ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿ ಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಆದರೆ ನಾವು ಸಂಕುಚಿತ ಮತ್ತು ಸ್ವಾರ್ಥಿಗಳಾಗಿದ್ದೇವೆ. ‘ನಮ್ಮ ಮನೆ ಸುರಕ್ಷಿತವಾಗಿದೆ’ ಎಂಬ ವಿಚಾರದಿಂದ ನಾವು ಸಂತರ ಎಚ್ಚರಿಕೆಗಳತ್ತ ದುರ್ಲಕ್ಷ ಮಾಡಿದೆವು. ಭವಿಷ್ಯವಾಣಿಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಕೆಲವು ಸಂತರ ಆಯ್ದ ಭವಿಷ್ಯವಾಣಿಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.
ಅ. ಯುಗದೃಷ್ಟಾರ ನಾಸ್ಟ್ರಡಾಮಸ್ : ಇವತ್ತಿಗೆ ೪೦೦ ವರ್ಷ
ಗಳ ಹಿಂದೆ ನಾಸ್ಟ್ರಡಾಮಸ್ ಎಂಬ ಪ್ರಸಿದ್ಧ ಯುಗದ್ರಷ್ಟಾರನು ಫ್ರಾನ್ಸನಲ್ಲಿ ಜನಿಸಿದ್ದನು. ಅವನು ಹೇಳಿದ ಅನೇಕ ಭವಿಷ್ಯ ವಾಣಿಗಳು ಸಂಪೂರ್ಣ ಸತ್ಯವಾಗಿವೆ. ಅದರಲ್ಲಿ ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದ ವಿಷಯದಲ್ಲಿ ಅವನು ಏನೆಲ್ಲವನ್ನು ಹೇಳಿದ್ದನೋ ಅದೆಲ್ಲವೂ ಸತ್ಯವಾಗಿತ್ತು. ಅವನು
ಮೂರನೆಯ ಮಹಾಯುದ್ಧದ ಬಗ್ಗೆ ಮುಂದಿನಂತೆ ಹೇಳಿದ್ದಾನೆ.
‘ಈ ಮೂರನೆಯ ಮಹಾಯುದ್ಧವು ಎಷ್ಟು ಭಯಂಕರವಾಗಿರಲಿದೆ ಎಂದರೆ ಮೊದಲಿನ ಎರಡು ಮಹಾಯುದ್ಧಗಳು ಸಹ ಇದರ ಎದುರು ಮಕ್ಕಳಾಟದಂತೆ ಕಾಣಿಸಲಿವೆ’. ಅದಕ್ಕಿಂತ ಮುಂದೆ ಅವನು ಹೀಗೆ ಹೇಳುತ್ತಾನೆ, ‘ತೈಲ ಉತ್ಪಾದಕ ರಾಷ್ಟ್ರಗಳು ಕಂಪಿಸುವವು, ಜ್ವಾಲಾಮುಖಿಗಳು ಸಕ್ರಿಯವಾಗುವವು. ಅನೇಕ ವಿಮಾನಗಳು ಕುಸಿದುಬೀಳುವವು, ತಾಪಮಾನವು ಎಷ್ಟು ಹೆಚ್ಚಾಗುವುದು ಎಂದರೆ ಪೃಥ್ವಿಯ ಎರಡೂ ಧ್ರುವಗಳ ಹಿಮವು ಕರಗಿ ಹೋಗಲಿದೆ. ಇದರಿಂದ ನೀರಿನ ಮಟ್ಟ ಹೆಚ್ಚಾಗುವುದು. ನೀರಿನ ಮೇಲೆ ಎಷ್ಟು ಶವಗಳು ತೇಲುವವು ಎಂದರೆ ಸಮುದ್ರದ
ನೀರು ಕೊಳಚೆಯಂತೆ ಕೆಂಪಾಗಿ ಕಾಣಿಸುವುದು’.
ಆ. ಸಂತರು
ಆ೧. ಪ.ಪೂ. ಗಗನಗಿರಿ ಮಹಾರಾಜರು : ಪ.ಪೂ. ಗಗನಗಿರಿ ಮಹಾರಾಜರು ಮುಂದಿನಂತೆ ಹೇಳಿದ್ದರು, ‘ಮುಂದೆ ಎಷ್ಟು ಕೆಟ್ಟ ಕಾಲ ಬರಲಿದೆ ಎಂದರೆ ಸಂತರಿಗೂ ಬೇಗನೇ ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸಲಿದೆ’. ಇತರ ಅನೇಕ ಸಂತರು ಸಹ ಇಂತಹದ್ದೇ ಹೇಳಿಕೆಗಳನ್ನು ತಮ್ಮ ಮಾತಿನಲ್ಲಿ ಆಡಿ ತೋರಿಸಿದ್ದಾರೆ. ಇದರ ಬಗ್ಗೆ ಓದಲು ಕ್ಲಿಕ್ ಮಾಡಿ !
ಆ೨ . ಪರಾತ್ಪರ ಗುರು ಡಾ. ಜಯಂತ ಆಠವಲೆ : ಮೂರನೆಯ ಮಹಾಯುದ್ಧವು ಮಹಾಭಯಂಕರವಾಗಿರಲಿದೆ. ಇದರಲ್ಲಿ ಭಾರತವು ಸಹ ಸಿಲುಕಲಿದೆ. ಪರಮಾಣು ಬಾಂಬ್‌ನಿಂದಾಗುವ ಸಂಹಾರವು ಇನ್ನೂ ಭಯಂಕರವಾಗಿರಲಿದೆ. ಊರಿಗೆ ಊರುಗಳು ನಾಶವಾಗಿ ಹೋಗುವವು. ಮೂರನೆಯ ವಿಶ್ವಯುದ್ಧದ ನಂತರ ಸಂಪೂರ್ಣ ಪೃಥ್ವಿಯನ್ನು ಶುದ್ಧಗೊಳಿಸ ಬೇಕಾಗುವುದು. ಅದಕ್ಕಾಗಿ ಅನೇಕ ಸಂತರ ಅವಶ್ಯಕತೆಯಿದೆ. ಅದಕ್ಕಾಗಿ ಸಾಧಕರು ಸಾಧನೆಯನ್ನು ಹೆಚ್ಚಿಸಬೇಕು.
ಆ೩ . ಕರ್ನಾಟಕದಲ್ಲಿ ಪೂ. ಭಗವಾನ ಮಹಾರಾಜರ ಮಾಧ್ಯಮ
ದಿಂದ ಶ್ರೀ ಹಾಲಸಿದ್ಧನಾಥಜಿಯವರು ಮುಂಬರುವ ಕಾಲದ ಬಗ್ಗೆ
೨೦೧೨ ರಲ್ಲಿ ಮತ್ತು ೨೦೧೯ ರಲ್ಲಿ ಭವಿಷ್ಯವನ್ನು ಹೇಳಿದ್ದರು. ಅದರಲ್ಲಿದ್ದ
ಕೆಲವು ಮಹತ್ವದ ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇವೆ.
೧. ಸುನಾಮಿ ಬರಲಿದೆ, ಸುಂಟರಗಾಳಿ ಮತ್ತು ಭೂಕಂಪವಾಗಲಿದೆ. ಜಗತ್ತು ಉರಿದು ಹೋಗುವುದು.
೨. ಭಾರತದ ಮೇಲೆಯೂ ಸಂಕಟಗಳು ಬರುವವು. ಉಗ್ರಗಾಮಿ
ಗಳು ದೊಡ್ಡ ಆಕ್ರಮಣಗಳನ್ನು ಮಾಡುವರು. ನರಸಂಹಾರವಾಗುವುದು. ಹಗಲು ಹೊತ್ತಿನಲ್ಲಿ ದರೋಡೆ ಮತ್ತು ಲೂಟಿಗಳಾಗುವವು.
೩. ಮಹಾರಾಷ್ಟ್ರದ ಕೃಷ್ಣೆಯ ತೀರದಲ್ಲಿ ೯ ಲಕ್ಷ ಬಳೆಗಳು ಒಡೆಯುವವು. (ಭಾವಾರ್ಥ : ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ತೀರದಲ್ಲಿ ಮೃತ್ಯುವಿನ ಆಟ ನಡೆಯುವುದು.) ರಕ್ತದ ಹೊಳೆ ಹರಿಯುವುದು.
೩. ನದಿಗಳು ಬತ್ತಿ ಹೋಗುವವು. ನೀರಿನ ‘ಕಪ್’ ಮಾರಾಟ ವಾಗುವವು. (ಭಾವಾರ್ಥ : ನೀರು ದುಬಾರಿಯಾಗುವುದು ಹಾಗೆಯೇ ಬೆಲೆಯೇರಿಕೆಯಾಗುವುದು)
೪. ರೋಗರುಜಿನಗಳು ಹೆಚ್ಚಾಗುವವು. ಔಷಧಿಗಳು ಸಿಗಲಾರವು. ಡಾಕ್ಟರರು ಕೈಚೆಲ್ಲುವರು ! (ಭಾವಾರ್ಥ : ಡಾಕ್ಟರರಿಗೆ ಏನೂ ಮಾಡಲು ಆಗದಿರುವುದು) ನಡೆದಾಡುವ-ಮಾತನಾಡುವ ಮನುಷ್ಯನ
ಪ್ರಾಣ ಹೋಗುವುದು.