ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಪ್ರತಿಯೊಂದು ಯುಗದಲ್ಲಿ ಬೇರೆ ಬೇರೆ ಉಪಾಸನೆಯ ಮಾರ್ಗಗಳನ್ನು ಅನುಸರಿಸಲಾಗಿದೆ. ಕಲಿಯುಗದಲ್ಲಿ ನಾಮಸ್ಮರಣೆಯೇ ಶ್ರೇಷ್ಠ ಸಾಧನೆ ಎಂದು ಅನೇಕ ಸಂತರು ನುಡಿದ್ದಿದ್ದಾರೆ. ಹಾಗಾಗಿ ಶ್ರದ್ಧೆ-ಭಕ್ತಿಯಿಂದ ಉಪಾಸ್ಯ ದೇವತೆಯ ನಾಮಜಪವನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ನಾಮಜಪ ಸಾಧನೆಯನ್ನು ಮಾಡುವಾಗ ಮುಂದಿನ ಅಂಶಗಳನ್ನು ತಿಳಿದುಕೊಂಡು ಮಾಡಿದರೆ ಇನ್ನಷ್ಟು ಪರಿಣಾಮಕಾರಕವಾಗಿ ನಾಮಜಪಿಸಬಹುದು.
೧. ತಾರಕ ಮತ್ತು ಮಾರಕ ನಾಮಜಪ ಎಂದರೇನು ?
ದೇವತೆಗಳಿಗೆ ತಾರಕ ಮತ್ತು ಮಾರಕ ಎಂಬ ಎರಡು ರೂಪಗಳಿರುತ್ತವೆ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪಕ್ಕೆ ತಾರಕವೆಂದೂ, ಅಸುರರನ್ನು ಸಂಹರಿಸುವ ರೂಪಕ್ಕೆ ಮಾರಕ ರೂಪವೆಂದೂ ಕರೆಯುತ್ತಾರೆ. ಅದೇ ರೀತಿ ದೇವತೆಯ ತಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ತಾರಕ ನಾಮಜಪ ಮತ್ತು ದೇವತೆಯ ಮಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ಮಾರಕ ನಾಮಜಪ ಎಂದು ಹೇಳುತ್ತಾರೆ.
೨. ದೇವತೆಯ ತಾರಕ ನಾಮಜಪದ ಮಹತ್ತ್ವ
ದೇವತೆಯ ತಾರಕ ನಾಮ ಜಪಿಸುವುದರಿಂದ ಚೈತನ್ಯ, ಆನಂದ, ಶಾಂತಿ ಇವುಗಳ ಅನುಭೂತಿಯನ್ನು ಪಡೆಯಬಹುದು. ಅದೇ ರೀತಿ ನಮ್ಮಲ್ಲಿ ದೇವತೆಯ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗುತ್ತದೆ. ಸೂಕ್ಷ್ಮ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಿಸಿಕೊಳ್ಳಲು ದೇವತೆಯ ತಾರಕ ರೂಪದ ನಾಮ ಜಪಿಸುವ ಆವಶ್ಯಕತೆ ಇರುತ್ತದೆ.
೩. ದೇವತೆಯ ಮಾರಕ ನಾಮಜಪದ ಮಹತ್ತ್ವ
ದೇವತೆಯ ಮಾರಕ ನಾಮ ಜಪಿಸುವುದರಿಂದ ಆಯಾ ದೇವತೆಯಿಂದ ಪ್ರಕ್ಷೇಪಿಸುವ ಶಕ್ತಿ ಮತ್ತು ಚೈತನ್ಯವನ್ನು ಗ್ರಹಿಸಲು, ಮತ್ತು ಸೂಕ್ಷ್ಮ ಕೆಟ್ಟ ಶಕ್ತಿಗಳನ್ನು ದೂರ ಮಾಡಲು ಸಹಾಯವಾಗುತ್ತದೆ.
೪. ಪ್ರಕೃತಿಗೆ ಅನುಗುಣವಾಗಿ ನಾಮಜಪಿಸುವ ಮಹತ್ತ್ವ
ಸ್ವಂತ ಪ್ರಕೃತಿಗೆ ಅನುಗುಣವಾಗಿ ದೇವತೆಯ ತಾರಕ ಅಥವಾ ಮಾರಕ ನಾಮ ಜಪಿಸಿದರೆ ದೇವತೆಯ ತತ್ತ್ವದ ಹೆಚ್ಚಿನ ಲಾಭವಾಗುತ್ತದೆ.
ಹಾಗಾಗಿ ಯಾವುದೇ ದೇವತೆಯ ತಾರಕ ಮತ್ತು ಮಾರಕ ಹೀಗೆ ಎರಡೂ ರೀತಿಯ ನಾಮಜಪವನ್ನು ಸ್ವಲ್ಪ ಸ್ವಲ್ಪ ಹೊತ್ತು ಏನನಿಸುತ್ತದೆ ಎಂದು ನೋಡಬೇಕು. ಯಾವ ಜಪವನ್ನು ಮಾಡುವಾಗ ಮನಸ್ಸು ಅದರತ್ತ ಹೆಚ್ಚು ಆಕರ್ಷಿಸಲ್ಪಡುತ್ತದೆಯೋ ಆ ಜಪವನ್ನು ಮಾಡಬೇಕು. ಯಾರಾದರೂ ನಿಯಮಿತವಾಗಿ ನಾಮಜಪ ಅಥವಾ ಸಾಧನೆಯನ್ನು ಮಾಡದಿದ್ದರೂ ಅವರೂ ಕೂಡ ತಾರಕ ಮತ್ತು ಮಾರಕ ಜಪಗಳನ್ನು ಸ್ವಲ್ಪ ಸ್ವಲ್ಪ ಹೊತ್ತು ಜಪಿಸಿ ನೋಡಬೇಕು ಮತ್ತೆ ಇಷ್ಟವಾದ ಜಪವನ್ನು ಜಪಿಸಬೇಕು.
ಸ್ವಂತ ಪ್ರಕೃತಿಗೆ ಅನುಗುಣವಾಗಿ ನಾಮ ಜಪಿಸುವ ವೇಗವೂ ಹೆಚ್ಚು ಕಡಿಮೆ ಇರುತ್ತದೆ. ಯಾರಿಗಾದರೂ ವೇಗವಾಗಿ ಜಪಿಸುವುದಿದ್ದರೆ ಅವರು ಇದೇ ರೀತಿಯಲ್ಲಿ ವೇಗವಾಗಿ ಜಪಿಸಬಹುದು (ಅಂದರೆ ಜಪದ ವೇಗ ಹೆಚ್ಚಿಸಬಹುದು, ಪದ್ಧತಿಯಲ್ಲ). ‘ವ್ಯಕ್ತಿಯಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾ ಮಾರ್ಗಗಳು’ ಎಂಬ ಸಾಧನೆಯ ಸಿದ್ಧಾಂತಕ್ಕನುಗುಣವಾಗಿ ಯಾವ ರೀತಿಯಲ್ಲಿ ನಾಮ ಜಪಿಸುವುದರಿಂದ ನಿಮ್ಮ ಭಾವ ಹೆಚ್ಚು ಜಾಗೃತವಾಗುತ್ತದೆಯೋ ಆ ರೀತಿಯಲ್ಲಿ ನಾಮಜಪಿಸಿ.
೫. ತಾರಕ ಮತ್ತು ಮಾರಕ ನಾಮಜಪದ ಕಾಲಾನುಸಾರ ಮಹತ್ತ್ವ
ಅ. ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ ಅದರ ಲಾಭವೂ ಹೆಚ್ಚು ಸಿಗುತ್ತದೆ. ‘ಕಾಲಾನುಸಾರ ಈಗ ದೇವತೆಯ ಯಾವ ನಾಮಜಪದಿಂದ ಹೆಚ್ಚು ತಾರಕ ಮತ್ತು ಮಾರಕ ತತ್ತ್ವವು ಸಿಗುತ್ತದೆ’ ಎಂಬುವುದನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿ ದೇವತೆಗಳ ನಾಮಜಪಗಳ ಧ್ವನಿಮುದ್ರಣವನ್ನು (ರೆಕಾರ್ಡ್) ಮಾಡಲಾಗಿದೆ. ಈ ರೀತಿ ಮಾಡಲು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ಅನೇಕ ಪ್ರಯೋಗಗಳನ್ನು ಮಾಡಲಾಯಿತು. ಅದರ ನಂತರ ಈ ನಾಮಜಪಿಸುವ ಪದ್ಧತಿಗಳನ್ನು ಸಿದ್ಧಪಡಿಸಲಾಯಿತು. ಆದುದರಿಂದ ಈ ರೀತಿಯಲ್ಲಿ ನಾಮ ಜಪಿಸಿದರೆ ಕಾಲಾನುಸಾರ ಆವಶ್ಯಕವಿರುವ ಆವಶ್ಯಕ ದೇವತೆಯ ತತ್ತ್ವದ ಲಾಭವು ಪ್ರತಿಯೊಬ್ಬರಿಗೆ ಅವರವರ ಭಾವಕ್ಕೆ ತಕ್ಕಂತೆ ಸಿಗಲು ಸಹಾಯವಾಗುತ್ತದೆ.
ಆ. ಕಾಲಾನುಸಾರ ಹೆಚ್ಚಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಎದುರಿಸಲು ಉಪಯುಕ್ತ ನಾಮಜಪ : ಮುಂದೆ ಸಾತ್ತ್ವಿಕ ಮತ್ತು ಆದರ್ಶ ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯ) ಸ್ಥಾಪನೆಯಾಗಲಿದೆ. ಅದು ಆಗಬಾರದೆಂದು ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಒಟ್ಟುಗೂಡಿಸಿ ವಿರೋಧಿಸುತ್ತಿವೆ. ಅದರಿಂದ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ತುಂಬಾ ಹೆಚ್ಚಾಗುತ್ತಿವೆ. ಮಾರಕ ಭಾವದ ನಾಮಜಪಗಳು ಕಾಲಾನುಸಾರ ಪರಿಣಾಮಕಾರಿಯಾಗಿವೆ. ಹಾಗಾಗಿ ತೀವ್ರ ಆಧ್ಯಾತ್ಮಿಕ ತೊಂದರೆಗಳಿರುವ ವ್ಯಕ್ತಿಗಳಿಗೆ ಈ ನಾಮಜಪಗಳಿಂದ ಲಾಭವಾಗಬಹುದು. ಇದಕ್ಕಾಗಿ ಶ್ರೀಕೃಷ್ಣ, ಶ್ರೀರಾಮ, ದತ್ತ, ಶ್ರೀ ಗಣಪತಿ, ಶಿವ, ಹನುಮಂತ ಮತ್ತು ಶ್ರೀ ದುರ್ಗಾದೇವಿ ಹೀಗೆ ಸಪ್ತದೇವತೆಗಳ ಮಾರಕ ಮತ್ತು ತಾರಕ ನಾಮಜಪಗಳ ಧ್ವನಿಮುದ್ರಿಸಲಾಗಿದೆ.
ಇ. ಈ ನಾಮಜಪಗಳು ಅಂತ್ಯಕಾಲದಲ್ಲಿರುವ ರೋಗಿಗಳಿಗೆ ಮತ್ತು ವಾಸ್ತುಶುದ್ಧಿಗಾಗಿಯೂ ಲಾಭದಾಯಕವಾಗಿವೆ : ಅಂತ್ಯಕಾಲದಲ್ಲಿರುವ ರೋಗಿಗಳಿಗೆ ಸ್ವತಃ ನಾಮಸ್ಮರಣೆ ಮಾಡುವುದು ಸಾಧ್ಯವಾಗದಿದ್ದರೆ, ಅವರು ಈ ನಾಮಜಪಗಳನ್ನು ಕೇಳಿದರೂ ಅವರಿಗೆ ಲಾಭವಾಗುವುದು. ಈಗ ಕೆಟ್ಟ ಶಕ್ತಿಗಳ ಹೆಚ್ಚಾಗುತ್ತಿರುವ ಆಕ್ರಮಣಗಳಿಂದ ವಾಸ್ತುಗಳ ಮೇಲೆಯೂ ಪರಿಣಾಮವಾಗಿ ಅವೂ ಸಹ ರಜ-ತಮದಿಂದ ಕಲುಷಿತವಾಗುತ್ತಿವೆ. ನಾಮಜಪವನ್ನು ದಿನವಿಡೀ ಮನೆಯಲ್ಲಿ ಹಾಕಿಡುವುದರಿಂದ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣ ಪ್ರಸನ್ನವಾಗಲು ಸಹಾಯವಾಗುವುದು.
ಈ. ನಾಮಜಪದ ಹಿಂದಿರುವ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ : ಜಗತ್ತಿನಾದ್ಯಂತವಿರುವ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಶೀಘ್ರಗತಿಯಲ್ಲಿ ದೂರವಾಗಲು ಮತ್ತು ಅವರಿಗೆ ದೇವತೆಗಳ ತತ್ತ್ವಗಳ ಹೆಚ್ಚಚ್ಚು ಲಾಭವಾಗಲು, ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ವಿವಿಧ ರೀತಿಯ ನಾಮಜಪಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಅವರ ಪರೋಕ್ಷ ಸಂಕಲ್ಪವೂ ಕಾರ್ಯನಿರತವಾಗಿರುವುದರಿಂದ ಈ ನಾಮಜಪಗಳಂತೆ ಸಾಧಕರು ನಾಮಜಪವನ್ನು ಮಾಡಿದರೆ ಅವರ ತೊಂದರೆಗಳು ದೂರವಾಗಲು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳಿಂದ ಲಾಭವಾಗಲು ಖಂಡಿತವಾಗಿಯೂ ಸಹಾಯವಾಗುವುದು.
೬. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿರುವ ಮಾರಕ ನಾಮಜಪಗಳ ವೈಶಿಷ್ಟ್ಯಗಳು
ಅ. ಸಭೆಗಳಲ್ಲಿ ಘೋಷಣೆಗಳನ್ನು ನೀಡುವಾಗ ಮಾನಸಿಕ ಸ್ತರದ ರಜೋಗುಣ ಹೆಚ್ಚಾಗುತ್ತದೆ. ಈ ನಾಮಜಪಗಳಲ್ಲಿ ಮಾರಕ ಭಾವವಿರುವುದರಿಂದ ಅವು ರಜ-ಸತ್ವಪ್ರಧಾನವಾಗಿದ್ದರೂ, ಅವುಗಳನ್ನು ಕೇಳಿದರೆ ಮಾನಸಿಕ ಸ್ತರದ ರಜೋಗುಣ ಹೆಚ್ಚಾಗದೇ, ಕೇಳುವವರು ಆಧ್ಯಾತ್ಮಿಕ ರಜೋಗುಣದ ಅನುಭವವನ್ನು ಪಡೆದುಕೊಳ್ಳಬಹುದು !
ಆ. ಮಾರಕ ಭಾವದ ಪ್ರತಿಯೊಂದು ನಾಮಜಪವನ್ನು ಮಾಡುವಾಗ ದೇವತೆಗಳ ಹೆಸರುಗಳಲ್ಲಿ ಅಕ್ಷರಗಳಿಗೆ ಒತ್ತು ನೀಡಿ ಜಪಿಸಲಾಗಿದೆ.
ಇ. ಸಮಾಜದಲ್ಲಿ ನಾಮಜಪ ಮಾಡುವ ಶೇಕಡಾ ೯೦ ರಷ್ಟು ಜನರ ಒಲವು ಭಾವಪೂರ್ಣವಾಗಿ ನಾಮಜಪ ಮಾಡುವುದರ ಕಡೆಗಿರುತ್ತದೆ. ಹೀಗಿದ್ದರೂ ಇತರ ಶೇ. ೧೦ ರಷ್ಟು ಜನರು, ಯಾರಿಗೆ ಮಾರಕ ಭಾವದ ನಾಮಜಪ ಉಪಯುಕ್ತವಾಗಿದೆಯೋ, ಅವರು ಈ ನಾಮಜಪಗಳಿಂದ ವಂಚಿತರಾಗಬಾರದು ಎಂದು ಅವುಗಳ ಧ್ವನಿಮುದ್ರಣ ಮಾಡಲಾಗಿದೆ.
ಸದ್ಯ ಲಭ್ಯವಿರುವ ನಾಮಜಪಗಳು ಮತ್ತು ಉಪಾಯದ ಸಮಯದಲ್ಲಿ ತಾರಕ-ಮಾರಕ ನಾಮಜಪ ಮಾಡುವುದು ಮತ್ತು ಕೇಳುವ ಪದ್ಧತಿ ಸನಾತನ ಚೈತನ್ಯವಾಣಿ ಆಪ್‌ನಲ್ಲಿ ಈಗ ಕೆಲವು ತಾರಕ ಮತ್ತು ಮಾರಕ ನಾಮಜಪಗಳು ಉಪಲಬ್ಧವಿವೆ. ಇತರ ನಾಮಜಪಗಳೂ ಶೀಘ್ರದಲ್ಲಿಯೇ ಲಭ್ಯವಾಗುವವು. (ಸನಾತನ ಚೈತನ್ಯವಾಣಿ ಆಪ್ ಕನ್ನಡದಲ್ಲಿ ಲಭ್ಯವಿದೆ. ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!)
ಈ ನಾಮಜಪಗಳನ್ನು ಕೇಳುವಾಗ ತಮಗೆ ವೈಶಿಷ್ಟ್ಯಪೂರ್ಣ ಅನುಭೂತಿಗಳು ಬಂದರೆ ಅವುಗಳನ್ನು ನಮಗೆ ಆವಶ್ಯ ತಿಳಿಸಿರಿ. ಇದಕ್ಕಾಗಿ ನಮ್ಮ ವಿಳಾಸ [email protected]
guruji namaskar,nam manastiti onde ritiyagi ittukollalu enu madbeku dymdi tilisri
ನಮಸ್ಕಾರ ವೀರಣ್ಣನವರೇ
ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ಆದರೆ ಯಾವುದೇ ಪರಿಸ್ಥಿಯಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧನೆಯಿಂದಲೇ ಸಾಧ್ಯ. ಸಾಧನೆ ಎಂದೊಡನೆ ಎಲ್ಲ ಬಿಟ್ಟು ಏಕಾಂತದಲ್ಲಿ ಕಠೋರ ತಪಸ್ಸು ಮಾಡಬೇಕೆಂದಲ್ಲ, ಕೆಲವೇ ಕೆಲವು ಸುಲಭ ಉಪಾಯಗಳಿಂದ ಮನಸ್ಸನ್ನು ಸ್ಥಿರಗೊಳಿಸಬಹುದು, ಮಾತ್ರವಲ್ಲ ಆನಂದಪ್ರಾಪ್ತಿಯೂ ಸಾಧ್ಯ. ಅದರಲ್ಲಿ ಒಂದು ಉಪಾಯವೆಂದರೆ ‘ನಾಮಸ್ಮರಣೆ’. ದೇವರ ನಾಮವನ್ನು ನಿರಂತರವಾಗಿ ಸ್ಮರಿಸುವುದರಿಂದ ಮನಸ್ಸಿನಲ್ಲಿ ಇತರ ಅನಾವಶ್ಯಕ ವಿಚಾರಗಳಿಗೆ ಸ್ಥಾನವಿರುವುದಿಲ್ಲ, ಮತ್ತು ಪ್ರತಿಯೊಂದು ಪ್ರಸಂಗದಲ್ಲಿ ದೇವರ ಕೃಪೆಯನ್ನು ಅನುಭವಿಸಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡಿರುವ ಕೊಂಡಿಯಲ್ಲಿ ಓದಬಹುದು – https://www.sanatan.org/kannada/67.html
ಇಂದಿನಿಂದಲೇ ಸಾಧನೆಯನ್ನು ಪ್ರಾರಂಭಿಸಿ. ಸನಾತನದ ಉಚಿತ ಸತ್ಸಂಗದಲ್ಲಿ ಭಾಗವಹಿಸಿ – https://events.sanatan.org/
ಇಂತಿ,
ಸನಾತನ ಸಂಸ್ಥೆ