೧. ಹಿಂದಿನ ಕಾಲದ ರಾಜರು ಮಾಡಿದ ದಾನಧರ್ಮ
‘ಪಾತ್ರೆ ದಾನಮ್ |’ ಈ ಸುಭಾಷಿತ ಎಲ್ಲರಿಗೂ ತಿಳಿದಿದೆ. ದಾನದ ಅರ್ಥ ‘ಯಾವುದೇ ವ್ಯಕ್ತಿಯ ಆದಾಯ ಮತ್ತು ಅದರಲ್ಲಿ ಆಗುವ ವೆಚ್ಚವನ್ನು ಕಳೆದು ಬಾಕಿ ಉಳಿಯುವ ಮೊತ್ತದಿಂದ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ಕೆ ಮಾಡಿದ ಸಹಾಯ’, ಎಂದಾಗುತ್ತದೆ. ದಾನವು ಹಣವನ್ನು ಹೊರತುಪಡಿಸಿ ಭೂಮಿ, ಆಭರಣ ಮತ್ತು ವಸ್ತ್ರ (ದೇವಿಗೆ ಅರ್ಪಿಸುವ ಖಣ, ಸೀರೆ) ಮುಂತಾದ ಅನೇಕ ಮಾಧ್ಯಮಗಳಿಂದ ಮಾಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ರಾಜರು ಹಿಂದೂ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದಲ್ಲಿ ದಾನ ನೀಡುತ್ತಿದ್ದರು. ಭಾರತದ ಕೇರಳ ರಾಜ್ಯದಲ್ಲಿರುವ ಶ್ರೀ ಪದ್ಮನಾಭ ದೇವಸ್ಥಾನದ ಸಂಪತ್ತನ್ನು ಇದುವರೆಗೆ ಲೆಕ್ಕ ಮಾಡಲು ಸಾಧ್ಯವಾಗಿಲ್ಲ. ಪುಣ್ಯಶ್ಲೋಕ ಅಹಿಲ್ಯಾಬಾಯಿ ಹೋಳಕರ ಇವರು ರಾಣಿಯಾಗಿದ್ದಾಗ ಅವರಿಗೆ ದೊರಕುತ್ತಿದ್ದ ಗೌರವಧನದಿಂದ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದರು. ಅದರ ಸಾಕ್ಷಿ ಉತ್ತರದ ವಾರಣಾಸಿಯಿಂದ ದಕ್ಷಿಣದ ಘೃಷ್ಣೇಶ್ವರ ಶಿವಮಂದಿರದವರೆಗೆ ನೋಡಲು ಸಿಗುತ್ತದೆ.
೨. ದಾನವನ್ನು ಕೊಡುವವರು ತಮ್ಮ ಹಣ ಯೋಗ್ಯ ಕಾರ್ಯಕ್ಕಾಗಿ ಹಾಗೂ ಯೋಗ್ಯ ಮಾರ್ಗದಲ್ಲಿ ವ್ಯಯವಾಗುತ್ತಿದೆಯೇ ? ಎಂದು ದೃಢಪಡಿಸಿಕೊಳ್ಳುವುದು ಆವಶ್ಯಕವಾಗಿದೆ
ಅನೇಕ ದಾನಿಗಳು ಸಾಮಾಜಿಕ ಕರ್ತವ್ಯದ ಭ್ರಮೆಯಲ್ಲಿರುತ್ತಾರೆ ಮತ್ತು ಅವರು ಕೆಲವು ಸ್ವಯಂಸೇವಕ ಸಂಸ್ಥೆಗಳಿಗೆ (ಎನ್.ಜಿ.ಒ.) ದಾನ ನೀಡುತ್ತಾರೆ. ದಾನವನ್ನು ನೀಡುವಾಗ ದಾನವನ್ನು ಕೊಡುವವರು ‘ತಮ್ಮ ಹಣ ಯೋಗ್ಯ ಕಾರ್ಯಕ್ಕೆ ಮತ್ತು ಯೋಗ್ಯ ಮಾರ್ಗದಲ್ಲಿ ವ್ಯಯವಾಗುತ್ತಿದೆಯೆ?’, ಎನ್ನುವುದನ್ನು ದೃಢಪಡಿಸಿಕೊಳ್ಳುವ ಅವಶ್ಯಕತೆಯಿದೆ. ಅನೇಕ ಸ್ವಯಂಸೇವಕ ಸಂಸ್ಥೆಗಳು ತಮಗೆ ಸಿಗುವ ಹಣದಿಂದ ಪೂರ್ಣಾವಧಿಗೆ ಇರುವ ತಮ್ಮ ಕಾರ್ಮಿಕರಿಗೆ ವೇತನವನ್ನು ನೀಡಲು, ತಮ್ಮ ಕಾರ್ಯಾಲಯದ ವೆಚ್ಚ ಮತ್ತು ವಾಹನಗಳಿಗಾಗಿ ವಿಪರೀತ ವೆಚ್ಚ ಮಾಡುತ್ತಾರೆ. ಮುಂಬಯಿಯ ಒಂದು ಸ್ವಯಂಸೇವಕ ಸಂಸ್ಥೆಯ ಲೆಕ್ಕಪರಿಶೋಧನೆಯಲ್ಲಿ ದಾನದಲ್ಲಿ ದೊರೆತ ಹಣವನ್ನು ಪಂಚತಾರಾ ಉಪಹಾರ ಗೃಹಗಳಲ್ಲಿ ವಾಸ್ತವ್ಯ ಮಾಡಲು ಮತ್ತು ಮದ್ಯಸೇವನೆಗೆ ವೆಚ್ಚ ಮಾಡಿರುವುದು ಬಹಿರಂಗವಾಗಿದೆ.
೩. ದಾನವು ‘ಸತ್ಪಾತ್ರೇ’ ಆಗಿರುವುದು ಆವಶ್ಯಕವಾಗಿದೆ
‘ಸತ್ಪಾತ್ರೇ ದಾನ’ ಈ ಸಂಜ್ಞೆಯು ಮಹತ್ವದ್ದಾಗಿದೆ. ಹಿಂದೂ ಧರ್ಮವು ಸನಾತನ ಧರ್ಮವಾಗಿದೆ. ಆದ್ದರಿಂದ ಧರ್ಮವನ್ನು ಪಾಲಿಸುವವರಿಗೆ ಮಾತ್ರ ಈಶ್ವರಪ್ರಾಪ್ತಿ ಮತ್ತು ಮೋಕ್ಷ ಪ್ರಾಪ್ತಿ ಆಗುತ್ತದೆ. ಇದರ ಲಾಭ ಸಾಧ್ಯವಾದಷ್ಟು ಅಧಿಕ ಜನರಿಗೆ ಆಗಬೇಕೆಂದು ‘ಹಿಂದೂ ಧರ್ಮದ ಪ್ರಸಾರವನ್ನು ಯೋಗ್ಯ ರೀತಿಯಲ್ಲಿ ಮಾಡುವುದು’, ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದಕ್ಕಾಗಿ ದಾನವನ್ನು ನೀಡುವಾಗ ಎಚ್ಚರಿಕೆಯಿಂದಿರುವುದು ಆವಶ್ಯಕವಾಗಿದೆ. ಇದರಿಂದ ‘ಯಾವ ಸಂಸ್ಥೆ ಅಥವಾ ಸಂಘಟನೆಯು ಧರ್ಮಪ್ರಚಾರ ಮತ್ತು ರಾಷ್ಟ್ರಕಾರ್ಯದಲ್ಲಿ ನಿರತವಾಗಿರುತ್ತದೆಯೊ’, ಅವುಗಳಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದು ಧರ್ಮಕಾರ್ಯವೇ ಆಗಿದೆ.
೪. ಸನಾತನ ಸಂಸ್ಥೆಗೆ ನೀಡುವ ದಾನ
ಸನಾತನ ಸಂಸ್ಥೆಯು ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿರುವ ಒಂದು ಸಂಸ್ಥೆಯಾಗಿದೆ. ಆದುದರಿಂದ ಈ ಸಂಸ್ಥೆಗೆ ನೀಡುವ ದಾನವು ‘ಸತ್ಪಾತ್ರೇ’ ದಾನವಾಗುತ್ತದೆ.
೫. ದಾನ ಮತ್ತು ಅರ್ಪಣೆಯಲ್ಲಿನ ವ್ಯತ್ಯಾಸ
ಅರ್ಪಣೆ ಮಾಡುವುದು ಅಧಿಕ ಮಹತ್ವದ್ದಾಗಿದೆ. ದಾನವೆಂದರೆ ಇದು ಕೊಡುವವರ ಆದಾಯದಲ್ಲಿನ ಒಂದಂಶವಿರುತ್ತದೆ, ಆದರೆ ಅರ್ಪಣೆಯೆಂದರೆ ತನ್ನಲ್ಲಿ ಏನಿದೆಯೋ ಅದನ್ನು ಸಂಪೂರ್ಣ ಅಥವಾ ಅದರಲ್ಲಿನ ಸ್ವಲ್ಪ ಅಂಶವನ್ನು ತ್ಯಾಗ ಮಾಡುವುದು. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾಧಕರು ತನು-ಮನ-ಧನವನ್ನು ಅರ್ಪಿಸುತ್ತಾರೆ, ಹಾಗೆಯೇ ಈಶ್ವರನ ಮೇಲೆ ದೃಢ ಶ್ರದ್ಧೆ ಹೊಂದಿರುವವರು ಕೂಡ ಇದೇ ಗುಂಪಿನಲ್ಲಿ ಬರುತ್ತಾರೆ. ದಾನ ಮತ್ತು ಅರ್ಪಣೆ ಇವೆರಡೂ ಶಬ್ದಗಳು ಸಮಾನಾರ್ಥವಾಗಿದ್ದರೂ, ಅದರಲ್ಲಿ ಸೂಕ್ಷ್ಮ ವ್ಯತ್ಯಾಸದ ಅರಿವಾಗುತ್ತದೆ. ಅದನ್ನು ಮುಂದೆ ಕೊಡಲಾಗಿದೆ.
ದಾನ | ಅರ್ಪಣೆ | |
---|---|---|
೧. ಮಾಧ್ಯಮ | ಸ್ಥೂಲ ರೂಪದಲ್ಲಿ ಹಣ, ಭೂಮಿ, ಆಭರಣ ಇತ್ಯಾದಿ | ತನು, ಮನ, ಬುದ್ಧಿ ಮತ್ತು ಧನ (ಮನಸ್ಸು ಮತ್ತು ಬುದ್ಧಿ ಇವು ಸೂಕ್ಷ್ಮ ಸ್ತರದಲ್ಲಿ ಇರುವುದರಿಂದ ಅಧಿಕ ಮಹತ್ತ್ವದ್ದಾಗಿವೆ) |
೨. ದಾನಿ | ಮಧ್ಯಮ ವರ್ಗೀಯ, ಶ್ರೀಮಂತ, ಉದ್ಯೋಗಿಗಳು | ಸಾಧಕರು, ಧಾರ್ಮಿಕ ಪ್ರವೃತ್ತಿಯವರು ಮತ್ತು ವೈರಾಗ್ಯ ಪ್ರಾಪ್ತಿ ಮಾಡಿಕೊಂಡಿರುವವರು |
೩. ಸಹಾಯ ಮಾಡುವವರ ಭಾವ | – | ನಿರಪೇಕ್ಷ ಭಾವ |
೪. ದಾನಿಗಳಲ್ಲಿ ಕಂಡುಬರುವ ತ್ರಿಗುಣಗಳ ಪ್ರಮಾಣ | ಶೇ. ೩೦ ರಷ್ಟು ರಜೋಗುಣ, ಶೇ. ೩೦ ರಷ್ಟು ತಮೋಗುಣ ಮತ್ತು ಶೇ. ೪೦ ರಷ್ಟು ಸತ್ತ್ವಗುಣ | ಶೇ. ೬೫ ಕ್ಕಿಂತ ಅಧಿಕ ಸತ್ತ್ವಗುಣ |
೫. ಅಪೇಕ್ಷೆ | ಪ್ರಚಾರ, ಸಮಾಜಕ್ಕೆ ಪೂರ್ವಜರ ಸ್ಮರಣೆಯಾಗಬೇಕು ಇತ್ಯಾದಿ | ಇರುವುದಿಲ್ಲ (ಉದಾ. ದೇವಸ್ಥಾನಗಳಿಗೆ ಗುಪ್ತದಾನ) |
೬. ದಾನಿಗಳಿಗೆ ಬರುವ ಅನುಭೂತಿ | ಗಳಿಕೆಯಲ್ಲಿ ಮತ್ತು ಲಾಭದಲ್ಲಿ ವೃದ್ಧಿಯಾಗುವುದು, ಕೆಲವು ಅಪೂರ್ಣ ಇಚ್ಛೆಗಳು ಪೂರ್ಣವಾಗುವುದು, ಇತ್ಯಾದಿ | ಈಶ್ವರನೊಂದಿಗೆ ಅನುಸಂಧಾನ ಹೆಚ್ಚುವುದು; ಆನಂದ ಮತ್ತು ಶಾಂತಿಯ ಅನುಭೂತಿ ಬರುವುದು, ಹಾಗೂ ವೈರಾಗ್ಯದಲ್ಲಿ ವೃದ್ಧಿಯಾಗುವುದು |
೭. ಕರ್ತತ್ವದ | ಇರುತ್ತದೆ | ಇರುವುದಿಲ್ಲ |
೮. ಇತರರಲ್ಲಿ ಹೇಳಿಕೊಳ್ಳುವುದು | ಇರುತ್ತದೆ | ಆಗುವುದಿಲ್ಲ (ಯಾರಿಗೂ ಹೇಳಬೇಕು ಎಂದೆನಿಸುವುದಿಲ್ಲ, ಏಕೆಂದರೆ ‘ನಾನೇನು ಮಾಡಿಲ್ಲ’ ಎಂಬ ಭಾವವಿರುತ್ತದೆ) |
೯. ದಾನಿಗಳಿಗೆ ಆಗುವ ಆಧ್ಯಾತ್ಮಿಕ ಲಾಭದ ಪ್ರಮಾಣ | ಸ್ವಲ್ಪ ಪ್ರಮಾಣದಲ್ಲಿ | ಅಪರಿಮಿತ |
‘ಗುರುದೇವಾ, ಈ ವಿಚಾರವನ್ನು ವ್ಯಕ್ತಪಡಿಸುವ ಬುದ್ಧಿ ಮತ್ತು ಅವಕಾಶವನ್ನು ನೀವೇ ನೀಡಿದ್ದೀರಿ, ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ !’
– ಶ್ರೀ. ಶಿರೀಷ ದೇಶಮುಖ, ಸನಾತನ ಆಶ್ರಮ, ರಾಮನಾಥಿ, ಗೋವಾ ( ೫.೩.೨೦೨೦)