ಫ್ರೆಂಚ್ ಲೇಖಕ ಫ್ರಾನ್ಸುಆ ಗೋತಿಎ ಇವರು ‘ಹಿಂದೂಗಳು ತಮ್ಮ ಧರ್ಮದ ವ್ಯಾಖ್ಯೆಯನ್ನು ವಿವರಿಸುವಾಗ ಆಂಗ್ಲ ಭಾಷೆಯನ್ನು ಹೇಗೆ ಉಪಯೋಗಿಸುತ್ತಾರೆ’ ಈ ವಿಷಯದ ಬಗ್ಗೆ ಅವರ ‘ಫೇಸ್‌ಬುಕ್ ಪೇಜ್’ನಲ್ಲಿ ೧ ಜೂನ್ ೨೦೧೭ ರಂದು ಬರೆದಿರುವ ಈ ಮುಂದಿನ ಅಂಶಗಳನ್ನು ಇಲ್ಲಿ ನೀಡಿದ್ದೇವೆ. ‘ಹಿಂದೂಗಳು ಆಂಗ್ಲ ಭಾಷೆಯನ್ನು ಉಪಯೋಗಿಸುವಾಗ ಕೆಲವು ವಿಶಿಷ್ಟ ಶಬ್ದಗಳಿಗಾಗಿ ಅಯೋಗ್ಯ ಆಂಗ್ಲ ಶಬ್ದಗಳನ್ನು ಉಪಯೋಗಿಸಬಾರದು’, ಎಂದು ಕರೆ ನೀಡಿದ್ದರು.
೧. ‘ಗಾಡ್ ಫಿಯರಿಂಗ್’ ಈ ಶಬ್ದವನ್ನು ಉಪಯೋಗಿಸುವುದನ್ನು ದಯವಿಟ್ಟು ನಿಲ್ಲಿಸಿ. ಹಿಂದೂಗಳಿಗೆ ದೇವರ ಬಗ್ಗೆ ಎಂದಿಗೂ ಹೆದರಿಕೆ ಆಗುವುದಿಲ್ಲ. ನಮಗಾಗಿ ಈಶ್ವರನು ಸರ್ವವ್ಯಾಪಿ ಆಗಿದ್ದಾನೆ ಹಾಗೂ ನಾವು ಈಶ್ವರನು ಅಂಶವಾಗಿದ್ದೇವೆ. ನಮಗೆ ದೇವರ ಬಗ್ಗೆ ಹೆದರಿಕೆಯಾಗಲು ಅವನು ನಮಗಾಗಿ ಬೇರೆಯಾಗಿಲ್ಲ. ನಾವು ಒಂದೇ ಆಗಿದ್ದೇವೆ.
೨. ಯಾರಾದರೂ ಮೃತರಾದರೆ ದಯವಿಟ್ಟು ‘ಆರ್.ಐ.ಪಿ.’ (ಲೆಟ್ ದಿಸ್ ಸೋಲ್ ರೆಸ್ಟ್ ಇನ್ ಪೀಸ್) ಈ ಮಾತನ್ನು ಉಪಯೋಗಿಸಬೇಡಿ. ‘ಓಂ ಶಾಂತಿ’, ‘ಸದ್ಗತಿ’ ಅಥವಾ ‘ಈ ಆತ್ಮಕ್ಕೆ ಸದ್ಗತಿ ಅಥವಾ ಉತ್ತಮ ಲೋಕ ಪ್ರಾಪ್ತವಾಗಲಿ’ ಇತ್ಯಾದಿಗಳನ್ನು ಉಪಯೋಗಿಸಿರಿ. ಹಿಂದೂ ಧರ್ಮದಲ್ಲಿ ‘ಸೋಲ್’ (Soul) ಎಂಬ ಸಂಕಲ್ಪನೆ ಇಲ್ಲ ಅಥವಾ ‘ರೆಸ್ಟ್’ ಈ ಸಂಕಲ್ಪನೆಯೂ ಇಲ್ಲ. ‘ಸೋಲ್’ ಈ ಶಬ್ದಕ್ಕೆ ‘ಆತ್ಮ’ ಮತ್ತು ‘ಜೀವ’ ಈ ಪ್ರತಿಶಬ್ದಗಳಿವೆ.
೩. ‘ರಾಮಾಯಣ’ ಮತ್ತು ‘ಮಹಾಭಾರತ’ ಈ ಐತಿಹಾಸಿಕ ಮಹಾಕಾವ್ಯ ಗಳಿಗೆ ‘ಮೈಥಾಲಾಜೀ’ (mythology) ಈ ಶಬ್ದವನ್ನು ಉಪಯೋಗಿಸಬೇಡಿ. ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ಐತಿಹಾಸಿಕ ನಾಯಕರಾಗಿದ್ದಾರೆ, ಪೌರಾಣಿಕ ಕಥೆಗಳ ಪಾತ್ರಗಳಾಗಿರಲಿಲ್ಲ.
೪. ಮೂರ್ತಿಪೂಜೆಯ ವಿಷಯದಲ್ಲಿ ದಯಮಾಡಿ ಅಪರಾಧಿ ಭಾವನೆಯನ್ನಿಟ್ಟುಕೊಳ್ಳಬೇಡಿ ಮತ್ತು ಅದು ಕೇವಲ ‘ಪ್ರತಿಕಾತ್ಮಕ’ ಆಗಿದೆ ಎಂದು ಕೂಡ ಹೇಳಬೇಡಿ. ಎಲ್ಲ ಧರ್ಮಗಳಲ್ಲಿಯೂ ವಿವಿಧ ಪ್ರಕಾರದ ಮೂರ್ತಿ ಪೂಜೆಗಳೇ ಇರುತ್ತವೆ, ಉದಾ. ಕ್ರಾಸ್, ಶಬ್ದ, ಆಕ್ಷರಗಳು ಅಥವಾ ಮಾರ್ಗದರ್ಶನ ಇತ್ಯಾದಿ. ಅದೇ ರೀತಿ ನಮ್ಮ ದೇವತೆಗಳ ಶಿಲ್ಪಾಕೃತಿಗಳನ್ನು ಉಲ್ಲೇಖಿಸುವಾಗ ‘ಐಡಲ್’, ‘ಸ್ಟ್ಯಾಚ್ಯೂ’ ಅಥವಾ ‘ಇಮೇಜ’ ಇತ್ಯಾದಿ ಶಬ್ದಗಳನ್ನು ಉಪಯೋಗಿಸಬೇಡಿ. ಅವುಗಳಿಗೆ ‘ಮೂರ್ತಿ’ ಅಥವಾ ‘ವಿಗ್ರಹ’ ಈ ಶಬ್ದಗಳನ್ನು ಉಪಯೋಗಿಸಿ. ಒಂದು ವೇಳೆ ಕರ್ಮ, ಯೋಗ, ಗುರು ಮತ್ತು ಮಂತ್ರ ಈ ಶಬ್ದಗಳನ್ನು ಎಲ್ಲೆಡೆ ಉಪಯೋಗಿಸುತ್ತಿದ್ದರೆ, ‘ಮೂರ್ತಿ’ ಅಥವಾ ‘ವಿಗ್ರಹ’ ಈ ಶಬ್ದವನ್ನು ಏಕೆ ಉಪಯೋಗಿಸಬಾರದು ?
೫. ಶ್ರೀಗಣೇಶ ಮತ್ತು ಶ್ರೀ ಹನುಮಾನ್ ಇವರಿಗೆ ಅನುಕ್ರಮವಾಗಿ ‘ಎಲಿಫಂಟ್ ಗಾಡ್’ ಮತ್ತು ‘ಮಂಕಿ ಗಾಡ್’ ಈ ಶಬ್ದಗಳನ್ನು ಉಪಯೋಗಿಸಬೇಡಿ. ಕೇವಲ ‘ಶ್ರೀ ಗಣೇಶ’ ಮತ್ತು ‘ಶ್ರೀ ಹನುಮಾನ’ ಎಂದು ಬರೆಯಿರಿ.
೬. ನಮ್ಮ ದೇವಸ್ಥಾನಗಳನ್ನು ‘ಪ್ರೇಯರ್ ಹಾಲ್’ ಎಂದು ಉಲ್ಲೇಖಿಸಬೇಡಿ. ಮಂದಿರವು ‘ದೇವಾಲಯ’ (ದೇವರ ನಿವಾಸಸ್ಥಾನ) ಆಗಿದೆ, ‘ಪ್ರಾರ್ಥನಾಲಯ’ (ಪ್ರೇಯರ್ ಹಾಲ್) ಅಲ್ಲ !
೭. ನಮ್ಮ ಮಕ್ಕಳಿಗೆ ಹುಟ್ಟುಹಬ್ಬದ ನಿಮಿತ್ತ ಕೇಕ್‌ನ ಮೇಲೆ ಹಚ್ಚಿರುವ ಮೇಣದಬತ್ತಿಗಳನ್ನು ಆರಿಸಲು ಹೇಳಿ ಅವರ ‘ಅಂಧಃಕಾರಮಯ ಹುಟ್ಟುಹಬ್ಬ’ವನ್ನು ಆಚರಿಸಬೇಡಿ. ಅಗ್ನಿ ದೇವತೆಯ ಮೇಲೆ ಉಗುಳಬೇಡಿ. ಅದರ ಬದಲು ಅವರಿಗೆ ದೀಪವನ್ನು ಬೆಳಗಿಸಿ ಮುಂದಿನ ಪ್ರಾರ್ಥನೆಯನ್ನು ಮಾಡಲು ಹೇಳಿರಿ, ‘ತಮಸೋಮಾ ಜ್ಯೋತಿರ್ಗಮಯ |’ ಅಂದರೆ ಹೇ ಅಗ್ನಿದೇವತೆ, ‘ನನ್ನನ್ನು ಆಂಧಃಕಾರದಿಂದ ಪ್ರಕಾಶದ ಕಡೆಗೆ ಕರೆದೊಯ್ಯು’; ಇದರಿಂದ ನಮ್ಮ ಮನಸ್ಸಿನ ಮೇಲೆ ಆಳವಾದ ಪರಿಣಾಮವಾಗುತ್ತಿರುತ್ತದೆ.
೮. ಹಿಂದೂಗಳಿಗೆ ಎಲ್ಲವೂ ದೈವೀ ಆಗಿದೆ. ‘ಚರ್ಚ್ ವಿರುದ್ಧ ಸ್ಟೇಟ್’ ಅಥವಾ ‘ಸೈನ್ಸ್ ವಿರುದ್ಧ ರಿಲಿಜನ್’ ಈ ಸಂಕಲ್ಪನೆಗಳನ್ನು ಮಂಡಿಸುವ ಕ್ರೈಸ್ತ ಮಿಶನರಿಗಳು ಮತ್ತು ಯುರೋಪಿನ ಜನರು ‘ಸ್ಪಿರಿಚ್ಯುಯಾಲಿಟಿ’ ಮತ್ತು ‘ಮೆಟೇರಿಯಲಿಸಮ್’ ಈ ಶಬ್ದಗಳನ್ನು ಭಾರತಕ್ಕೆ ತಂದರು. ತದ್ವಿರುದ್ಧ ಭಾರತದಲ್ಲಿ ‘ಋಷಿಗಳು, ಶಾಸ್ತ್ರಜ್ಞರು ಮತ್ತು ಸನಾತನ ಧರ್ಮ ಇವುಗಳ ವಿಜ್ಞಾನವನ್ನು ಆಧರಿಸಿದೆ’.
೯. ‘ಸಿನ್’ ಶಬ್ದವನ್ನು ‘ಪಾಪ’ ಈ ವ್ಯಾಖ್ಯೆಗಾಗಿ ಉಪಯೋಗಿಸಬೇಡಿರಿ. ನಮ್ಮಲ್ಲಿ ಕೇವಲ ‘ಧರ್ಮ’ ಮತ್ತು ‘ಅಧರ್ಮ’ ಈ ಶಬ್ದಗಳಿವೆ. ಅಧರ್ಮದಿಂದ ಪಾಪ ನಿರ್ಮಾಣವಾಗಿದೆ.
೧೦. ‘ಧ್ಯಾನ’ಕ್ಕಾಗಿ ‘ಮೆಡಿಟೇಶನ್ ಮತ್ತು ‘ಪ್ರಾಣಾಯಾಮ’ಕ್ಕಾಗಿ ‘ಬ್ರೀದಿಂಗ್ ಎಕ್ಸರ್ ಸೈಜ್’ ಈ ಶಬ್ದಗಳನ್ನು ದಯವಿಟ್ಟು ಉಪಯೋಗಿಸಬೇಡಿ. ಅದರಿಂದ ತಪ್ಪು ಅರ್ಥಬೋಧವಾಗುತ್ತದೆ. ಅದಕ್ಕೆ ಮೂಲ ಶಬ್ದಗಳನ್ನೇ ಉಪಯೋಗಿಸಬೇಕು.
ಯಾವಾಗಲೂ ನೆನಪಿನಲ್ಲಿಡಿ, ‘ಯಾರು ತಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆಯೋ, ಅವರನ್ನು ಇಡೀ ಜಗತ್ತು ಗೌರವಿಸುತ್ತದೆ.’
ಫ್ರಾನ್ಸುಆ ಗೋತಿಎ ಇವರ ಈ ಮೇಲಿನ ಲೇಖನದ ಬಗ್ಗೆ ಓರ್ವ ವಾಚಕರು ನೀಡಿದ ಅಭಿಪ್ರಾಯ :
ಫ್ರಾನ್ಸುಆ ಗೋತಿಎಯವರು ಬರೆದಿರುವ ಅಂಶಗಳನ್ನು ಓದಿ ನಮ್ಮಲ್ಲಿನ ಹೆಚ್ಚಿನ ಜನರಿಗಿಂತ ಅವರಿಗೆ ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿದಿದೆ, ಎಂಬುದು ಗಮನಕ್ಕೆ ಬರುತ್ತದೆ ! – ಓರ್ವ ವಾಚಕರು