ಅ. ನಾಮಜಪದಲ್ಲಿ ಉಂಟಾಗುವ ಅಡಚಣೆಗಳನ್ನು ದೂರಗೊಳಿಸಲು ಮಾಡಬೇಕಾದ ವಿವಿಧ ಉಪಾಯಗಳು : ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಅಥವಾ ಇನ್ನಿತರ ಸಮಯಗಳಲ್ಲಿ ನಾಮಜಪವನ್ನು ಮಾಡುವಾಗ ‘ನಿದ್ದೆ ಬರುವುದು’, ‘ನಾಮಜಪ ನೆನಪಾಗದೇ ಇರುವುದು’, ‘ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದು’, ‘ನಾಮಜಪದಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗದೇ ಇರುವುದು’, ಮುಂತಾದ ಅನೇಕ ಅಡಚಣೆಗಳನ್ನು ಎದುರಿಸುತ್ತೇವೆ. ನಾಮಜಪವು ಏಕಾಗ್ರತೆಯಿಂದ ಆಗಲು ಮುಂದಿನ ಉಪಾಯಗಳನ್ನು ಮಾಡಬಹುದು :
ಆ. ನಾಮಜಪ ಮಾಡುವಾಗ ಮುಂಪರು / ನಿದ್ದೆ ಬರುವುದು
ಆ ೧. ನೀರು ಸಿಂಪಡಿಸುವುದು : ಮುಖದ ಮೇಲೆ ಅಥವಾ ಕಿವಿಯಲ್ಲಿ ನೀರಿನ ಹನಿಗಳನ್ನು ಚಿಮುಕಿಸಿ. ಪರಾತ್ಪರ ಗುರು ಡಾ. ಆಠವಲೆಯವರು ಕೂಡ ಸೇವೆ ಮಾಡುವಾಗ ನಿದ್ದೆ ಬರುತ್ತಿದ್ದರೆ ಎದ್ದು ಮುಖ ತೊಳೆದುಕೊಂಡು ಬರುತ್ತಾರೆ. ಅವರ ಆದರ್ಶವನ್ನು ಇಟ್ಟುಕೊಳ್ಳಿ.
ಆ ೨. ಸತತವಾಗಿ ಕರ್ಪೂರ, ಅತ್ತರ್ ಮತ್ತು ಉರಿಸದಿರುವ ಊದುಬತ್ತಿಯಿಂದ ಉಪಾಯ ಮಾಡಬೇಕು.
ಆ ೩. ನಾಮಜಪ ಬರೆಯುವುದು ಮತ್ತು ಓದುವುದು : ಸ್ವಲ್ಪ ಸಮಯ ನಾಮಜಪವನ್ನು ಬರೆಯಬೇಕು. ನಿದ್ದೆ ಮಂಪರು ಕಡಿಮೆಯಾದ ಮೇಲೆ ಬರೆದಿರುವ ನಾಮಜಪದ ಮೇಲೆ ಲೇಖನಿ ಅಥವಾ ಪೆನ್ಸಿಲಿನ ಹಿಂದಿನ ಬದಿಯನ್ನು ತಿರುಗಿಸಿ ನಾಮಜಪವನ್ನು ಓದಬೇಕು. ಮುಂದೆ ಮನಸ್ಸಿನಲ್ಲಿಯೇ ನಮಜಪ ಮಾಡಬೇಕು. ಹೀಗೆ ಒಂದರ ಹಿಂದೆ ಒಂದರಂತೆ ಈ ಕೃತಿಗಳನ್ನು ಮಾಡುವುದರಿಂದ ನಿದ್ದೆಯ ಮೇಲೆ ನಿಯಂತ್ರಣವನ್ನು ಸಾಧಿಸಿ ಏಕಾಗ್ರತೆಯಿಂದ ನಾಮಜಪ ಮಾಡಬಹುದು.
ಆ ೪. ಜಪದ ವೇಗವನ್ನು ಬದಲಾಯಿಸುವುದು : ತಾರಕ, ಮಾರಕ, ಅಥವಾ ವೇಗವಾಗಿ ಈ ರೀತಿ ನಾಮಜಪವನ್ನು ಮಾಡಿ ಯಾವುದರಿಂದ ಮಂಪರು ಕಡಿಮೆಯಾಗುತ್ತದೆ ಎಂದು ನೋಡಬಹುದು.
ಆ ೫. ಎದ್ದು ನಿಂತು ಜಪ ಮಾಡುವುದು : ನಿದ್ದೆಯನ್ನು ತಡೆಯಲು ಸಾಧ್ಯವಿಲ್ಲದಿದ್ದರೆ ಎದ್ದು ನಿಂತು ಜಪ ಮಾಡಬೇಕು. ಸಾಧ್ಯವಿದ್ದರೆ ಒಂದು ಕಾಲಿನ ಮೇಲೆ ನಿಂತು ಕೂಡ ಜಪ ಮಾಡಬಹುದು.
ಆ ೬. ಕುಳಿತಲ್ಲಿಂದ ಎದ್ದು ಸ್ವಲ್ಪ ತಿರುಗಾಡಿ ನಾಮಜಪ ಮಾಡಬೇಕು.
ಆ ೭. ನಾಮಜಪದಲ್ಲಿ ಏಕಾಗ್ರತೆ ಇಲ್ಲದಿರುವುದು
ಆ ೭ ಅ. ಭಜನೆಗಳನ್ನು ಕೇಳುವುದಕ್ಕಿಂತ ‘ಸ್ವಲ್ಪ ಸಮಯ ನಾಮಜಪ, ಸ್ವಲ್ಪ ಸಮಯ ಭಜನೆ ಕೇಳುವುದು, ಸ್ವಲ್ಪ ಸಮಯ ನಾಮಜಪ ಬರೆಯುವುದು’ ಈ ರೀತಿ ಮಾಡುವುದು : ನಾಮಜಪ ಮಾಡುವಾಗ ಅನೇಕ ಸಾಧಕರು ಕಿವಿಗೆ ಈಯರ್‌ಫೋನ್ ಹಾಕಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿಯೇ ಭಜನೆಗಳನ್ನು ಹಾಡುವುದರಿಂದ ಮನಸ್ಸು ನಾಮಜಪದ ಮೇಲೆ ಏಕಾಗ್ರವಾಗುವುದಿಲ್ಲ. ಕೆಲವೊಮ್ಮೆ ಭಜನೆಯ ಚೈತನ್ಯ ಸಹಿಸಲು ಆಗದಿರುವುದರಿಂದಲೂ ನಿದ್ದೆ ಬರಬಹುದು. ಆಗ ಸತತವಾಗಿ ಭಜನೆ ಕೇಳುವುದಕ್ಕಿಂತ ಸ್ವಲ್ಪ ಸಮಯ ನಾಮ ಜಪಿಸುವುದು, ಸ್ವಲ್ಪ ಸಮಯ ಭಜನೆ ಕೇಳುವುದು, ಸ್ವಲ್ಪ ಸಮಯ ನಾಮಜಪ ಬರೆಯುವುದು ಈ ರೀತಿ ಮಾಡಬೇಕು. ಪ.ಪೂ. ಡಾಕ್ಟರರು ನಮಗೆ ‘ಭಜನೆಯಲ್ಲಿ ಸಿಲುಕಬೇಡಿ’ ಎಂದು ಕಲಿಸಿದ್ದಾರೆ, ಆ ತತ್ತ್ವವನ್ನು ನೆನಪಿಟ್ಟುಕೊಳ್ಳಿ.
ಆ ೭ ಆ. ಭಾವಪೂರ್ಣ ನಾಮಜಪ ಆಗದಿರುವುದು
ಆ ೭ ಇ. ಪ.ಪೂ. ಡಾಕ್ಟರರು ಹೇಳಿಕೊಟ್ಟಿರುವ ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಗಾಂಭೀರ್ಯತೆಯಿಂದ ಮಾಡುವುದು : ಪ.ಪೂ. ಡಾಕ್ಟರರು ಕೆಲವು ಸಮಯದ ಹಿಂದೆ ‘ಸ್ವಭಾವದೋಷಗಳು ಹೆಚ್ಚಿರುವುದರಿಂದ ನಾಮಜಪವು ಭಾವಪೂರ್ಣವಾಗಿ ಆಗುವುದಿಲ್ಲ, ಆದುದರಿಂದ ಸ್ವಭಾವದೋಷಗಳ ನಿರ್ಮೂಲನೆಯತ್ತ ಹೆಚ್ಚು ಗಮನ ಹರಿಸಬೇಕು’ ಎಂದು ಹೇಳಿದ್ದರು. ಅವರ ಆಜ್ಞೆಯನ್ನು ನಾವು ಪಾಲಿಸುತ್ತಿದ್ದೇವೆಯೇ ಎಂದು ಸಾಧಕರು ನೋಡಬೇಕು.
ಆ ೭ ಇ. ನಾಮಜಪ ನೆನಪಾಗದೇ ಇರುವುದು
ಶ್ರೀ ಕೃಷ್ಣನಿಗೆ ಪ್ರಾರ್ಥನೆ ಮಾಡುವುದು : ‘ನನಗೆ ನಾಮಜಪವು ನೆನಪಿನಲ್ಲಿರಲಿ’ ಎಂದು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸಬೇಕು. ಆದರೂ ನೆನಪಾಗದಿದ್ದರೆ ಪುಸ್ತಕದಲ್ಲಿ ಬರೆದಿರುವ ಜಪವನ್ನು ಸ್ವಲ್ಪ ಸಮಯದ ವರೆಗೆ ಓದಬೇಕು. ಅದೂ ಇಲ್ಲದಿದ್ದರೆ ಜಪವನ್ನು ಬರೆದು ಓದಬೇಕು.
– (ಪೂ.) ಶ್ರೀ. ಅಶೋಕ್ ಪಾತ್ರೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧.೯.೨೦೧೫)