ಮಳೆಗಾಲದ ಋತುಚರ್ಯೆ – ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !

Article also available in :

೧. ಮಳೆಗಾಲದಲ್ಲಿ ರೋಗ ನಿರ್ಮಿತಿಗೆ ಕಾರಣವಾದ ಘಟಕಗಳು

ಮಳೆಗಾಲದ ಮೊದಲು ಬೇಸಿಗೆಕಾಲದಲ್ಲಿ ಶರೀರವು ಶುಷ್ಕವಾಗಿರುತ್ತದೆ, ಶರೀರದ ಶಕ್ತಿಯು ಕಡಿಮೆಯಾಗಿರುತ್ತದೆ. ಕಡು ಬಿಸಿಲಿನ ನಂತರ ವಾತಾವರಣದಲ್ಲಿ ಆಕಸ್ಮಾತ್ತಾಗಿ ಪರಿವರ್ತನೆಯಾಗಿ ಮಳೆಯಿಂದಾಗಿ ತಂಪು ನಿರ್ಮಾಣವಾಗುತ್ತದೆ. ಹವೆಯ ಆರ್ದ್ರತೆಯು ಹೆಚ್ಚಾಗುತ್ತದೆ. ಆದುದರಿಂದ ಶರೀರದ ‘ವಾತ’ದೋಷವು ಹೆಚ್ಚಾಗುತ್ತದೆ. ವಾತಾವರಣದಲ್ಲಿ, ವಿಶೇಷವಾಗಿ ವನಸ್ಪತಿ, ಧಾನ್ಯಗಳು, ನೀರು ಇತ್ಯಾದಿ ಎಲ್ಲವೂಳಲ್ಲಿ ಆಮ್ಲತೆ ಹೆಚ್ಚಾಗುವುದರಿಂದ ಪಿತ್ತವನ್ನು ಶೇಖರಿಸುವ ಕಡೆಗೆ ಶರೀರದ ಸೆಳೆತವಿರುತ್ತದೆ. ಈ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಈ ಎಲ್ಲ ಪರಿವರ್ತನೆಗಳಿಂದಾಗಿ ವಾತದ ರೋಗ, ಉದಾ. ಸಂಧಿವಾತ, ಆಮವಾತ ಇವುಗಳೊಂದಿಗೆ ಭೇದಿ, ಅಜೀರ್ಣ ಇತ್ಯಾದಿ ಅಪಚನವನ್ನು ನಿರ್ಮಾಣ ಮಾಡುವ ಕಾಯಿಲೆಗಳು ಹೆಚ್ಚಾಗುತ್ತವೆ.

೨. ಮಳೆಗಾಲದಲ್ಲಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ?

ತಿನ್ನಬೇಕು ತಿನ್ನಬಾರದು
೧. ಆಹಾರದ ರುಚಿ ಸ್ವಲ್ಪ ಹುಳಿ-ಉಪ್ಪು, ಕಹಿ, ಒಗರು ಹಾಗೂ ಖಾರ ಹೆಚ್ಚು ಸಿಹಿ
೨. ಆಹಾರದ ವೈಶಿಷ್ಟ್ಯಗಳು ಪಚನಕ್ಕೆ ಹಗುರ, ಶಕ್ತಿದಾಯಕ, ಶುಷ್ಕ (ಒಣ), ಸ್ವಲ್ಪ ಸ್ನಿಗ್ಧ ತೆಳು
೩. ವಾತ, ಪಿತ್ತ ಹಾಗೂ ಕಫ ಇವುಗಳಿಗೆ ಸಂಬಂಧಿಸಿದ ಗುಣ ವಾತ, ಪಿತ್ತ ಹಾಗೂ ಕಫ ಶಮನಗೊಳಿಸುವ ವಾತ, ಪಿತ್ತ, ಹಾಗೂ ಕಫವನ್ನು ಹೆಚ್ಚಿಸುವ
೪. ಧಾನ್ಯಗಳು ಹಳೆಯ ಧಾನ್ಯಗಳು (ಅಕ್ಕಿ, ಗೋಧಿ, ಜವೆ ಗೋಧಿ, ವರದಕ್ಕಿ, ರಾಗಿ, ಅರ್ಕ (ಹಾರಕ, ಒಂದು ರೀತಿಯ ಹಗುರವಾದ ಧಾನ್ಯ), ಸೆಜ್ಜೆ), ಹುರಿದ ಕಾಳು, ರಾಜಗಿರಿ, ಎಲ್ಲ ಧಾನ್ಯಗಳ ಅರಳು ಹೊಸ ಧಾನ್ಯಗಳು, ಮಂಡಕ್ಕಿ, ಮೆಕ್ಕೆ ಜೋಳದ ಅರಳು
೫. ದ್ವಿದಳ ಧಾನ್ಯಗಳು ಅ. ಹೆಚ್ಚು ಪ್ರಮಾಣದಲ್ಲಿ : ಹೆಸರುಕಾಳು, ಚನ್ನಂಗಿ
ಆ. ಕಡಿಮೆ ಪ್ರಮಾಣದಲ್ಲಿ : ಹುರುಳಿ, ಉದ್ದು
ಅಲಸಂಡೆ, ಬಟಾಣಿ, ಅವರೆ, ಮಟಕಿ
೬. ತರಕಾರಿ ಅ. ಆವಶ್ಯಕತೆಗನುಸಾರ : ಸೋರೆಕಾಯಿ, ಬೆಂಡೆಕಾಯಿ, ಪಡವಲಕಾಯಿ, ಎಲೆಕೋಸು, ಹೂಕೋಸು, ಟಿಂಡಾ (ಕಚ್ಚಾ ಟೊಮೇಟೊದಂತಹ ಹಣ್ಣು), ತಿಂಗಳ ಅವರೆ, ಚವಳಿಕಾಯಿ, ಸುವರ್ಣಗೆಡ್ಡೆ, ಹರಿವೆ ಸೊಪ್ಪು, ಹುರುಳಿ
ಆ. ಅಲ್ಪ ಪ್ರಮಾಣದಲ್ಲಿ : ಮೆಂತೆ, ಸಾಸಿವೆ ಕಾಳು
ಸೊಪ್ಪುತರಕಾರಿ
೭. ಮಸಾಲೆ ಎಲ್ಲ ರೀತಿಯ ಮಸಾಲೆ
೮. ಎಣ್ಣೆ ಅಥವಾ ಎಣ್ಣೆಬೀಜಗಳು ಎಳ್ಳಿನ ಎಣ್ಣೆ, ಕಡಲೆಕಾಯಿ ಎಣ್ಣೆ
೯. ಪದಾರ್ಥ ಅ. ಸೆಜ್ಜೆ ರೊಟ್ಟಿ, ಸಣ್ಣ ಚಪಾತಿಗಳು, ಜೋಳದ ಅಥವಾ ಜೋಳದ ಅರಳಿನ ಹಿಟ್ಟಿನ ಸಜ್ಜಿಗೆ (ಇದನೆಲ್ಲವನ್ನು ತಯಾರಿಸುವಾಗ ಅವುಗಳಲ್ಲಿ ಶುಂಠಿ, ಒಣ ಮೆಣಸು ಇತ್ಯಾದಿಗಳ ಪುಡಿಯನ್ನು ಹಾಕುವುದು ಒಳ್ಳೆಯದು.)
ಆ. ಶುಂಠಿ, ಮೆಣಸು, ಹಿಪ್ಪಲಿ, ಓಮಕಾಳು, ಅರಿಶಿಣ ಇತ್ಯಾದಿ ಮಸಾಲೆಗಳನ್ನು ಹಾಕಿ ತಯಾರಿಸಿದ ಹೆಸರು, ಚನ್ನಂಗಿ, ತೊಗರಿ, ಅಲಸಂಡೆ ಈ ದ್ವಿದಳ ಧಾನ್ಯಗಳ ಕಟ್ಟು ಅಥವಾ ನೀರು, ಟೊಮೇಟೊ ಸಾರು, ಪುನರ್ಪುಳಿ ಸಾರು ಅಥವಾ ಕಢಿ
ಇ. ಹೆಸರು ಕಾಳಿನ ಪದಾರ್ಥಗಳು : ತೊವ್ವೆ, ಕಟ್ಟು, ಅಕ್ಕಿ ಕೂಡಿಸಿ ಮಾಡಿದ ಅನ್ನ (ಖಿಚಡಿ), ವಡೆಗಳು, ಉಂಡೆಗಳು ಇತ್ಯಾದಿ
ಈ. ಹುರಳಿಯ ಪದಾರ್ಥ : ಸೂಪು, ಝುಣಕ, ಹುರುಳಿಯ ಹಿಟ್ಟಿನಿಂದ ತಯಾರಿಸಿದ ಶೇಂಗಾದಂತೆ ಕಾಣಿಸುವ ಪದಾರ್ಥ, ಉಂಡೆ ಇತ್ಯಾದಿ
ಉ. ಇತರ : ರಾಜಗಿರಿ ಉಂಡೆ
ಊ. ವಿಶೇಷ ಗುಣ : ಉಷ್ಣ (ಬಿಸಿ) ಹಾಗೂ ನೇರ ಅಗ್ನಿಸಂಸ್ಕಾರ ಮಾಡಿದ ಪದಾರ್ಥ ಉದಾ. ಸಣ್ಣ ಆಕಾರದ ಚಪಾತಿಗಳು, ಸುಟ್ಟ ಹಪ್ಪಳಗಳು
ಅ. ಉಸಳಿ
ಆ. ಬಹಳಷ್ಟು ಸಿಹಿ ಹಾಗೂ ಸ್ನಿಗ್ಧ ಪದಾರ್ಥ, ಉದಾ. ಶೀರಾ, ಬೂಂದಿ ಉಂಡೆ
ಇ. ತಂಗಳು ಪದಾರ್ಥ
ಈ. ನೊಣಗಳು ಕುಳಿತ ಪದಾರ್ಥಗಳು
೧೦. ಹಾಲು ಹಾಗೂ ಹಾಲಿನ ಪದಾರ್ಥಗಳು ಅ. ಹಾಲು ಕುಡಿಯುವಾಗ ಅದರಲ್ಲಿ ಶುಂಠಿ ಅಥವಾ ಅರಿಶಿಣ ಹಾಕಬೇಕು.
ಆ. ಮೊಸರಿನ ಮೇಲಿನ ನೀರನ್ನು ಸೌವರ್ಚಲ ಅಥವಾ ವಿಡಾ ಲವಣ ಹಾಕಿ ಕುಡಿಯಬೇಕು.
ಇ. ಸೈಂಧವ ಲವಣ, ಜೀರಿಗೆ ಇತ್ಯಾದಿ ಪದಾರ್ಥಗಳನ್ನು ಹಾಕಿ ಮಜ್ಜಿಗೆ ಕುಡಿಯಬೇಕು.
ಈ. ಭೋಜನದಲ್ಲಿ ಒಂದು ಚಮಚದಷ್ಟು ತುಪ್ಪ ಅಥವಾ ಬೆಣ್ಣೆ ಸೇವಿಸಿ.
ಖವಾ, ಕುಂದಾ, ಪೇಢಾ, ಹಾಲು ಹಾಕಿ ತಯಾರಿಸಿದ ಮಿಠಾಯಿ
೧೧. ಹಣ್ಣುಗಳು ಅ. ಆವಶ್ಯಕತೆಗುನಸಾರ : ದಾಳಿಂಬೆ, ಬಾಳೆಹಣ್ಣು, ಸೇಬುಹಣ್ಣು
ಆ. ಅಲ್ಪ ಪ್ರಮಾಣದಲ್ಲಿ : ಸೌತೆಕಾಯಿ, ಕಲ್ಲಂಗಡಿ
ಹಲಸಿನ ಹಣ್ಣು
೧೨. ಒಣ ಹಣ್ಣುಗಳು (ಡ್ರೈ ಫ್ರೂಟ್ಸ್) ಅ. ಆವಶ್ಯಕತೆಗನುಸಾರ : ಒಣ ದ್ರಾಕ್ಷಿ, ಅಂಜೂರ
ಆ. ಸ್ವಲ್ಪ ಪ್ರಮಾಣದಲ್ಲಿ : ಇತರ
೧೩. ಉಪ್ಪು ಸೈಂಧವ, ವಿಡಾ, ಸೌವರ್ಚಲ
೧೪. ಸಕ್ಕರೆ ಹಳೆಯ ಬೆಲ್ಲ, ಜೇನುತುಪ್ಪ ಇವುಗಳ ಉಪಯೋಗವನ್ನು ಹೆಚ್ಚು ಮಾಡಬೇಕು. ಹೊಸ ಬೆಲ್
೧೫. ನೀರು ಅ. ಸೋಸಿ ಅಥವಾ ನೀರಿನಲ್ಲಿ ಪಟಕಾರ ತಿರುಗಿಸಿ ಉಪಯೋಗಿಸಬೇಕು.
ಆ. ನೀರು ಜಂತುರಹಿತ ಆಗಬೇಕೆಂದು ಅದನ್ನು ಚೆನ್ನಾಗಿ ಕುದಿಸಿ ಉಪಯೋಗಿಸಬೇಕು.
ಅ. ನದಿ-ಹಳ್ಳಗಳ ನೀರು
ಆ. ಹೆಚ್ಚು ನೀರು ಕುಡಿಯುವುದು
೧೬. ಸಾರಾಯಿ (ಟಿಪ್ಪಣಿ) ಪ್ರಮಾಣದಲ್ಲಿ ತೆಗೆದುಕೊಂಡ ಸರಾಯಿ ಹೆಚ್ಚು ಸರಾಯಿ ಕುಡಿಯುವುದು
೧೭. ಮಾಂಸ (ಟಿಪ್ಪಣಿ) ಉಷ್ಣ ಹಾಗೂ ಪಚನವಾಗುವಂತಹ ಹಗುರವಾದ ಮಾಂಸ : ಆಡಿನ ಮಾಂಸ, ಸಲಾಕೆಯ ಮೇಲೆ ಬೇಯಿಸಿದ ಮಾಂಸ, ಮೆಣಸಿನಂತಹ ಜೀರ್ಣಕ್ರಿಯೆಗೆ ಪೂರಕವಾಗಿರುವ ಮಸಾಲೆ ಹಾಕಿ ಮಾಡಿದ ಮಾಂಸದ ರಸ (ಸೂಪ) ಮೀನುಗಳು ಹಾಗೂ ಇತರ ಜಲಚರ ಪ್ರಾಣಿಗಳ ಮಾಂಸ

ಟಿಪ್ಪಣಿ : ಪ್ರಸ್ತುತ ಸರಾಯಿ ಹಾಗೂ ಮಾಂಸ ಸೇವನೆಯನ್ನು ಮಾಡುವವರಿಗೆ ಅವುಗಳ ಗುಣದೋಷಗಳು ತಿಳಿಯಲಿ, ಎಂದು ಇಲ್ಲಿ ಕೊಡಲಾಗಿದೆ.

೨. ಆ. ಲಂಘನ (ಉಪವಾಸ) : ವಾರಕ್ಕೊಮ್ಮೆ ಲಂಘನ ಅಥವಾ ಉಪವಾಸ ಮಾಡಬೇಕು. ಯಾರಿಗೆ ಸಾಧ್ಯವಿದೆ ಅವರು ದಿನವಿಡಿ ಏನನ್ನೂ ತಿನ್ನದೇ ಇರಬೇಕು. ತೀರಾ ಹಸಿವಾದರೆ ಮಂಡಕ್ಕಿ ತಿನ್ನಬೇಕು. ಅದು ಸಾಧ್ಯವಿಲ್ಲದವರು ಹುರಿದ ಧಾನ್ಯದ ಪದಾರ್ಥ ಅಥವಾ ಲಘು ಆಹಾರ (ಮಂಡಕ್ಕಿ, ಹೆಸರು ಕಾಳಿನ ತೊವ್ವೆ ಇವುಗಳಂತಹ ಪಚನಕ್ಕೆ ಹಗುರವಾದ ಆಹಾರ) ಸೇವಿಸಿ ಲಂಘನ ಮಾಡಬೇಕು. ಮಳೆಗಾಲದಲ್ಲಿ ಒಪ್ಪೊತ್ತು ಉಪವಾಸ ಇರುವುದು, ಅಂದರೆ ಮಧ್ಯಾಹ್ನ ವ್ಯವಸ್ಥಿತವಾಗಿ ಭೋಜನ ಸೇವಿಸಿ ರಾತ್ರಿ ಊಟ ಮಾಡದಿರುವುದು ಅನೇಕರಿಗೆ ಉಪಯುಕ್ತವೆನಿಸುತ್ತದೆ.

೩. ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ವಿಶೇಷ ಕಾಳಜಿ

ಅ. ಎಲ್ಲ ಹಾಸಿಗೆ, ಬೆಚ್ಚಗಿನ ಬಟ್ಟೆಗಳನ್ನು ಮಳೆಗಾಲದ ಮೊದಲೇ ಬೇಸಿಗೆಯಲ್ಲಿ ಬಿಸಿಲಿಗೆ ಹಾಕಿ ಇಡಬೇಕು.
ಆ. ಮಳೆಗಾಲದಲ್ಲಿ ಸ್ನಾನಕ್ಕಾಗಿ ಬೆಚ್ಚಗಿನ ಅಥವಾ ಬಿಸಿ ನೀರನ್ನು ಉಪಯೋಗಿಸಬೇಕು.
ಇ. ಹಸಿಯಾದ ಅಥವಾ ತೇವವುಳ್ಳ ಜಾಗದಲ್ಲಿ ಇರಬಾರದು.
ಈ. ಹಸಿಯಾದ ಅಥವಾ ತೇವವುಳ್ಳ ಬಟ್ಟೆಗಳನ್ನು ಧರಿಸಬಾರದು.
ಉ. ಸತತ ನೀರಿನಲ್ಲಿ ಕೆಲಸ ಮಾಡಬಾರದು.
ಊ. ಮಳೆಯಲ್ಲಿ ನೆನೆಯಬಾರದು. ಅದಕ್ಕಾಗಿ ಆವಶ್ಯಕವಿರುವ ಕಾಳಜಿಯನ್ನು ತೆಗೆದುಕೊಳ್ಳಬೇಕು. ನೆನೆದರೆ ತಕ್ಷಣ ಒಣಗಿದ ಬಟ್ಟೆಗಳನ್ನು ಧರಿಸಬೇಕು.
ಎ. ಮಳೆಗಾಲದಲ್ಲಿನ ತಂಪಿನಿಂದಲೂ ರಕ್ಷಣೆ ಮಾಡಿಕೊಳ್ಳಬೇಕು.
ಏ. ಜಾಗರಣೆಯಿಂದ ಶರೀರದಲ್ಲಿನ ಶುಷ್ಕತೆ ಹೆಚ್ಚಾಗಿ ವಾತವು ಹೆಚ್ಚಾಗುವುದರಿಂದ ರಾತ್ರಿಯ ಜಾಗರಣೆಯನ್ನು ತಪ್ಪಿಸಬೇಕು.
ಓ. ಹಗಲಿನಲ್ಲಿ ಮಲಗಬಾರದು.

೪. ನೊಣ ಹಾಗೂ ಸೊಳ್ಳೆ ಇವುಗಳನ್ನು ನಿಯಂತ್ರಿಸುವ ನೈಸರ್ಗಿಕ ಉಪಾಯ

ಈ ಸಮಯದಲ್ಲಿ ನೊಣ ಹಾಗೂ ಸೊಳ್ಳೆ ಇವುಗಳ ಪ್ರಮಾಣವೂ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ಮುಂದಿನ ಉಪಾಯ ಮಾಡಬೇಕು.
ಅ. ಮನೆಯಲ್ಲಿ ಬೇವಿನ ಎಲೆಗಳು, ಬೆಳ್ಳುಳ್ಳಿಯ ಸಿಪ್ಪೆ, ಧೂಪ, ಸುಗಂಧ ದ್ರವ್ಯ, ಓಮಕಾಳು ಇವುಗಳ ಹೊಗೆಯನ್ನು ತಿರುಗಿಸಬೇಕು.
ಆ. ಮನೆಯ ಸುತ್ತಲೂ ಗಿಡಗಳಿದ್ದರೆ ಅವುಗಳ ಮೇಲೆ ಗೋಮೂತ್ರ ಸಿಂಪಡಿಸಬೇಕು.
ಇ. ಮನೆಯೊಳಗೆ ಬಜೆಯ ಸಸಿಯಿರುವ ಕುಂಡವನ್ನು ಇಡಬೇಕು. ಇದರಿಂದ ಸೊಳ್ಳೆಗಳ ಪ್ರಮಾಣವು ಕಡಿಮೆಯಾಗುತ್ತದೆ.
ಈ. ಸಾಯಂಕಾಲದ ಸಮಯದಲ್ಲಿ ಸೊಳ್ಳೆ ಓಡಿಸುವ ಲಿಕ್ವಿಡ್ ಕಾಯಿಲ್ ಮೇಲೆ ಬೆಳ್ಳುಳ್ಳಿಯ ಪಕಳೆಯನ್ನಿಟ್ಟು ಸ್ವಿಚ್ ಶುರು ಮಾಡಬೇಕು. ಇದರಿಂದ ಸೊಳ್ಳೆಗಳ ಪ್ರಮಾಣವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

೫. ಮಳೆಗಾಲದ ಕಾಯಿಲೆಗಳನ್ನು ಈ ರೀತಿ ತಡೆಗಟ್ಟಿರಿ !

ಮಳೆಗಾಲದ ಪ್ರಮುಖ ಲಕ್ಷಣವೆಂದರೆ ಹಸಿವು ಕಡಿಮೆಯಾಗುವುದು. ಹಸಿವು ಕಡಿಮೆಯಿರುವಾಗಲೂ ಮೊದಲಿನ ಹಾಗೆಯೇ ಆಹಾರ ಸೇವಿಸಿದರೆ, ಅದು ಅನೇಕ ರೋಗಗಳಿಗೆ ಆಮಂತ್ರಣವನ್ನೇ ನೀಡುತ್ತದೆ; ಏಕೆಂದರೆ ಕುಂಠಿತಗೊAಡ ಹಸಿವು ಅಥವಾ ಪಚನಶಕ್ತಿಯು ಹೆಚ್ಚಿನ ಕಾಯಿಲೆಗಳ ಮೂಲ ಕಾರಣವಾಗಿದೆ. ಹೊಟ್ಟೆ ಭಾರವೆನಿಸುವುದು, ಹುಳಿತೇಗು ಬರುವುದು, ಗ್ಯಾಸ್ (ಹೊಟ್ಟೆಯಲ್ಲಿ ವಾಯು) ಆಗುವುದು, ಇವು ಹಸಿವು ಕಡಿಮೆಯಾದುದರ ಲಕ್ಷಣಗಳಾಗಿವೆ. ಈ ಸಮಯದಲ್ಲಿ ಹಗುರವಾದ ಅನ್ನ, ಉದಾ. ಗಂಜಿ, ಕಟ್ಟು, ಹುರಿದು ತಯಾರಿಸಿದ ಪದಾರ್ಥವನ್ನು ಸೇವಿಸಬೇಕು. ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು. ಹೊಟ್ಟೆ ತುಂಬಿರುವಾಗಲೂ ಆಹಾರವನ್ನು ಸೇವಿಸುತ್ತಿದ್ದರೆ ಅಜೀರ್ಣ, ಭೇದಿ, ಆಮಶಂಕೆ ಈ ಕಾಯಿಲೆಗಳು ಆರಂಭವಾಗುತ್ತವೆ.

೫ ಅ. ಪಚನಶಕ್ತಿಯನ್ನು ಹೆಚ್ಚಿಸುವ ಮನೆಮದ್ದು
೫ ಅ ೧. ಜೀರ್ಣಕ್ರಿಯೆಗೆ ಪೂರಕವಾಗಿರುವ ಮಜ್ಜಿಗೆ : ಒಂದು ಲೋಟ ತಾಜಾ ಸಿಹಿ ಮಜ್ಜಿಗೆಯನ್ನು ತೆಗೆದುಕೊಂಡು ಅದರಲ್ಲಿ ಶುಂಠಿ, ಜೀರಿಗೆ, ಓಮಕಾಳು, ಇಂಗು, ಸೈಂಧವ ಉಪ್ಪು, ಮೆಣಸು ಇವುಗಳ ೧-೧ ಚಿಟಿಕೆಯಷ್ಟು ಪುಡಿ ಹಾಕಿ ಮಿಶ್ರಣ ಮಾಡಬೇಕು. ದಿನದಲ್ಲಿ ೨-೩ ಬಾರಿ ಕುಡಿಯಬೇಕು.
೫ ಅ ೨. ಜೀರ್ಣಕ್ರಿಯೆಗೆ ಪೂರಕವಾಗಿರುವ ಮಿಶ್ರಣ : ಹಸಿ ಶುಂಠಿಯನ್ನು ತುರಿದು ಅದರಲ್ಲಿ ಅದು ನೆನೆಯುವಷ್ಟು ನಿಂಬೆ ರಸವನ್ನು ಹಾಕಬೇಕು, ರುಚಿಗೆ ತಕ್ಕಷ್ಟು ಸೈಂಧವ ಉಪ್ಪು ಹಾಕಬೇಕು. ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಡಬೇಕು. ಊಟಕ್ಕೆ ಮೊದಲು ೧-೨ ಚಮಚದ ಪ್ರಮಾಣದಲ್ಲಿ ಸೇವಿಸಬೇಕು.
೫ ಅ ೩. ಶುಂಠಿ-ಸಕ್ಕರೆ ಮಿಶ್ರಣ : ೧ ಬಟ್ಟಲು ಶುಂಠಿ ಪುಡಿ ಹಾಗೂ ಅಷ್ಟೇ ಪ್ರಮಾಣದಲ್ಲಿ ಸಕ್ಕರೆಯನ್ನು ತೆಗೆದುಕೊಂಡು ಮಿಕ್ಸರನಲ್ಲಿ ರುಬ್ಬಿ ಮಿಶ್ರಣ ಮಾಡಿ ಭರಣಿಯಲ್ಲಿ ತುಂಬಿಡಬೇಕು. ಎರಡೂ ಬಾರಿ ಊಟಕ್ಕೆ ಮೊದಲು ೧-೧ ಚಮಚದಷ್ಟು ತೆಗೆದುಕೊಳ್ಳಬೇಕು. ಇದರಿಂದ ಶುದ್ಧ ತೇಗು ಬಂದು ಚೆನ್ನಾಗಿ ಹಸಿವೆಯಾಗುತ್ತದೆ, ಹಾಗೂ ಪಿತ್ತದ ತೊಂದರೆಯೂ ಕಡಿಮೆಯಾಗುತ್ತದೆ.

೫ ಆ. ಪ್ರತಿದಿನ ಸಂಪೂರ್ಣ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಿ ! : ಮಳೆಗಾಲದಲ್ಲಿ ಸಂಪೂರ್ಣ ಶರೀರಕ್ಕೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಈ ಎಣ್ಣೆಯನ್ನು ಸಂದುಗಳಲ್ಲಿ ಹೆಚ್ಚು ಸಮಯ ಉಜ್ಜಬೇಕು. ಮಳೆಗಾಲದಲ್ಲಿ ಹವೆಯಲ್ಲಿ ಆರ್ದ್ರತೆ ಹಾಗೂ ತಂಪು ಇರುವುದರಿಂದ ಉಷ್ಣತೆಯ ಗುಣವಿರುವ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬೇಕು, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬಾರದು. (ಮಳೆಗಾಲವನ್ನು ಬಿಟ್ಟು ಇತರ ಋತುಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬಹುದು.) ಎಣ್ಣೆಯನ್ನು ಹಚ್ಚಿಕೊಂಡ ನಂತರ ಸೂರ್ಯನಮಸ್ಕಾರ, ಯೋಗಾಸನಗಳಂತಹ ಹಗುರವಾದ ವ್ಯಾಯಾಮಗಳನ್ನು ಮಾಡಬೇಕು. ಅವಯವಗಳು ನೋವಾಗುವುದು, ವೇದನೆ ಇತ್ಯಾದಿ ಲಕ್ಷಣಗಳಿದ್ದರೆ ಬಿಸಿ ನೀರಿನ ಚೀಲದಿಂದ ಅಥವಾ ‘ಹೀಟಿಂಗ್ ಪ್ಯಾಡ್’ನಿಂದ ಶಾಖ ಕೊಡಬೇಕು. ಸ್ನಾನದ ಸಮಯದಲ್ಲಿ ಶಾಖ ಕೊಡಬೇಕೆನಿಸಿದರೆ ತಡೆದುಕೊಳ್ಳುವಷ್ಟು ಬಿಸಿ ನೀರನ್ನು ಉಪಯೋಗಿಸಬೇಕು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

1 thought on “ಮಳೆಗಾಲದ ಋತುಚರ್ಯೆ – ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !”

  1. Mahodaya
    The list given is very good for maintaining good health during rainy season.
    Dhanyavadah

    Reply

Leave a Comment