ವಯಸ್ಕರ ವ್ಯಕ್ತಿಗಳೇ, ಒಂಟಿತನ ಹಾಗೂ ನಿರಾಶೆಯನ್ನು ದೂರಗೊಳಿಸಲು ಸಾಧನೆ ಮಾಡಿ, ಆನಂದದಿಂದ ಜೀವಿಸಿ !

೧. ವಯಸ್ಕರ ವ್ಯಕ್ತಿಯು ಕೌಟುಂಬಿಕ ಸಮಸ್ಯೆಗಳಿಂದ ಏಕಾಂಗಿಯಾಗುವುದರಿಂದ ಅವನ ಜೀವನದಲ್ಲಿ ನಿರ್ಮಾಣವಾಗುವ ಆರ್ಥಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು

ಯಾವಾಗ ವಯಸ್ಕರ ವ್ಯಕ್ತಿಯ ಹತ್ತಿರದ ಸಂಬಂಧಿಕರು, ಉದಾ. ಮಗ, ಮಗಳು, ಗಂಡ ಅಥವಾ ಹೆಂಡತಿ, ಸ್ನೇಹಿತರು ಅವರಿಂದ ದೂರ ವಾಸಿಸುತ್ತಾರೆಯೋ ಅಥವಾ ವಿದೇಶದಲ್ಲಿರುತ್ತಾರೆಯೋ ಅಥವಾ ಕೆಲವು ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಬೇರೆ ಇರುತ್ತಾರೆಯೋ, ಆಗ ಅವರು ಏಕಾಂಗಿಯಾಗುತ್ತಾನೆ. ಇಂತಹ ಸಮಯದಲ್ಲಿ ಅವರಿಗೆ ನಿರಾಶೆ, ಅಸುರಕ್ಷಿತತೆ, ಅಸ್ಥಿರತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆ ಇವುಗಳ ಅರಿವಾಗುತ್ತದೆ. ಈ ಏಕಾಂಗಿತನದಿಂದ ಅವರಿಗೆ ಜೀವನವೇ ಬೇಡವೆನಿಸುತ್ತದೆ.

ಇಳಿವಯಸ್ಸಿನಲ್ಲಿ ಶಾರೀರಿಕ ಕ್ಷಮತೆ ಕಡಿಮೆಯಾಗುವುದರಿಂದ ವ್ಯಕ್ತಿಯು ರೋಗಪೀಡಿತನಾಗುತ್ತಾನೆ. ಅವನ ಇಂದ್ರಿಯಗಳ ಮತ್ತು ಅವಯವಗಳ ಕ್ಷಮತೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ, ಆದರೆ ಅವನಿಗೆ ‘ಆ ಇಂದ್ರಿಯಗಳು ತನ್ನಿಂದ ದೂರ ಹೋಗುತ್ತಿವೆ’, ಎಂದು ಅನಿಸುತ್ತದೆ. ಅವನಿಗೆ ತನ್ನ ಹತ್ತಿರದ ಸಂಬಂಧಿಕರು ಮತ್ತು ಮಿತ್ರರು ಒಬ್ಬೊಬ್ಬರಾಗಿ ದೂರವಾಗುತ್ತಿದ್ದಾರೆ ಎಂದು ಅನಿಸುತ್ತದೆ, ನೈಸರ್ಗಿಕವಾಗಿ ನಡೆಯುವ ಈ ಪರಿಸ್ಥಿತಿಯನ್ನು ವಯಸ್ಕರ ವ್ಯಕ್ತಿಯು ಸ್ವೀಕರಿಸುವುದಿಲ್ಲ. ಇದರ ಪರಿಣಾಮದಿಂದ ಇಂತಹ ವ್ಯಕ್ತಿ ಪರಿಸ್ಥಿತಿಯನ್ನು ಮತ್ತು ಇತರರನ್ನು ದೂಷಿಸುತ್ತ ದಯನೀಯ ಮತ್ತು ಏಕಾಂಗಿತನದ ಸಂಘರ್ಷಮಯ ಜೀವನವನ್ನು ಜೀವಿಸುತ್ತಿರುತ್ತಾನೆ.

ವಯಸ್ಕರ ವ್ಯಕ್ತಿಗೆ ಏಕಾಂಗಿತನದಿಂದ ಮಾನಸಿಕ ಒತ್ತಡವುಂಟಾಗುತ್ತದೆ. ಕೆಲವರ ಸಂದರ್ಭದಲ್ಲಿ ಆರ್ಥಿಕ, ಕೌಟುಂಬಿಕ ಮತ್ತು ಸಾಮಾಜಿಕ ಪ್ರಶ್ನೆಗಳೂ ನಿರ್ಮಾಣವಾಗುತ್ತವೆ. ಕೆಲವು ವಯಸ್ಕರ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಎಲ್ಲ ಸಂಪತ್ತು ಮತ್ತು ಅಧಿಕಾರವನ್ನು ಕೊಟ್ಟಿರುತ್ತಾರೆ. ಅವರ ಕೈಯಲ್ಲಿ ಏನೂ ಉಳಿದಿರುವುದಿಲ್ಲ ಮತ್ತು ಇದರಿಂದ ಅವರಿಗೆ ಆರ್ಥಿಕ, ಅಲ್ಲದೇ ಸಾಮಾಜಿಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ಜೀವನದ ಧ್ಯೇಯವು ಆನಂದಪ್ರಾಪ್ತಿಯಾಗಿದೆ; ಆದರೆ ಅವನು ಅದರಿಂದ ದೂರಹೋಗುತ್ತಾನೆ. ‘ಬಾಲ್ಯ, ಯೌವನ ಮತ್ತು ವೃದ್ಧಾಪ್ಯ’ ಈ ನೈಸರ್ಗಿಕ ಪ್ರಕ್ರಿಯೆಗಳನ್ನು ಮತ್ತು ಪರಿಸ್ಥಿತಿಯನ್ನು ಸ್ವೀಕರಿಸದಿರುವುದರಿಂದ ಅವನಿಗೆ ಜೀವನವೇ ಬೇಡವೆನಿಸುತ್ತದೆ.

೨. ವಯಸ್ಕರ ವ್ಯಕ್ತಿಯ ನಕಾರಾತ್ಮಕ ಮತ್ತು ನಿರಾಶಾದಾಯಕ ಸ್ಥಿತಿಗೆ ಕಾರಣವಾಗಿರುವ ಅವನಲ್ಲಿನ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣಗಳು

ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ಅಪೇಕ್ಷೆ ಮಾಡುವುದು, ಕಾಳಜಿ ಮಾಡುವುದು, ಪೂರ್ವಗ್ರಹದೂಷಿತನಾಗಿರುವುದು, ಭಯವೆನಿಸುವುದು, ಆನಂದದಿಂದಿರುವವರ ಅಥವಾ ವಯಸ್ಕರ ವ್ಯಕ್ತಿಗಳೊಂದಿಗೆ ತುಲನೆ ಮಾಡುವುದು, ಆಧಾರದ ಅವಶ್ಯಕತೆಯೆನಿಸುವುದು, ‘ಇತರರು ನಾನು ಹೇಳಿದ್ದನ್ನು ಕೇಳಬೇಕು / ಪಾಲಿಸಲೇಬೇಕು’ ಎಂದೆನಿಸುವುದು, ಅಧಿಕಾರವಾಣಿಯಲ್ಲಿ ಮಾತನಾಡುವುದು, ಅನುಭವದ ಅಹಂ ಇರುವುದು, ಕರ್ತತ್ವವನ್ನು ತನ್ನಲ್ಲಿ ಇಟ್ಟುಕೊಳ್ಳುವುದು, ತನ್ನನ್ನು ಹೊಗಳಬೇಕು ಎಂಬ ಅಪೇಕ್ಷೆ ಇರುವುದು, ಭೂತಕಾಲದಲ್ಲಿನ ಕಟು ಅನುಭವಗಳನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುವುದು, ಮನೋರಾಜ್ಯದಲ್ಲಿ ರಮಿಸುವುದು, ಹಗಲುಗನಸುಗಳನ್ನು ನೋಡುವುದು ಇತ್ಯಾದಿ.

೩. ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆಗಾಗಿ ಕೃತಿ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಾದ ಪ್ರಯತ್ನಗಳು

೩ ಅ. ಕೃತಿಯ ಸ್ತರದ ಪ್ರಯತ್ನಗಳು : ತಮ್ಮ ಶಾರೀರಿಕ ಮತ್ತು ಮಾನಸಿಕ ಕ್ಷಮತೆ ಹೇಗಿದೆಯೋ, ಅದನ್ನು ಹಾಗೇ ಸ್ವೀಕರಿಸುವುದು, ಪರಿಸ್ಥಿತಿಯನ್ನು ಸ್ವೀಕರಿಸಿ ತಮ್ಮ ಕ್ಷಮತೆಗನುಸಾರ ಶರೀರ, ಮನಸ್ಸು ಮತ್ತು ಬುದ್ಧಿಯನ್ನು ಯಾವುದಾದರೂಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಡುವುದು, ಉದಾ. ಪ್ರತಿದಿನ ಸಾಧ್ಯವಾದಷ್ಟು ವ್ಯಾಯಾಮ ಮಾಡುವುದು, ತಮ್ಮ ಕೆಲಸಗಳನ್ನು ತಾವೇ ಮಾಡುವುದು, ಅಡುಗೆ ಮಾಡುವುದು, ತಿರುಗಾಡಲು ಹೋಗುವುದು, ದೂರವಾಣಿಯ ಮುಖಾಂತರ ಸಮವಿಚಾರಿ ವ್ಯಕ್ತಿಗಳ ಸಂಪರ್ಕದಲ್ಲಿರುವುದು, ಯಾವುದಾದರೂಂದು ಹವ್ಯಾಸವನ್ನು ಬೆಳೆಸಿಕೊಳ್ಳುವುದು, ಭಜನೆಗಳನ್ನು ಹೇಳುವುದು, ಹಾಡುಗಳನ್ನು ಹಾಡುವುದು, ಆಧ್ಯಾತ್ಮಿಕ ಪುಸ್ತಕ ಮತ್ತು ಸಂತವಾಙ್ಮಯಗಳನ್ನು ಓದುವುದು, ನಾಮಸ್ಮರಣೆ ಮಾಡುವುದು, ಸಮಾಜಕ್ಕಾಗಿ ಅಂದರೆ ಸಮಷ್ಟಿಗಾಗಿ ಜಪ ಮಾಡುವುದು, ದೇವರಿಗೆ ಪ್ರಾರ್ಥನೆಯನ್ನು ಮಾಡುವುದು ಇತ್ಯಾದಿ.

೩ ಆ. ಮಾನಸಿಕ ಸ್ತರದಲ್ಲಿನ ಪ್ರಯತ್ನಗಳು : ಮಾನಸಿಕ ಸ್ತರದ ಪ್ರಯತ್ನಗಳನ್ನು ಮಾಡಲು ತಮ್ಮಲ್ಲಿರುವ ಸ್ವಭಾವದೋಷಗಳ ಮತ್ತು ಅಹಂನ ಲಕ್ಷಣಗಳನ್ನು ಹುಡುಕುವುದು, ಅದರ ಬಗ್ಗೆ ಇತರರಿಗೆ ಕೇಳುವುದು, ಅವುಗಳ ವ್ಯಾಪ್ತಿಯನ್ನು ತೆಗೆಯುವುದು, ‘ಅವು ಯಾವ ಪ್ರಸಂಗದಲ್ಲಿ ಉಮ್ಮಳಿಸುತ್ತವೆ ?’ ಎಂಬುದರ ಚಿಂತನೆಯನ್ನು ಮಾಡುವುದು, ಯಾವ ಸ್ವಭಾವದೋಷಗಳಿಂದ ಅಥವಾ ಅಹಂನಿಂದ ನಮಗೆ ಅಧಿಕ ಒತ್ತಡವೆನಿಸುತ್ತದೆಯೋ, ಆ ಪ್ರಸಂಗಗಳ ಕುರಿತು ಸ್ವಯಂಸೂಚನೆಯ ಸತ್ರಗಳನ್ನು ಮಾಡುವುದು (ಅದಕ್ಕಾಗಿ ಮುಂದೆ ಸ್ವಯಂಸೂಚನೆಗಳ ನಮೂನೆಗಳನ್ನು ನೀಡಲಾಗಿದೆ) ಇತ್ಯಾದಿ. ಸ್ವಯಂಸೂಚನೆಗಳ ಸತ್ರಗಳಿಂದಾಗಿ ಕಡಿಮೆ ಕಾಲಾವಧಿಯಲ್ಲಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾಗಿ ನಾವು ಆನಂದದಿಂದ ಇರಬಲ್ಲೆವು.

೩ ಆ ೧. ಸ್ವಯಂಸೂಚನೆಗಳ ಕೆಲವು ನಮೂನೆಗಳು

ಅ. ಕಳೆದ ೬ ತಿಂಗಳುಗಳಿಂದ ನಾನು ಒಬ್ಬನೇ ಇರುವುದರಿಂದ ಯಾವಾಗ ನನಗೆ ಒತ್ತಡವುಂಟಾಗುತ್ತದೆಯೋ, ಆಗ (ಕಾಳಜಿ ಮಾಡುವುದು / ಭಯವಾಗುವುದು / ಆಧಾರದ ಅವಶ್ಯಕತೆಯೆನಿಸುವುದು) ಈ ಸ್ವಭಾವದೋಷಗಳ ಅರಿವಾಗುವುದು ಮತ್ತು ‘ಭಗವಂತನು (ಯಾವ ದೇವತೆ ಅಥವಾ ಗುರುಗಳ ಮೇಲೆ ಶ್ರದ್ಧೆಯಿದೆಯೋ, ಅವರ ಹೆಸರು ಹೇಳಬೇಕು) ನನ್ನೊಂದಿಗಿದ್ದಾನೆ’ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ನಾಮಜಪವನ್ನು ಪ್ರಾರಂಭಿಸುವೆನು.

ಆ. ಯಾವಾಗ ನನ್ನ (ಗಂಡ/ಹೆಂಡತಿ/ಮಗ/ಮಗಳು) ದೂರವಿರುವುದರಿಂದ ‘ನಾನು ಒಬ್ಬಂಟಿ’ ಎಂದೆನಿಸಿ ನಿರಾಶೆಯಾಗುವುದೋ ಆಗ ‘ಮಾಯೆಯಲ್ಲಿನ ಸಂಬಂಧಗಳು ಪ್ರಾರಬ್ಧಭೋಗವನ್ನು ತೀರಿಸಲು ಇರುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ನನ್ನ ನಾಮಜಪವನ್ನು ಹೆಚ್ಚಿಸಿ ಭಗವಂತನ ಅನುಸಂಧಾನದಲ್ಲಿ ಇರುವೆನು.

ಇ. ‘ಈಗ ನನ್ನ ಹತ್ತಿರ ಹಣ, ಅಧಿಕಾರ ಮತ್ತು ಸಂಪತ್ತು ಇಲ್ಲದಿರುವುದರಿಂದ ನನ್ನನ್ನು ಯಾರೂ ಕೇಳುವುದಿಲ್ಲ’, ಎಂಬ ವಿಚಾರದಿಂದ ನನಗೆ ಉಪೇಕ್ಷೆ ಮತ್ತು ಅಸುರಕ್ಷಿತತೆ ಅನಿಸುತ್ತಿದ್ದರೆ, ಆಗ ನನಗೆ ಅದರ ಅರಿವಾಗುವುದು ಮತ್ತು ‘ಭಗವಂತ (ಯಾವ ದೇವತೆ ಅಥವಾ ಗುರುಗಳ ಮೇಲೆ ಶ್ರದ್ಧೆಯಿದೆಯೋ, ಅವರ ಹೆಸರು ಹೇಳಬೇಕು) ನನ್ನನ್ನು ಖಂಡಿತ ಕಾಪಾಡುತ್ತಾರೆ, ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ನಾನು ಶಾಂತ ರೀತಿಯಲ್ಲಿ ನಾಮಜಪ ಮಾಡುವೆನು.

ಈ. ನನಗೆ ಪ್ರವಾಸ ಮತ್ತು ಹೊರಗಿನ ತಿಂಡಿತಿನಿಸುಗಳು ಸರಿ ಆಗದಿರುವದರಿಂದ, ಯಾವುದೇ ಕಾರ್ಯಕ್ರಮಗಳಿಗೆ ಹೊರಗೆ ಹೋಗಲು ಸಾಧ್ಯವಾಗದೇ ಇರುವುದರಿಂದ, ನನಗೆ ಮನೆಯಲ್ಲಿ ಒಬ್ಬಂಟ್ಟಿ ಅನಿಸುತ್ತಿದ್ದರೆ, ಆಗ ‘ಪರಿಸ್ಥಿತಿಯನ್ನು ಸ್ವೀಕರಿಸದಿರುವುದು’ ಎಂಬ ಸ್ವಭಾವದೋಷದ ಅರಿವಾಗುವುದು ಮತ್ತು ‘ಭಗವಂತನು ನನ್ನೊಂದಿಗೆ ಇದ್ದಾನೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಆ ಸಮಯವನ್ನು ಸಾಧನೆಗಾಗಿ ಉಪಯೋಗಿಸುವೆನು.

ಉ. ನನ್ನ ಗಂಡ/ಹೆಂಡತಿ ಮರಣಹೊಂದಿದ್ದರಿಂದ ನನಗೆ ಸತತವಾಗಿ ಬರುವ ಅವರ ನೆನಪಿನಿಂದ ನಿರಾಶೆಯಾಗುತ್ತಿದ್ದಲ್ಲಿ, ‘ಭಾವನಾಶೀಲತೆ’ ಎಂಬ ಸ್ವಭಾವದೋಷದ ಅರಿವಾಗುವುದು ಮತ್ತು ‘ಪ್ರತಿಯೊಬ್ಬರ ಮೃತ್ಯು ನಿಶ್ಚಿತವಾಗಿರುತ್ತದೆ’ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಭಗವಂತನ ಸ್ಮರಣೆಯಲ್ಲಿದ್ದು ಸಾಧನೆಯನ್ನು ಮಾಡುವೆನು.

೩ ಇ. ಆಧ್ಯಾತ್ಮಿಕ ಸ್ತರದ ಪ್ರಯತ್ನಗಳು

೩ ಇ ೧. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿರುವ ಗುರುಕೃಪಾಯೋಗ ಎಂಬ ಸಾಧನೆಯ ಮಾರ್ಗಕ್ಕನುಸಾರ ಸಾಧನೆಯನ್ನು ಮಾಡಿ ನೂರಾರು ಜನ ವಯಸ್ಕರ ಸಾಧಕರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಂಡು ಆನಂದದಿಂದ ಜೀವಿಸುತ್ತಿದ್ದಾರೆ : ಈ ಮಾರ್ಗಕ್ಕನುಸಾರ ಸಾಧನೆಯನ್ನು ಮಾಡಿದರೆ, ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾಗುವುದರಿಂದ ಏಕಾಂಗಿತನ, ನಿರಾಶೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆ ಇವುಗಳ ಮೇಲೆ ಜಯ ಸಾಧಿಸಿ ವಯಸ್ಕರ ವ್ಯಕ್ತಿಯು ಆತ್ಮಬಲದ ಮೇಲೆ (ಚೈತನ್ಯಶಕ್ತಿಯ ಮೇಲೆ) ಆನಂದದಿಂದ ಇರಬಹುದು. ಗುರುಕೃಪಾಯೋಗ ಎಂಬ ಸಾಧನೆಯ ಮಾರ್ಗವು ಪ್ರಯೋಗದಿಂದ (ಟ್ರಾಯ್ಡಿ ಎಂಡ್ ಟೆಸ್ಟೆಡ್ / tried and tested) ಸಿದ್ಧಗೊಂಡಿದೆ. ಸನಾತನ ಸಂಸ್ಥೆಯಲ್ಲಿ ನೂರಾರು ವಯಸ್ಕರ ಸಾಧಕರು ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ, ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಂಡು ಆನಂದದಿಂದ ಜೀವನವನ್ನು ನಡೆಸುತ್ತಿದ್ದಾರೆ.

೩ ಇ ೨. ಇಳಿವಯಸ್ಸಿನಲ್ಲಿ ಒಂದೊಂದೇ ಅವಯವ ನಿಷ್ಕ್ರಿಯವಾಗುವುದು ಮತ್ತು ‘ಬಹಿರ್ಮುಖನಾಗಿರದೇ ಮಾನವನು ಅಂತರ್ಮುಖನಾಗಿ ಆನಂದ’ದಲ್ಲಿರಬೇಕು, ಎಂಬುದಕ್ಕಾಗಿ ಭಗವಂತನ ಈ ನಿಯೋಜನೆಯನ್ನು ಮಾಡಿದ್ದಾನೆ : ಮನುಷ್ಯನಿಗೆ ಜನ್ಮ, ಜೀವನ ಮತ್ತು ಮೃತ್ಯುವಿರುವುದು (ಉತ್ಪತ್ತಿ, ಸ್ಥಿತಿ ಮತ್ತು ಲಯ) ನಿಸರ್ಗದ ನಿಯಮವಾಗಿದೆ. ನಮ್ಮ ಜನ್ಮ, ಜೀವನವನ್ನು ನಡೆಸುವುದು ಮತ್ತು ಮೃತ್ಯು ಇವು ನಿರ್ಧರಿಸಲ್ಪಟ್ಟಿರುತ್ತವೆ. ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಅವನ ಇಂದ್ರಿಯಗಳು ನಿಷ್ಕ್ರಿಯವಾಗುತ್ತವೆ. ‘ಒಂದೊಂದೇ ಅವಯವ ನಿಷ್ಕ್ರಿಯವಾಗುತ್ತಾ ಹೋಗುವುದು’, ಭಗವಂತನ ನಿಯೋಜನೆಯಾಗಿದೆ. ‘ಮನುಷ್ಯನು ಬಹಿರ್ಮುಖನಾಗಿರದೇ, ಇಳಿವಯಸ್ಸಿನಲ್ಲಿಯಾದರೂ ಅವನು ಅಂತರ್ಮುಖನಾಗಿದ್ದು ಆನಂದ’ದಿಂದಿರಬೇಕು, ಎಂಬುದಕ್ಕಾಗಿ ಆ ದಯಾಳು, ಕೃಪಾಳು ಭಗವಂತನ ನಿಯೋಜನೆಯಾಗಿರುತ್ತದೆ. ‘ಹೊರಗಿನ ಜಗತ್ತು (ಅಸತ್ ಮತ್ತು ಕ್ಷಣಿಕ) ಮಾಯೆ’ಯಾಗಿರುತ್ತದೆ, ಇದನ್ನು ಅವನಿಗೆ ತೋರಿಸುವುದಿರುತ್ತದೆ. ಉದಾ. ಸಂತ ಸೂರದಾಸನು ಜನ್ಮತಃ ಕುರುಡನಾಗಿದ್ದನು. ಶ್ರೀಕೃಷ್ಣನು ಅವನ ಭಕ್ತಿಯಿಂದ ಪ್ರಸನ್ನನಾದನು. ಶ್ರೀಕೃಷ್ಣನು ಅವನಿಗೆ ‘ಏನು ಬೇಕು, ಅದನ್ನು ಬೇಡು’ ಎಂದು ಹೇಳಿದಾಗ ‘ನನಗೆ ಕೇವಲ ನೀನೇ ಬೇಕು, ಮತ್ತೇನೂ ಬೇಡ’, ಎಂದು ಸೂರದಾಸನು ಹೇಳಿದನು. ‘ಕನಿಷ್ಟ ದೃಷ್ಟಿಯನ್ನಾದರೂ ಬೇಡು’, ಎಂದು ಶ್ರೀ ಕೃಷ್ಣನು ಹೇಳಿದಾಗ ‘ನಾನು ನಿನ್ನನ್ನು ಪ್ರತ್ಯಕ್ಷ ನೋಡಿರುವಾಗ ಈಗ ಬೇರೆ ಇನ್ಯಾರನ್ನೂ ಸ್ಥೂಲ ಕಣ್ಣುಗಳಿಂದ ನೋಡುವ ಇಚ್ಛೆ ಉಳಿದಿಲ್ಲ. ನಾನು ನಿನ್ನನ್ನು ಅಂತಃ ಚಕ್ಷುಗಳಿಂದ ನೋಡಿ ಆನಂದದಿಂದ ಭಜಿಸುವೆನು’, ಎಂದು ಸೂರದಾಸನು ಹೇಳಿದನು.

೩ ಇ ೩. ಎಲ್ಲವೂ ಈಶ್ವರೇಚ್ಛೆಯಿಂದಲೇ ಘಟಿಸುತ್ತದೆ, ಎನ್ನುವುದನ್ನು ಅರಿತುಕೊಂಡು, ಸಕಾರಾತ್ಮವಾಗಿದ್ದು, ಸಮಾಧಾನದಿಂದ ಮತ್ತು ಆನಂದದಿಂದ ಜೀವನವನ್ನು ಜೀವಿಸಲು ನಿರಂತರವಾಗಿ ನಾಮಸ್ಮರಣೆ, ಪ್ರಾರ್ಥನೆ ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸುವುದು ಆವಶ್ಯಕವಾಗಿರುತ್ತದೆ : ‘ಕಾಲದ ಪ್ರವಾಹದಲ್ಲಿ ನನ್ನ ಸಂಬಂಧಿಕರು ಮತ್ತು ಸ್ನೇಹಿತರು ದೂರ ಹೋಗುವವರಿದ್ದಾರೆ ಮತ್ತು ಕೊನೆಗೆ ನನಗೂ ಈ ಜಗತ್ತಿನಿಂದ ದೂರ ಹೋಗಬೇಕಾಗುವುದು’, ಎಂಬ ಸತ್ಯವನ್ನು ಸ್ವೀಕರಿಸಿ ಭಗವಂತನು ಹೇಗೆ ಇಟ್ಟಿರುತ್ತಾನೆಯೋ ಹಾಗೆ ಇರಬೇಕು. ಸಂತ ತುಕಾರಾಮ ಮಹಾರಾಜರ  ‘ಮನಸ್ಸಿನಲ್ಲಿರಬೇಕು ಸಮಾಧಾನ’ ಎಂಬ ಅಭಂಗದಂತೆ ಆನಂದದಿಂದ ಜೀವನವನ್ನು ಜೀವಿಸಬೇಕು. ಎಲ್ಲವೂ ಈಶ್ವರನ ಇಚ್ಛೆಯಿಂದ ಘಟಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಕಾರಾತ್ಮಕವಾಗಿದ್ದು ಸಮಾಧಾನದ ಹಾಗೂ ಆನಂದದ ಜೀವನವನ್ನು ಜೀವಿಸಬೇಕು. ಅದಕ್ಕಾಗಿ ನಿರಂತರವಾಗಿ ನಾಮಸ್ಮರಣೆ, ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೩ ಇ ೪. ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು : ಮನೆಯಲ್ಲಿನ ಅಸ್ವಚ್ಛತೆ, ಅವ್ಯವಸ್ಥೆ, ಮನೆಯಲ್ಲಿರುವ ವ್ಯಕ್ತಿಗಳ ಅಯೋಗ್ಯ ವಿಚಾರಗಳು, ವಾಸ್ತುದೋಷ, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿಗಳಿಂದ ಮನೆ ಮತ್ತು ಮನೆಯ ಪರಿಸರದ ಸ್ಪಂದನಗಳು ಕೆಡುತ್ತವೆ. ಇದರ ಪರಿಣಾಮದಿಂದ ವಯಸ್ಕರ ವ್ಯಕ್ತಿಗಳ ಏಕಾಂಗಿತನ ಮತ್ತು ನಿರಾಶೆಯ ವಿಚಾರಗಳು ಹೆಚ್ಚುಗುತ್ತವೆ. ಇದಕ್ಕಾಗಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು. ಉದಾ : ರಾತ್ರಿ ಮಲಗುವಾಗ ಎಣ್ಣೆಯ ಅಥವಾ ತುಪ್ಪದ ದೀಪವನ್ನು ಹಚ್ಚುವುದು, ಊದುಬತ್ತಿ ಹಚ್ಚುವುದು, ತಮ್ಮ ಪಕ್ಕದಲ್ಲಿ ಖಾಲಿ ಪೆಟ್ಟಿಗೆಗಳನ್ನು ಇಡುವುದು, ವಿಭೂತಿ ಅಥವಾ ಭೀಮಸೇನಿ ಕರ್ಪೂರವನ್ನು ಊದುವುದು, ಪ.ಪೂ. ಭಕ್ತರಾಜ ಮಹಾರಾಜರ (ಉನ್ನತ ಸಂತರು ಹಾಡಿರುವ) ಭಜನೆಗಳನ್ನು ಸಣ್ಣ ಧ್ವನಿಯಲ್ಲಿ ಹಾಕುವುದು ಇತ್ಯಾದಿ.

೩ ಇ ೫. ಪ್ರತಿಯೊಂದು ಪ್ರಸಂಗದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವನ್ನಿಟ್ಟುಕೊಳ್ಳುವುದು : ನಾವು ಸಕಾರಾತ್ಮಕ ಮತ್ತು ಆನಂದದಿಂದ ಇರಲು ಬೇರೆ ಬೇರೆ ದೃಷ್ಟಿಕೋನಗಳನ್ನು ಇಟ್ಟಕೊಳ್ಳಬಹುದು. ಹಾಗೆಯೇ ಭಾವಪ್ರಯೋಗಗಳನ್ನು ಮಾಡಬಹುದು. ಕೆಲವೊಂದು ಸಾಧಕರು ಮತ್ತು ಸಂತರು ಹಾಸಿಗೆಯನ್ನು ಹಿಡಿದಿರುವಾಗಲೂ ಹಾಗೂ ತೀವ್ರ ಅನಾರೋಗ್ಯ ಇರುವಾಗಲೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಂಡಿದ್ದಾರೆ. ಅವರ ಉದಾಹರಣೆಗಳನ್ನು ಗಮನದಲ್ಲಿಟ್ಟುಕೊಂಡು ಸ್ವಯಂಪ್ರೇರಣೆಯಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡಿ ಇದೇ ಜನ್ಮದಲ್ಲಿ ಗುರುಕೃಪೆಯಿಂದ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಬಹುದು.

ಅ. ಮಾಯೆಯಲ್ಲಿನ ಸಂಬಂಧಗಳು ಪ್ರಾರಬ್ಧಭೋಗವನ್ನು ಭೋಗಿಸಲು ಇರುತ್ತವೆ. ಪ್ರಾರಬ್ಧಭೋಗ ಮುಗಿದ ಬಳಿಕ ಆ ವ್ಯಕ್ತಿಗಳು ದೂರ ಹೋಗುತ್ತಾರೆ. ‘ವ್ಯಕ್ತಿಗಳು (ಸಂಬಂಧಿಕರು) ನನ್ನನ್ನು ಬಿಟ್ಟು ಹೋಗಿದ್ದರೂ, ಪ್ರತ್ಯಕ್ಷ ಭಗವಂತನೇ ಅಥವಾ ಗುರುದೇವರೇ ನನ್ನ ಕೈಯನ್ನು ಹಿಡಿದಿದ್ದಾರೆ. ಜನ್ಮದಿಂದ ಕೊನೆಯವರೆಗೆ ಅವರು ನನ್ನ ಕೈಯನ್ನು ಬಿಡುವುದಿಲ್ಲ. ಅವರೇ ನನ್ನ ರಕ್ಷಣೆ ಮಾಡಿ ನನಗೆ ಮೋಕ್ಷಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಿದ್ದಾರೆ, ಎಂದು ವಿಚಾರ ಮಾಡಬೇಕು.

ಆ. ನನಗೆ ಈಶ್ವರನ ಸತ್ಸಂಗ ದೊರೆಯುತ್ತಿದೆ ಮತ್ತು ಭಗವಂತನು ಸತತವಾಗಿ ನನ್ನೊಂದಿಗೆ ಇದ್ದಾನೆ, ಎಂಬ ಅರಿವನ್ನು ನಿರಂತರವಾಗಿಟ್ಟುಕೊಳ್ಳುವೆನು.

ಇ. ‘ಈ ಜಗತ್ತಿನಲ್ಲಿ ನಾನು ಒಬ್ಬನೇ ಬಂದೆನು ಮತ್ತು ಕೊನೆಗೆ ನಾನು ಒಬ್ಬನೇ ಹೋಗುವವನಿದ್ದೇನೆ; ಆದರೆ ಭಗವಂತನ ಚೈತನ್ಯ, ಶಕ್ತಿ ಮತ್ತು ಐಶ್ವರ್ಯ ಸತತವಾಗಿ ನನ್ನೊಂದಿಗಿದೆ; ಆದ್ದರಿಂದ ನನಗೆ ಈ ಕೃತಜ್ಞತೆಯ ಭಾವದಲ್ಲಿ ಮತ್ತು ಆನಂದದಲ್ಲಿ ಇರಬೇಕಾಗಿದೆ. ಅದಕ್ಕಾಗಿ ನಾನು ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ’, ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು.

ಈ. ‘ನಮ್ಮ ಸಂಬಂಧಿಕರು ಆತ್ಮಕ್ಕೆ ಸಂಬಂಧಿಸಿರುವುದಿಲ್ಲ’, ಎಂದು ಪರಾತ್ಪರ ಗುರು ಪಾಂಡೆ ಮಹಾರಾಜರು ಆಗಾಗ ಹೇಳುತ್ತಿದ್ದರು. ಸಾಧಕರು, ಗುರು-ಶಿಷ್ಯರು ನಮ್ಮ ಸಂಬಂಧಿಕರಲ್ಲ, ಆದರೆ ಅವರು ನಮ್ಮ ಆತ್ಮದೊಂದಿಗೆ ಒಂದಾಗಿರುತ್ತಾರೆ; ಏಕೆಂದರೆ ಇಲ್ಲಿ ಅವರ ಸಂಬಂಧವು ಅವರಲ್ಲಿರುವ ಆತ್ಮದೊಂದಿಗೆ ಆಗಿರುತ್ತದೆ. ಅಂದರೆ ಆತ್ಮೀಯತೆಯ ಸಂಬಂಧವಿರುತ್ತದೆ. ಈ ಸಂಬಂಧವು ಅಹಂನ್ನು ಕಾಪಾಡುವುದಕ್ಕೆ ಅಥವಾ ಅಪೇಕ್ಷೆ ಇವುಗಳನ್ನು ಅವಲಂಬಿಸಿರುವುದಿಲ್ಲ. ಆತ್ಮವು ಒಂದು ರೀತಿಯ ಇಂಟರನೆಟ್ ಆಗಿರುವುದರಿಂದ ಅದು ಕೊನೆಗೆ ಪರಮಾತ್ಮನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಅಂದರೆ ನಮ್ಮೆಲ್ಲರ ಆತ್ಮದ ಮೂಲಕ ಭಗವಂತನೊಂದಿಗೆ ಇರುವ ಸಂಬಂಧವು ತುಂಡಾಗದ (ಜನ್ಮಜನ್ಮಾಂತರದ) ಸಂಬಂಧವಾಗಿರುತ್ತದೆ. ಆದುದರಿಂದ ಮಾಯೆಯಲ್ಲಿನ ಸಂಬಂಧಗಳು ದೂರವಾದರೂ, ನಾವು ಸಾಧಕರು ಭಗವಂತನ ಅನುಸಂಧಾನದಲ್ಲಿ ಆನಂದದಿಂದ ಇರಬಹುದು.

೪. ಏಕಾಂಗಿತನ, ನಿರಾಶೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆಗಳನ್ನು ದೂರಗೊಳಿಸಲು ವಯಸ್ಕ ವ್ಯಕ್ತಿಯು ನಾಮಸ್ಮರಣೆಯನ್ನು ಮಾಡಬೇಕು !

‘ಚೈತನ್ಯವೇ ಎಲ್ಲ ಕಾರ್ಯಗಳನ್ನು ಮಾಡುತ್ತಿರುತ್ತದೆ’, ಎಂದು ಪರಾತ್ಪರ ಗುರು ಪಾಂಡೆ ಮಹಾರಾಜರು ಯಾವಾಗಲೂ ಹೇಳುತ್ತಿದ್ದರು. ಸಾಮಾನ್ಯ ವ್ಯಕ್ತಿಯ ವಯಸ್ಸು ಹೇಗೆ ಹೆಚ್ಚಾಗುತ್ತದೆಯೋ, ಹಾಗೆ ಅವನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ, ಅಂದರೆ ಚೈತನ್ಯ ಕಡಿಮೆಯಾಗುತ್ತಾ ಹೋಗುವುದರಿಂದ ಅವನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ನಮಗೆ ಭಗವಂತನ ನಾಮಸ್ಮರಣೆಯಿಂದಲೇ ಚೈತನ್ಯ ಸಿಗಬಲ್ಲದು; ಆದುದರಿಂದ ಒಂಟಿತನ, ನಿರಾಶೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆಗಳನ್ನು ಹೊಡೆದೋಡಿಸಲು ವಯಸ್ಕರ ವ್ಯಕ್ತಿಗಳು ನಾಮಸ್ಮರಣೆಯನ್ನು ಮಾಡಬೇಕು.

೫. ಪ್ರಾರ್ಥನೆ ಮತ್ತು ಕೃತಜ್ಞತೆ

ಸದ್ಯ ನನ್ನ ವಯಸ್ಸು ೭೩ ವರ್ಷ. ನನ್ನ ಪ್ರಾರಬ್ಧಕ್ಕನುಸಾರ ನನಗೆ ಕೆಲವು ವ್ಯವಹಾರಿಕ, ಕೌಟುಂಬಿಕ ಮತ್ತು ಸಾಮಾಜಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಬಹಳಷ್ಟು ವಿಷಯಗಳನ್ನು ನಾನು ಅನುಭವಿಸಿದ್ದೇನೆ; ಆದರೆ ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಮತ್ತು ಗುರುಕೃಪಾಯೋಗಾನುಸಾರ ಸಾಧನೆಯ ಆಧಾರದಿಂದ ಎಲ್ಲ ಸಮಸ್ಯೆಗಳನ್ನು ಸೆದೆಬಡಿದು ನನಗೆ ಆನಂದದಿಂದಿರಲು ಸಾಧ್ಯವಾಗಿದೆ. ಅದಕ್ಕಾಗಿ ನಾನು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ವೃದ್ಧಾಪ್ಯದ ಕಾಲದಲ್ಲಿ ಇನ್ನು ಮುಂದೆಯೂ ನನಗೆ ಮೇಲಿನ ಉಪಾಯಗಳು ಸಾಧನೆಗಾಗಿ ಉಪಯುಕ್ತವಾಗಲಿವೆ. ‘ನನ್ನೊಂದಿಗೆ ಇತರ ಸಾಧಕರಿಗೂ ಮತ್ತು ಅವರ ಮಕ್ಕಳಿಗೂ ಮೇಲಿನ ಅಂಶಗಳು ಉಪಯುಕ್ತವಾಗಲಿ ಎಂದು ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ’.

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಪೂ. (ಸೌ.) ಅಶ್ವಿನಿ ಪವಾರ ಇವರು ನನಗೆ ಈ ವಿಷಯದ ಮೇಲೆ ಲೇಖನವನ್ನು ಬರೆಯಲು ಹೇಳಿದರು. ಪ್ರತ್ಯಕ್ಷದಲ್ಲಿ ನನ್ನ ಅಡಚಣೆಗಳು ದೂರವಾಗಬೇಕೆಂದು ಗುರುಗಳ ಕೃಪೆಯಿಂದ ನನಗೆ ಈ ಸೇವೆಯು ಸಿಕ್ಕಿತು. ಅವರೇ ಎಲ್ಲ ಅಂಶಗಳನ್ನು ಸೂಚಿಸಿ, ಅವರೇ ನನ್ನಿಂದ ಇದನ್ನು ಬರೆಸಿಕೊಂಡರು. ಆದ್ದರಿಂದ ನಾನು ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

– (ಪೂ) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ (೨೩.೬.೨೦೧೯)

1 thought on “ವಯಸ್ಕರ ವ್ಯಕ್ತಿಗಳೇ, ಒಂಟಿತನ ಹಾಗೂ ನಿರಾಶೆಯನ್ನು ದೂರಗೊಳಿಸಲು ಸಾಧನೆ ಮಾಡಿ, ಆನಂದದಿಂದ ಜೀವಿಸಿ !”

  1. Brilliant article. All those who have crossed 60 years may please read, study, understand, digest and apply all the principles to their own selves for a more enjoyable stage after 70years.

    Reply

Leave a Comment