ಅಂತಹ ರೋಗಿಯು ವೈದ್ಯಕೀಯ ನೆರವು ಪಡೆಯುವವರೆಗೆ

ಅ. ತಂಪಾದ ಸ್ಥಳದಲ್ಲಿ ಬೆರೆಸಿ. ಅದರ ಮೇಲೆ ನೇರ ಸೂರ್ಯನ ಬೆಳಕು ಬೆಳಕು ಇರಬಾರದು.

ಆ. ಅವನ ಬಟ್ಟೆಗಳನ್ನು ಬಿಚ್ಚಿ.

ಇ. ತಣ್ಣೀರಿನಲ್ಲಿ ನೆನೆಸಿದ ಟವೆಲ್ ಅಥವಾ ಅಂತಹುದೇ ಉಡುಪುಗಳನ್ನು ಮುಖ, ಕುತ್ತಿಗೆ, ಎದೆ, ಕಾಲು ಇತ್ಯಾದಿಗಳಿಗೆ ಹಚ್ಚಬೇಕು. ಸಾಧ್ಯವಾದರೆ, ಎಲ್ಲಾ ಅಂಗಗಳನ್ನು ತಣ್ಣೀರಿನಿಂದ ಒರೆಸಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಿ.

ಈ. ತಲೆ, ಹಣೆಯ, ತೊಡೆ, ಮಣಿಕಟ್ಟು, ತೋಳುಗಳಿಗೆ ಐಸ್ ಹಾಕಿ. ‘

– ಡಾ. ದುರ್ಗೇಶ್ ಸಮಂತ್, ಸನಾತನ ಆಶ್ರಮ, ರಾಮನಾಥಿ, ಗೋವಾ.

2 ಇ 2. ಉಷ್ಣತೆಯಿಂದ ರಕ್ಷಿಸಲು ಮಾಡಬೇಕಾದ ಪೂರ್ವಸಿದ್ಧತೆ

ನಾವು ವಾಸಿಸುತ್ತಿರುವ ಪ್ರದೇಶಕ್ಕೆ ಉಷ್ಣಮಾರುತಗಳು ಬರುತ್ತಿದ್ದರೆ ಅಥವಾ ಅಲ್ಲಿ ಬಿಸಿಲು ತೀವ್ರವಾಗಿದ್ದರೆ, ಉಷ್ಣತೆಯಿಂದ ರಕ್ಷಣೆಯಾಗಲು ಮುಂದಿನ ಪೂರ್ವಸಿದ್ಧತೆಯನ್ನು ಮಾಡಬೇಕು.

2 ಇ 2 ಅ. ಮನೆಯ ಮೇಲ್ಛಾವಣಿ ಮತ್ತು ಗೋಡೆಯನ್ನು ತಂಪಾಗಿಡುವುದು : `ಮನೆಗೆ ಸ್ಲ್ಯಾಬ್‌ನ ಮೇಲ್ಛಾವಣಿ ಇದ್ದರೆ, ಅದನ್ನು ತಂಪಾಗಿಡುವ ಪದ್ಧತಿಗಳನ್ನು ಬಳಸಬಹುದು. ಮೇಲ್ಛಾವಣಿಯ ಮೇಲೆ ತರಕಾರಿಗಳನ್ನು ಅಥವಾ ಹೂವಿನ ಗಿಡಗಳನ್ನು ನೆಡಬಹುದು. ಅದಕ್ಕಾಗಿ ಹೂಕುಂಡಗಳ (flower pots) ಮತ್ತು ಮಡಿಕೆಗಳ ಉಪಯೋಗ ಮಾಡಬಹುದು. ಇದರಿಂದ ಬಿಸಿಲಿನ ತೊಂದರೆಯು ಕಡಿಮೆಯಾಗಲು ಸಹಾಯವಾಗುತ್ತದೆ. ಮನೆಯ ಗೋಡೆಗಳ ಮೇಲೆ ಬಳ್ಳಿಗಳನ್ನು ಬೆಳೆಸಬಹುದು. ಇದರಿಂದ ಗೋಡೆಗಳು ಸ್ವಲ್ ಪ್ರಮಾಣದಲ್ಲಿ ತಂಪಾಗುತ್ತವೆ.

2 ಇ 2 ಆ. ಕಿಟಕಿಗಳ ಗಾಜುಗಳಿಗೆ ತಾತ್ಕಾಲಿಕವಾಗಿ ಪರದೆಯನ್ನು ಹಾಕುವುದು : ಮನೆಯ ಕಿಟಕಿಗಳಿಂದ ಬಿರು ಬಿಸಿಲು ಮನೆಯೊಳಗೆ ಬರುವುದನ್ನು ತಡೆಗಟ್ಟಲು ಹೊರಗಿನಿಂದ ಲಾವಂಚದ ಪರದೆಯನ್ನು, ಕಾರ್ಡಬೋರ್ಡ್ ಮುಂತಾದವುಗಳನ್ನು ಬೇಸಿಗೆಗಾಲದ ಅವಧಿಯಲ್ಲಿ ಪರದೆಯೆಂದು ಹಾಕಬಹುದು. ಹಾಗೆಯೇ ಬಿಸಿಲನ್ನು ತಡೆಗಟ್ಟುವ ಗಾಜನ್ನೂ ಕೂಡಿಸಿಕೊಳ್ಳಬಹುದು.

2 ಇ 2 ಇ. ಮನೆಯಲ್ಲಿ ಹವಾನಿಯಂತ್ರವನ್ನು ಸ್ಥಾಪಿಸಲಾಗುತ್ತಿದೆ : ಉಷ್ಣಮಾರುತ ಬೀಸುವಾಗ ಮನೆಯಲ್ಲಿನ ವಾತಾವರಣವನ್ನು ತಂಪಾಗಿಡಲು ಸಾಧ್ಯವಿದ್ದರೆ ಹವಾನಿಯಂತ್ರಕವನ್ನು ಅಳವಡಿಸಿಕೊಳ್ಳಬಹುದು.

(ಆಧಾರ : ಪುಸ್ತಕ – ತೈರಾರಿ ಮೆ ಹೀ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)

2 ಇ 2 ಈ. ಹೊಸ ಮನೆಯನ್ನು ಕಟ್ಟುವಾಗ ಇದನ್ನು ಮಾಡಿರಿ : ಹೊಸ ಮನೆಯನ್ನು ಕಟ್ಟುವಾಗ ಉಷ್ಣತೆಯಿಂದ ರಕ್ಷಿಸಿಕೊಳ್ಳಲು ಕೆಲವು ಉಪಾಯಗಳನ್ನು ಬಳಸಬಹುದು. ದಪ್ಪನೆಯ ಗೋಡೆಗಳನ್ನು ಕಟ್ಟಬೇಕು. ಇದಕ್ಕಾಗಿ `ಕ್ಯಾವಿಟಿ ವಾಲ್’ನಿಂದ (ಇದರಲ್ಲಿ ಹೊರಗಡೆಯ ಗೋಡೆ ಮತ್ತು ಒಳಗಿನ ಗೋಡೆ ಹೀಗೆ 2 ಸಮಾಂತರ ಗೋಡೆಗಳ ನಡುವೆ ಕೆಲವು ಇಂಚು ಜಾಗ ಬಿಟ್ಟು ಕಟ್ಟಲಾಗುತ್ತದೆ. ಇದರಿಂದ ಹೊರಗಡೆಯ ಗೋಡೆಯ ಮೇಲೆ ಬಿಸಿಲಿನ ಉಷ್ಣತೆಯಿಂದಾಗಿ ಆಗುವ ಪರಿಣಾಮ ಮಧ್ಯದಲ್ಲಿ ಖಾಲ ಜಾಗ ಇರುವುದರಿಂದ ಒಳಗಿನ ಗೋಡೆಯ ಮೇಲೆ ಆಗುವುದಿಲ್ಲ.) ಒಳಗಿನ ಗೋಡೆಯು ತಣ್ಣಗಿದ್ದು ಮನೆಯಲ್ಲಿ ತಂಪು ಇರುತ್ತದೆ. ಬಣ್ಣವನ್ನು ಕೊಡುವಾಗ, ಸುಣ್ಣ ಅಥವಾ ಮಣ್ಣು ಇವುಗಳ ಬಳಕೆ ಮಾಡಬೇಕು. ಹಿಂದಿನ ಕಾಲದಲ್ಲಿ ಮಣ್ಣಿನ ಮನೆಗಳಿರುತ್ತಿದ್ದವು. ಆದುದರಿಂದ ಮನೆಯಲ್ಲಿ ತಂಪು ಇರುತ್ತಿತ್ತು. ಸಾಧ್ಯವಿದ್ದರೆ ಎಲ್ಲಿಯೂ ಗಾಜುಗಳ ಬಳಕೆ ಮಾಡಬಾರದು. ಮನೆಯನ್ನು ಕಟ್ಟುವಾಗ ಈ ಕ್ಷೇತ್ರದಲ್ಲಿನ ತಜ್ಞರ ಸಲಹೆಯನ್ನು ಪಡೆಯಬಹುದು.

– ವೈದ್ಯ ಮೇಘರಾಜ ಪರಾಡಕರ

2 ಇ 3. ಉಷ್ಣತೆಯಿಂದ ರಕ್ಷಣೆ ಪಡೆಯಲು ಇದನ್ನು ಮಾಡಿರಿ !

2 ಇ 3 ಅ. ಬೇಸಿಗೆಗಾಲದ ದಿನಗಳಲ್ಲಿ ಬಾಯಿ ಒಣಗುವ ಮೊದಲೇ ತಕ್ಷಣ ಆವಶ್ಯಕವಿದ್ದಷ್ಟು ನೀರನ್ನು ಕುಡಿಯಬೇಕು. ಪ್ರತಿಯೊಬ್ಬರ ಪ್ರಕೃತಿಗನುಸಾರ ನೀರಿನ ಪ್ರಮಾಣವು ಬೇರೆ ಇರುತ್ತದೆ. ನೀರು ಕುಡಿದು ಸಮಾಧಾನವಾಗುವ, ಬಾಯಾರಿಕೆ ಹೋಗುವ ಮತ್ತು ದಣಿವು ಆಗದಿರುವಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.

2 ಇ 3 ಆ. ಶೀತಕಪಾಟಿನ ನೀರು ಕುಡಿಯುವುದನ್ನು ತಪ್ಪಿಸಬೇಕು : ಶೀತಕಪಾಟಿನ ನೀರು ಕುಡಿಯದೇ ಮಡಕೆಯ ನೀರು, ಹಾಗೆಯೇ ಲಾವಂಚ, ಗುಲಾಬಿ ಹೂವಿನ ಪಕಳೆಗಳನ್ನು ಹಾಕಿ ನೈಸರ್ಗಿಕವಾಗಿ ತಂಪು ಮಾಡಿದ ನೀರನ್ನು ಕುಡಿಯಬೇಕು. ಶೀತಕಪಾಟಿನ ಅಥವಾ ಕೂಲರ್‌ಗಳ ತಂಪು ನೀರನ್ನು ಕುಡಿಯುವುದರಿಂದ ಗಂಟಲು, ಹಲ್ಲು ಮತ್ತು ಕರುಳುಗಳ ಮೇಲೆ ದುಷ್ಪರಿಣಾಮವಾಗುತ್ತದೆ, ಆದ್ದರಿಂದ ಸಾದಾ ಅಥವಾ ಮಡಕೆಯ ನೀರನ್ನು ಕುಡಿಯಬೇಕು. ಸವತೆಕಾಯಿ, ಟರಬೂಜ, ಕಲ್ಲಂಗಡಿ, ಡಾಳಿಂಬಗಳAತಹ ಕಾಲೋಚಿತ ಹಣ್ಣುಗಳನ್ನು ತಿನ್ನಬೇಕು.

2 ಇ 3 ಇ. ದ್ರವಪದಾರ್ಥಗಳನ್ನು ಆವಶ್ಯಕವಿರುವ ಪ್ರಮಾಣದಲ್ಲಿ ಸೇವಿಸಬೇಕು ! : ನಿಂಬೆ ಹಣ್ಣಿನ ಶರಬತ್ತು, ಪಾನಕಗಳು, ಲಸ್ಸಿ, ಮಜ್ಜಿಗೆ, ಅಕ್ಕಿಯ ಗಂಜಿಯ ನೀರು. ಓ.ಆರ್.ಎಸ್. (ಓರಲ್ ಡಿಹೈಡ್ರೆಶನ್ ಸೊಲ್ಯೂಶನ್), ತೆಂಗಿನ ನೀರು, ಕೊಕಮ್ ಶರಬತ್ತು, ಹಣ್ಣುಗಳ ರಸ ಮುಂತಾದ ದ್ರವಪದಾರ್ಥಗಳನ್ನು ಆವಶ್ಯಕವಿದ್ದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಯಾರಿಗೆ ವೈದ್ಯರು ಕಾರಣಾಂತರಗಳಿಂದ ಹೆಚ್ಚು ದ್ರವಪದಾರ್ಥವನ್ನು ತೆಗೆದುಕೊಳ್ಳಬಾರದು ಎಂಬ ಸಲಹೆ ನೀಡಿದ್ದಾರೆಯೋ ಅವರು, ಅಥವಾ ಪಿತ್ತಜನಕಾಂಗದ ಕಾಯಿಲೆ, ಹೃದಯಯೋಗ, ಫಿಟ್ಸ್ ಬರುವುದು ಮುಂತಾದ ಕಾಯಿಲೆಗಳು ಇರುವವರು ವೈದ್ಯರ ಸಲಹೆಯನ್ನು ಪಡೆಯಬೇಕು.

2 ಇ 3 ಈ. ಲಾವಂಚದ ನೀರನ್ನು ಕುಡಿಯುವುದು : ಲಾವಂಚದ ಬೇರುಗಳ 2 ಕಟ್ಟುಗಳನ್ನು ಜೊತೆಗೆ ಇಟ್ಟುಕೊಳ್ಳಬೇಕು. ಒಂದು ಕಟ್ಟನ್ನು ಕುಡಿಯುವ ನೀರಿನಲ್ಲಿ ಹಾಕಬೇಕು ಮತ್ತು ಇನ್ನೊಂದನ್ನು ಬಿಸಿಲಿನಲ್ಲಿ ಒಣಗಿಸಲು ಇಡಬೇಕು. ಮರುದಿನ ಬಿಸಿಲಿನಲ್ಲಿ ಒಣಗಿಸಿದ ಕಟ್ಟನ್ನು ಕುಡಿಯುವ ನೀರಿನಲ್ಲಿ ಮತ್ತು ನೀರಿನಲ್ಲಿಟ್ಟಿದ್ದ ಕಟ್ಟನ್ನು ಬಿಸಿಲಿನಲ್ಲಿಡಬೇಕು. ಇದರಂತೆ ಪ್ರತಿದಿನ ಮಾಡಬೇಕು. ಈ ಲಾವಂಚದ ನೀರು ಉಷ್ಣತೆಯ ಕಾಯಿಲೆಯನ್ನು ದೂರಮಾಡುತ್ತದೆ.

2 ಇ 3 ಉ. ಗಾಢವಾದ ಬಣ್ಣವು ಉಷ್ಣತೆಯನ್ನು ಸೆಳೆದುಕೊಳ್ಳುತ್ತದೆ. ಆದ್ದರಿಂದ ಗಾಢ ಬಣ್ಣ ಇರದ ಹತ್ತಿಯ  ಮತ್ತು ಸಡಿಲು ಬಟ್ಟೆಗಳನ್ನು ಧರಿಸಬೇಕು.

2 ಇ 3 ಊ.ಮನೆಯ ಹೊರಗೆ ಹೋಗುವವರಿದ್ದರೆ, ತಲೆಯ ಮೇಲೆ ಟೊಪ್ಪಿಗೆ, ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಅಥವಾ ಛತ್ರಿಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಬಿಸಿಲಿನಿಂದ ಕಣ್ಣುಗಳ ರಕ್ಷಣೆಯಾಗಲು ಕನ್ನಡಕ (ಗಾಗಲ್), ಹಾಗೆಯೇ ಚರ್ಮಕ್ಕಾಗಿ ಸನ್‌ಸ್ಕ್ರೀನ್ ಕ್ರೀಮ್ ಕೂಡ ಬಳಸಿ.

2 ಇ 3 ಋ. ಚಿಕ್ಕ ಮಕ್ಕಳು, ರೋಗಿಗಳು, ಸ್ಥೂಲಕಾಯದವರು ಮತ್ತು ವೃದ್ಧರು ಈ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಈ ವ್ಯಕ್ತಿಗಳಿಗೆ ಉಷ್ಣತೆಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಉಷ್ಣತೆಯಿಂದ ಇವರಿಗೆ ಅಸ್ವಸ್ಥವೆನಿಸತೊಡಗುತ್ತದೆ. ಆದ್ದರಿಂದ ಅವರಿಗೆ ಉಷ್ಣತೆಯ ಕಾವು ತಾಗದಂತೆ ಕಾಳಜಿವಹಿಸಬೇಕು.

2 ಇ 3 ಎ. ಹೊರಗೆ ಕೆಲಸ ಮಾಡುವವರು ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು. ಆ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯಬೇಕು.

2 ಇ 3 ಏ. ಉಷ್ಣಾಘಾತದ ತೊಂದರೆಯಾದ ವ್ಯಕ್ತಿಯ ಶರೀರದಲ್ಲಿನ ತಾಪಮಾನವನ್ನು ಕಡಿಮೆ ಮಾಡಲು ಹಣೆಯ ಮೇಲೆ ತಣ್ಣೀರಿನಲ್ಲಿ ಅದ್ದಿ ತೆಗೆದ ಬಟ್ಟೆಯ ಪಟ್ಟಿಯನ್ನು ಇಡಬೇಕು. ಅದನ್ನು ಸತತವಾಗಿ ಒದ್ದೆ ಮಾಡುತ್ತಿರಬೇಕು. ಬವಳಿ ಬರುತ್ತಿದ್ದರೆ ಅಥವಾ ಅಸ್ವಸ್ಥವೆನಿಸುತ್ತಿದ್ದರೆ, ತಕ್ಷಣ ಡಾಕ್ಟರರನ್ನು ಸಂಪರ್ಕಿಸಬೇಕು.

(ಆಧಾರ : ಪುಸ್ತಕ – ತೈರಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)

2 ಇ 3 ಐ. ಬೆಳಗ್ಗೆ ಹಲ್ಲುಗಳನ್ನು ತಿಕ್ಕಿದ ನಂತರ ಹಸುವಿನ ತುಪ್ಪದ ಅಥವಾ ಕೊಬ್ಬರಿ ಎಣ್ಣೆಯ 2-2 ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಇದಕ್ಕೆ ‘ನಸ್ಯ’ವೆಂದು ಹೇಳುತ್ತಾರೆ. ಇದರಿಂದ ತಲೆ ಮತ್ತು ಕಣ್ಣುಗಳಲ್ಲಿನ ಉಷ್ಣತೆಯು ಕಡಿಮೆಯಾಗುತ್ತದೆ.

2 ಇ 3 ಒ. ಉಷ್ಣ ವಾತಾವರಣದಿಂದ ತಂಪು ವಾತಾವರಣಕ್ಕೆ ಬಂದ ನಂತರ ತಕ್ಷಣ ನೀರು ಕುಡಿಯಬಾರದು. 10-15 ನಿಮಿಷಗಳ ನಂತರವೇ ನೀರು ಕುಡಿಯಬೇಕು.

2 ಇ 3 ಓ. ಪಾದಕ್ಕೆ ಬಿರುಕು ಬೀಳುವುದು ಮತ್ತು ಉಷ್ಣತೆಯ ತೊಂದರೆಗಳಾಗುತ್ತಿದ್ದರೆ ಕೈಕಾಲುಗಳಿಗೆ ಮೆಹಂದಿ ಹಚ್ಚಬೇಕು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (8.4.2014)

2 ಇ 4. ಉಷ್ಣತೆಯಿಂದ ರಕ್ಷಣೆ ಪಡೆಯಲು ಇವುಗಳನ್ನು ಮಾಡುವುದನ್ನು ತಪ್ಪಿಸಿ !

2 ಇ 4 ಅ. ‘ಸಾಧ್ಯವಾದಷ್ಟು ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಿ. ಬರಿಗಾಲಿನಲ್ಲಿ ಹೊರಗೆ ಹೋಗಬೇಡಿ. ವಿಶೇಷವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ಹೊರಗೆ ಹೋಗಬೇಡಿ.

2 ಇ 4 ಆ. ಮಧ್ಯಾಹ್ನದ ಸಮಯದಲ್ಲಿ ಭೋಜನ ಅಥವಾ ಇತರ ಯಾವುದೇ ಪದಾರ್ಥವನ್ನು ಬೇಯಿಸಬಾರದು. ಹಾಗೆ ಮಾಡಿದರೆ ಮನೆಯಲ್ಲಿನ ಉಷ್ಣತೆ ಹೆಚ್ಚಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅಡುಗೆಮನೆಯಲ್ಲಿ ಅಡುಗೆ ತಯಾರಿಸುವಾಗ ಕಿಟಕಿಗಳನ್ನು ತೆರೆದಿಡಬೇಕು.

2 ಇ 4 ಇ. ಚಹಾ, ಕಾಫಿ, ಮದ್ಯಪಾನ ಮಾಡುವುದನ್ನು ತಪ್ಪಿಸಿ.

2 ಇ 4 ಈ. ಹೆಚ್ಚು ಉಷ್ಣತೆಯನ್ನು ಪ್ರಕ್ಷೇಪಿಸುವ ಹೆಚ್ಚು ವ್ಯಾಟ್‌ನ ದೀಪಗಳನ್ನು, ಹ್ಯಾಲೋಜಿನ್ ಹಚ್ಚುವುದನ್ನು ತಪ್ಪಿಸಬೇಕು. ‘

(ಆಧಾರ : ಪುಸ್ತಕ – ತೈರಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)

2 ಇ 4 ಉ. ‘ವ್ಯಾಯಾಮ, ಪರಿಶ್ರಮ, ಉಪವಾಸ ಇವುಗಳನ್ನು ಅತಿಯಾಗಿ ಮಾಡಬಾರದು. ಬಿಸಿಲಿನಲ್ಲಿ ನಡೆಯುವುದು, ಬಾಯಾರಿಕೆ, ಮತ್ತು ಹಸಿವನ್ನು ತಡೆಹಿಡಿಯುವುದು ಇತ್ಯಾದಿ ವಿಷಯಗಳನ್ನು ತಪ್ಪಿಸಬೇಕು.

2 ಇ 4 ಊ. ರುಚಿಕರ, ಒಣ, ಹಳಸಿದ, ಉಪ್ಪು, ಅತಿ ಖಾರ, ಮಸಾಲೆಯುಕ್ತ ಮತ್ತು ಕರಿದ ಪದಾರ್ಥಗಳು, ಹಾಗೆಯೇ ಆಮಚೂರ, ಉಪ್ಪಿನಕಾಯಿ, ಹುಣಸೆಹಣ್ಣು ಇತ್ಯಾದಿ ಹುಳಿ ಪದಾರ್ಥಗಳಿಂದ ಪಿತ್ತವು ಹೆಚ್ಚಾಗುತ್ತದೆ. ಪಿತ್ತವು ಹೆಚ್ಚಾಗುವುದರಿಂದ ಉಷ್ಣತೆಯ ತೊಂದರೆಯು ಹೆಚ್ಚಾಗುತ್ತದೆ. ಆದುದರಿಂದ ಈ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು.

2 ಇ 4 ಋ. ತಂಪು ಪಾನಿಯಗಳು (cold drinks), ಐಸ್‌ಕ್ರೀಮ್, ರಸಾಯನಗಳನ್ನು ಬಳಸಿ ಮಾಡಿದ ಹಣ್ಣುಗಳ ಬಂದ್ ಬಾಟಲಿಯ ರಸಗಳನ್ನು ಸೇವಿಸಬಾರದು. ಈ ಪದಾರ್ಥಗಳು ಪಚನಶಕ್ತಿಯನ್ನು ಕೆಡಿಸುತ್ತವೆ. ಇವುಗಳ ಅತಿಸೇವನೆಯಿಂದ ರಕ್ತ ದೂಷಿತವಾಗಿ ಚರ್ಮರೋಗವು ಬರುತ್ತದೆ.

2 ಇ 4 ಎ. ಈ ಋತುವಿನಲ್ಲಿ ಮೊಸರು ತಿನ್ನಬಾರದು. ಅದಕ್ಕೆ ಬದಲು ಸಕ್ಕರೆ ಮತ್ತು ಜೀರಿಗೆಯನ್ನು ಹಾಕಿ ಸಿಹಿ ಮಜ್ಜಿಗೆಯನ್ನು ಕುಡಿಯಬಹುದು.

2 ಇ 4 ಏ. ಕಡು ಬಿಸಿಲಿನಲ್ಲಿ ಹೋಗುವುದಿದ್ದರೆ, ನೀರು ಕುಡಿದು ಹೋಗಬೇಕು. ತಲೆ ಮತ್ತು ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಲು ಟೊಪ್ಪಿಗೆ ಮತ್ತು ಗಾಗಲ್‌ನ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಚಪ್ಪಲಿಗಳನ್ನು ಧರಿಸಬಾರದು.

2 ಇ 4 ಐ. ಮೈಥುನ ಮಾಡುವುದನ್ನು ತಪ್ಪಿಸಬೇಕು. ಮಾಡುವುದಿದ್ದರೆ 15 ದಿನಗಳಿಗೊಮ್ಮೆ ಮಾಡಬೇಕು.

2 ಇ 4 ಒ. ತಡರಾತ್ರಿಯವರೆಗೆ ಎಚ್ಚರವಾಗಿರುವುದು ಮತ್ತು ಬೆಳಗ್ಗೆ ಸೂರ್ಯೋದಯದ ನಂತರವೂ ಮಲಗುವುದನ್ನು ತಪ್ಪಿಸಬೇಕು.’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (8.4.2014)

2 ಇ 5. ಸಾಕುಪ್ರಾಣಿಗಳ ಸಂರಕ್ಷಣೆಗಾಗಿ ಇವನ್ನು ಮಾಡಿರಿ !

2 ಇ 5 ಅ. ಪಶುಗಳನ್ನು ನೆರಳಿನಲ್ಲಿ ಕಟ್ಟಿ ಹಾಕಬೇಕು ಮತ್ತು ಅವುಗಳಿಗೆ ಕುಡಿಯಲು ಸ್ವಚ್ಛ, ತಂಪಾದ ಮತ್ತು ಸಾಕಷ್ಟು ನೀರನ್ನು ಕೊಡಬೇಕು.

2 ಇ 5 ಆ. ಬೆಳಗ್ಗೆ 11 ರಿಂದ ಮಧ್ಯಾಹ್ನ 4 ರ ಸಮಯದಲ್ಲಿ ಅವುಗಳಿಂದ ಕೆಲಸವನ್ನು ಮಾಡಿಸಿಕೊಳ್ಳಬಾರದು ಅಥವಾ ಹೊರಗೆ ಬಿಡಬಾರದು.

2 ಇ 5 ಇ. ಗೋಶಾಲೆ ಇದ್ದರೆ ಅಥವಾ ಪಶುಗಳಿಗಾಗಿ ಚಪ್ಪರವಿದ್ದರೆ ಅದರ ಮೇಲ್ಛಾವಣಿಯನ್ನು ತಂಪಾಗಿರಿಸಲು ಪ್ರಯತ್ನಿಸಬೇಕು. ಮೇಲ್ಛಾವಣಿಯ ಮೇಲೆ ತೆಂಗಿನಗರಿಗಳು, ಹಸಿ ಹುಲ್ಲನ್ನಿಟ್ಟು ಅದನ್ನು ನೀರಿನಿಂದ ತೋಯಿಸಿದರೆ ಮೇಲ್ಛಾವಣಿಯು ತಂಪಾಗಿರುತ್ತದೆ.

2 ಇ 5 ಈ. ಸಾಧ್ಯವಿದ್ದರೆ ಅಲ್ಲಿ ಪಂಖಾ ಮತ್ತು ಕೂಲರ್ ಹಚ್ಚಬಹುದು.

2 ಇ 5 ಉ. ಉಷ್ಣತೆಯು ಹೆಚ್ಚಾದರೆ ಪ್ರಾಣಿಗಳ ಮೇಲೆ ನೀರನ್ನು ಸಿಂಪಡಿಸಬೇಕು.

(ಆಧಾರ :  ಪುಸ್ತಕ – ತೈರಾರಿ ಮೆ ಹಿ ಸಮಝದಾರಿ : ಆಪದಾ ಸೆ ಬಚನೆ ಕೆ ಸರಲ ಉಪಾಯ)

Leave a Comment