ಆಷಾಢ ಅಮಾವಾಸ್ಯೆಯಂದು ಅಗ್ನಿಗೆ ಕೃತಜ್ಞತೆಯನ್ನು ಸಲ್ಲಿಸಲು ದೀಪ ಪೂಜೆಯನ್ನು ಮಾಡಬೇಕು.
೧. ದೀಪ ಪೂಜೆಯನ್ನು ಮಾಡುವ ಶಾಸ್ತ್ರ
ದೀಪದ ಜ್ಯೋತಿಯು ಅಗ್ನಿತತ್ವದ ಪ್ರತೀಕವಾಗಿದೆ. ಅಗ್ನಿಗೆ ಕೃತಜ್ಞತೆಯನ್ನು ಸಲ್ಲಿಸಲು ದೀಪ ಪೂಜೆಯನ್ನು ಮಾಡುತ್ತೇವೆ.
೨. ಪಂಚತತ್ತ್ವಗಳಲ್ಲಿ ಒಂದಾದ ಅಗ್ನಿತತ್ತ್ವದ ಅಸಾಮಾನ್ಯ ಮಹತ್ವ
ಈ ಸಮಸ್ತ ಸೃಷ್ಟಿಯು ಪಂಚತತ್ತ್ವಗಳಿಂದ ಅಂದರೆ ಪೃಥ್ವಿ, ನೀರು (ಆಪ), ಅಗ್ನಿ (ತೇಜ), ವಾಯು ಮತ್ತು ಆಕಾಶ ಈ ತತ್ತ್ವಗಳಿಂದ ನಿರ್ಮಾಣವಾಗಿದೆ. ಈ ಪಂಚತತ್ತ್ವಗಳಲ್ಲಿ ಅಗ್ನಿ ತತ್ತ್ವದ ಮಹತ್ತ್ವವು ಅಸಾಮಾನ್ಯವಾಗಿದೆ. ನೇತ್ರಗಳು (ಕಣ್ಣುಗಳು) ಇವು ಅಗ್ನಿತತ್ತ್ವಕ್ಕೆ ಸಂಬಂಧಪಡುವ ಜ್ಞಾನೇಂದ್ರಿಯಗಳು, ಅಗ್ನಿ ತತ್ತ್ವದ ಕಾರಣ ನಮಗೆ ನಮ್ಮ ಮುಂದಿರುವ ವಸ್ತುವು ಕಾಣಿಸುತ್ತದೆ. ಅಗ್ನಿಯು ತನ್ನ ಪ್ರಕಾಶದಿಂದ ಅಂಧಕಾರವನ್ನು ದೂರಗೊಳಿಸಿ ಸತ್ಯದ ಜ್ಞಾನವನ್ನು ಪ್ರದಾನಿಸುತ್ತದೆ. ಸಮಸ್ತ ಪ್ರಾಣಿಗಳ ಹೊಟ್ಟೆಯಲ್ಲಿರುವ ‘ವೈಶ್ವಾನರ’ ಕೂಡ ಇದೇ ಅಗ್ನಿಯ ರೂಪ. ಈ ಅಗ್ನಿಯಿಂದ ನಾವು ಸೇವಿಸುವ ಅನ್ನವು ಜೀರ್ಣವಾಗುತ್ತದೆ. ಗ್ರಹಗಳ ಅಧಿಪತಿ ಸೂರ್ಯನೂ ಅಗ್ನಿಯ ರೂಪವೇ. ಈ ಸೂರ್ಯನು ಸೃಷ್ಟಿಯನ್ನೇ ಸಂಭಾಳಿಸುತ್ತಾನೆ.
ವೈದಿಕ ಸಮಯದಲ್ಲಿ ಅಗ್ನಿದೇವತೆಗೆ ಸರ್ವೋಚ್ಚ ಸ್ಥಾನವನ್ನು ನೀಡಲಾಗಿತ್ತು. ಋಗ್ವೇದದಲ್ಲಿ ಅಗ್ನಿಯನ್ನು ಸಂಬೊಧಿಸುವಾಗ ‘ಹೋತಾ’ ಎಂಬ ವಿಶೇಷಣವನ್ನು ಉಪಯೋಗಿಸಲಾಗಿದೆ. ‘ಹೋತಾ’ ಅಂದರೆ ದೇವತೆಗಳನ್ನು ಅಥವಾ ಶಕ್ತಿಯನ್ನು ಆಹ್ವಾನಿಸುವ ಮಾಧ್ಯಮ. ಯಜ್ಞದ ಪ್ರಧಾನ ದೇವತೆಯನ್ನು ಆಹ್ವಾನಿಸಿದ ಮೇಲೆ ಯಜ್ಞದ ಅಗ್ನಿಯು ಆ ದೇವತೆಗೆ ಹವಿಸ್ಸನ್ನು ತಲುಪಿಸುತ್ತದೆ. ಆದುದರಿಂದ ಅಗ್ನಿಯನ್ನು ಮನುಷ್ಯರನ್ನು ಮತ್ತು ದೇವತೆಗಳನ್ನು ಜೋಡಿಸುವ ಕೊಂಡಿ ಎಂದು ಪರಿಗಣಿಸಲಾಗಿದೆ.
(ಆಧಾರ : ಭಾರತೀಯ ಸಂಸ್ಕೃತಿಕೋಶ, ಮೊದಲನೇ ಖಂಡ, ೭೮ನೇ ಪುಟ)
೩. ದೀಪಾನ್ವಿತ್ ಅಮಾವಾಸ್ಯೆ
ಆಷಾಢ ಅಮಾವಾಸ್ಯೆಯನ್ನು ದೀಪಾನ್ವಿತ್ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಈ ದಿನದಂದು ದೀಪಗಳ ಪೂಜೆಯನ್ನು ಮಾಡುತ್ತಾರೆ. ಸುಮಂಗಲೆಯರು ಮನೆಯಲ್ಲಿರುವ ದೀಪಗಳ ಸ್ವಚ್ಛತೆ ಮಾಡಿ, ಅವುಗಳನ್ನು ಒಂದೆಡೆ ಸೇರಿಸಿ, ದೀಪಗಳನ್ನು ಅಲಂಕರಿಸಿ, ಅವುಗಳ ಸುತ್ತ ರಂಗೋಲಿಯನ್ನು ಬಿಡಿಸುತ್ತಾರೆ. ಈ ದೀಪಗಳನ್ನು ಉರಿಸಿ, ಅವುಗಳ ಪೂಜೆಯನ್ನು ಮಾಡುತ್ತಾರೆ. ನೈವೇದ್ಯವನ್ನು ಇಟ್ಟು, ಮುಂದೆ ನೀಡಿರುವ ಮಂತ್ರಗಳನ್ನು ಹೇಳಿ ದೀಪಗಳಿಗೆ ಪ್ರಾರ್ಥನೆಯನ್ನು ಮಾಡುತ್ತಾರೆ.
ದೀಪ ಸೂರ್ಯಾಗ್ನಿರೂಪಾಸ್ತ್ವಮ್ ತೇಜ ಉತ್ತಮಮ್ |
ಗೃಹಾಣ ಮತ್ಕೃತಾಂ ಪೂಜಾಮ್ ಸರ್ವಕಾಮಪ್ರದೋ ಭಾವ ||
ಅರ್ಥ : ಹೇ ಸೂರ್ಯ ರೂಪ ಮತ್ತು ಅಗ್ನಿ ರೂಪ ದೀಪವೇ, ತೇಜಗಳಲ್ಲಿ ನಿನ್ನ ತೇಜ ಅತ್ಯುತ್ತಮವಾಗಿದೆ. ನಾನು ಮಾಡಿರುವ ಪೂಜೆಯನ್ನು ಸ್ವೀಕರಿಸಿ, ನನ್ನೆಲ್ಲ ಇಚ್ಛೆಗಳನ್ನು ಪೂರ್ಣಗೊಳಿಸು.
ಇದಾದ ನಂತರ ದೀಪದ ಕಥೆಯನ್ನು ಕೇಳುತ್ತಾರೆ. ಈ ರೀತಿ ದೀಪ ಪೂಜೆಯನ್ನು ಮಾಡುವುದರಿಂದ ಆಯುರಾರೋಗ್ಯ ಮತ್ತು ಧನಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
(ಆಧಾರ : ಭಕ್ತಿಕೋಶ, ಖಂಡ ೪, ಪುಟ ಸಂಖ್ಯೆ ೮೭೭)
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಗೋವಾ
೪. ದೀಪ ಪೂಜೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭಗಳು
ಅ. ಆಷಾಢ ಅಮಾವಾಸ್ಯೆಯಂದು ದೀಪದ ಪೂಜೆಯನ್ನು ಮಾಡುವುದರಿಂದ ದೀಪಕ್ಕೆ ತೇಜತತ್ತ್ವವಿರುವ ಸಾತ್ತ್ವಿಕತೆ ಮತ್ತು ಚೈತನ್ಯವು ದೊರೆಯುತ್ತದೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿಂದ ಅದರ ರಕ್ಷಣೆಯಾಗುತ್ತದೆ.
ಆ. ವಾತಾವರಣದಲ್ಲಿರುವ ರಜ-ತಮದ ತರಂಗಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ದೀಪದ ಸುತ್ತಲೂ ನಿರ್ಮಾಣವಾಗಿರುವ ಸೂಕ್ಷ್ಮ ಆವರಣವು ದೀಪದ ಪೂಜೆಯಿಂದ ನಷ್ಟವಾಗುತ್ತದೆ.
ಇ. ದೀಪದಲ್ಲಿ ದೇವತಾತತ್ತ್ವವು ಇರುತ್ತದೆ. ದೀಪ ಪೂಜೆಯನ್ನು ಮಾಡುವುದರಿಂದ ಅದು ಜಾಗೃತವಾಗಿ ವರ್ಷವಿಡೀ ಅದು ಕಾರ್ಯನಿರತವಾಗಿರುತ್ತದೆ.
ಈ. ದೀಪದ ಸುತ್ತಲೂ ಅಗ್ನಿನಾರಾಯಣನ ತೇಜತತ್ತ್ವದ ಅಭೇದ್ಯ ರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ಇದರಿಂದ ಇಡೀ ವರ್ಷ ದೀಪಕ್ಕೆ ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಣೆ ಸಿಗುತ್ತದೆ.
ಉ. ದೀಪದ ಪೂಜೆಯನ್ನು ಮಾಡುವುದರಿಂದ ಕೆಟ್ಟ ಶಕ್ತಿಗಳೊಂದಿಗೆ ಹೊರಡುವ ಸಾಮರ್ಥ್ಯವು ಆ ದೀಪದಲ್ಲಿ ಹೆಚ್ಚಾಗುತ್ತದೆ, ಮತ್ತು ಈ ಸಾಮರ್ಥ್ಯವು ವರ್ಷವಿಡೀ ಕಾರ್ಯನಿರತವಾಗಿರುತ್ತದೆ.
ಊ. ದೇಪವೆಂದರೆ ಈಶ್ವರನ ‘ಸೇವಕಭಾವ’ದ ಭಕ್ತ. ದೀಪ ಪೂಜೆಯನ್ನು ಮಾಡುವುದರಿಂದ ಪೂಜೆಯನ್ನು ಆ ಭಕ್ತ ರೂಪದಲ್ಲಿರುವ ದೀಪ ಪ್ರಸನ್ನವಾಗುತ್ತದೆ, ಮತ್ತು ಭಕ್ತನ ಪ್ರಸನ್ನತೆಯಿಂದ ದೇವರು ಪ್ರಸನ್ನರಾಗುತ್ತಾರೆ. ಇದರಿಂದ ಪೂಜೆ ಮಾಡುವವರಿಗೆ ದೀಪ ಮತ್ತು ದೇವರ ಆಶೀರ್ವಾದವು ಲಭಿಸುತ್ತದೆ.
ಋ. ದೀಪವು ನಿರಂತರ ಸಾಧನೆಯನ್ನು ಮಾಡುತ್ತಿರುತ್ತದೆ. ಆದುದರಿಂದ ದೀಪ ಪೂಜೆಯನ್ನು ಮಾಡುವುದರಿಂದ ದೀಪದ ಸಾಧನೆಯಲ್ಲಿ ಒಂದು ರೀತಿಯಲ್ಲಿ ಸಹಾಯ ಮಾಡಿದಂತೆ ಆಗುತ್ತದೆ. ಇದರಿಂದ ಪೂಜೆ ಮಾಡುವವರ ಸಮಷ್ಟಿ ಸಾಧನೆಯಾಗಿ, ಅದರ ಫಲವು ಲಭಿಸುತ್ತದೆ.
ನಿಮಗಿದು ತಿಳಿದಿರಲಿ !
ಉರಿಯುವ ದೀಪವನ್ನು ಸ್ಪರ್ಶಿಸಿದ ಪಾಪ ದೂರ ಮಾಡಲು ಏನು ಮಾಡಬೇಕು ?
ದೀಪದ ಸಾಧನೆಯು ನಿರಂತರವಾಗಿ ನಡೆಯುತ್ತಿರುತ್ತದೆ. ನಾವು ಅದನ್ನು ಮುಟ್ಟಿದರೆ ಅದರ ಸಾಧನೆಯಲ್ಲಿ ಅಡ್ಡಿಯುಂಟಾಗುತ್ತದೆ. ಮಾತ್ರವಲ್ಲ, ನಾವು ಅದನ್ನು ಸ್ಪರ್ಶಿಸುವುದರಿಂದ ದೀಪದತ್ತ ರಜ-ತಮ ಪ್ರಧಾನ ಲಹರಿಗಳು ಪ್ರಕ್ಷೇಪಿತವಾಗಿ ದೀಪದ ಸುತ್ತಲೂ ತೊಂದರೆ ನೀಡುವ ಶಕ್ತಿಗಳ ಆವರಣವು ನಿರ್ಮಾಣವಾಗಬಹುದು. ಆದುದರಿಂದಲೇ ಹಿಂದೂ ಧರ್ಮದಲ್ಲಿ ಉರಿಯುತ್ತಿರುವ ದೀಪವನ್ನು ಸ್ಪರ್ಶಿಸುವುದು ಪಾಪವೆಂದು ಪರಿಗಣಿಸಲಾಗಿದೆ.
ಉರಿಯುತ್ತಿರುವ ದೀಪವನ್ನು ತಿಳಿಯದೇ ಸ್ಪರ್ಶಿಸುವುದರಿಂದ ತಗಲುವ ಪಾಪವನ್ನು ದೂರಗೊಳಿಸಲು, ಮೊದಲು ಸ್ವಚ್ಛ ನೀರಿನಿಂದ ಕೈ ತೊಳೆದು, ದೀಪದ ಮುಂದೆ ನಿಂತು ಕಳಕಳಿಯಿಂದ ಕ್ಷಮೆಯಾಚಿಸಬೇಕು. ಇದರಿಂದ ಪಾಪಕ್ಷಾಲನೆಯಾಗಿ ತಗುಲಿದ ದೋಷವು ದೂರವಾಗುತ್ತದೆ.
ದೀಪ ಉರಿಸಿದ ನಂತರ ಅದನ್ನು ಪುನಃ ಪುನಃ ಮುಟ್ಟುವುದು ಅಯೋಗ್ಯವಾಗಿದೆ. ಈ ರೀತಿ ‘ಉರಿಯುತ್ತಿರುವ ದೀಪವನ್ನು ಸ್ಪರ್ಶಿಸಬೇಕು’ ಎಂದು ಯಾವುದೇ ವಿಧಿ-ವಿಧಾನದಲ್ಲಿ ಹೇಳಲಿಲ್ಲ. – ವೇದಮೂರ್ತಿ ಕೇತನ ಶಹಾಣೆ
ಆಶಡ ಅಮವಾಸ್ಯೆಯ ಶುಭಾಶಯಗಳು
ತುಂಬ ಉಪಯುಕ್ತ ಮಹಿತಿ ಕೂಡುವುದಕ್ಕೆ ಅನಂತ ನಮನಗಳು