ಆಪತ್ಕಾಲ ಎಂದರೇನು ?
ಕಾಲವು ಅನಂತವಾಗಿರುವುದರಿಂದ ಅದನ್ನು ಯುಗಗಳಲ್ಲಿಯೇ ಎಣಿಸಬೇಕು. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ನಾಲ್ಕು ಯುಗಗಳ ಒಂದು ಚಕ್ರವಿರುತ್ತದೆ. ಇಂತಹ ಚಕ್ರಗಳು ಅನಂತ ಕಾಲದಿಂದ ನಡೆಯುತ್ತಾ ಬಂದಿವೆ ಮತ್ತು ನಡೆಯುತ್ತಾ ಇರಲಿವೆ. ಕಾಲಾನುಸಾರ ಎಲ್ಲವೂ ಬದಲಾಗುತ್ತಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಕಾಲ ಇತ್ಯಾದಿ ಹೇಗೆ ಸಂಧಿಕಾಲವೋ, ಅದೇ ರೀತಿ ಈಗಿನ ಕಾಲವೂ ಕಲಿಯುಗಾಂತರ್ಗತ….(ಅನೇಕ ಚಕ್ರಗಳ)… ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ…. ಕಲಿಯುಗದ ಸಂಧಿಕಾಲವಾಗಿದೆ. ಅದು ಕೂಡ ೨೦೨೪ ರಲ್ಲಿ ಕೊನೆಗೊಳ್ಳಲಿದ್ದು, ಕಲಿಯುಗಾಂತರ್ಗತ…. ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ…. ಸತ್ಯಯುಗ ಪ್ರಾರಂಭವಾಗಲಿದೆ. ಅಲ್ಲಿಯ ವರೆಗಿನ ಸಮಯದಲ್ಲಿ ರಜ-ತಮದ ಪ್ರಭಾವವು ಹೆಚ್ಚಾಗುತ್ತಾ ಹೋಗುತ್ತದೆ. ಜನರು ಸಾಧನೆಯನ್ನು ಮಾಡದೇ ಇರುವುದರಿಂದ ಅವರ ಮೇಲೆ ಈ ರಜ-ತಮದ ಪ್ರಭಾವವು ಸುಲಭವಾಗಿ ಆಗುತ್ತದೆ. ಈ ಪ್ರಭಾವವು ಜನರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯದ ಮೇಲೆಯೂ ಆಗುತ್ತದೆ. ಹೆಚ್ಚುವ ಅನೈತಿಕ ಕೃತಿಗಳಿಂದ, ಜೀವನಶೈಲಿಯಿಂದ ವಾತಾವರಣದಲ್ಲಿ ಇನ್ನಷ್ಟು ರಜ-ತಮದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗುತ್ತದೆ. (ಪ್ರಾರಬ್ಧದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.) ಇದರಿಂದಾಗಿ ಮುಂಬರುವ ಕಾಲದಲ್ಲಿ ಘಟಿಸುವ ದೊಡ್ಡ ಘಟನೆಗಳು (ಭೂಕಂಪ, ನೆರೆ, ಬರಗಾಲ, ಸಾಂಕ್ರಾಮಿಕ ರೋಗ) ನಮ್ಮ ದೇಶದ ಸಮಷ್ಟಿ ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತವೆ. ಇದೇ ಆಪತ್ಕಾಲದ ಮೂಲ ಕಾರಣವಾಗಿದೆ.
ಆಪತ್ಕಾಲದ ವಿಧಗಳು
ಉತ್ಪತ್ತಿಗನುಸಾರ ಆಪತ್ತುಗಳು ನೈಸರ್ಗಿಕ ಹಾಗೂ ಮಾನವನಿರ್ಮಿತವಾಗಿರುತ್ತವೆ.
೧. ನೈಸರ್ಗಿಕ ವಿಕೋಪಗಳು
ನೈಸರ್ಗಿಕ ವಿಕೋಪಗಳನ್ನು ಕೆಳಗೆ ಕೊಡಲಾದ ವಿಭಿನ್ನ ವಿಧಗಳಲ್ಲಿ ನೋಡಬಹುದಾಗಿದೆ.
೧. ವಾಯುಜನ್ಯ ವಿಕೋಪಗಳು – ಚಂಡಮಾರುತ, ಸುಂಟರಗಾಳಿ, ಬಿರುಗಾಳಿ
೨. ಜಲಜನ್ಯ ವಿಕೋಪಗಳು – ನೆರೆ, ಮೇಘಸ್ಫೋಟ, ಬರಗಾಲ, ಸುನಾಮಿ
೩. ಭೂಮಿಜನ್ಯ ವಿಕೋಪಗಳು – ಭೂಕಂಪ, ಜ್ವಾಲಾಮುಖಿ, ಭೂಕುಸಿತ, ಹಿಮಪಾತ
೪. ಸಾಂಕ್ರಾಮಿಕ ರೋಗಗಳು – ಪ್ಲೇಗ್, ಡೆಂಗ್ಯೂ, ಚಿಕನಗುನಿಯಾ, ಸ್ವೈನ್ ಫ್ಲು, ಮಲೇರಿಯಾ ಇತ್ಯಾದಿ
ಇದರಲ್ಲಿ ಅನೇಕ ಬಾರಿ ಒಂದು ಆಪತ್ತಿನಿಂದಾಗಿ ಇನ್ನೊಂದು ಆಪತ್ತು ಆರಂಭವಾಗುತ್ತದೆ. ಉದಾ. ಸಮುದ್ರದ ಆಳದಲ್ಲಿ ಭೂಕಂಪವಾಗುವುದರಿಂದ ಸುನಾಮಿ ಬರುವ ಸಾಧ್ಯತೆಗಳಿರುತ್ತದೆ, ಹಾಗೆಯೇ ಸುನಾಮಿ ಅಥವಾ ನೆರೆಯ ನಂತರ ಮಹಾಮಾರಿಗಳು ಬರುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ನೈಸರ್ಗಿಕ ವಿಕೋಪಗಳಲ್ಲಿ ಮಾನವನಿರ್ಮಿತ ಕಾರಣಗಳಿಂದ ಸಾವು-ನೋವಿನ ಪ್ರಮಾಣವು ಹೆಚ್ಚಾಗುತ್ತದೆ, ಉದಾ. ಉತ್ತರಾಖಂಡದಲ್ಲಿ ಗಂಗಾ ನದಿಯ ಮಾರ್ಗದಲ್ಲಿ ಮಾನವ ನಿರ್ಮಿತ ಮನೆಗಳು ಹಾಗೂ ಉಪಹಾರ ಗೃಹಗಳಿಂದ, ಅಲ್ಲಿ ನೆರೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಯಿತು.
೨. ಮಾನವನಿರ್ಮಿತ ಆಪತ್ತುಗಳು
ಮಾನವ ನಿರ್ಮಿತ ಆಪತ್ತುಗಳಲ್ಲಿ ಕೆಳಗಿನಂತೆ ವಿಧಗಳಿವೆ –
೧. ಕೈಗಾರಿಕಾ ವಿಪತ್ತುಗಳು
೨. ಪರಿಸರ ಮಾಲಿನ್ಯ
೩. ವಿವಿಧ ಯುದ್ಧಗಳು, ಭಯೋತ್ಪಾದಕ ಚಟುವಟಿಕೆಗಳು
೪. ಜೈವಿಕ ಯುದ್ಧಕ್ಕಾಗಿ ಅನುಕೂಲ ವಾತಾವರಣದಲ್ಲಿ ವಿಭಿನ್ನ ಜೀವಾಣು ಹಾಗೂ ರೋಗಾಣುಗಳೊಂದಿಗೆ ಘಾತಕ ಕೀಟಗಳ ಸಂವರ್ಧನೆ ಮಾಡಿ ಅವುಗಳನ್ನು ಶತ್ರು ರಾಷ್ಟ್ರಗಳ ಮೇಲೆ ಬಿಡಲಾಗುತ್ತದೆ. ಕೊನೆಗೆ ಆ ಪ್ರದೇಶಗಳಲ್ಲಿ ಆ ರೋಗಾಣು ಹರಡಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತದೆ.
೫. ರಾಸಾಯನಿಕ ಯುದ್ಧದ ಸಮಯಯಲ್ಲಿ ವಿಷಪೂರಿತ ಅನಿಲಗಳು ಅಥವಾ ಬಾಂಬ್‌ಗಳನ್ನು ಶತ್ರುಗಳ ಮೇಲೆ ಎಸೆಯಲಾಗುತ್ತದೆ.
೬. ದೊಡ್ಡ ಕಂಪನಿಗಳ ಕಾರ್ಖಾನೆಗಳಲ್ಲಿನ ಬೇಜವಾಬ್ದಾರಿ ನಿರ್ವಹಣೆ ಅಥವಾ ದೋಷಪೂರಿತ ಯಂತ್ರಗಳಿಂದಾಗಿ ಉಂಟಾಗುವ ಆಪತ್ತುಗಳು. ಉದಾ: ಭೋಪಾಲ ಅನಿಲ ದುರಂತ, ಚರ್ನೋಬಿಲ್ ಪರಮಾಣು ದುರ್ಘಟನೆ, ಫುಕುಶಿಮಾ ಪರಮಾಣು ದುರಂತ ಇತ್ಯಾದಿಗಳು ಪ್ರಮುಖವಾಗಿವೆ.
೭. ಕಾಡ್ಗಿಚ್ಚು ಅಥವಾ ನಗರಗಳಲ್ಲಿ ಬೆಂಕಿ
೮. ವಿಮಾನ ಅಪಘಾತ, ರಸ್ತೆ ಅಪಘಾತ ಹಾಗೂ ರೈಲು ಅಪಘಾತ
ಆಪತ್ಕಾಲದಲ್ಲಿ ಉಂಟಾಗುವ ದೊಡ್ಡ ಹಾನಿ
ಆಪತ್ಕಾಲದಿಂದಾಗುವ ಹಾನಿಯ ಕಲ್ಪನೆ ಮಾಡಲು ನಾವು ಕೆಲವು ಉದಾಹರಣೆಗಳನ್ನು ನೋಡಬಹುದು.
ಅ. ಮೇ ೨೦೦೪ ಹಿಂದೂ ಮಹಾಸಾಗರದಲ್ಲಿ ೯.೩ ರಿಕ್ಟರ್ ಮಾಪನದ ತೀವ್ರ ಭೂಕಂಪ ಬಂದಿತ್ತು. ಇದು ಇಂದಿನ ವರೆಗಿನ ಇತಿಹಾಸದ ೨ ನೇ ಅತಿದೊಡ್ಡ ಭೂಕಂಪವಾಗಿದೆ. ಈ ಭೂಕಂಪದಿಂದಾಗಿ ಬಂದಂತಹ ಸುನಾಮಿಯಿಂದ ೨,೨೯,೦೦೦ ಜನರು ಜೀವ ಕಳೆದುಕೊಂಡಿದ್ದರು.
ಆ. ಮೇ ೧೯೩೧ ‘ಹುವಾಂಗ್ ಹೆ’ (ಯೆಲ್ಲೋ ರಿವರ್, ಚೀನಾ) ನದಿಯಲ್ಲಿ ಬಂದ ಬರಗಾಲದಿಂದಾಗಿ ೪,೨೨,೦೦೦ ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಇ. ೧೯೦೦ ರಲ್ಲಿ ಬಂದ ಬರಗಾಲದಿಂದ ಭಾರತದಲ್ಲಿ ೨,೫೦,೦೦೦ ರಿಂದ ೩,೨೫,೦೦೦ ಜನರು ಮೃತಪಟ್ಟಿದ್ದರು.
ಈ. ೧೯೧೮ ರಲ್ಲಿ ಮಹಾಮಾರಿಯಾದ ಸ್ಪ್ಯಾನಿಶ್ ಫ್ಲೂನಿಂದಾಗಿ ಜಗತ್ತಿನಲ್ಲಿ ಸುಮಾರು ೫ ಕೋಟಿ ಜನರು ಮೃತಪಟ್ಟಿರುವ ಅಂದಾಜಿದೆ.
ಉ. ೧೯೫೭ ರ ವಿಶ್ವಮಾರಿಯಾದ ಏಶಿಯನ್ ಫ್ಲೂನಿಂದಾಗಿ ಜಗತ್ತಿನಲ್ಲಿ ಅಂದಾಜು ೧೦ ಲಕ್ಷ ಜನರು ಮೃತಪಟ್ಟಿದ್ದಾರೆ.
ಸದ್ಯದ ಕಾಲದಲ್ಲಿರುವ ಆಪತ್ತುಗಳು
ಅ. ‘ಗ್ಲೋಬಲ್ ವಾರ್ಮಿಂಗ್’ನಿಂದಾಗಿ ಸಮುದ್ರಗಳಲ್ಲಿ ನೀರಿನ ಮಟ್ಟವು ಹೆಚ್ಚಾಗುವುದು : ಸುಲಭ ಶಬ್ದಗಳಲ್ಲಿ ಹೇಳುವುದಾದರೆ ‘ಗ್ಲೋಬಲ್ ವಾರ್ಮಿಂಗ್’ ಅಂದರೆ ‘ಪೃಥ್ವಿಯ ತಾಪಮಾನದಲ್ಲಿ ಹೆಚ್ಚಳ ಹಾಗೂ ಇದರಿಂದಾಗಿ ವಾತಾವರಣದಲ್ಲಿ ಆಗುವ ಬದಲಾವಣೆ’ಗಳಾಗಿವೆ. ಪೃಥ್ವಿಯ ತಾಪಮಾನದಲ್ಲಿ ಆಗುತ್ತಿರುವ ಈ ಹೆಚ್ಚಳದ (೧೦೦ ವರ್ಷಗಳ ಸರಾಸರಿ ತಾಪಮಾನದಲ್ಲಿ ೧ ಡಿಗ್ರಿ ಫ್ಯಾರೆನ್‌ಹೈಟ್ ಹೆಚ್ಚಳವಾಗಿದೆ.) ಪರಿಣಾಮವಾಗಿ ಮಳೆ ಬೀಳುವ ದಿನಾಂಕ (ಸಮಯ)ದಲ್ಲಿ ಬದಲಾವಣೆ, ಹಿಮಖಂಡಗಳು ಹಾಗೂ ಗ್ಲೇಶಿಯರ್‌ಗಳು ಕರಗುವುದು, ಸಮುದ್ರದ ಜಲಮಟ್ಟದಲ್ಲಿ ವೃದ್ಧಿಯಾಗುವುದು ಹಾಗೂ ವನಸ್ಪತಿ ಮತ್ತು ಪ್ರಾಣಿ ಜಗತ್ತಿನ ಮೇಲಿನ ಪ್ರಭಾವಗಳ ರೂಪದಲ್ಲಿ ಕಂಡುಬರುತ್ತಿವೆ.
‘ಗ್ರೀನ್‌ಹೌಸ್ ಗ್ಯಾಸ್’ ಪೃಥ್ವಿಯ ವಾತಾವರಣದಲ್ಲಿ ಪ್ರವೇಶಿಸಿ ಪೃಥ್ವಿಯ ತಾಪಮಾನವನ್ನು ಹೆಚ್ಚಿಸುತ್ತವೆ. ವಿಜ್ಞಾನಿಗಳಿಗನುಸಾರ ಈ ಗ್ಯಾಸ್‌ನ ಹೊರಸೂಸುವಿಕೆಯು ಇದೇ ರೀತಿ ಮುಂದುವರಿದರೆ ೨೧ ನೇ ಶತಮಾನದಲ್ಲಿ ಪೃಥ್ವಿಯ ತಾಪಮಾನವು ೩ ಡಿಗ್ರಿಯಿಂದ ೮ ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಹೀಗಾದರೆ ಇದರಿಂದ ಪರಿಣಾಮಗಳು ಭಯಂಕರವಾಗಿರುವವು. ಜಗತ್ತಿನ ಅನೇಕ ಕಡೆಗಳಲ್ಲಿ ಆಚ್ಛಾದಿತವಾದ ಹಿಮದ ಹೊದಿಕೆಗಳು ಕರಗುವವು, ಸಮುದ್ರದ ಜಲಮಟ್ಟವು ಅನೇಕ ಅಡಿಗಳಷ್ಟು ಹೆಚ್ಚಾಗುವುದು. ಇದರಿಂದ ಜಗತ್ತಿನ ಅನೇಕ ಪ್ರದೇಶಗಳು ಜಲಾವೃತಗೊಳ್ಳುವವು, ಭಾರೀ ವಿನಾಶವಾಗುವುದು. ಈ ವಿನಾಶವು ಯಾವುದಾದರೊಂದು ಕ್ಷುದ್ರಗ್ರಹವು ಭೂಮಿಗೆ ಬಂದು ಅಪ್ಪಳಿಸುವುದರಿಂದಾಗುವ ವಿನಾಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದು. ನಮ್ಮ ಪೃಥ್ವಿಗೂ ಈ ಸ್ಥಿತಿಯು ಅತ್ಯಂತ ಹಾನಿಕರವಾಗಿದೆ.
ಆ. ಕೊರೋನಾ ಗುಂಪಿನ ‘ಕೋವಿಡ್-೧೯’ ವೈರಸಿನ ವಿಶ್ವಮಾರಿ : ಪ್ರಸ್ತುತ ಕಾಲದಲ್ಲಿ ನಾವು ಈ ಮಹಾಮಾರಿಯ ಕಾಲದಲ್ಲಿದ್ದೇವೆ. ಚೀನಾದಲ್ಲಿ ಆರಂಭವಾದ ಈ ಮಹಾಮಾರಿಯನ್ನು ೨ ತಿಂಗಳಿನಲ್ಲೇ ವಿಶ್ವಮಾರಿಯಾಗಿ ಘೋಷಿಸಲಾಗಿದೆ. ಇಲ್ಲಿಯ ವರೆಗೆ ಇದರ ಪ್ರಕೋಪದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಹಾಗೂ ಲಕ್ಷಾಂತರ ಜನರು ಇದರ ಹಿಡಿತದಲ್ಲಿ ಸಿಲುಕಿದ್ದಾರೆ. ಈಗ ಇದರ ಸಂಖ್ಯೆಯು ಎಷ್ಟರ ವರೆಗೆ ತಲುಪುವುದು ಎಂಬುದನ್ನು ನಾವು ಭವಿಷ್ಯದಲ್ಲಿ ನೋಡಲಿದ್ದೇವೆ, ಆದರೆ ಇಲ್ಲಿಯ ವರೆಗೂ ಈ ಮಹಾಮಾರಿಗೆ ಯಾವುದೇ ಔಷಧಿಗಳು ಲಭ್ಯವಿಲ್ಲ.