ವೈಶಂಪಾಯನ ಮುನಿಗಳ ಶಾಪದಿಂದ ಯಜ್ಞವಲ್ಕ್ಯಮುನಿಯ ವಿದ್ಯೆಯು ನಷ್ಟವಾಯಿತು. ಪುನಃ ವಿದ್ಯಾರ್ಜನೆಗೆ ಅವರು ಸೂರ್ಯನ ಉಪಾಸನೆಯನ್ನು ಮಾಡಿದರು. ಪ್ರಸನ್ನರಾದ ಸೂರ್ಯದೇವರು ಅವರಿಗೆ ವೇದ ಮತ್ತು ವೇದಾಂಗಗಳನ್ನು ಉಪದೇಶಿಸಿದರು ಮತ್ತು ಆ ವಿದ್ಯೆಯು ಸದಾ ಅವರೊಂದಿಗಿರಲು ವಾಗ್ದೇವಿಯನ್ನು ಸ್ತುತಿಸುವಂತೆ ಹೇಳಿದರು. ಯಜ್ಞವಲ್ಕ್ಯರು ಸರಸ್ವತೀದೇವಿಯನ್ನು ಪ್ರಸನ್ನಗೊಳಿಸಲು ರಚಿಸಿದ ಬುದ್ಧಿ ಸ್ತೋತ್ರ ಇಲ್ಲಿ ನೀಡುತ್ತಿದ್ದೇವೆ.
ಯಾಜ್ಞವಲ್ಕ್ಯ ಉವಾಚ ।
ಕೃಪಾಂ ಕುರು ಜಗನ್ಮಾತರ್ಮಾಮೇವಂ ಹತತೇಜಸಮ್ ।
ಗುರುಶಾಪಾತ್ಸ್ಮೃತಿಭ್ರಷ್ಟಂ ವಿದ್ಯಾಹೀನಂ ಚ ದುಃಖಿತಮ್ ॥ 1 ॥
ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ದೇಹಿ ದೇವತೇ ।
ಪ್ರತಿಷ್ಠಾಂ ಕವಿತಾಂ ದೇಹಿ ಶಾಕ್ತಂ ಶಿಷ್ಯಪ್ರಬೋಧಿಕಾಮ್ ॥ 2 ॥
ಗ್ರನ್ಥನಿರ್ಮಿತಿಶಕ್ತಿಂ ಚ ಸಚ್ಛಿಷ್ಯಂ ಸುಪ್ರತಿಷ್ಠಿತಮ್ ।
ಪ್ರತಿಭಾಂ ಸತ್ಸಭಾಯಾಂ ಚ ವಿಚಾರಕ್ಷಮತಾಂ ಶುಭಾಮ್ ॥ 3 ॥
ಲುಪ್ತಾಂ ಸರ್ವಾಂ ದೈವವಶಾನ್ನವಂ ಕುರು ಪುನಃ ಪುನಃ ।
ಯಥಾಽಙ್ಕುರಂ ಜನಯತಿ ಭಗವಾನ್ಯೋಗಮಾಯಯಾ ॥ 4 ॥
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ ।
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ ॥ 5 ॥
ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೃತಂ ಸದಾ ।
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮಃ ॥ 6 ॥
ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ ।
ವಾಗಧಿಷ್ಠಾತೃದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ ॥ 7 ॥
ಹಿಮಚನ್ದನಕುನ್ದೇನ್ದುಕುಮುದಾಮ್ಭೋಜಸಂನಿಭಾ ।
ವರ್ಣಾಧಿದೇವೀ ಯಾ ತಸ್ಯೈ ಚಾಕ್ಷರಾಯೈ ನಮೋ ನಮಃ ॥ 8 ॥
ವಿಸರ್ಗ ಬಿನ್ದುಮಾತ್ರಾಣಾಂ ಯದಧಿಷ್ಠಾನಮೇವ ಚ ।
ಇತ್ಥಂ ತ್ವಂ ಗೀಯಸೇ ಸದ್ಭಿರ್ಭಾರತ್ಯೈ ತೇ ನಮೋ ನಮಃ ॥ 9 ॥
ಯಯಾ ವಿನಾಽತ್ರ ಸಂಖ್ಯಾಕೃತ್ಸಂಖ್ಯಾಂ ಕರ್ತುಂ ನ ಶಕ್ನುತೇ ।
ಕಾಲ ಸಂಖ್ಯಾಸ್ವರೂಪಾ ಯಾ ತಸ್ಯೈ ದೇವ್ಯೈ ನಮೋ ನಮಃ ॥ 10 ॥
ವ್ಯಾಖ್ಯಾಸ್ವರೂಪಾ ಯಾ ದೇವೀ ವ್ಯಾಖ್ಯಾಧಿಷ್ಠಾತೃದೇವತಾ ।
ಭ್ರಮಸಿದ್ಧಾನ್ತರೂಪಾ ಯಾ ತಸ್ಯೈ ದೇವ್ಯೈ ನಮೋ ನಮಃ ॥ 11 ॥
ಸ್ಮೃತಿಶಕ್ತಿರ್ಜ್ಞಾನಶಕ್ತಿರ್ಬುದ್ಧಿಶಕ್ತಿಸ್ವರೂಪಿಣೀ ।
ಪ್ರತಿಭಾ ಕಲ್ಪನಾ ಶಕ್ತಿರ್ಯಾ ಚ ತಸ್ಯೈ ನಮೋ ನಮಃ ॥ 12 ॥
ಸನತ್ಕುಮಾರೋ ಬ್ರಹ್ಮಾಣಂ ಜ್ಞಾನಂ ಪಪ್ರಚ್ಛ ಯತ್ರ ವೈ ।
ಬಭೂವ ಜಡವತ್ಸೋಽಪಿ ಸಿದ್ಧಾನ್ತಂ ಕರ್ತುಮಕ್ಷಮಃ ॥ 13 ॥
ತದಾಽಽಜಗಾಮ ಭಗವಾನಾತ್ಮಾ ಶ್ರೀಕೃಷ್ಣ ಈಶ್ವರಃ ।
ಉವಾಚ ಸ ಚ ತಂ ಸ್ತೌಹಿ ವಾಣೀಮಿತಿ ಪ್ರಜಾಪತೇ ॥ 14 ॥
ಸ ಚ ತುಷ್ಟಾವ ತಾಂ ಬ್ರಹ್ಮಾ ಚಾಽಽಜ್ಞಯಾ ಪರಮಾತ್ಮನಃ ।
ಚಕಾರ ತತ್ಪ್ರಸಾದೇನ ತದಾ ಸಿದ್ಧಾನ್ತಮುತ್ತಮಮ್ ॥ 15 ॥
ಯದಾಪ್ಯನನ್ತಂ ಪಪ್ರಚ್ಛ ಜ್ಞಾನಮೇಕಂ ವಸುನ್ಧರಾ ।
ಬಭೂವ ಮೂಕವತ್ಸೋಽಪಿ ಸಿದ್ಧಾನ್ತಂ ಕರ್ತುಮಕ್ಷಮಃ ॥ 16 ॥
ತದಾ ತ್ವಾಂ ಚ ಸ ತುಷ್ಟಾವ ಸನ್ತ್ರಸ್ತಃ ಕಶ್ಯಪಾಜ್ಞಯಾ ।
ತತಶ್ಚಕಾರ ಸಿದ್ಧಾನ್ತಂ ನಿರ್ಮಲಂ ಭ್ರಮಭಞ್ಜನಮ್ ॥ 17 ॥
ವ್ಯಾಸಃ ಪುರಾಣಸೂತ್ರಂ ಸಮಪೃಚ್ಛದ್ವಾಲ್ಮಿಕಿಂ ಯದಾ ।
var ವ್ಯಾಸಃ ಪುರಾಣಸೂತ್ರಶ್ಚ ಸಮಪೃಚ್ಛತವಾಲ್ಮಿಕಿಮ್ ।
ಮೌನೀಭೂತಃ ಸ ಸಸ್ಮಾರ ತ್ವಾಮೇವ ಜಗದಮ್ಬಿಕಾಮ್ ॥ 18 ॥
ತದಾ ಚಕಾರ ಸಿದ್ಧಾನ್ತಂ ತ್ವದ್ವರೇಣ ಮುನೀಶ್ವರಃ ।
ಸ ಪ್ರಾಪ ನಿರ್ಮಲಂ ಜ್ಞಾನಂ ಪ್ರಮಾದಧ್ವಂಸಕಾರಣಮ್ ॥ 19 ॥
ಪುರಾಣ ಸೂತ್ರಂ ಶ್ರುತ್ವಾ ಸ ವ್ಯಾಸಃ ಕೃಷ್ಣಕಲೋದ್ಭವಃ ।
ತ್ವಾಂ ಸಿಷೇವೇ ಚ ದಧ್ಯೌ ತಂ ಶತವರ್ಷಂ ಚ ಪುಷ್ಕ್ಕರೇ ॥ 20 ॥
ತದಾ ತ್ವತ್ತೋ ವರಂ ಪ್ರಾಪ್ಯ ಸ ಕವೀನ್ದ್ರೋ ಬಭೂವ ಹ ।
ತದಾ ವೇದವಿಭಾಗಂ ಚ ಪುರಾಣಾನಿ ಚಕಾರ ಹ ॥ 21 ॥
ಯದಾ ಮಹೇನ್ದ್ರೇ ಪಪ್ರಚ್ಛ ತತ್ವಜ್ಞಾನಂ ಶಿವಾ ಶಿವಮ್ ।
ಕ್ಷಣಂ ತ್ವಾಮೇವ ಸಞ್ಚಿನ್ತ್ಯ ತಸ್ಯೈ ಜ್ಞಾನಂ ದಧೌ ವಿಭುಃ ॥ 22 ॥
ಪಪ್ರಚ್ಛ ಶಬ್ದಶಾಸ್ತ್ರಂ ಚ ಮಹೇನ್ದ್ರಸ್ಚ ಬೃಹಸ್ಪತಿಮ್ ।
ದಿವ್ಯಂ ವರ್ಷಸಹಸ್ರಂ ಚ ಸ ತ್ವಾಂ ದಧ್ಯೌ ಚ ಪುಷ್ಕರೇ ॥ 23 ॥
ತದಾ ತ್ವತ್ತೋ ವರಂ ಪ್ರಾಪ್ಯ ದಿವ್ಯಂ ವರ್ಷಸಹಸ್ರಕಮ್ ।
ಉವಾಚ ಶಬ್ದಶಾಸ್ತ್ರಂ ಚ ತದರ್ಥಂ ಚ ಸುರೇಶ್ವರಮ್ ॥ 24 ॥
ಅಧ್ಯಾಪಿತಾಶ್ಚ ಯೈಃ ಶಿಷ್ಯಾಃ ಯೈರಧೀತಂ ಮುನೀಶ್ವರೈಃ ।
ತೇ ಚ ತ್ವಾಂ ಪರಿಸಞ್ಚಿನ್ತ್ಯ ಪ್ರವರ್ತನ್ತೇ ಸುರೇಶ್ವರಿ ॥ 25 ॥
ತ್ವಂ ಸಂಸ್ತುತಾ ಪೂಜಿತಾ ಚ ಮುನೀನ್ದ್ರಮನುಮಾನವೈಃ ।
ದೈತ್ಯೈಶ್ಚ ಸುರೈಶ್ಚಾಪಿ ಬ್ರಹ್ಮವಿಷ್ಣುಶಿವಾದಿಭಿಃ ॥ 26 ॥
ಜಡೀಭೂತಃ ಸಹಸ್ರಾಸ್ಯಃ ಪಞ್ಚವಕ್ತ್ರಶ್ಚತುರ್ಮುಖಃ ।
ಯಾಂ ಸ್ತೋತುಂ ಕಿಮಹಂ ಸ್ತೌಮಿ ತಾಮೇಕಾಸ್ಯೇನ ಮಾನವಃ ॥ 27॥
ಇತ್ಯುಕ್ತ್ವಾ ಯಾಜ್ಞವಲ್ಕ್ಯಶ್ಚ ಭಕ್ತಿನಮ್ರಾತ್ಮಕನ್ಧರಃ ।
ಪ್ರಣನಾಮ ನಿರಾಹಾರೋ ರುರೋದ ಚ ಮುಹುರ್ಮುಹುಃ ॥ 28 ॥
ತದಾ ಜ್ಯೋತಿಃ ಸ್ವರೂಪಾ ಸಾ ತೇನಾಽದೃಷ್ಟಾಽಪ್ಯುವಾಚ ತಮ್ ।
ಸುಕವೀನ್ದ್ರೋ ಭವೇತ್ಯುಕ್ತ್ವಾ ವೈಕುಣ್ಠಂ ಚ ಜಗಾಮ ಹ ॥ 29 ॥
ಮಹಾಮೂರ್ಖಶ್ಚ ದುರ್ಮೇಧಾ ವರ್ಷಮೇಕಂ ಚ ಯಃ ಪಠೇತ್ ।
ಸ ಪಣ್ಡಿತಶ್ಚ ಮೇಧಾವೀ ಸುಕವಿಶ್ಚ ಭವೇದ್ಧ್ರುವಮ್ ॥ 30 ॥
ಇತಿ ಶ್ರೀಮದ್ದೇವೀಭಾಗವತೇ ಮಹಾಪುರಾಣೇ ನವಮಸ್ಕನ್ಧೇ
ಯಾಜ್ಞವಲ್ಕ್ಯಕೃತಂ ಸರಸ್ವತೀಸ್ತೋತ್ರವರ್ಣನಂ ನಾಮ ಪಞ್ಚಮೋಽಧ್ಯಾಯಃ ॥
ಸಂಕ್ಷಿಪ್ತ ಅರ್ಥ :
ಜಗನ್ಮಾತೆ ! ನನ್ನ ಮೇಲೆ ಕೃಪೆ ತೋರು. ನನ್ನ ಗುರುಗಳ ಶಾಪದಿಂದ ನನ್ನ ತೇಜಸ್ಸಿಂನೊಂದಿಗೆ ನನ್ನ ಸ್ಮರಣಶಕ್ತಿಯೂ ಹೋಯಿತು. ನಾನು ದುಃಖಿತನಾಗಿದ್ದೇನೆ. ದೇವಿ, ನನಗೆ ಜ್ಞಾನ, ಸ್ಮೃತಿ (ನೆನಪಿನ ಶಕ್ತಿ), ವಿದ್ಯೆ, ಪ್ರತಿಷ್ಠೆ, ಕವಿತ್ವ ಶಕ್ತಿ, ಶಿಷ್ಯರಿಗೆ ಪ್ರಬೋಧನೆ ಮಾಡುವ ಕೌಶಲ್ಯ, ಮತ್ತು ಗ್ರಂಥಗಳನ್ನು ಬರೆಯುವ ಸಾಮರ್ಥ್ಯವನ್ನು ಪ್ರದಾನಿಸು ಎಂದು ಪ್ರಾರ್ಥಿಸುತ್ತೇನೆ. ನನಗೆ ಯೋಗ್ಯ ಶಿಷ್ಯರನ್ನು ನೀಡು ತಾಯಿ! ವಿಚಾರವಂತರ, ಮೇಧಾವಿಗಳ ಸಭೆಯಲ್ಲಿ ನನ್ನ ವಾಕ್ ಸಾಮರ್ಥ್ಯ ಮತ್ತು ಪ್ರತಿಭೆ ತೋರುವಂತೆ ಮಾಡು ಹೇ ಮಾತೆ ! ಆದರೆ ದುರ್ಭಗ್ಯದಿಂದ ನನ್ನ ಜ್ಞಾನಭಂಡಾರವು ಬರಿದಾಗಿದೆ. ಹೇ ದೇವಿ, ಬೂದಿಯಲ್ಲಿ ಮುಚ್ಚಿರುವ ಬೀಜವು ಚಿಗುರಿ ಹೆಮ್ಮರವಾಗುವಂತೆ ನನ್ನ ಜ್ಞಾನವನ್ನು ಕೂಡ ಪುನರುಜ್ಜೀವಿತಗೊಳಿಸು. ಹೇ ಬ್ರಹ್ಮ ಸ್ವರೂಪಾ, ಪರಮ ದೇವಿ, ಜ್ಯೋತಿರೂಪಾ, ಸನಾತನಿ, ಸರ್ವ ವಿದ್ಯೆಗಳ ಅಧಿಷ್ಠಾನ ದೇವತೆ, ನಿನಗೆ ವಂದನೆಗಳು. ಹೇ ವಾಣಿ ! ನಿನ ಆಶೀರ್ವಾದವಿಲ್ಲದೆ ಈ ಜಗತ್ತೇ ಅರ್ಥಹೀನವಾಗಿದೆ. ನೀನೇ ವಿಸರ್ಗ, ಬಿಂದು, ಮಾತ್ರೆ ಮುಂತಾದವುಗಳ ಅಧಿಷ್ಠಾನ ದೇವತೆಯಾಗಿರುವೆ. ನೀನಿಲ್ಲದೆ ಸಾಂಖ್ಯ ಮತ್ತು ಗಣಿತವೆಲ್ಲಿ. ದೇವಿ, ನೀನೇ ಸ್ಮೃತಿ ಶಕ್ತಿ (ಸ್ಮರಣ ಶಕ್ತಿ), ಜ್ಞಾನ ಶಕ್ತಿ, ಬುದ್ಧಿ ಶಕ್ತಿ ಮತ್ತು ಕಲ್ಪನಾ ಶಕ್ತಿಯಾಗಿರುವೆ. ನೀನೇ ನಾಲಿಗೆ, ಮನಸ್ಸು, ವಿಚಾರ ಮತ್ತು ವಾಣಿಯ ದೇವತೆಯಾಗಿರುವೆ. ಸನಕ ಕುಮಾರರು ಭ್ರಮ ಮತ್ತು ಸಿದ್ಧಾಂತಗಳನ್ನು ನಿರ್ಮಿಸಲು ಹೊರಟಾಗ ಸಾಕ್ಷಾತ್ ಬ್ರಹ್ಮದೇವರೇ ಶ್ರೀಕೃಷ್ಣನ ಮೊರೆಹೋದರು, ಶ್ರೀಕೃಷನು ಪ್ರಜಾಪತಿಯಲ್ಲಿ ನಿನಗೆ ಪ್ರಾರ್ಥನೆ ಮಾಡಲು ಹೇಳಿದ ಮೇಲೆ ತಾನೇ ಸಿದ್ಧಾಂತಗಳ ನಿರ್ಮಿತಿಯಾಗಿದ್ದು ! ಪೃಥ್ವಿಯು ಜ್ಞಾನದ ರಹಸ್ಯವನ್ನು ತಿಳಿಸುವಂತೆ ಆದಿಶೇಷನಲ್ಲಿ ಕೇಳಿದಾಗ, ಆದಿಶೇಷನಿಗೆ ಅದು ಸಾಧ್ಯವಾಗದೆ ಋಷಿ ಕಶ್ಯಪರು ನಿನ್ನನ್ನು ಪ್ರಾರ್ಥಿಸಿದಾಗ ಸಿದ್ಧಾಂತಗಳನ್ನು ವಿವರಿಸಿದ್ದು ನೀನೇ ಅಲ್ಲವೇ ತಾಯಿ. ಹೇ ವಾಣಿ, ಮಹರ್ಷಿ ವಾಲ್ಮೀಕಿಯು ವೇದ ವ್ಯಾಸರು ಕೇಳಿದ ಪುರಾಣ ಸೂತ್ರಗಳ ಪ್ರಶ್ನೆಗೆ ಉತ್ತರಿಸಲಾಗದೆ ನಿನ್ನಲ್ಲಿ ಪ್ರಾರ್ಥಿಸಿದಾಗ ನಿನ್ನ ಕೃಪೆಯಿಂದ ವಾಲ್ಮೀಕಿ ಋಷಿಗಳು ಅದನ್ನು ಕಾವ್ಯರೂಪದಲ್ಲಿ ವೇದ ವ್ಯಾಸರಿಗೆ ತಿಳಿಸಿದ ನಂತರ ವೇದ ವ್ಯಾಸರು ವೇದಗಳನ್ನು ವಿಭಾಜಿಸುವಷ್ಟು ಜ್ಞಾನಿಗಳಾಗಿದ್ದು. ಹೇ ದೇವಿ ಸರಸ್ವತಿ ನಿನ್ನ ಕೃಪೆಯಿಂದಲೇ ಬೃಹಸ್ಪತಿಗೆ ಶಬ್ದ ಶಾಸ್ತ್ರದ ಜ್ಞಾನವಾಗಿ ಇಂದ್ರಾದಿ ಶಿಷ್ಯರೂ ಆ ಜ್ಞಾನದ ಅಧಿಕಾರಿಗಳಗದ್ದು. ಅಸಂಖ್ಯ ಮನು, ಮುನಿ ಮತ್ತು ಮಾನವರು ನಿನ್ನ ಕೃಪೆಯಿಂದಲೇ ಪೂಜಾದಿ ಕಾರ್ಯಗಳನ್ನು ಮಾಡುವ ಜ್ಞಾನವನ್ನು ಪಡೆದರು. ಬ್ರಹ್ಮ, ವಿಷ್ಣು, ಶಿವ, ದೇವತೆಗಳು ದಾನವರೆನ್ನದೆ ಎಲ್ಲರೂ ನಿನ್ನ ಗುಣಗಾನವನ್ನು ಮಾಡುತ್ತಾರೆ. ಹೇ ಮಾತೆ ಸರಸ್ವತೀ, ಸಾವಿರ ತಲೆಯ ಶೇಷ, ಪಂಚಮುಖದ ಶಂಕರ, ತ್ರಿಮುಖ ಬ್ರಹ್ಮರೆಲ್ಲರೂ ದೇವಿ ಸರಸ್ವತಿಯ ಧ್ಯಾನಮಗ್ನರಾಗಿರುವಾಗ, ಈ ಹುಲು ಮಾನವನೇನು!
ಈ ರೀತಿ ಯಾಜ್ಞವಲ್ಕ್ಯರು ಪರಿಪರಿಯಾಗಿ ದೇವಿಯಲ್ಲಿ ಬೇಡಿಕೊಂಡು ಕಣ್ಣೀರು ಸುರಿಸುತ್ತಿರಲು, ಅವರ ಮುಂದೆ ಪ್ರಕಾಶಮಾನಳಾದ ದೇವಿ ಸರಸ್ವತಿಯು ಪ್ರಕಟಳಾಗಿ, ಪ್ರಸನ್ನಳಾಗಿ ‘ಎಲ್ಲೆಡೆ ಕೀರ್ತಿ ಗಳಿಸುವ ಮೇಧಾವಿ ಮತ್ತು ಪ್ರಸಿದ್ಧ ಕವಿಗಳಾಗುವ’ ವರವನ್ನು ಯಾಜ್ಞವಲ್ಕ್ಯರಿಗೆ ನೀಡಿದಳು.
ಈ ಸರಸ್ವತಿ ಸ್ತುತಿಯನ್ನು ಯಾರು ಶ್ರದ್ಧೆ, ಭಕ್ತಿ, ಭಾವದಿಂದ ಪಠಿಸುತ್ತಾರೆಯೋ ಅವರಿಗೆ ಜ್ಞಾನ, ಸ್ಮೃತಿ ಮತ್ತು ಬುದ್ಧಿಗಳು ಲಭಿಸುವವು. ಮೂರ್ಖ ಅಥವಾ ದುರ್ಬುದ್ಧಿಯುಳ್ಳವನು ಕೂಡ ಈ ಸ್ತೋತ್ರವನ್ನು ಒಂದು ವರ್ಷ ಪಠಿಸಿದರೆ ಅಂತಹವನು ಕೂಡ ಮಹಾ ಮೇಧಾವಿಯಾಗುವನು ಎಂದು ಫಲಶ್ರುತಿಯನ್ನು ನೀಡಲಾಗಿದೆ.
Good message🙏
ಧನ್ಯೋಸ್ಮಿನ್ ಕೃತಾರ್ಥನಾದೆ