18.9.2020 ರಿಂದ ಅಧಿಕ ಆಶ್ವಯುಜ ಮಾಸವು ಆರಂಭವಾಗಿದೆ. ಅಧಿಕ ಮಾಸದಿಂದ ಎಲ್ಲರಿಗೂ ಹಿಂದೂ ಧರ್ಮದ ತಿಥಿ, ನಕ್ಷತ್ರ, ಶುಭ-ಅಶುಭ ಮತ್ತು ಮಾಸಕ್ಕನುಸಾರ ಪ್ರತಿಯೊಂದು ದಿನದ ಶಾಸ್ತ್ರಾರ್ಥದ ಜ್ಞಾನವಾಗಲು ಸಾಪ್ತಾಹಿಕ ಶಾಸ್ತ್ರಾರ್ಥ (ಸಾಪ್ತಾಹಿಕ ದಿನವಿಶೇಷ) ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ.
1. ಹಿಂದೂ ಧರ್ಮದಲ್ಲಿ ಶಾರ್ವರಿ ನಾಮ ಸಂವತ್ಸರ, ಶಾಲಿವಾಹನ ಶಕೆ – 1942, ದಕ್ಷಿಣಾಯನ, ಶರದ ಋತು, ಅಧಿಕ ಆಶ್ವಯುಜ ಮಾಸ ನಡೆಯುತ್ತಿದೆ.
ದಿನಾಂಕ | ವಾರ | ತಿಥಿ | ನಕ್ಷತ್ರ | ಶುಭ/ಅಶುಭ | ಶಾಸ್ತ್ರಾರ್ಥ |
---|---|---|---|---|---|
27.9.2020 | ರವಿವಾರ | ಶುಕ್ಲ ಪಕ್ಷ ಎಕಾದಶಿ ಸಮಾಪ್ತಿ ಸಾಯಂಕಾಲ 7.47 |
ಶ್ರವಣ ಸಮಾಪ್ತಿ ರಾತ್ರಿ 8.40 ಕ್ಕೆ |
ಬೆಳಗ್ಗೆ 7 ಗಂಟೆಯ ವರೆಗೆ ಒಳ್ಳೆಯ ದಿನ | ಕಮಲಾ ಎಕಾದಶಿ, ಗಜಗೌರಿ ವ್ರತ |
28.9.2020 | ಸೋಮವಾರ | ಶುಕ್ಲ ಪಕ್ಷ ದ್ವಾದಶಿ ಸಮಾಪ್ತಿ ರಾತ್ರಿ 8.59 | ಧನಿಷ್ಠ ಸಮಾಪ್ತಿ ರಾತ್ರಿ 10.38 |
ಶುಭ ದಿನ | ಲಾಭಪ್ರಾಪ್ತಿಯ ಮುಹೂರ್ತ ರಾತ್ರಿ 8.59 ವರೆಗೆ |
29.9.2020 | ಮಂಗಳವಾರ | ಶುಕ್ಲ ಪಕ್ಷ ತ್ರಯೋದಶಿ ಸಮಾಪ್ತಿ ರಾತ್ರಿ 10.34 | ಶತಭಿಷಾ ಸಮಾಪ್ತಿ ರಾತ್ರಿ 12.48 |
ಉತ್ತಮ ದಿನ | ಭೌಮಪ್ರದೋಷ |
30.9.2020 | ಬುಧವಾರ | ಶುಕ್ಲ ಪಕ್ಷ ಚತುರ್ದಶಿ (1.10.2020) ರಾತ್ರಿ 00.26 ವರೆಗೆ | ಪೂರ್ವಾಭಾದ್ರ ಸಮಾಪ್ತಿ (1.10.2020) ಬೆಳಗ್ಗೆ 3.15 |
ಒಳ್ಳೆಯ ದಿನ | – |
1.10.2020 | ಗುರುವಾರ | ಹುಣ್ಣಿಮೆ ಸಮಾಪ್ತಿ (2.10.2020) ಬೆಳಗ್ಗೆ 2.35 |
ಉತ್ತರಾಭಾದ್ರ ಸಮಾಪ್ತಿ (2.10.2020) ಬೆಳಗ್ಗೆ 5.57 |
ಮಧ್ಯಾಹ್ನ 1 ನಂತರ ಒಳ್ಳೆಯ ದಿನ | – |
2.10.2020 | ಶುಕ್ರವಾರ | ಕೃಷ್ಣ ಪಕ್ಷ ಪ್ರತಿಪದೆ ಸಮಾಪ್ತಿ (3.10.2020) ಬೆಳಗ್ಗೆ 4.57 |
ರೇವತಿ ಅಹೋರಾತ್ರ (ಪೂರ್ಣ ದಿವಸ ಮತ್ತು ಪೂರ್ಣ ರಾತ್ರಿ) | ಉತ್ತಮ ದಿನ | ಅಮೃತ ಯೋಗ ಅಹೋರತ್ರ (ಪೂರ್ಣ ದಿವಸ ಮತ್ತು ಪೂರ್ಣ ರಾತ್ರಿ) |
3.10.2020 | ಶನಿವಾರ | ಕೃಷ್ಣ ಪಕ್ಷ ದ್ವಿತೀಯಾ ಅಹೋರಾತ್ರ (ಪೂರ್ಣ ದಿವಸ ಮತ್ತು ಪೂರ್ಣ ರಾತ್ರಿ) | ರೇವತಿ ಸಮಾಪ್ತಿ ಬೆಳಗ್ಗೆ 8.51 |
ಸಾಮಾನ್ಯ ದಿನ | – |
2. ಶಾಸ್ತ್ರಾರ್ಥ
2 ಅ. ಅಧಿಕ ಮಾಸ : ಅಧಿಕ ಮಾಸದ ಬಗ್ಗೆ ಸವಿಸ್ತಾರ ಮಾಹಿತಿ ಈ ಲಿಂಕ್‌ನಲ್ಲಿ ಲಭ್ಯವಿದೆ. ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಹೆಚ್ಚೆಚ್ಚು ನಾಮಜಪ, ದಾನ ಮತ್ತು ಪುಣ್ಯಕರ್ಮಗಳನ್ನು ಮಾಡಬೇಕು. ಇದರ ಫಲವು ಮುಂದಿನ ಅಧಿಕ ಮಾಸದವರೆಗೆ ಪ್ರಾಪ್ತವಾಗುತ್ತದೆ.
2. ಆ. ಕಮಲಾ ಎಕಾದಶಿ : ಹಿಂದೂ ಪಂಚಾಂಗದಲ್ಲಿ ಶುಕ್ಲ ಮತ್ತು ಕೃಷ್ಣಾ ಪಕ್ಷಗಳಲ್ಲಿ ಪ್ರತಿಯೊಂದರಂತೆ ಏಕಾದಶಿಯ ತಿಥಿ ಬರುತ್ತದೆ. ಚೈತ್ರದಿಂದ ಫಾಲ್ಗುಣ ಮಾಸದ ವರೆಗೆ ಒಟ್ಟು 24 ಏಕಾದಶಿಯ ತಿಥಿಗಳಿರುತ್ತವೆ. ಪ್ರತಿಯೊಂದು ಏಕಾದಶಿಯ ತಿಥಿಗೆ ಒಂದೊಂದು ಹೆಸರು ಮತ್ತು ಮಹತ್ವವಿರುತ್ತದೆ. ಅದೇ ರೀತಿ ಅಧಿಕ ಮಾಸದಲ್ಲಿ ಬರುವ ಏಕಾದಶಿಯ ತಿಥಿಗಳಿಗೆ ಕಮಲಾ ಏಕಾದಶಿ ಎಂದು ಕರೆಯುತ್ತಾರೆ. ಇನ್ನೊಂದು ಹೆಸರು ಪದ್ಮಿನಿ ಏಕಾದಶಿ. ಅಧಿಕ ಮಾಸದಲ್ಲಿ ಬರುವ ಏಕಾದಶಿಗೆ ಮಾಡುವ ಶ್ರೀ ವಿಷ್ಣುಪೂಜೆಯ ಮಹತ್ವ ಹೆಚ್ಚಿರುತ್ತದೆ.
2 ಇ. ಗಜಗೌರಿ ವ್ರತ : ಆಶ್ವಯುಜ ಮಾಸದಲ್ಲಿ ಸೂರ್ಯನು ಹಸ್ತ ನಕ್ಷತ್ರದಲ್ಲಿ ಪ್ರವೇಶಿಸುತ್ತಾನೆ. ಆ ದಿನದಿಂದ ಗಜಗೌರಿ ವ್ರತದ ಆರಂಭವಾಗುತ್ತದೆ. ಈ ವ್ರತದ ಅಂಗವಾಗಿ ದೇವಿ ಗಜಗೌರಿಯನ್ನು ಆರಾಧಿಸುತ್ತಾರೆ. ಈ ದಿನದಂದು ದೇವಿ ಸ್ತೋತ್ರ, ದೇವಿ ಕವಚ, ಅರ್ಗಲಾ ಸ್ತೋತ್ರ, ಕನಕ ಸ್ತೋತ್ರ, ಮುಂತಾದ ದೇವಿಯ ಸ್ತುತಿಯನ್ನು ಮಾಡುವ ಸ್ತೋತ್ರಗಳನ್ನು ಪಠಿಸುತ್ತಾರೆ. ಇದರಿಂದ ಸಮೃದ್ಧಿಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
2 ಈ. ಲಾಭಪ್ರಾಪ್ತಿಯ ಮುಹೂರ್ತ : ಇದು ಶುಭಮುಹೂರ್ತವಾಗಿದೆ. ಲಾಭಪ್ರಾಪ್ತಿಯ ಮುಹೂರ್ತದಲ್ಲಿ ಕಾರ್ಯಾರಂಭ ಮಾಡಿದರೆ ಅದಕ್ಕೆ ಯಶಸ್ಸು ದೊರೆಯುತ್ತದೆ ಮತ್ತು ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತದೆ. ಜ್ಯೋತಿಷ್ಯದಲ್ಲಿ ಯಾವಾಗ ಸೂರ್ಯ ನಕ್ಷತ್ರದಿಂದ ಚಂದ್ರ ನಕ್ಷತ್ರದ ವರೆಗೆ ಎಣಿಸಿ, ಸಿಗುವ ಸಂಖ್ಯೆಯನ್ನು ಮೂರು ಪಟ್ಟು ಮಾಡಿ, ಸಿಗುವ ಉತ್ತರಕ್ಕೆ ಶುಕ್ಲ ಪಕ್ಷ ಪ್ರತಿಪದೆಯಿಂದ ಬರುವ ತಿಥಿಯನ್ನು ಕೂಡಿಸಬೇಕು. ಈ ಉತ್ತರವನ್ನು 7 ರಿಂದ ಭಾಗಿಸಿದಾಗ 3 ಉಳಿದರೆ ಆ ದಿನದಂದು ಲಾಭಪ್ರಾಪ್ತಿಯ ಮುಹೂರ್ತ ಇದೆ ಎಂದು ಅರ್ಥ.

ಸೂರ್ಯ ನಕ್ಷತ್ರ : ಹಸ್ತ
ಚಂದ್ರ ನಕ್ಷತ್ರ : ಧನಿಷ್ಠಾ
ತಿಥಿ : ಶುಕ್ಲ ಪಕ್ಷ ದ್ವಾದಶಿ
ಹಸ್ತ ಎಂಬ (ಸೂರ್ಯ) ನಕ್ಷತ್ರದಿಂದ ಧನಿಷ್ಠಾ (ಚಂದ್ರ) ನಕ್ಷತ್ರವು 11 ನೇಯದ್ದಾಗಿದೆ.
11 x 3 = 33
ಇದಕ್ಕೆ ಶುಕ್ಲ ಪಕ್ಷ ದ್ವಾದಶಿಯ ತಿಥಿ ಸೇರಿಸಿದರೆ, ಅಂದರೆ 33 + 12 = 45 ಸಿಗುತ್ತದೆ.
ಇದನ್ನು 7 ರಿಂದ ಭಾಗಾಕಾರ ಮಾಡುವುದರಿಂದ ಉಳಿಯುವುದು 3.
28.9.2020 ರಂದು ರಾತ್ರಿ 8.59 ವರೆಗೆ ಶುಕ್ಲ ಪಕ್ಷ ದ್ವಾದಶಿಯ ತಿಥಿ ಮುಗಿಯುವ ವರೆಗೆ ಲಾಭಪ್ರಾಪ್ತಿಯ ಮುಹೂರ್ತವಿದೆ.
2 ಉ. ಭೌಮಪ್ರದೋಷ : ಪ್ರತಿಯೊಂದು ತಿಂಗಳಿನಲ್ಲಿ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯನ್ನು ‘ಪ್ರದೋಷ’ ಎಂದು ಕರೆಯುತ್ತಾರೆ. ಮಂಗಳವಾರದಂದು ಬರುವ ಪ್ರದೋಷಕ್ಕೆ ಭೌಮಪ್ರದೋಷ ಎಂದು ಕರೆಯುತ್ತಾರೆ. ಆರ್ಥಿಕ ಅಡಚಣೆಗಳು ದೂರವಾಗಲು ಭೌಮಪ್ರದೋಷದ ವ್ರತವನ್ನು ಮಾಡುತ್ತಾರೆ. ಪ್ರದೋಷ ವ್ರತದ ಪ್ರಧಾನ ದೇವತೆ ‘ಶಿವ’. ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ ಕರ್ಮಗಳಿಂದ ತಗುಲಿದ ವಿವಿಧ ದೋಷಗಳ ನಿವಾರಣೆಗಾಗಿ, ಹಾಗೂ ಶಿವನನ್ನು ಪ್ರಸನ್ನಗೊಳಿಸಿ ಅನುಗ್ರಹವನ್ನು ಪಡೆಯಲು ಸಂಜೆಯ ಈ ವ್ರತವನ್ನು ಮಾಡುತ್ತಾರೆ. ಪ್ರದೋಷ ವ್ರತವನ್ನು ಪಾಲಿಸುವುದರಿಂದ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗಿ ಆನಂದಪ್ರಾಪ್ತಿಯಾಗುತ್ತದೆ.

2 ಉ. ಅಮೃತ ಯೋಗ : ಅಮೃತ ಯೋಗದಲ್ಲಿ ಯಾವುದೇ ಶುಭಕಾರ್ಯವನ್ನು ಮಾಡುವುದರಿಂದ ಯಶಸ್ಸು ಲಭಿಸುತ್ತದೆ. 2.10.2020 ರಂದು ಈ ಯೋಗವು ಅಹೋರಾತ್ರ ಅಂದರೆ ಪೂರ್ಣ ದಿವಸ ಮತ್ತು ಪೂರ್ಣ ರಾತ್ರಿ ವ್ಯಾಪಿಸುತ್ತದೆ.
3. ಅಧಿಕ ಮಾಸದಲ್ಲಿ ಮಾಡಬೇಕಾದ ಉಪಾಸನೆಯೊಂದಿಗೆ ಈ ವಾರದ ಕೆಲವು ತಿಥಿಗಳ ಮಹತ್ವವನ್ನು ಅರಿತು ಉಪಾಸನೆ ಮಾಡುವುದು ಲಾಭದಾಯಕವಾಗಿದೆ. ಸತ್ಸೇವೆಗೆ ಪ್ರಾಧಾನ್ಯತೆ ನೀಡಿ ಸತತ ಈಶ್ವರೀ ಅನುಸಂಧಾನದಲ್ಲಿದ್ದರೆ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ.
– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, certified dowser, ರಮಲ ಪಂಡಿತ, ಹಸ್ತಾಕ್ಷರ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ.