ಲೇಖನ ೧ | ಲೇಖನ ೩ | ಲೇಖನ ೪ | ಲೇಖನ ೫
ಆಪತ್ಕಾಲವು ಸ್ವಲ್ಪ ಮಟ್ಟದಲ್ಲಿ ಆರಂಭವಾಗಿರುವ ಲಕ್ಷಣಗಳ ಕೆಲವು ನೈಸರ್ಗಿಕ ವಿಪತ್ತುಗಳು ಮತ್ತು ಅಂತರಾಷ್ಟ್ರೀಯ ಘಟನೆಗಳು
ಅ. ನೈಸರ್ಗಿಕ ವಿಪತ್ತುಗಳು
ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ನೈಸರ್ಗಿಕ ವಿಪತ್ತುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದರ ಇತ್ತೀಚಿನ ಕೆಲವು ಉದಾಹರಣೆಗಳನ್ನು ನೋಡೋಣ. 2013 ರಲ್ಲಿ ಕೇದಾರನಾಥದಲ್ಲಿ ಜಲಪ್ರಳಯವಾಗಿ ೬೦ ಗಾಮಗಳ ಹಾನಿಯಾಗಿ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಮರಣಹೊಂದಿದರು. 2017 ರಲ್ಲಿ ಕೇರಳದಲ್ಲಿ ನೆರಹಾವಳಿಯಿಂದಾಗಿ ೩ ಲಕ್ಷ ಜನರು ನಿರಾಶ್ರಿತರಾದರು, 375 ಕ್ಕೂ ಹೆಚ್ಚು ಜನರು ತಮ್ಮ ಜೀವ ಕಳೆದುಕೊಂಡರು. ಡಿಸೆಂಬರ 2017 ರಲ್ಲಿ ಇಂಡೋನೇಶಿಯಾದ ಸಮುದ್ರದಲ್ಲಿ ಜ್ವಾಲಮುಖಿಯ ಸ್ಫೊಟವಾಗಿ ಬಂದ ಸುನಾಮಿಯಲ್ಲಿ ಸುಮಾರು 300 ಜನರು ಮರಣ ಹೊಂದಿದರು. ಕ್ಯಾಲಿಫೊರ್ನಿಯಾ (ಅಮೇರಿಕಾ) ದ ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ೨ ಬಾರಿ ದೊಡ್ಡ ಬೆಂಕಿ ಹೊತ್ತಿಕೊಂಡು ನೂರಾರು ಎಕರೆ ಭೂಮಿಯ ಮೇಲೆ ನೈಸರ್ಗಿಕ ಸಂಪತ್ತು ನಾಶವಾಯಿತು.
ಆ. ಮೂರನೇ ಮಹಾಯುದ್ಧಕ್ಕೆ ಕಾರಣಿಭೂತವಾಗಿರುವ ಕೆಲವು ಅಂತರಾಷ್ಟ್ರೀಯ ಘಟನೆಗಳು
ನಿರಂತರವಾಗಿ ಭಾರತದೊಂದಿಗೆ ಜಗಳ, ಮತ್ತು ಭಯೋತ್ಪಾದಕರ ಮೂಲಕ ಭಾರತದ ವಿರುದ್ಧ ಮಾಡುತ್ತಿರುವ ಪರೋಕ್ಷ ಯುದ್ಧ, ಚೀನಾದಿಂದ ಪದೇಪದೇ ಭಾರತದ ಗಡಿಯಲ್ಲಿ ನುಸುಳುವಿಕೆ, ಉತ್ತರ ಕೊರಿಯಾ ಕಡೆ ಇರುವ ಅಣ್ವಸ್ತ್ರಗಳನ್ನು ನಷ್ಟಗೊಳಿಸುವುದರ ಬಗ್ಗೆ ಆದ ಉತ್ತರ ಕೊರಿಯಾ-ಅಮೇರಿಕಾದ ಸಂಘರ್ಷ, ಬಲಿಷ್ಠ ರಾಷ್ಟ್ರವಾಗುವ ಚೀನಾದ ಮಹತ್ವಾಕಾಂಕ್ಷೆಗಳಿಂದ ಚೀನಾ-ಅಮೇರಿಕಾ ನಡುವಿನ ಸಂಘರ್ಷ, ಅಮೇರಿಕಾ ಮತ್ತು ರಶಿಯಾ ಇವರಲ್ಲಿ ಪುನಃ ಪ್ರಾರಂಭವಾದ ಶೀತಲ ಸಮ, ‘ಕೊರೊನಾ ವಿಷಾಣುಗಳ ಆಪತ್ತು ಚೀನಾನಿಂದಲೇ ಉದ್ಭವಿಸಿದೆ’ ಎಂದು ಹೇಳುತ್ತ ಅಮೇರಿಕದೊಂದಿಗೆ ಕೆಲವು ಯುರೋಪಿಯನ್ ದೇಶಗಳು ಚೀನಾಗೆ ಶಿಕ್ಷೆಯನ್ನು ವಿಧಿಸಲು ಮಾಡುತ್ತಿರುವ ಪ್ರಯತ್ನಗಳು, ಮುಂತಾದ ಘಟನೆಗಳ ವಿಚಾರ ಮಾಡಿದರೆ ಭಾರತ ಸೇರಿ ಜಗತ್ತಿನ ಅನೇಕ ದೇಶಗಳ ಮೇಲೆ ಮೂರನೇ ಮಹಾಯುದ್ಧದ ಸಂಕಟವು ಯಾವುದೇ ಕ್ಷಣದಲ್ಲಿ ಬಂದೆರಗಬಹುದು.
‘ಆಪತ್ಕಾಲದಲ್ಲಿ ಪರಿಸ್ಥಿತಿಯು ಹೇಗೆ ಭಯಂಕರವಾಗಿರುತ್ತದೆ’, ಎಂಬುದನ್ನು ತೋರಿಸುವ ಕೆಲವು ಉದಾಹರಣೆಗಳು
ಅ. ಎರಡನೇ ಮಹಾಯುದ್ಧದ ಸಮಯದ ಸ್ಥಿತಿ
ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯು ಬ್ರಿಟನ್ನಿನ ವಿರುದ್ಧ ಯುದ್ಧವನ್ನು ಸಾರಿತು. ಆದುದರಿಂದ ಬ್ರಿಟನ್ನಿನಲ್ಲಿ ಮೊದಲ ೪ ದಿನಗಳಲ್ಲಿಯೇ ೧೩ ಲಕ್ಷ ಜನರ ಸ್ಥಲಾಂತರ ಮಾಡಬೇಕಾಯಿತು. ಯುದ್ಧಕಾಲದಲ್ಲಿ ವಿದ್ಯುತ್‌ಪೂರೈಕೆಯನ್ನು ನಿಲ್ಲಿಸಿದರು. ರಾತ್ರಿ ಹೊರಗೆ ರಸ್ತೆಯ ಮೇಲೆ ಕಗ್ಗತ್ತಲು ಇರುತ್ತಿತ್ತು. ಕಿಟಕಿಯಿಂದ ಅಥವಾ ಬಾಗಿಲಿನಿಂದ ಮಸುಕಾದ ಬೆಳಕು ಹೊರಗೆ ಬಂದರೂ, ಶಿಕ್ಷೆಯಾಗುತ್ತಿತ್ತು ! ಇಷ್ಟೊಂದು ಕಠೋರವಾದ ನಿರ್ಬಂಧವು ೧-೨ ದಿನ ಅಥವಾ ತಿಂಗಳಲ್ಲ, ೫ ವರ್ಷಗಳ ಕಾಲ ಪಾಲಿಸಬೇಕಾಗಿತ್ತು ! ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯು ರಶಿಯಾವನ್ನು ಕೋಡ ಸಂಕಟದಲ್ಲಿ ಸಿಕ್ಕಿಸಿತ್ತು. ಆ ಕಾಲದಲ್ಲಿ ಜನತೆಯ ಮೇಲೆ ಗಿಡಗಳ ಎಲೆ, ಕಟ್ಟಿಗೆಯ ಪುಡಿಯನ್ನು ಸೇರಿಸಿ ತಯಾರಿಸಿದ ‘ಕೇಕ್’ ನಂತಹ ಪದಾರ್ಥಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಮಯ ಬಂದಿತ್ತು !
ಆ. ೨೦೧೫ ರಲ್ಲಿ ನೇಪಾಳದಲ್ಲಿ ಭೂಕಂಪವಾದ ನಂತರ ಅಲ್ಲಿ ನಿರ್ಮಾಣವಾದ ಪರಿಸ್ಥಿತಿ ಮತ್ತು ಅದರಿಂದ ಜನತೆಯ ಮೇಲೆ ಬಂದೆರಗಿದ ಕೆಲವು ಪ್ರಸಂಗಗಳು
ಆ ೧. ಅಡುಗೆ ಅನಿಲದ (ಗ್ಯಾಸ್) ಕೊರತೆಯಿಂದ ಜನತೆಯ ಮೇಲೆ ಬಂದೆರಗಿದ ಕಠಿಣ ಪ್ರಸಂಗಗಳು
ಆ ೧ ಅ. ಗ್ಯಾಸ ಸಿಲಿಂಡರಿನ ಕಳ್ಳಪೇಟೆ
1 ಸಾವಿರ 500 ರೂಪಾಯಿ ಬೆಲೆಯ ಒಂದು ಸಿಲಿಂಡರ್ ಕಳ್ಳಪೇಟೆಯಲ್ಲಿ ಖರೀದಿಸಲು 8 ಸಾವಿರ ರೂಪಾಯಿಗಳನ್ನು ಎಣಿಸಬೇಕಾಗುತ್ತಿತ್ತು.
ಆ ೧ ಆ. ಭೂಕಂಪದಲ್ಲಿ ಕುಸಿದು ಬಿದ್ದ ಮನೆಗಳ ಕಟ್ಟಿಗೆಗಳನ್ನು ಉರುವಲಾಗಿ ಬಳಸಲಾಗುವುದು
ಜನರಿಗೆ ಮುಂದೆ 7 ತಿಂಗಳು ಗ್ಯಾಸ ಸಿಲಿಂಡರ್ ಸಿಗಲಿಲ್ಲ. ಆದುದರಿಂದ ಜನರು ಭೂಕಂಪದಲ್ಲಿ ಕುಸಿದು ಬಿದ್ದ ಮನೆಗಳ ಕಟ್ಟಿಗೆಗಳನ್ನು ಉರುವಲಾಗಿ ಬಳಸಿದರು. ಕೆಲವು ತಿಂಗಳ ನಂತರ ಸರಕಾರವು ಕಟ್ಟಿಗೆಗಳನ್ನು ದೊರಕಿಸಿ ಕೊಟ್ಟಿತು; ಆದರೆ ಆ ಕಟ್ಟಿಗೆಯ ಬೆಲೆಯು ಕೆಜಿ ಒಂದಕ್ಕೆ 20 ರೂಪಾಯಿಗಳಷ್ಟು ದುಬಾರಿಯಾಗಿತ್ತು.
ಆ ೧ ಇ. ಉರುವಲು ಎಂದು ಕಟ್ಟಿಗೆಗಳನ್ನು ಬಳಸುವಾಗ ಉದ್ಭವಿಸಿದ ಸಮಸ್ಯೆಗಳು
೧. ಕಟ್ಟಿಗೆ ಮಾರಾಟಗಾರರು ಹಸಿ ಸೌದೆಗಳನ್ನೂ ಮಾರುತ್ತಿದ್ದರು. ಹಸಿ ಸೌದೆಗಳು ಬೇಗ ಉರಿಯದಿರುವುದರಿಂದ ಮಹಿಳೆಯರಿಗೆ ಒಲೆಯುರಿಸಲು ತೊಂದರೆಯಾಗುತ್ತಿತ್ತು.
೨. ಅನೇಕರಲ್ಲಿ ಸೌದೆಗಳನ್ನು ಒಡೆಯಲು ಕೊಡಲಿ ಇಲ್ಲದಿರುವುದರಿಂದ ಮತ್ತು ಕೆಲವರಿಗೆ ‘ಕೊಡಲಿಯಿಂದ ಸೌದೆಗಳನ್ನು ಹೇಗೆ ಒಡೆಯುತ್ತಾರೆ ?’, ಎಂಬುದು ಗೊತ್ತಿಲ್ಲದಿರುವುದರಿಂದ ಅವರಿಗೆ ಆ ಸೌದೆಗಳನ್ನು ಇತರರಿಂದ ಒಡೆದುಕೊಳ್ಳಬೇಕಾಗುತ್ತಿತ್ತು.
೩. ಬಾಡಿಗೆ ಮನೆಗಳಲ್ಲಿರುವ ಜನರಿಗೆ ಮನೆ ಮಾಲೀಕರು ಮನೆಯಲ್ಲಿ ಒಲೆಯ ಮೇಲೆ ಅಡುಗೆ ತಯಾರಿಸಲು ಅನುಮತಿ ಕೊಡುತ್ತಿರಲಿಲ್ಲ. ‘ಒಲೆಯ ಹೊಗೆಯಿಂದ ಮನೆಯ ಗೋಡೆಗಳು ಕಪ್ಪಾಗುವುದು’, ಎಂದು ಮನೆಯ ಮಾಲೀಕರು ಹೇಳುತ್ತಿದ್ದರು.
ಆ ೧ ಈ. ಗ್ಯಾಸ ಸಿಲಿಂಡರ್ ಸಿಕ್ಕಿದರೂ ಮನೆಗೆ ತೆಗೆದುಕೊಂಡು ಹೋಗಲು ವಾಹನಗಳಿಲ್ಲದಿರುವುದು
ಅನೇಕ ದಿನಗಳ ನಂತರ ಕೆಲವು ಸಿಲಿಂಡರ ಲಭ್ಯವಾದವು; ಆದರೆ ಪೆಟ್ರೋಲ್/ಡೀಸೆಲ್ ಕೊರತೆಯಿಂದಾಗಿ ವಾಹನಗಳ ಓಡಾಟ ಇಲ್ಲದಿರುವುದರಿಂದ ಆ ಸಿಲಿಂಡರನ್ನು ಸ್ವಂತ ಮನೆಯವರೆಗೆ ತೆಗೆದುಕೊಂಡು ಹೋಗುವುದು ಕೂಡ ಕಠಿಣವಾಯಿತು.
ಆ ೨. ದಿನಸಿ ಸಾಮಾನುಗಳ ಕೊರತೆಯಾಗುವುದು
ಆ ಸಮಯದಲ್ಲಿ ದಿನಸಿ ಅಂಗಡಿಗಳಲ್ಲಿ ಸಾಕಷ್ಟು ದಿನಸಿ ದೊರಕುತ್ತಿರಲಿಲ್ಲ. ದೊರಕಿದ ಕೆಲವು ಸಾಮಾನಿನ ಬೆಲೆಯೂ ಎಂದಿಗಿಂತ ನಾಲ್ಕುಪಟ್ಟು ಹೆಚ್ಚು ಹಣ ನೀಡಿ ಖರಿದಿಸಬೇಕಾಗುತ್ತಿತ್ತು, ಉದಾ. ಸಾಮಾನ್ಯವಾಗಿ 100 ರೂಪಾಯಿಗಳಿಂದ 180 ರೂಪಾಯಿಗಳಿಗೆ ಒಂದು ಲೀಟರ ಇರುವ ಗಾಣದ ಎಣ್ಣೆಯು ಲೀಟರ ಒಂದಕ್ಕೆ 500 ರೂಪಾಯಿಗಳಷ್ಟಾಗಿತ್ತು.
ಆ ೩. ಔಷಧಿಗಳ ಕೊರತೆಯಿಂದ ಸಣ್ಣಪುಟ್ಟ ಕಾಯಿಲೆಗಳಿಂದಲೂ ರೋಗಿಗಳ ಮೃತವಾಗುವುದು
ಆಸ್ಪತ್ರೆಯಲ್ಲಿ ಔಷಧಿಗಳೇ ದೊರೆಯದಿರುವುದುರಿಂದ ಕೆಲವು ಜನರು ಸಣ್ಣಪುಟ್ಟ ಕಾಯಿಲೆಗಳಿಂದ ಮೃತಪಟ್ಟರು.
ಆ ೪. ವಿದ್ಯುತ್ ಪೂರೈಕೆಯ ವ್ಯತ್ಯಯದಿಂ ಉದ್ಭವಿಸಿದ ಸಮಸ್ಯೆಗಳು
ಕಾಠಮಾಂಡು ನಗರದಲ್ಲಿ ಅಧಿಕೃತವಾಗಿ ದಿನದಲ್ಲಿ 14 ಗಂಟೆಗಳ ಕಾಲ ವಿದ್ಯುತ್-ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಆದರೂ ಕೆಲವು ಸಮಯ ವಿದ್ಯುತ್-ಪೂರೈಕೆಯು ದಿನವಿಡಿ ಕೇವಲ 2-3 ಗಂಟೆಗಳಷ್ಟೇ ಇರುತ್ತಿತ್ತು. ವಿದ್ಯುತ್-ಪೂರೈಕೆ ಪ್ರಾರಂಭವಾದನಂತರ ಮನೆಮನೆಗಳಲ್ಲಿ ಜನರು ನೀರಿನ ‘ಪಂಪ’ ಹಚ್ಚುವುದು, ವಿದ್ಯುತ್ ಉಪಕರಣಗಳ ಮೇಲೆ ಅಡುಗೆ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡುತ್ತಿದ್ದರು. ಒಮ್ಮೆಲೆ ಹೆಚ್ಚಾದ ವಿದ್ಯುತ ಬಳಕೆಯಿಂದಾಗಿ (‘ಲೋಡ್’ನಿಂದ) ಟ್ರಾನ್ಸಫಾರ್ಮರ್ ಸುಡುತ್ತಿದ್ದವು. ಈ ಟ್ರಾನ್ಸಫಾರ್ಮರ್ ಸರಿಪಡಿಸಲು ಸರಕಾರದ ಕಾರ್ಮಿಕರು 4-5 ದಿನಗಳ ನಂತರ ಬರುತ್ತಿದ್ದರು.
ಆ ೫. ಪೆಟ್ರೋಲ್ ಮತ್ತು ಡಿಸೆಲ್ ಕೊರತೆಯಿಂದಾಗಿ ನಿರ್ಮಾಣವಾದ ಸಮಸ್ಯೆಗಳು
ಅ. ಪೆಟ್ರೋಲ್ ಮತ್ತು ಡಿಸೆಲ್ ಕೊರತೆಯಿಂದಾಗಿ ವಾಹನಗಳ ಲಭ್ಯತೆ ಕ್ಷೀಣಿಸಿತು. ಆದುದರಿಂದ ಶಾಲೆ ಮತ್ತು ಉದ್ಯೋಗಗಳು ಮುಚ್ಚಲ್ಪಟ್ಟವು.
ಆ. ಕೆಲವು ಬಾರಿ ಸರಕಾರದಿಂದ ಪೆಟ್ರೋಲ್ ಮತ್ತು ಡಿಸೆಲ್ ಇವುಗಳ ಮಾರಾಟ ಆಗುತ್ತಿತ್ತು; ಆದರೆ ಅದನ್ನು ಪಡೆಯಲು ೪-೫ ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಅನೇಕ ಜನರು ಸರದಿಯಲ್ಲಿ ಮುಂದೆ ಬರುವಷ್ಟರಲ್ಲಿ ಇಂಧನ ಮುಗಿಯುತ್ತಿರುವುದರಿಂದ ಅವರಿಗೆ ಅನೇಕ ವಾರಗಳವರೆಗೆ ಪುನಃ ದಾರಿ ನೋಡಬೇಕಾಗುತ್ತಿತ್ತು. ಸರಕಾರದಿಂದ ವತಿಯಿಂದ ‘ಮಾರಾಟದ ಮುಂದಿನ ದಿನಾಂಕ ಯಾವುದು?’, ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಇದರಿಂದಾಗಿ ಜನರು ಅನೇಕ ದಿನಗಳ ಕಾಲ ತಮ್ಮ ವಾಹನಗಳನ್ನು ರಸ್ತೆಯ ಮೇಲೆಯೇ ಸರದಿಯಲ್ಲಿ ಇಟ್ಟು ಹೋಗುತ್ತಿದ್ದರು.
ಇ. ಸಾಮಾನ್ಯವಾಗಿ ಒಂದು ಲೀಟರ ಪೆಟ್ರೋಲಿಗೆ 100 ರಿಂದ 100 ರೂಪಾಯಿಗಳಿದ್ದರೆ ಕಳ್ಳಪೇಟೆ ಒಂದು ಲೀಟರಿಗೆ 500 ರೂಪಾಯಿಗಳಂತೆ ಮಾರುತ್ತಿದ್ದರು ಮತ್ತು, ಡಿಸೆಲ್ ಒಂದು ಲೀಟರಿಗಾಗಿ 80 ರಿಂದ 100 ರೂಪಾಯಿ ಇದ್ದರೆ, ಒಂದು ಲೀಟರಿಗೆ 250 ರಿಂದ 300 ರೂಪಾಯಿಗಳಂತೆ ಮಾರಾಟವಾಗುತ್ತಿತ್ತು.
ಈ. ಇಂಧನದ ಕೊರತೆಯಿಂದಾಗಿ ಸೈಕಲ್ ತುಳಿಯುವವರ ಸಂಖ್ಯೆ ಹೆಚ್ಚಾಯಿತು. ಆದುದರಿಂದ ಆ ಕಾಲದಲ್ಲಿ ತೀರ ಕಡಿಮೆ ಬೆಲೆ ಇರುವ ಸೈಕಲ್‌ಗಳ ಬೆಲೆ ಕೂಡ 10 ಸಾವಿರ ರೂಪಾಯಿಗಳಷ್ಟಾಗಿತ್ತು.
ಆ ೬. ವಿದ್ಯುತ್ ಹಾಗೆಯೇ ಪೆಟ್ರೋಲ್ ಮತ್ತು ಡಿಸೆಲ್ ಇವುಗಳ ಕೊರತೆಯಿಂದಾಗಿ ಇಂಟರನೆಟ್ ಸ್ಥಗಿತಗೊಳ್ಳುವುದು
ವಿವಿಧ ಕಚೇರಿಗಳಲ್ಲಿ ವಿದ್ಯುತ್-ಪೂರೈಕೆಯು ಸ್ಥಗಿತಗೊಂಡಿರುವಾಗ ಜನರೇಟರ್ ಸಹಾಯದಿಂದ ವಿದ್ಯುತ್-ಪೂರೈಕೆಯನ್ನು ಮಾಡಲಾಯಿತು; ಆದರೆ ಭೂಕಂಪದ ನಂತರ ವಿದ್ಯುತ್ತಿನ ಹಿಂದೆಯೇ ಪೆಟ್ರೋಲ್ ಮತ್ತು ಡಿಸೆಲ್ ಇವುಗಳ ಕೊರತೆಯಾಗಿ ಈ ಜನರೇಟರ್ ಕೂಡ ನಿರುಪಯುಕ್ತವಾದವು. ಅದರ ಪರಿಣಾಮವಾಗಿ ಇಂಟರನೆಟ್ ಮೂಲಕ ನಡೆಯುವ ಕೆಲಸಗಳು ಕೂಡ ಸ್ಥಗಿತಗೊಂಡವು.
ಆ ೭. ವ್ಯಾಪಾರ-ವ್ಯವಹಾರಗಳು ನಿಂತಿರುವುದರಿಂದ ಅನೇಕ ಜನರು ನೌಕರಿಗಳನ್ನು ಕಳೆದುಕೊಳ್ಳುವುದು
ಆ ಕಾಲದಲ್ಲಿ ಸುಮಾರು 2 ಸಾವಿರ ವ್ಯಾಪಾರ-ವ್ಯವಹಾರಗಳು ಸ್ಥಗಿತಗೊಂಡವು ಮತ್ತು ಸುಮಾರು 1 ಲಕ್ಷ ಜನರು ತಮ್ಮ ನೌಕರಿಗಳನ್ನು ಕಳೆದುಕೊಳ್ಳಬೇಕಾಯಿತು.
– ಕು. ಸಾನು ಥಾಪಾ, ನೇಪಾಳ (೨೪.೪.೨೦೧೬)
ಮೇಲಿನ ಎಲ್ಲ ಉದಾಹರಣೆಗಳು ಆಪತ್ಕಾಲದ ಭೀಕರತೆಯ ಒಂದು ತುಣುಕಷ್ಟೇ. ಆಪತ್ಕಾಲದಲ್ಲಿ ಸಮಸ್ಯೆಗಳ ಅದೆಷ್ಟು ದೊಡ್ಡ ಬೆಟ್ಟ ನಮ್ಮ ಮುಂದೆ ಬರಲಿದೆ, ಎಂಬುವುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ‘ಇಂತಹ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ, ಆಪತ್ಕಾಲದ ಸಿದ್ಧತೆಯನ್ನು ಅಷ್ಟೇ ಸಕ್ಷಮವಾಗಿ ಮಾಡದೇ ಪರ್ಯಾಯವಿಲ್ಲ’, ಎಂಬುದನ್ನು ಗಮನದಲ್ಲಿಡಿ !
© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.