೨೦೧೯ ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಭಯಂಕರ ನೆರೆ (ಪ್ರವಾಹ) ಬಂದಾಗ ‘ಯಾವ ಯೋಗ್ಯ ಕೃತಿಗಳನ್ನು ಮಾಡಬೇಕು ?’ ಎಂಬುದರ ಬಗ್ಗೆ ಅರಿವಿಲ್ಲದ ಕಾರಣ ಅನೇಕ ನಾಗರಿಕರು ಗೊಂದಲದಕ್ಕೀಡಾದರು. ಇಂತಹ ಪ್ರಸಂಗಗಳಲ್ಲಿ ಜನರಿಂದ ಅಯೋಗ್ಯ ಕೃತಿಗಳನ್ನು ಮಾಡುವ ಅಥವಾ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಬಾರದೆಂದು ‘ಪ್ರತ್ಯಕ್ಷ ಪ್ರವಾಹದ ಸ್ಥಿತಿ ಉದ್ಭವಿಸಿದರೆ ಯಾವ ಕಾಳಜಿಯನ್ನು ವಹಿಸಬೇಕು, ನೆರೆ ಬಂದಾಗ ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಬೇಕಾದರೆ ಏನು ಮಾಡಬೇಕು ?, ಹಾಗೆಯೇ ಪ್ರವಾಹ ಇಳಿದ ನಂತರ ತೆಗೆದುಕೊಳ್ಳಬೇಕಾದ ಕಾಳಜಿ, ಈ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಮುಂದೆ ಕೊಡಲಾಗಿದೆ.
೪. ನೆರೆಪೀಡಿತ ಪ್ರದೇಶದಲ್ಲಿನ ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗುವಾಗ ಏನು ಮಾಡಬೇಕು ?
ಅ. ಮನೆಬಿಟ್ಟು ಹೊರಗೆ ಹೋಗುವ ಪ್ರಸಂಗ ಬಂದರೆ ಮೊದಲು ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ವೃದ್ಧ ವ್ಯಕ್ತಿಗಳನ್ನು ಕಳುಹಿಸಬೇಕು.
ಆ. ಮನೆಯ ವಿದ್ಯುತ್ ಪ್ರವಾಹದ ಮುಖ್ಯ ಬಟನ್ (ಮೇನ್ ಸ್ವಿಚ್)ನ್ನು ಬಂದ್ ಮಾಡಿ ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸಬೇಕು. ದೂರದರ್ಶನ ಉಪಕರಣ (ಟಿ.ವಿ), ಮಿಕ್ಸರ್ ಮುಂತಾದ ಉಪಕರಣಗಳ ಪಿನ್‌ಗಳನ್ನು ‘ಸಾಕೆಟ್’ನಿಂದ ತೆಗೆದಿಡಬೇಕು.
ಇ. ತಂಪು ಪೆಟ್ಟಿಗೆ (ಫ್ರಿಜ್), ವಾಶಿಂಗ್ ಮಶೀನ್, ಗಣಕಯಂತ್ರ ಅಥವಾ ಸಂಚಾರಿ ಗಣಕಯಂತ್ರ (ಲ್ಯಾಪ್ ಟಾಪ್), ದೂರದರ್ಶನ ಉಪಕರಣ ಮುಂತಾದ ಉಪಕರಣಗಳಲ್ಲಿ ನೀರು ಹೋಗಬಾರದೆಂದು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು.
ಈ. ಮನೆಯಲ್ಲಿನ ಮರದ ಸಾಹಿತ್ಯಗಳನ್ನು ಸಾಧ್ಯವಿದ್ದಷ್ಟು ಎತ್ತರದಲ್ಲಿಡಬೇಕು. ನೀರಿನಲ್ಲಿ ಒದ್ದೆಯಾಗಿ ಹಾಳಾಗಬಾರದೆಂಬ ದೃಷ್ಟಿಯಿಂದ ಮಹತ್ವದ ಕಾಗದಪತ್ರ, ಹಾಗೆಯೇ ಬೆಲೆಬಾಳುವ ವಸ್ತುಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಮ್ಮೊಂದಿಗೆ ಇಟ್ಟುಕೊಳ್ಳಬೇಕು.
ಉ. ಮನೆಯ ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ವ್ಯವಸ್ಥಿತವಾಗಿ ಮುಚ್ಚಬೇಕು. ಕಪಾಟಿನ ಬಾಗಿಲುಗಳನ್ನು ಪೂರ್ತಿ ಮುಚ್ಚಬೇಕು.
ಊ. ಆದಷ್ಟು ತಂಪುಪೆಟ್ಟಿಗೆಯನ್ನು ಖಾಲಿ ಮಾಡಿ ಅದನ್ನು ಮುಚ್ಚಿಡಬೇಕು. ಅಡುಗೆ ಮನೆಯಲ್ಲಿನ ‘ಗ್ಯಾಸ್ ಸಿಲಿಂಡರ್’ನ ಮುಖ್ಯ ಕ್ನಾಬ್ ಬಂದ್ ಮಾಡಬೇಕು.
ಋ. ಹಾಳಾಗುವಂತಹ ಯಾವುದೇ ವಸ್ತುಗಳನ್ನು ಮನೆಯಲ್ಲಿ (ಉದಾ. ತರಕಾರಿ, ಹಣ್ಣುಗಳು, ಹಾಲು) ಇಡಬಾರದು.
ಎ. ಹೊರಗಿನ ಚರಂಡಿಗಳು ತುಂಬಿದರೆ ಶೌಚಾಲಯದ ಕಮೋಡನಿಂದ ಅಸ್ವಚ್ಛ ನೀರು ಮನೆಯಲ್ಲಿ ಒಳಗೆ ಬರುತ್ತದೆ. ಆದ್ದರಿಂದ ಮನೆಯನ್ನು ಮುಚ್ಚಿ ಹೋಗಬೇಕಾದಾಗ ಅಥವಾ ನೀರಿನ ಪ್ರವಾಹ ಹೆಚ್ಚಾದರೆ ಸಿಮೇಂಟಿನ ಚೀಲದಲ್ಲಿ ಉಸುಕು ತುಂಬಿ ಆ ಚೀಲನ್ನು ಭಾರತೀಯ ಶೌಚಾಲಯದ ಅಥವಾ ಕಮೋಡಿನ ಪಾತ್ರೆಯಲ್ಲಿಡಬೇಕು. ಅದರಿಂದ ಅಸ್ವಚ್ಛ ನೀರು ಮನೆಯಲ್ಲಿ ಬರುವುದಿಲ್ಲ.
ಏ. ಸ್ಥಳಾಂತರವಾಗುವಾಗ ತಮ್ಮೊಂದಿಗೆ ಬೇಕಾಗುವಷ್ಟು ಬಟ್ಟೆ ಮತ್ತು ಇತರ ಜೀವನಾವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಬೇಕು.
೫. ಪ್ರವಾಹದ ಸಮಯದಲ್ಲಿ ಮನೆಯಿಂದ ಹೊರಗೆ ನಡೆದಾಡುವಾಗ ಈ ಕಾಳಜಿಗಳನ್ನು ತೆಗೆದುಕೊಳ್ಳಬೇಕು
ಅ. ಹರಿಯುವ ನೀರಿನಲ್ಲಿ ನಡೆದುಕೊಂಡು ಹೋಗಬಾರದು. ನೀರಿನಲ್ಲಿ ನಡೆಯುವುದಿದ್ದರೆ, ಎಲ್ಲಿ ಹರಿಯುವ ನೀರು ಇಲ್ಲವೋ, ಅಲ್ಲಿಂದ ನಡೆದುಕೊಂಡು ಹೋಗಬೇಕು. ಕಾಲು ಇಡುವ ಸ್ಥಳವು ಗಟ್ಟಿಮುಟ್ಟಾಗಿದೆ ಎಂದು ತಿಳಿದುಕೊಳ್ಳಲು ಕೋಲನ್ನು ಉಪಯೋಗಿಸಬೇಕು.
ಆ. ಪ್ರವಾಹದ ನೀರಿನಲ್ಲಿ ಆದಷ್ಟು ವಾಹನಗಳನ್ನು ಚಲಾಯಿಸಬಾರದು. ನಾಲ್ಕು ಚಕ್ರಗಳ ವಾಹನ ನೆರೆ ನೀರಿನಲ್ಲಿದ್ದರೆ ಮತ್ತು ಅಕ್ಕಪಕ್ಕದಲ್ಲಿ ನೆರೆಯ ನೀರು ಹೆಚ್ಚಾಗುತ್ತಿದ್ದರೆ, ಕೂಡಲೇ ವಾಹನವನ್ನು ಅಲ್ಲಿಯೇ ಬಿಟ್ಟು ಎತ್ತರದ ಸ್ಥಳಕ್ಕೆ ಹೋಗಬೇಕು.
ಇ. ಮಳೆಯಿಂದ ಎಲ್ಲ ಕಡೆಗಳಲ್ಲಿ ಪಸೆಯಿದ್ದರೆ ಯಾವುದೇ ವಿದ್ಯುತ್ ಕಂಬವನ್ನು ಸ್ಪರ್ಶಿಸಬಾರದು. ಪರಿಸರದಲ್ಲಿ ಮರಗಳು ಬಿದ್ದಿದ್ದಲ್ಲಿ, ವಿದ್ಯುತ್ ತಂತಿಗಳು ಮುರಿದು ಬಿದ್ದಿದ್ದಲ್ಲಿ, ಅವುಗಳನ್ನು ಸ್ಪರ್ಶಿಸಬಾರದು. ಅಗ್ನಿಶಾಮಕ ದಳ ಹಾಗೂ ವಿದ್ಯುತ್ ಮಂಡಳಿಯವರಿಗೆ ತಿಳಿಸಬೇಕು. ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ಮುಟ್ಟಬಾರದು; ಏಕೆಂದರೆ ಆ ಮರಗಳೊಂದಿಗೆ ವಿದ್ಯುತ್ ತಂತಿಗಳು ಬಿದ್ದಿರುವ ಸಾಧ್ಯತೆ ಇರುತ್ತದೆ.
ಪ್ರವಾಹದ ಸಮಯದಲ್ಲಿ ಮನೆಯಿಂದ ಹೊರಬರುವಾಗ ತಮ್ಮೊಂದಿಗೆ ಇಟ್ಟುಕೊಳ್ಳಬೇಕಾದ ವಸ್ತುಗಳು
ಅ. ಬೆಲೆಬಾಳುವ ವಸ್ತುಗಳು, ಮಹತ್ವದ ಕಾಗದಪತ್ರಗಳು ಮತ್ತು ಹಣ
ಆ. ಪ್ರಥಮೋಪಚಾರ ಪೆಟ್ಟಿಗೆ, ಔಷಧಿಗಳು, ಸೊಳ್ಳೆಗಳನ್ನು ಓಡಿಸುವ ಊದುಕಡ್ಡಿ (ಮೊಸ್ಕಿಟೋ ರಿಪ್ಪೆಲೆಂಟ್ ಕಾಯಿಲ್) ಅಥವಾ ಸೊಳ್ಳೆ ದೂರವಿಡುವ ಲೇಪನ (ಮೊಸ್ಕಿಟೋ ರಿಪ್ಪೆಲೆಂಟ್ ಕ್ರೀಮ್)
ಇ. ಲೈಫ್ ಜಾಕೆಟ್, ಟಯರ ಟ್ಯೂಬ್, ಟಾರ್ಚ್ ಅದೇ ರೀತಿ ಸೀಟಿ
ಈ. ತಾವು ಪೂಜಿಸುವ ದೇವತೆಗಳ ಮೂರ್ತಿ ಅಥವಾ ಚಿತ್ರ
ಉ. ಸಂಚಾರವಾಣಿ ಹಾಗೂ ಚಾರ್ಜರ್
ಊ. ಛತ್ರಿ. ರೇನ್‌ಕೋಟ್, ಮಳೆಗಾಲದಲ್ಲಿ ಉಪಯೋಗಿಸುವ ಬೂಟು
ಋ. ಬೇಕಾಗುವಷ್ಟು ಬಟ್ಟೆ, ಇತರ ಜೀವನಾವಶ್ಯಕ ವಸ್ತುಗಳು
ಎ. ಕುರುಕುಲು (ಒಣ) ತಿಂಡಿ ಹಾಗೂ ನೀರಿನ ಬಾಟಲಿಗಳು
೬. ಪ್ರವಾಹ ಕಡಿಮೆಯಾದ ನಂತರ ತೆಗೆದುಕೊಳ್ಳಬೇಕಾದ ಕಾಳಜಿ
ಅ. ನೀರು ಕಡಿಮೆಯಾಗತೊಡಗಿದಾಗ ಬೇರೆಡೆ ಹೋಗಿದ್ದ ಜನರು ತಮ್ಮ ಮನೆಗಳಿಗೆ ಹಿಂತಿರುಗತೊಡಗುತ್ತಾರೆ. ‘ತಮ್ಮ ಕ್ಷೇತ್ರ ಅಥವಾ ಊರು ಪುನರ್ವಸತಿಗಾಗಿ ಸುರಕ್ಷಿತವಾಗಿದೆ’, ಎಂದು ಸರಕಾರ ಹೇಳಿದ ನಂತರವೇ ಮನೆಗೆ ಹೋಗಬೇಕು.
ಆ. ಮಣ್ಣಿನ ಮನೆ ಇದ್ದಲ್ಲಿ ‘ಅದು ಸುರಕ್ಷಿತವಾಗಿದೆಯೇ ?’, ಇದರ ಬಗ್ಗೆ ಅನುಭವಿ ವ್ಯಕ್ತಿಯಿಂದ ಖಚಿತಪಡಿಸಿಕೊಳ್ಳಬೇಕು.
ಇ. ವಿದ್ಯುತ್ ಮಂಡಳಿಯು ವಿದ್ಯುತ್ತನ್ನು ಉಪಯೋಗಿಸುವ ಬಗ್ಗೆ ಸೂಚನೆ ನೀಡುವ ತನಕ ವಿದ್ಯುತ್ತನ್ನು ಉಪಯೋಗಿಸಬಾರದು. ವಿದ್ಯುತ್ ಪ್ರವಾಹ ಆರಂಭಿಸಿದ ನಂತರ ‘ಅದು ಯಾವುದೇ ಅಡಚಣೆ ಇಲ್ಲದೇ ಆರಂಭವಾಗಿದೆಯೇ?’, ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ೩-೪ ದಿನಗಳ ನಂತರವೇ ಮನೆಯಲ್ಲಿನ ಉಪಕರಣಗಳಿಗೆ ವಿದ್ಯುತ್ತನ್ನು ಜೋಡಿಸಬೇಕು.
ಈ. ವಾಹನಗಳು, ವಿದ್ಯುತ್ ಉಪಕರಣಗಳು, ಅದೇರೀತಿ ಮನೆಯಲ್ಲಿನ ವಸ್ತುಗಳು ಹೊಸದಾಗಿದ್ದರೆ ಹಾಗೂ ಅವುಗಳ ವಿಮೆ(ಇನ್ಶುರೆನ್ಸ್) ಇದ್ದರೆ ಹಾಗೂ ನೈಸರ್ಗಿಕ ವಿಪತ್ತಿನಿಂದಾಗಿ ಆಗಿರುವ ನಷ್ಟ ಪರಿಹಾರ ಸಿಗಬಹುದಾದರೆ ಮುಂದೆ ತಿಳಿಸಿದಂತೆ ಮಾಡಿ. ವಿಮೆ ಪ್ರತಿನಿಧಿಯನ್ನು ಸ್ವತಃ ಕರೆದು ಫೋಟೋ ತೆಗಿಸಿ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು, ಹೀಗೆ ಮಾಡುವುದು ಸಾಧ್ಯವಿಲ್ಲದಿದ್ದರೆ ವಿಮೆಯ ಪ್ರತಿನಿಧಿಯ ಮಾರ್ಗದರ್ಶನವನ್ನು ಪಡೆದು ಹಾನಿಗೊಳಗಾಗಿರುವ ವಸ್ತುಗಳನ್ನು ಸರಿ ಮಾಡಿಕೊಳ್ಳುವ ಮೊದಲು ಅವುಗಳ ಛಾಯಾಚಿತ್ರಗಳನ್ನು ತೆಗೆಯಬೇಕು ಹಾಗೂ ತಾವೇ ಅವುಗಳ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು.
ಉ. ಸಿಲಿಂಡರಿನಿಂದ ಅನಿಲ ಸೋರುತ್ತಿದ್ದರೆ ವಿದ್ಯುತ್ತಿನ ಮುಖ್ಯ ಬಟನ್ (ಮೇನ್‌ಸ್ವಿಚ್) ಅನ್ನು ಬಂದ ಮಾಡಬೇಕು. ಆ ಸಮಯದಲ್ಲಿ ಮನೆಯಲ್ಲಿ ಫ್ಯಾನ್, ದೀಪ ಇತ್ಯಾದಿಗಳು ನಡೆಯುತ್ತಿದ್ದರೆ ಅವುಗಳನ್ನು ಬಂದ್ ಮಾಡಬಾರದು; ಯಾವುದೇ ವಿದ್ಯುತ್ ಉಪಕರಣವನ್ನು ಆರಂಭಿಸಿದರೆ ಅಥವಾ ಬಂದ್ ಮಾಡಿದರೆ ಮನೆಯಲ್ಲಿ ಸ್ಫೋಟವಾಗಬಹುದು.
ಸಿಲಿಂಡರನ್ನು ಗಾಳಿಯ ಸಂಪರ್ಕದಲ್ಲಿ ಬರುವಂತಹ ಸ್ಥಳದಲ್ಲಿ (ಉದಾ : ಅಂಗಳದಲ್ಲಿ) ಇಡಬೇಕು. ಮನೆಯಲ್ಲಿ ಅನಿಲದ ವಾಸನೆ ಹರಡಿದ್ದಲ್ಲಿ ವಿದ್ಯುತ್ ಬಟನ್ನಗಳನ್ನು ಹಚ್ಚುವುದು ಅಥವಾ ಆರಿಸುವುದು ಮಾಡಬಾರದು. ಮನೆಯಲ್ಲಿನ ಕಿಟಕಿ ಹಾಗೂ ಬಾಗಿಲಗಳನ್ನು ತೆರೆಯಬೇಕು. ಇದರಿಂದ ಮನೆಯಲ್ಲಿ ಹರಡಿದ್ದ ಅನಿಲ ಗಾಳಿಯಿಂದ ಹೊರಗೆ ಹೋಗುತ್ತದೆ.
ಊ. ಮನೆಯ ಗೋಡೆ, ವಿದ್ಯುತ್ ಉಪಕರಣಗಳು (ಫ್ಯಾನ್, ದೀಪ, ಬಟ್ಟೆ ತೊಳೆಯುವ ಯಂತ್ರ, ಮಿಕ್ಸರ್) ಅದೇರೀತಿ ಸ್ವಿಚ್ ಬೋರ್ಡ್ ಒದ್ದೆಯಾಗಿದ್ದರೆ ವಿದ್ಯುತ್ ಪ್ರವಾಹವನ್ನು ಆರಂಭಿಸುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರಿಂದ ವಿದ್ಯುತ್ ಶಾಕ್ ತಾಗಬಹುದು. ಮನೆ ಒಣಗಿದ ನಂತರ ಹಾಗೂ ವಿದ್ಯುತ್ ತಜ್ಞರು (ಇಲೆಕ್ಟ್ರಿಶಿಯನ್) ಪರೀಕ್ಷಿಸಿದ ನಂತರವೇ ವಿದ್ಯುತ್ ಪ್ರವಾಹವನ್ನು ಆರಂಭಿಸಬೇಕು.
ಋ. ಪ್ರವಾಹದ ನೀರಿನೊಂದಿಗೆ ಹಾವು, ಚೇಳು, ಹೆಗ್ಗಣ, ಕಪ್ಪೆ, ಇಲಿ ಮುಂತಾದ ಪ್ರಾಣಿಗಳು ಮನೆಯಲ್ಲಿ ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಕೆಳಗಿಟ್ಟಿರುವ, ಅದೇರೀತಿ ಇಕ್ಕಟ್ಟಿನ ಸ್ಥಳಗಳಲ್ಲಿ ಇಟ್ಟಿರುವ ವಸ್ತುಗಳನ್ನು ಜಾಗರೂಕತೆಯಿಂದ ಎತ್ತಬೇಕು.
ಎ. ಮನೆಯಲ್ಲಿ ಕೆಸರು ಆಗಿದ್ದಲ್ಲಿ, ಅದನ್ನು ಸ್ವಚ್ಛ ಮಾಡುವಾಗ ಹಾಗೂ ಅಲ್ಲಿರುವ ವಸ್ತುಗಳನ್ನು ಎತ್ತಿಡುವಾಗ ಕಾಲಿಗೆ ದಪ್ಪ ಬೂಟುಗಳನ್ನು ಹಾಕಿಕೊಳ್ಳುವುದು, ಕೈಗಳಿಗೆ ಕೈಗವಸುಗಳನ್ನು ಹಾಕಿಕೊಳ್ಳುವಂತಹ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಇದರಿಂದ ಕೆಸರಿನಲ್ಲಿ ಹರಿತವಾದ ವಸ್ತು (ಕತ್ತರಿ, ಚಾಕು) ಇದ್ದಲ್ಲಿ ಗಾಯವಾಗಲಾರದು, ಅದೇರೀತಿ ವಿಷಕಾರಿ ಜೀವಗಳಿಂದ ರಕ್ಷಣೆಯಾಗುವುದು.
ಏ. ಪ್ರವಾಹದ ನೀರಿನ ಸಂಪರ್ಕ ಬಂದಿರುವ ವಸ್ತುಗಳನ್ನು (ಉದಾ : ಮರದ ಫರ್ನಿಚರ, ಬಟ್ಟೆ, ಪಾತ್ರೆ ಇತ್ಯಾದಿ) ಉಪಯೋಗಿಸುವ ಮೊದಲು ಅವುಗಳನ್ನು ಸ್ವಚ್ಛವಾಗಿ ಒರೆಸಿಕೊಳ್ಳಬೇಕು ಅಥವಾ ತೊಳೆದುಕೊಳ್ಳಬೇಕು. ಮನೆಯಲ್ಲಿನ ಕಬ್ಬಿಣದ ವಸ್ತುಗಳಿಗೆ (ಕಪಾಟು, ಮಂಚ, ಖುರ್ಚಿ ಇತ್ಯಾದಿ) ತುಕ್ಕು ಹಿಡಿಯಬಾರದೆಂದು, ಅವುಗಳನ್ನು ಒಣ ಬಟ್ಟೆಯಿಂದ ವ್ಯವಸ್ಥಿತವಾಗಿ ಒರೆಸಿಕೊಳ್ಳಬೇಕು.
ಐ. ಟೈಲ್ಸ್‌ಗಳನ್ನು ಸ್ವಚ್ಛ ಮಾಡಲು ಕೀಟನಾಶಕ ರಾಸಾಯನಿಕಗಳನ್ನು ಉಪಯೋಗಿಸಬೇಕು. ಕಹಿ ಬೇವಿನ ಎಲೆ ಹಾಗೂ ಕರ್ಪೂರವನ್ನು ಉರಿಸಿ ಧೂಪ ಹಾಕಬೇಕು. ಇದರಿಂದ ವಾತಾವರಣ ಶುದ್ಧವಾಗಿ ಮನೆಯ ನಿರ್ಜಂತುಕರಣವಾಗುತ್ತದೆ.
ಒ. ಕುಡಿಯುವ ನೀರನ್ನು ಪ್ರತಿದಿನ ೧೦ ನಿಮಿಷ ಕುದಿಸಬೇಕು. ಪ್ರವಾಹದಲ್ಲಿ ನೆನೆದ ಆಹಾರಪದಾರ್ಥಗಳನ್ನು ತಿನ್ನಬಾರದು.
ಓ. ಮನೆಯಲ್ಲಿನ ಔಷಧಿಗಳಿಗೆ ನೀರು ತಾಗಿ ಒದ್ದೆಗಿದ್ದರೆ, ಅವುಗಳನ್ನು ಉಪಯೋಗಿಸಬಾರದು. ಔಷಧಿಗಳಿಗೆ ನೀರು ತಾಗದೇ ಇದ್ದರೆ ಅವುಗಳನ್ನು ಉಪಯೋಗಿಸಬಹುದು.
ಔ. ಅಕ್ಕಪಕ್ಕದ ಪರಿಸರದಲ್ಲಿ ಪ್ರವಾಹದ ನೀರು ಸಂಗ್ರಹವಾಗಲು ಬಿಡಬಾರದು.
ಅಂ. ದೇವರಕೋಣೆಯಲ್ಲಿನ ದೇವತೆಗಳ ಮೂರ್ತಿಗಳ ಪೂಜೆ : ದೇವರಕೋಣೆಯಲ್ಲಿನ ದೇವರ ಮೂರ್ತಿಗಳಿಗೆ ಪಂಚಗವ್ಯ (ಹಸುವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಸೆಗಣಿಯಿಂದ) ದಿಂದ ಅಭಿಷೇಕವನ್ನು ಮಾಡಿ ತದನಂತರ ಮೂರ್ತಿಯ ಮೇಲೆ ಪಂಚಾಮೃತದಿಂದ (ಹಸುವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆ) ಅಭಿಷೇಕ ಹಾಗೂ ಜಲಾಭಿಷೇಕವನ್ನು ಮಾಡಿ ಮೊದಲಿನಂತೆ ಪೂಜೆಯನ್ನು ಮಾಡಬೇಕು.
ಅಃ. ದೇವರ ಕೋಣೆಯಲ್ಲಿನ ದೇವತೆಗಳು ಹಾಗೂ ಸಂತರ ಚಿತ್ರಗಳ ಪೂಜೆ : ಪೂಜೆಯನ್ನು ಮಾಡುವ ಮೊದಲು ಈ ಮೇಲಿನಂತೆ ಉಪಚಾರ ಮಾಡುವ ಅವಶ್ಯಕತೆ ಇಲ್ಲ ಅವರ ಪೂಜೆಯನ್ನು ಪ್ರತಿನಿತ್ಯದಂತೆ ಮಾಡಬಹುದು.
ವಿಪತ್ತಿನ ಪ್ರಸಂಗದಲ್ಲಿ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ (National Disaster Management Authority) ೦೧೧-೧೦೭೮ ಈ ಸಹಾಯವಾಣಿಯ ಸಂಖ್ಯೆಗೆ ಸಂಪರ್ಕ ಮಾಡಿ ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.