ಸತ್ಸಂಗ 2 : ಸಾಧನೆಯ ಮೂಲಭೂತ ತಪ್ಪುಗಳು

ಸಾಧನೆಯ ಮೂಲಭೂತ ತಪ್ಪುಗಳು

ಹಿಂದಿನ ಸತ್ಸಂಗದಲ್ಲಿ ನಾವು ಸಾಧನೆಯ ‘ವ್ಯಕ್ತಿಯಷ್ಟು ಪ್ರಕೃತಿ, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತ ಮತ್ತು ಮೂಲಭೂತ ತತ್ತ್ವಗಳನ್ನು ತಿಳಿದುಕೊಂಡೆವು. ಇಂದಿನ ಸತ್ಸಂಗದಲ್ಲಿ ಸಾಧನೆಯನ್ನು ಮಾಡುವಾಗ ಯಾವ್ಯಾವ ತಪ್ಪುಗಳನ್ನು ತಡೆಗಟ್ಟಬೇಕು ಅಂದರೆ ಸಾಧನೆಯಲ್ಲಾಗುವ ಮೂಲಭೂತ ತಪ್ಪುಗಳನ್ನು ತಿಳಿದುಕೊಳ್ಳುವವರಿದ್ದೇವೆ. ಹೇಗೆ ಇಂದು ವ್ಯವಹಾರದಲ್ಲಿ ಅನೇಕ ಕಡೆಗಳಲ್ಲಿ Do’s And Don’ts ಅಂದರೆ ಯಾವ ವಿಷಯಗಳನ್ನು ಮಾಡಿ ಮತ್ತು ಯಾವುದನ್ನು ಮಾಡಬೇಡಿ ಎಂದು ಬರೆದಿರುತ್ತದೆ. ಈ Do’s And Don’t ಗಳ ಮಾಹಿತಿಯಿರುವುದು ಉಪಯುಕ್ತವಾಗಿರುತ್ತದೆ. ಅದೇ ರೀತಿ ಅಧ್ಯಾತ್ಮದಲ್ಲಿಯೂ ಸಾಧನೆಯನ್ನು ಮಾಡುವಾಗ ಯಾವ ವಿಷಯಗಳನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಜ್ಞಾನವು ಆವಶ್ಯಕವಾಗಿರುತ್ತದೆ.

ಸಾಮಾನ್ಯವಾಗಿ ಸಾಧನಾಮಾರ್ಗದಲ್ಲಿರುವ ವ್ಯಕ್ತಿಯಿಂದ 4 ರೀತಿಯ ತಪ್ಪುಗಳಾಗಬಹುದು. ಒಂದೆಂದರೆ ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು, ಎರಡನೆಯದಾಗಿ ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು, ಮೂರನೆಯದಾಗಿ ಗುರುಗಳನ್ನು ಮಾಡಿಕೊಳ್ಳುವುದು, ಮತ್ತು ನಾಲ್ಕನೆಯದಾಗಿ ಸ್ವತಃ ತನ್ನನ್ನು ಸಾಧಕನೆಂದು ತಿಳಿದುಕೊಳ್ಳುವುದು. ಈ ತಪ್ಪುಗಳಿಂದಾಗಿ ಅನೇಕ ವರ್ಷಗಳಿಂದ ಸಾಧನೆಯ ಪ್ರಯತ್ನಗಳನ್ನು ಮಾಡಿಯೂ ಅಪೇಕ್ಷಿತ ರೀತಿಯಲ್ಲಿ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಹಾಗಾಗಿ ಈ ತಪ್ಪುಗಳನ್ನು ತಡೆಗಟ್ಟುವುದು ಬಹಳ ಮಹತ್ವದ್ದಾಗಿದೆ. ಈ ವಿಷಯದಲ್ಲಿ ನಾವು ಈಗ ವಿಸ್ತಾರವಾಗಿ ಅರಿತುಕೊಳ್ಳೋಣ.

ಅ. ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು

ಹೆಚ್ಚಾಗಿ ಸಮಾಜದಲ್ಲಿ ಅನೇಕರು ತಮ್ಮ ಮನಸ್ಸಿನಿಂದಲೇ ಸಾಧನೆಯನ್ನು ಆರಂಭಿಸುತ್ತಾರೆ ಎಂಬುದು ಕಂಡುಬರುತ್ತದೆ. ಕೆಲವರು ತೀರ್ಥಯಾತ್ರೆ ಮಾಡುತ್ತಾರೆ, ಇನ್ನು ಕೆಲವರು ಸ್ತೋತ್ರ ಪಠಣ ಅಥವಾ ಪಾರಾಯಣ ಮಾಡುತ್ತಾರೆ. ಇನ್ನು ಕೆಲವರು ಉಪವಾಸ ಮತ್ತು ಇನ್ನಿತರರು ಇನ್ನೇನಾದರೂ ಮಾಡಲು ಪ್ರಾರಂಭಿಸುತ್ತಾರೆ. ಸ್ವಲ್ಪದರಲ್ಲಿ ಅವರಿಗೆ ಹೇಗೆ ಅನಿಸುತ್ತದೆಯೋ ಅಥವಾ ಮನಸ್ಸಿನಲ್ಲಿ ಏನು ಬರುತ್ತದೆಯೋ ಅದಕ್ಕನುಸಾರ ಉಪಾಸನೆಯನ್ನು ಮಾಡಲು ಪ್ರಯತ್ನಿಸುತ್ತಾರೆ. ವ್ಯವಹಾರದಲ್ಲಿ ನಾವು ನಮ್ಮ ಮೊಬೈಲ್ ಅಥವಾ ಟಿವಿ ಹಾಳಾದರೆ ಆಯಾ ಕ್ಷೇತ್ರದ ತಜ್ಞರ ಬಳಿ ಹೋಗುತ್ತೇವೆ. ಕಾಯಿಲೆ ಬಂದಾಗ ಡಾಕ್ಟರರ ಬಳಿಗೆ ಹೋಗುತ್ತೇವೆ. ಕೋರ್ಟಕಚೇರಿಯ ಕೆಲಸವಿದ್ದರೆ ವಕೀಲರ ಬಳಿಗೆ ಹೋಗುತ್ತೇವೆ. ಸ್ವಲ್ಪದರಲ್ಲಿ ಆಯಾ ಕ್ಷೇತ್ರದ ತಜ್ಞರ ಮಾರ್ಗದರ್ಶನಕ್ಕನುಸಾರ ನಾವು ಕೃತಿಯನ್ನು ಮಾಡುತ್ತೇವೆ. ಆದರೆ ಅಧ್ಯಾತ್ಮದಲ್ಲಿ ಮಾತ್ರ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿಗಳ ಮಾರ್ಗದರ್ಶನ ಪಡೆಯದೇ ಮನಸ್ಸಿನಿಂದಲೇ ಸಾಧನೆಯನ್ನು ಪ್ರಾರಂಭಿಸುತ್ತೇವೆ. ದೇವಧರ್ಮದ ಬಗ್ಗೆ ಏನೂ ಮಾಡದಿರುವುದಕ್ಕಿಂತ ಇದು ಉತ್ತಮವಾಗಿದ್ದರೂ ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರ ಅದು ಉಪಯುಕ್ತವಿರುವುದಿಲ್ಲ!

೧. ಸಂತರ ಹೆಸರಿನ ಬದಲು ದೇವರ ನಾಮ ಜಪಿಸಿ

ಕೆಲವೊಮ್ಮೆ ಅನೇಕ ಜನರು ಸಂತರು ಹೇಳಿಲ್ಲದಿದ್ದರೂ ಸಂತರ ಹೆಸರಿನ ನಾಮಜಪ ಮಾಡುವುದು ಕಂಡುಬರುತ್ತದೆ. ಹಿಂದೂ ಧರ್ಮಶಾಸ್ತ್ರದಲ್ಲಿ ದೇವರ ನಾಮ ಜಪಿಸುವ ವಿಧಾನವಿದೆ, ಸಂತರದ್ದಲ್ಲ ಎಂದು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮಲ್ಲಿ ಋಷಿಗಳ ನಾಮ ಜಪಿಸಿದ ಬಗ್ಗೆ ಎಲ್ಲಿಯಾದರೂ ಕೇಳಿದ್ದಿರಾ? ಇಲ್ಲವಲ್ಲ. ಇಂದಿನ ಕಾಲದ ಸಂತರೂ ಯಾವತ್ತೂ ತಮ್ಮ ಹೆಸರಿನ ಉಪಾಸನೆಯನ್ನು ಮಾಡಲು ಹೇಳಿಲ್ಲ. ಬದಲಾಗಿ ಭಕ್ತರಿಗೆ ದೇವರ ನಾಮವನ್ನೇ ಜಪಿಸಲು ಹೇಳಿದ್ದಾರೆ. ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಹೀಗಿದ್ದರೂ ಸಂತರ ಕಾರ್ಯಕ್ಕೆ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ನಿಯಮಗಳು ಅನ್ವಯವಾಗುತ್ತವೆ. ಅಂದರೆ ಸಂತರ ದೇಹತ್ಯಾಗದ ನಂತರ ಸ್ವಲ್ಪ ಸಮಯದಲ್ಲಿ ಅವರ ಪ್ರಕಟ ಶಕ್ತಿಯ ಲಯವಾಗುತ್ತಿರುತ್ತದೆ. ಇದಕ್ಕೆ ವಿರುದ್ಧವಾಗಿ ಈಶ್ವರನು ಅನಾದಿ, ಅನಂತ, ಸರ್ವಶಕ್ತಿಶಾಲಿ ಮತ್ತು ಸರ್ವಜ್ಞನಾಗಿದ್ದಾನೆ. ಹಾಗಾಗಿ ಸಂತರ ಹೆಸರಿನ ಜಪಕ್ಕಿಂತಲೂ ದೇವತೆಯ ನಾಮಜಪದಲ್ಲಿ ಹೆಚ್ಚು ಸಾಮರ್ಥ್ಯವಿದೆ. ಹಾಗಾಗಿ ಮನಸ್ಸಿಗನುಸಾರ ಸಂತರ ನಾಮಜಪಿಸುವುದು ಯೋಗ್ಯವಿರುವುದಿಲ್ಲ.

೨. ವಿಚಾರಿಸಿ ಮಾಡುವುದರ ಮಹತ್ವ

ಅಧ್ಯಾತ್ಮದಲ್ಲಿ ‘ಸ್ವಂತ ಮನಸ್ಸಿನಿಂದ ಸಾಧನೆಯನ್ನು ಮಾಡುವುದು’ ಎಂಬ ತಪ್ಪನ್ನು ತಡೆಗಟ್ಟಬೇಕಾಗಿದ್ದಲ್ಲಿ ವಿಚಾರಿಸಿಕೊಳ್ಳುವ ವೃತ್ತಿ ಅಂಗೀಕರಿಸಬೇಕು. “ನನಗೆ ಎನೂ ಗೊತ್ತಾಗುವುದಿಲ್ಲ, ಮತ್ತು ನನಗೆ ಅಧ್ಯಾತ್ಮವನ್ನು ಕಲಿಯಲಿಕ್ಕಿದೆ” ಎಂಬ ಜಿಜ್ಞಾಸು ವೃತ್ತಿಯು ಮೂಡುತ್ತದೆ. ಆಗಲೇ ಯಾರಾದರೊಬ್ಬ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿ ಮಾರ್ಗದರ್ಶನ ಮಾಡುತ್ತಾರೆ. ನಮಗೆ ತಿಳಿವಳಿಕೆ ಬಂದಾಗಿನಿಂದ ಪೂಜೆಯನ್ನು ಹೇಗೆ ಮಾಡಬೇಕು, ದೇವಸ್ಥಾನಕ್ಕೆ ಹೇಗೆ ಹೋಗಬೇಕು, ಧಾರ್ಮಿಕ ಗ್ರಂಥಗಳನ್ನು ಹೇಗೆ ಓದಬೇಕು, ಇದೆಲ್ಲವೂ ನಮಗೆ ತಿಳಿಯತೊಡಗುತ್ತದೆ. ಅದೇ ರೀತಿ ನಮ್ಮ ಸಾಧನೆಯು ಮುಂದುವರಿಯುತ್ತದೆ. ಪದೇ ಪದೇ ಅದೇ ಸಾಧನೆಯನ್ನು ಮಾಡುತ್ತಿರುವುದರಿಂದ ನಾವು ಜೀವನವಿಡೀ ಎಲ್ಲಿದ್ದೇವೆಯೋ ಅಲ್ಲಿಯೇ ಇರುತ್ತೇವೆ. ಗಾಣದ ಎತ್ತು ಹೇಗೆ ಅಲ್ಲಿಯೇ ತಿರುಗುತ್ತದೆಯೋ ಅದೇ ಅವಸ್ಥೆ ನಮ್ಮದಾಗುತ್ತದೆ. ಒಬ್ಬ ವಿದ್ಯಾರ್ಥಿಗೆ 7ನೆಯ ತರಗತಿಯ ವಿಷಯಗಳು ಅರ್ಥವಾಗತೊಡಗಿದಾಗ ಅವನು ವರ್ಷಗಟ್ಟಲೇ ಅದನ್ನೇ ಅಧ್ಯಯನ ಮಾಡುತ್ತಾ ಇದ್ದಲ್ಲಿ ಅವನಿಗೆ ಅದರಿಂದ ಏನಾದರೂ ಉಪಯೋಗವಾಗುವುದೇ? ಒಂದು ಹಂತ ಮುಗಿದ ನಂತರ ಅದರ ಮುಂದಿನ ಹಂತಕ್ಕೆ ಹೋಗಲು ಪ್ರಯತ್ನಿಸಿದರೆ ಮಾತ್ರ ಪ್ರಗತಿಯಾಗುತ್ತದೆ. ಮೊದಲ ತರಗತಿಯಿಂದ ಎರಡನೆಯ ತರಗತಿ, ಮೂರನೆಯ ತರಗತಿ ನಂತರ ಮಾಧ್ಯಮಿಕ ಶಾಲೆಯಲ್ಲಿ, ಮುಂದೆ ವಿಶ್ವವಿದ್ಯಾಲಯಕ್ಕೆ ಹೋಗಿ ಕೊನಗೆ ಪದವೀಧರರಾಗುವುದಿರುತ್ತದೆ. ಅಧ್ಯಾತ್ಮದಲ್ಲಿಯೂ ಅದೇ ರೀತಿಯಿದೆ. ಸಾಧನೆಯನ್ನು ಮಾಡುವಾಗ ಒಂದು ಹಂತದ ಸಾಧನೆಯೊಂದಿಗೆ ಹೊಂದಿಕೆ ಸಾಧ್ಯವಾದ ನಂತರ ನಾವು ಸಾಧನೆಯ ಮುಂದುಮುಂದಿನ ಹಂತಗಳನ್ನು ತಿಳಿದುಕೊಂಡು ಅದನ್ನು ಸಾಧ್ಯಗೊಳಿಸಲು ಪ್ರಯತ್ನಿಸಬೇಕಾಗಿದೆ.

ಆ. ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು

ಇಂದು ಬಹಳಷ್ಟು ಜನರು ಬೇರೆಬೇರೆ ಸಂಪ್ರದಾಯಗಳಿಗನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. ಅವರಿಗೆ ಸಾಧನೆಯ ರುಚಿ ತಗಲಿದೆ; ಆದರೆ ಸಾಧನೆಯು ಪ್ರಾರಂಭವಾದ ನಂತರ ಅಧ್ಯಾತ್ಮದಲ್ಲಿ ಪ್ರಗತಿ ಮಾಡುವುದು ಅಪೇಕ್ಷಿತವಿರುತ್ತದೆ. ಶಾಲೆ-ಮಹಾವಿದ್ಯಾಲಯದಲ್ಲಿ ಕಲಿಯುವಾಗ ನಾವು ಒಂದೇ ತರಗತಿಯಲ್ಲಿ ನಿಲ್ಲದೇ ಮುಂದುಮುಂದಿನ ತರಗತಿಗೆ ಹೋಗುತ್ತೇವೆ ಮತ್ತು ಕೊನೆಗೆ ಪದವಿಯನ್ನು ಪಡೆಯುತ್ತೇವೆ. ಪದವಿ ಪಡೆಯುವುದು ಶಿಕ್ಷಣದ ಧ್ಯೇಯವಾಗಿದೆ. ನಿರ್ದಿಷ್ಟವಾಗಿ ಅದೇ ರೀತಿ ಸಾಧನೆಯಲ್ಲಿ ಮುಂದಿನ ಹಂತದ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯನ್ನು ಮಾಡುವುದು ಮನುಷ್ಯಜನ್ಮದ ಧ್ಯೇಯವಾಗಿದೆ ಮತ್ತು ಅದನ್ನೇ ಸಾಧಕನು ಗಳಿಸುವುದಿರುತ್ತದೆ. ಹಿಂದೆ ಹೇಳಿದಂತೆ ಒಂದು ತರಗತಿಯಲ್ಲಿ ಒಳ್ಳೆಯ ಅಧ್ಯಯನ ಮಾಡತೊಡಗಿದೆವು ಮತ್ತು ಒಳ್ಳೆಯ ಅಂಕಗಳನ್ನು ಗಳಿಸಿದೆವು ಎಂದು ನಾವು ಅದೇ ತರಗತಿಯಲ್ಲಿ ಇರುತ್ತೇವೆಯೇ? ಇಲ್ಲವಲ್ಲ. ಅದೇ ತರಗತಿಯಲ್ಲಿ ನಿಲ್ಲದೇ ನಾವು ಮುಂದಿನ ತರಗತಿಗೆ ಹೋಗಲು ಪ್ರಯತ್ನಿಸುತ್ತೇವೆ ಏಕೆಂದರೆ ನಮ್ಮ ಅಂತಿಮ ಧ್ಯೇಯ ಪದವಿಯನ್ನು ಗಳಿಸುವುದೇ ಆಗಿರುತ್ತದೆ. ಹಾಗೆಯೇ ನಾವು ಯಾವುದಾದರೊಂದು ಸಂಪ್ರದಾಯದಲ್ಲಿ ಸಾಧನೆಯನ್ನು ಪ್ರಾರಂಭಿಸಿದ್ದರೂ ಈಶ್ವರಪ್ರಾಪ್ತಿ ಅಥವಾ ಆನಂದಪ್ರಾಪ್ತಿ ಎಂಬ ಧ್ಯೇಯಕ್ಕಾಗಿ ಸಾಂಪ್ರದಾಯಿಕ ಸಾಧನೆಯನ್ನು ಪಾರು ಮಾಡಿ ಮುಂದೆ ಸಾಗಬೇಕು. ಸಾಧನೆಯ ಮಹಾಮಾರ್ಗದಲ್ಲಿ ಸಾಗುವಾಗ ಸಾಂಪ್ರದಾಯಿಕ ಸಾಧನೆಯ ಜೋಡುರಸ್ತೆಯನ್ನು ಬಿಡಬೇಕು. ಇಲ್ಲಿ ಸಾಂಪ್ರದಾಯಿಕ ಸಾಧನೆಯನ್ನು ಕನಿಷ್ಠ ಎಂದು ತಿಳಿಯಬೇಕಿಲ್ಲ. ಆದೆ ಅದರ ಆಚೆಗೆ ಹೋಗಿ ನಮ್ಮ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆಯಲ್ಲ ಎಂಬ ವಿಚಾರವನ್ನೂ ಮಾಡಬೇಕು.

ನಾವು ಮೊದಲನೆಯನ ಸತ್ಸಂಗದಲ್ಲಿ ವ್ಯಕ್ತಿಯಷ್ಟು ಪ್ರಕೃತಿ, ಮತ್ತು ಅಷ್ಟೇ ಸಾಧನಾಮಾರ್ಗಗಳು ಎಂಬ ಮೂಲಭೂತ ಸಿದ್ಧಾಂತವನ್ನು ತಿಳಿದುಕೊಂಡೆವು. ಪೃಥ್ವಿಯಲ್ಲಿ 800 ಕೋಟಿಗಿಂತಲೂ ಹೆಚ್ಚು ಜನರಿದ್ದಾರೆ. ಅಂದರೆ 800 ಕೋಟಿಗಿಂತಲೂ ಹೆಚ್ಚು ಸಾಧನಾಮಾರ್ಗಗಳಿವೆ. ಆದರೆ ಯಾವುದೇ ಸಂಪ್ರದಾಯದ ಅನುಯಾಯಿಗೆ ಒಂದೇ ಸಾಧನಾಮಾರ್ಗ ಗೊತ್ತಿರುತ್ತದೆ. ಅವನು ಅದೇ ಮಾರ್ಗದಿಂದ ಸಾಧನೆಯನ್ನು ಮಾಡುತ್ತಿರುತ್ತಾನೆ. ಇತರ ಸಾಧನಾಮಾರ್ಗಗಳು ಆತನಿಗೆ ತಿಳಿದಿರುವುದಿಲ್ಲ. ಸಂಪ್ರದಾಯದಲ್ಲಿ ಎಲ್ಲರಿಗೂ ಸಾರಾಸಗಟಾಗಿ ಒಂದೇ ಸಾಧನೆಯನ್ನು ಹೇಳಲಾಗುತ್ತದೆ. ಆದರೆ ಅದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದೇನಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿ ಬೇರೆ ಇರುವುದರಿಮದ ಸಾಂಪ್ರದಾಯಿಕ ಸಾಧನೆಯನ್ನು ಮಾಡುವ ಹೆಚ್ಚಿನವರ ಆಧ್ಯಾತ್ಮಿಕ ಪ್ರಗತಿ ಅಪೇಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಅವರಿಗೆ ಅನುಭೂತಿಗಳು ಸಹ ಅಪರೂಪಕ್ಕೆ ಬರುತ್ತವೆ. ಇಂತಹವರು ‘ನನ್ನ ಸಂಪೂರ್ಣ ಜೀವನ ವ್ಯರ್ಥವಾಯಿತು ನಾನು ದೇವರ ಉಪಾಸನೆಯನ್ನು ಎಷ್ಟು ಮಾಡಿದರೂ ನನಗೆ ಒಳಿತಾಗಲಿಲ್ಲ’ ಎಂಬ ವಿಚಾರಪ್ರಕ್ರಿಯೆಗೆ ಬಲಿಯಾಗಿ ಈಶ್ವರ, ಸಾಧನೆ ಅಥವಾ ಅಧ್ಯಾತ್ಮದ ಮೇಲಿರುವ ಅವರ ವಿಶ್ವಾಸವೇ ಹಾರಿಹೋಗುತ್ತದೆ. ಉಪಮೆ ನೀಡುವುದಾದರೆ ಓರ್ವ ವೈದ್ಯನಿಗೆ ಒಂದೇ ಔಷಧಿ ತಿಳಿದಿದೆ ಎಂದಾದರೆ ಅವನನ್ನು ವೈದ್ಯನೆನ್ನಲು ಸಾಧ್ಯವಿದೆಯೇ? ನಾವು ಅವರ ಬಳಿಯೂ ಹೋಗುವುದಿಲ್ಲ. ಸಾಂಪ್ರದಾಯಿಕ ಸಾಧನೆಯು ಅದೇ ರೀತಿಯಿದೆ. ಇದರಿಂದ ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು ಸಾಧನೆಯ ಎರಡನೆಯ ತಪ್ಪಾಗಿದೆ.

ಸಾಂಪ್ರದಾಯಿಕ ಸಾಧನೆಯ ಇನ್ನೊಂದು ಕೊರತೆ ಎಂದರೆ ನನ್ನ ಸಂಪ್ರದಾಯವೇ ಸರ್ವಶ್ರೇಷ್ಠವಾಗಿದೆ ಎಂದು ಆ ಸಂಪ್ರದಾಯದ ಅನುಯಾಯಿಗಳಿಗೆ ಅನಿಸುತ್ತದೆ. ಮುಂದೆ ಅವರಲ್ಲಿ ಒಂದು ರೀತಿಯ ಅಹಂಭಾವ ಮೂಡಲು ಪ್ರಾರಂಭವಾಗುತ್ತದೆ. ನಮ್ಮ ಸಂಪ್ರದಾಯವು ಅತ್ಯಂತ ಶ್ರೇಷ್ಠ ಮತ್ತು ಇತರ ಸಂಪ್ರದಾಯಗಳೆಲ್ಲವೂ ಕನಿಷ್ಠ ಎಂಬ ಭೇದಭಾವ ಅವರ ಮನಸ್ಸಿನಲ್ಲಿ ಉಂಟಾಗುತ್ತದೆ ಹಾಗಾಗಿ ಸಾಂಪ್ರದಾಯಿಕ ಸಾಧನೆ ಮಾಡುವವರಿಗೆ ಎಲ್ಲೆಡೆ ಸಮಭಾವದಿಂದ ನೋಡಲು ಕಠಿಣವಾಗುತ್ತದೆ. ‘ವಿಶ್ವವೇ ನನ್ನ ಮನೆ’ ಎಂಬ ಭಾವವಿಡಲು ಕಮ್ಮಿ ಬೀಳುತ್ತಾರೆ ಮತ್ತು ಇತರ ಸಂಪ್ರದಾಯಗಳ ಬಗ್ಗೆ ಆತ್ಮೀಯತೆ ಅನಿಸುವುದಿಲ್ಲ. ವಾಸ್ತವದಲ್ಲಿ ಅಹಂಅನ್ನು ನಾಶ ಮಾಡುವುದು ಮತ್ತು ಮನಸ್ಸಿನಿಂದ ವ್ಯಾಪಕವಾಗುವುದೇ ಸಾಧನೆಯ ಉದ್ದೇಶವಾಗಿದೆ. ಸಾಂಪ್ರದಾಯಿಕತೆಯಿಂದ ಅದನ್ನು ಸಾಧಿಸಲು ಕಠಿಣವಾಗುತ್ತದೆ.

ಅರ್ಥಾತ್ ಏನೂ ಸಾಧನೆಯನ್ನು ಮಾಡದಿರುವವವರಿಗಿಂತ ಸಾಂಪ್ರದಾಯಿಕ ಸಾಧನೆಯನ್ನು ಮಾಡುವುದು ಅಂದರೆ ಆಧ್ಯಾತ್ಮಿಕ ಏಣಿಯ ಮೊದಲ ಹೆಜ್ಜೆಯ ಏರಿದಂತೆ. ಆದರೆ ಅಧ್ಯಾತ್ಮದಲ್ಲಿ ಪ್ರಗತಿ ಮಾಡಲು ಇದ್ದಲ್ಲಿ ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕಬಾರದು

ಇ. ಗುರು ಮಾಡಿಕೊಳ್ಳುವುದು

ಸಾಧನೆಯ ಮುಂದಿನ ತಪ್ಪು ಎಂದರೆ ಗುರುಗಳನ್ನು ಮಾಡಿಕೊಳ್ಳುವುದು. ವಾಸ್ತವದಲ್ಲಿ ನಾವು ಗುರುಗಳನ್ನು ಮಾಡಿಕೊಳ್ಳಲಿಕ್ಕಿರುವುದಿಲ್ಲ. ಬದಲಾಗಿ ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸಬೇಕಾಗಿರುತ್ತದೆ. ನಮ್ಮ ಆಧ್ಯಾತ್ಮಿಕ ಮಿತಿಯಿಂದಾಗಿ ಯಾರಾದರೊಬ್ಬ ವ್ಯಕ್ತಿಯು ನಿಜವಾದ ಗುರುವೇ ಅಥವಾ ಸಂತಪದವಿಯ ಅಧಿಕಾರಿಯಾಗಿದ್ದಾರೆಯೇ ಎಂದು ನಮಗೆ ತಿಳಿಯುವುದಿಲ್ಲ. ಡಾಕ್ಟರ್, ವಕೀಲ ಮುಂತಾದವರ ಬಳಿ ತಮ್ಮ ಪದವಿಯ ಪ್ರಮಾಣಪತ್ರ ಇರುತ್ತದೆ. ಆದರೆ ಅಧ್ಯಾತ್ಮವು ಶಬ್ದದ ಆಚೆಗಿನ ವಿಷಯವಾಗಿದೆ. ಅಲ್ಲಿ ನಾವು ಯಾವುದನ್ನು ತಾನೇ ಪ್ರಮಾಣವೆಂದು ತಿಳಿಯಬೇಕು? ಸದ್ಯದ ಕಾಲದಲ್ಲಿ 98% ಜನರು ಸಾಧು ಸಂತರೆಂದು ಹೇಳುವವರೆಲ್ಲರೂ ನಕಲಿಯಾಗಿರುತ್ತಾರೆ. ಇಂತಹ ಸಮಯದಲ್ಲಿ ಗುರುಗಳನ್ನು ಮಾಡುವುದಕ್ಕಿಂತ ನಾವು ಶಿಷ್ಯರಾಗಲು ಪ್ರಯತ್ನಿಸಬೇಕು.

ಶಿಷ್ಯನಾಗುವುದು ಹೇಗೆ ? ಇದಕ್ಕಾಗಿ ಸಮರ್ಥ ರಾಮದಾಸ ಸ್ವಾಮಿಗಳು ಬರೆದ ಶ್ರೀ ದಾಸಬೋಧ ಮತ್ತು ಸನಾತನದ ಗ್ರಂಥ ಶಿಷ್ಯ ಇವುಗಳಲ್ಲಿ ನೀಡಲಾಗಿರುವ ಶಿಷ್ಯನ ಗುಣಗಳ ಅಧ್ಯಯನ ಮಾಡಬಹುದು. ಶಿಷ್ಯನ ಗುಣ ನಮ್ಮಲ್ಲಿ ಬಂದೊಡನೆ ಗುರು ತಾವಾಗಿ ನಮ್ಮ ಜೀವನದಲ್ಲಿ ಬರುತ್ತಾರೆ. ಓರ್ವ ವಿದ್ಯಾರ್ಥಿಯು ಬುದ್ಧಿವಂತನಾಗಿದ್ದರೆ ಶಿಕ್ಷಕರು ತಾವಾಗಿ ಅವನತ್ತ ವಿಶೇಷ ಗಮನ ಹರಿಸುತ್ತಾರೆಯೋ ಅದೇ ರೀತಿ ತಾವು ಶಿಷ್ಯನ ಗುಣಗಳನ್ನು ಅಂಗೀಕರಿಸಿದರೆ ಗುರುತತ್ತ್ವವೇ ನಿಮಗೆ ಮುಂದಿನ ದಿಶಾದರ್ಶನ ಮಾಡುತ್ತದೆ.

ಈ. ತನ್ನನ್ನು ಸಾಧಕನೆಂದು ತಿಳಿದುಕೊಳ್ಳುವುದು

ಸಾಧನಾಮಾರ್ಗದ ಮುಂದಿನ ತಪ್ಪು ಎಂದರೆ ತನ್ನನ್ನು ಸಾಧಕನೆಂದು ತಿಳಿದುಕೊಳ್ಳುವುದು. ಅಧ್ಯಾತ್ಮದಲ್ಲಿ ಸ್ವಲ್ಪ ಏನಾದರೂ ಮಾಡಿದರೆ, ನಾಲ್ಕೈದು ಸ್ತೋತ್ರಗಳನ್ನು ಓದಿದೊಡನೆ ಅಥವಾ ಪ್ರತಿದಿನ ಶ್ಲೋಕ ಪಠಿಸಿದೊಡನೆ, ಪೂಜೆ  ಮಾಡಿದೊಡನೆ ಕೆಲವು ಜನರಿಗೆ ತಾವು ‘ಸಾಧಕರು’ ಎಂದೆನಿಸುತ್ತದೆ. ಇಂತಹ ವಿಚಾರಪ್ರಕ್ರಿಯೆಯಿಂದ ಸಾಧನೆಯ ಪ್ರಯತ್ನಗಳಿಗೆ ಅಡ್ಡಿಯಾಗಿ ಆಧ್ಯಾತ್ಮಿಕ ಉನ್ನತ ತಡೆಗಟ್ಟಲ್ಪಡುತ್ತದೆ. ಹಾಗಾದರೆ ಸಾಧಕನೆಂದು ಯಾರನ್ನು ಕರೆಯಬೇಕು? ಪ್ರತಿದಿನ 2-3 ಗಂಟೆಗಳಾದರೂ ಯೋಗ್ಯ ಮಾರ್ಗದಿಂದ ಸಾಧನೆಯನ್ನು ಮಾಡುವವನನ್ನು ಸಾಧಕನೆಂದು ಕರೆಯಬಹುದು.

ಸಾಧನಾ ಮಾರ್ಗದಲ್ಲಿರುವ ವ್ಯಕ್ತಿಗಳಿಂದ 4 ರೀತಿಯ ತಪ್ಪುಗಳಾಗಬಹುದು ಎಂದು ತಿಳಿದುಕೊಂಡೆವು. ಒಂದೆಂದರೆ ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು, ಎರಡನೆಯದು ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು, ಮೂರನೆಯದಾಗಿ ಗುರು ಮಾಡಿಕೊಳ್ಳುವುದು ಮತ್ತು ಕೊನೆಯದಾಗಿ ತನ್ನನ್ನು ಸಾಧಕನೆಂದು ತಿಳಿದುಕೊಳ್ಳುವುದು. ಈ ತಪ್ಪುಗಳಿಂದಾಗಿ ಅನೇಕ ವರ್ಷಗಳು ಸಾಧನೆಯನ್ನು ಮಾಡಿದರೂ ಅಪೇಕ್ಷಿತ ರೀತಿಯಲ್ಲಿ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಆದುದರಿಂದ ಈ ತಪ್ಪುಗಳನ್ನು ತಡೆಗಟ್ಟುವುದು ಮಹತ್ವದ್ದಾಗಿದೆ.

Leave a Comment