೧. ಶ್ರೀಕೃಷ್ಣನ ಕುಟುಂಬ
ಅ. ‘ಶ್ರೀಕೃಷ್ಣನ ಸಾಕು ತಂದೆ ನಂದನ ಇವರು ‘ಆಭೀರ’ ಜಾತಿಯವರಾಗಿದ್ದರು. ಪ್ರಸ್ತುತ ಅವರನ್ನು ‘ಅಹೀರ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಶ್ರೀಕೃಷ್ಣನಿಗೆ ಜನ್ಮ ನೀಡಿದ ತಂದೆಯ ಹೆಸರು ವಸುದೇವ ಎಂದಿತ್ತು. ಅವರು ಆರ್ಯರ ಪ್ರಸಿದ್ಧ ‘ಪಂಚ ಜನ’ರಲ್ಲಿ ಒಂದಾದ ‘ಯದು’ ಗಣಕ್ಷತ್ರೀಯರಾಗಿದ್ದರು. ಆ ಸಮಯದಲ್ಲಿ ಅವರನ್ನು ‘ಯಾದವ’ ಎಂದು ಸಂಬೋಧಿಸಲಾಗುತ್ತಿತ್ತು.
ಆ. ವಸುದೇವನು ಶ್ರೀಕೃಷ್ಣನ ಜನ್ಮವಾದ ನಂತರ ಅವನನ್ನು ಗೋಕುಲದಲ್ಲಿ ನಂದನ ಕಡೆಗೆ ತಲುಪಿಸಿದನು ಮತ್ತು ಯಶೋದೆಯು ಜನ್ಮ ನೀಡಿದ ಹೆಣ್ಣು ಮಗುವನ್ನು ಅವನು ಮಥುರೆಗೆ ತಂದನು.
೨. ರಾಧಾ
ಶ್ರೀಕೃಷ್ಣ-ರಾಧೆಯ ಉಲ್ಲೇಖ ಮಹಾಭಾರತ, ಹರಿವಂಶಪುರಾಣ, ವಿಷ್ಣುಪುರಾಣ ಮತ್ತು ಭಾಗವತಪುರಾಣದಲ್ಲಿಲ್ಲ. ಅವರ ಉಲ್ಲೇಖ ಬ್ರಹ್ಮವೈವರ್ತ ಪುರಾಣ, ಗೀತ ಗೋವಿಂದ ಮತ್ತು ಜನಶ್ರುತಿ ಇವುಗಳಲ್ಲಿದೆ. ರಾಧೆ ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದಳು.
ಓದಿ : ರಾಧಾ-ಕೃಷ್ಣ : ವಾಸ್ತವಿಕತೆ ಏನು?
೩. ಶಿಕ್ಷಣ ಮತ್ತು ಸಾಧನೆ
ಅ. ಶ್ರೀಕೃಷ್ಣನು ಔಪಚಾರಿಕ ಶಿಕ್ಷಣವನ್ನು ಕೆಲವು ತಿಂಗಳುಗಳಲ್ಲಿಯೇ ಪೂರ್ಣಗೊಳಿಸಿದನು.
ಆ. ಶ್ರೀಕೃಷ್ಣ ಮತ್ತು ಬಲರಾಮ ಸಾಂದೀಪನಿ ಋಷಿಯ ಗುರುಕುಲ / ಆಶ್ರಮದಲ್ಲಿ ವಾಸವಿದ್ದು ಗುರುಸೇವೆಯೊಂದಿಗೆ ತಮ್ಮ ಶಿಕ್ಷಣ ಪೂರ್ಣಗೊಳಿಸಿದರು.
೪. ಶ್ರೀಕೃಷ್ಣನು ವಾಸಿಸಿದ ನಗರ
ಶ್ರೀಕೃಷ್ಣನು ೨ ನಗರಗಳ ಸ್ಥಾಪನೆಯನ್ನು ಮಾಡಿದ್ದನು – ದ್ವಾರಕಾ (ಮೊದಲಿನ ಕುಶಾವತಿ) ಮತ್ತು ಪಾಂಡು ಪುತ್ರರ ಮಾಧ್ಯಮದಿಂದ ಇಂದ್ರಪ್ರಸ್ಥ (ಮೊದಲಿನ ಖಾಂಡವಪ್ರಸ್ಥ)
೫. ಶ್ರೀಕೃಷ್ಣನ ರಥ ಮತ್ತು ಅಶ್ವಗಳು
ಶ್ರೀಕೃಷ್ಣನ ರಥದ ಹೆಸರು ‘ಜೈತ್ರ’ ಎಂದಿತ್ತು ಮತ್ತು ಅವನ ಸಾರಥಿಯ ಹೆಸರು ದಾರುಕ/ಬಾಹುಕ ಎಂದಿತ್ತು. ಅವನ ಅಶ್ವಗಳ ಹೆಸರು ಶೈವ್ಯ, ಸುಗ್ರೀವ, ಮೇಘಪುಷ್ಪ ಮತ್ತು ಬಲಾಹಕ ಎಂದಿತ್ತು.
೬. ಶ್ರೀಕೃಷ್ಣನ ಆಯುಧಗಳು
ಅ. ಶ್ರೀಕೃಷ್ಣನ ಧನುಷ್ಯದ ಹೆಸರು ‘ಶಾರಂಗ’ ಮತ್ತು ಮುಖ್ಯ ಆಯುಧವಾದ ಚಕ್ರದ ಹೆಸರು ‘ಸುದರ್ಶನ’ ಎಂದಿತ್ತು. ಈ ಚಕ್ರವು ಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ, ಹೀಗೆ ಮೂರು ರೂಪಗಳಲ್ಲಿ ಕಾರ್ಯವನ್ನು ಮಾಡಲು ಸಕ್ಷಮವಾಗಿತ್ತು. ಅವನ ಯೋಗ್ಯತೆಗೆ ಸರಿಸಾಟಿಯಾದ ಕೇವಲ ೨ ವಿಧ್ವಂಸಕ ಅಸ್ತ್ರಗಳಿದ್ದವು – ಪಾಶುಪತಾಸ್ತ್ರ (ಶಿವ, ಶ್ರೀಕೃಷ್ಣ ಮತ್ತು ಅರ್ಜುನರ ಕಡೆಗಿದ್ದವು.) ಮತ್ತು ಪ್ರಸ್ವಪಾಸ್ತ್ರ (ಶಿವ, ವಸುಗಣ, ಭೀಷ್ಮ ಮತ್ತು ಶ್ರೀಕೃಷ್ಣ ಇವರ ಕಡೆಗಿದ್ದವು.)
ಆ. ಕೃಷ್ಣನ ಖಡ್ಗದ ಹೆಸರು ‘ನಂದಕ’, ಗಧೆಯ ಹೆಸರು ‘ಕೌಮೌದಕಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು. ಅದು ಗುಲಾಬಿ ಬಣ್ಣದಾಗಿತ್ತು.
೭. ಸರ್ವಶ್ರೇಷ್ಠ ಧನುರ್ಧರ
‘ಅರ್ಜುನನು ಸರ್ವಶ್ರೇಷ್ಠ ಧನುರ್ಧರನಾಗಿದ್ದನು’, ಎಂದು ತಿಳಿಯಲಾಗುತ್ತದೆ; ಆದರೆ ವಾಸ್ತವದಲ್ಲಿ ಶ್ರೀಕೃಷ್ಣನು ಈ ವಿದ್ಯೆಯಲ್ಲಿ ಸರ್ವಶ್ರೇಷ್ಠನಾಗಿದ್ದನು ಮತ್ತು ಅದು ಸಿದ್ಧವೂ ಆಗಿತ್ತು. ಮದ್ರ ರಾಜಕುಮಾರಿ ಲಕ್ಷ್ಮಣಾ ಇವಳ ಸ್ವಯಂವರದಲ್ಲಿನ ಪ್ರತಿಜ್ಞೆಯು ದ್ರೌಪದಿಯ ಸ್ವಯಂವರದಲ್ಲಿನ ಪ್ರತಿಜ್ಞೆಗಿಂತಲೂ ಕಠಿಣವಾಗಿತ್ತು. ಆಗ ಕರ್ಣ ಮತ್ತು ಅರ್ಜುನರಿಬ್ಬರೂ ವಿಫಲಗಿದ್ದರು. ಆಗ ಶ್ರೀಕೃಷ್ಣನು ಗುರಿಯನ್ನು ಭೇದಿಸಿ ಲಕ್ಷ್ಮಣಾಳ ಇಚ್ಛೆಯನ್ನು ಪೂರ್ಣಗೊಳಿಸಿದನು. ಲಕ್ಷ್ಮಣಾಳು ಸಹ ಶ್ರೀಕೃಷ್ಣನನ್ನು ಮೊದಲೇ ಪತಿಯೆಂದು ನಂಬಿದ್ದಳು.
೮. ಶ್ರೀಕೃಷ್ಣನು ಭಾಗವಹಿಸಿ ಯುದ್ಧಗಳು
ಅ. ಶ್ರೀಕೃಷ್ಣನು ಅನೇಕ ಅಭಿಯಾನಗಳನ್ನು ಮತ್ತು ಯುದ್ಧಗಳ ಸಂಚಾಲನೆಯನ್ನು ಮಾಡಿದನು; ಆದರೆ ಅವುಗಳಲ್ಲಿನ ೩ ಮಹಾಭಯಂಕರವೆಂದರೆ – ಮಹಾಭಾರತ, ಜರಾಸಂಧ ಮತ್ತು ಕಾಲಯವನ ಇವರುಗಳ ವಿರುದ್ಧ ಯುದ್ಧಗಳು, ಹಾಗೆಯೇ ನರಕಾಸುರನ ವಿರುದ್ಧದ ಯುದ್ಧ
ಆ. ಶ್ರೀಕೃಷ್ಣ – ಅರ್ಜುನನ ಯುದ್ಧ : ಗಯೋಪಾಖ್ಯಾನ ಎಂಬ ರಚನೆಯಲ್ಲಿ ಸುಭದ್ರೆಯ ಪ್ರತಿಜ್ಞೆಯಿಂದಾಗಿ ಶ್ರೀಕೃಷ್ಣ ಯುದ್ಧ ಅರ್ಜುನನೊಂದಿಗೆ ಆಗುತ್ತದೆ ಎಂದಿದೆ. ಅದರಲ್ಲಿ ಇಬ್ಬರೂ ಕ್ರಮವಾಗಿ ಎಲ್ಲಕ್ಕಿಂತ ವಿನಾಶಕಾರಿ ಶಸ್ತ್ರಗಳಾದ ಸುದರ್ಶನಚಕ್ರ ಮತ್ತು ಪಾಶುಪತಾಸ್ತ್ರ ಉಪಯೋಗಿಸಿದ್ದರು. ನಂತರ ದೇವತೆಗಳ ಮಧ್ಯಸ್ಥಿಕೆಯಿಂದ ಇಬ್ಬರೂ ಶಾಂತರಾದರು.
೯. ಶ್ರೀಕೃಷ್ಣನು ವಧಿಸಿದ ರಾಕ್ಷಸರು
ಅ. ಶ್ರೀಕೃಷ್ಣ ೧೬ ವರ್ಷದವನಿದ್ದಾಗ ಅವನು ವಿಶ್ವಪ್ರಸಿದ್ಧ ಚಾಣೂರ ಮತ್ತು ಮುಷ್ಟಿಕರಂತಹ ಮಲ್ಲರನ್ನು ವಧಿಸಿದನು.
ಆ. ಅವನು ಮಥುರೆಯಲ್ಲಿ ದುಷ್ಟ ರಜಕನ ಮೇಲೆ ಬರಿಗೈಯಿಂದ ಪ್ರಹಾರ ಮಾಡಿ ಅವನ ತಲೆಯನ್ನು ಶರೀರದಿಂದ ಬೇರ್ಪಡಿಸಿದನು.
ಇ. ಶ್ರೀಕೃಷ್ಣನು ಆಸಾಮದಲ್ಲಿ ಬಾಣಾಸುರನೊಂದಿಗೆ ಯುದ್ಧವನ್ನು ಮಾಡಿ ಅವನ ಅಹಂಕಾರವನ್ನು ಇಳಿಸಿದನು.
೧೦. ಶ್ರೀಕೃಷ್ಣನ ಕೊನೆಯ ದಿನಗಳು
ಅ. ಕೊನೆಯ ವರ್ಷಗಳನ್ನು ಬಿಟ್ಟರೆ ಶ್ರೀಕೃಷ್ಣನು ದ್ವಾರಕೆಯಲ್ಲಿ ೬ ತಿಂಗಳಿಗಿಂತ ಹೆಚ್ಚು ಸಮಯ ಎಂದಿಗೂ ಇರಲಿಲ್ಲ.
ಆ. ಶ್ರೀಕೃಷ್ಣನು ಪರಮಧಾಮಕ್ಕೆ ಹೋಗುವ ಸಮಯದಲ್ಲಿ ಅವನ ಒಂದೂ ಕೂದಲು ಬೆಳ್ಳಗಾಗಿರಲಿಲ್ಲ, ಹಾಗೆಯೇ ಅವನ ದೇಹಕ್ಕೆ ಒಂದೂ ನೆರಿಗೆ ಕೂಡ ಇರಲಿಲ್ಲ.
ಇ. ಶ್ರೀಕೃಷ್ಣನ ಜನನದ ಸಮಯ ಮತ್ತು ಅವನ ವಯಸ್ಸಿನ ಬಗ್ಗೆ ಪುರಾಣಗಳು ಮತ್ತು ಆಧುನಿಕ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅವನ ಆಯುಷ್ಯ ೧೨೫ ವರ್ಷಗಳಷ್ಟಿತ್ತು ಎಂದರೆ, ಇನ್ನೂ ಕೆಲವರು ೧೧೦ ಇತ್ತು ಎಂದು ಹೇಳುತ್ತಾರೆ.
೧೧. ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯ ರೂಪದಲ್ಲಿ ಆಧ್ಯಾತ್ಮಿಕತೆಯ ವೈಜ್ಞಾನಿಕ ವ್ಯಾಖ್ಯೆಯನ್ನು ಎಲ್ಲರೆದುರು ಇಟ್ಟಿದ್ದಾನೆ. ಅದು ಮಾನವತೆಗಾಗಿ ಆಶೆಯ ಎಲ್ಲಕ್ಕಿಂತ ದೊಡ್ಡ ಸಂದೇಶವಾಗಿದೆ.
(ಅಂತರಜಾಲದಿಂದ ಸಂಗ್ರಹಿಸಿರುವ ಮಾಹಿತಿ)