ಪೂಜೆಯಲ್ಲಿ ಉಪಯೋಗಿಸುವ ಕೆಲವು ಪೂಜಾಸಾಮಗ್ರಿಗಳು

ಕೆಲವು ಧಾರ್ಮಿಕ ಕೃತಿಗಳು ಇತರ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ. ಉದಾಹರಣೆಗೆ ದೇವರ ಪೂಜೆಯಲ್ಲಿ ಪೂಜಾಸಾಮಗ್ರಿಗಳು ಅವಶ್ಯಕವಾಗಿವೆ. ಧಾರ್ಮಿಕ ಕೃತಿಗಳಲ್ಲಿ ಸಹಾಯಕವಾಗಿರುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ. ಇದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ. ಇಲ್ಲಿ ಅಷ್ಠಗಂಧ ಮತ್ತು ಅಕ್ಷತೆ ಇವುಗಳ ಅಧ್ಯಾತ್ಮ ಶಾಸ್ತ್ರೀಯ ಮಹತ್ವ ಹಾಗೂ ಅವುಗಳ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಅಷ್ಟಗಂಧ

ಚಂದನದಂತೆಯೇ ಅಷ್ಟಗಂಧದಲ್ಲಿ ಸಾತ್ತ್ವಿಕತೆಯಿರುತ್ತದೆ. ಅಷ್ಟಗಂಧದಲ್ಲಿ ಸುಗಂಧಿತ ದ್ರವ್ಯಗಳ ಪ್ರಮಾಣವು ಹೆಚ್ಚಿರುತ್ತದೆ. ಇದರಲ್ಲಿ ದೇವತೆಗಳ ತರಂಗಗಳನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿರುತ್ತದೆ.

ಅಕ್ಷತೆ

ದೇವತಾತತ್ತ್ವಗಳ ತರಂಗಗಳನ್ನು ಅಧಿಕ ಪ್ರಮಾಣದಲ್ಲಿ ಮತ್ತು ಶೀಘ್ರವಾಗಿ ಆಕರ್ಷಿಸಲು ದೇವತಾ ಪೂಜೆಯಲ್ಲಿ ವಿವಿಧ ಪ್ರಕಾರದ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತದೆ. ಇದರಿಂದ ಪೂಜಕನಿಗೆ ಅಧಿಕಾಧಿಕ ಲಾಭವಾಗುತ್ತದೆ. ಆದರೆ ಎಲ್ಲ ಸಾಮಗ್ರಿಗಳು ಪ್ರತಿದಿನ ಉಪಲಬ್ಧವಿಲ್ಲದಿದ್ದರೂ ಒಂದು ಘಟಕ ಮಾತ್ರ ನಮಗೆ ಪೂಜೆಯ ಪರಿಪೂರ್ಣ ಲಾಭವನ್ನು ಪ್ರಾಪ್ತ ಮಾಡಿಕೊಡುತ್ತದೆ. ಆ ಘಟಕವೆಂದರೆ ಅಕ್ಷತೆ. ಪೂಜಾವಿಧಿಯಲ್ಲಿ ಅಕ್ಷತೆಯು ಎಲ್ಲ ದೇವತೆಗಳ ತತ್ತ್ವಗಳನ್ನು ತನ್ನಲ್ಲಿ ಸಮಾವೇಶಗೊಳಿಸಿಕೊಳ್ಳುವ ಒಂದು ಮಹತ್ವದ ಘಟಕವಾಗಿದೆ. ಆದುದರಿಂದ ಪೂಜಾ ಸಾಮಗ್ರಿಯ ತಟ್ಟೆಯಲ್ಲಿಯೂ ಅಕ್ಷತೆಗೆ ಮಧ್ಯದಲ್ಲಿ ಸ್ಥಾನವನ್ನು ನೀಡಲಾಗಿದೆ.

ಅಕ್ಷತೆಯಿಂದ ಸೂಕ್ಷ್ಮಸ್ತರದಲ್ಲಾಗುವ ಪರಿಣಾಮ

ಸರ್ವ ದೇವತಾತತ್ತ್ವಗಳ ಶಕ್ತಿ ಹಾಗೂ ಚೈತನ್ಯದ ತರಂಗಗಳನ್ನು ಅಕ್ಷತೆಯ ಪ್ರತಿಯೊಂದು ಕಣಕ್ಕೆ ಶೀಘ್ರವಾಗಿ ಆಕರ್ಷಿಸುವ ಕ್ಷಮತೆಯಿದೆ. ಇದು ಶಕ್ತಿ ಹಾಗೂ ಚೈತನ್ಯವನ್ನು ತನ್ನಲ್ಲಿಯೇ ಸಂಗ್ರಹಿಸಿಟ್ಟುಕೊಳ್ಳುತ್ತದೆ. ದೇವತೆಗಳ ಈ ಶಕ್ತಿ ಹಾಗೂ ಚೈತನ್ಯವನ್ನು ಅವಶ್ಯಕತೆಗನುಸಾರ ತನ್ನ ಸುತ್ತಲೂ ಪ್ರಕ್ಷೇಪಿಸುತ್ತದೆ. ದೇವತೆಗೆ ಅಕ್ಷತೆಯನ್ನು ಅರ್ಪಿಸಿದಾಗ ದೇವತೆಯ ತತ್ತ್ವದ ತರಂಗಗಳ ಕಾರಣದಿಂದ ಅಕ್ಷತೆಯಲ್ಲಿಯೂ ಅದೇ ಪ್ರಕಾರದ ಕಂಪನವು ನಿರ್ಮಾಣವಾಗುತ್ತದೆ.

ಗಂಧಾಕ್ಷತೆ

ಸಮಾನ ಸ್ವರದಲ್ಲಿ ಇಡಲ್ಪಟ್ಟಿರುವ ಎರಡು ತಂಬೂರಿಗಳಲ್ಲಿ ಒಂದರ ತಂತಿಯನ್ನು ಮೀಟಿದಾಗ ಇನ್ನೊಂದು ತಂಬೂರಿಯ ತಂತಿಯಿಂದಲೂ ಕಂಪನಗಳು ಪ್ರಾರಂಭವಾಗಿ ನಾದವು ಉತ್ಪನ್ನವಾಗುತ್ತದೆ. ಅದೇ ರೀತಿ ಅಕ್ಷತೆಯ ಅಕ್ಕಿಯಲ್ಲಿ ದೇವತೆಗಳ ತತ್ತ್ವದ ತರಂಗಗಳ ಕಾರಣದಿಂದ ಸ್ಪಂದನಗಳು ಉಂಟಾಗಿದ್ದಲ್ಲಿ, ಮನೆಯಲ್ಲಿರುವ ಅಕ್ಕಿಯ ಭಂಡಾರದಲ್ಲಿಯೂ ಇದೇ ರೀತಿಯ ಸ್ಪಂದನಗಳು ಉತ್ಪನ್ನವಾಗುತ್ತವೆ. ದೇವತಾತತ್ತ್ವಗಳ ತರಂಗಗಳಿಂದ ಯುಕ್ತವಾಗಿರುವ ಅಕ್ಕಿಯನ್ನು ನಾವು ವರ್ಷವಿಡೀ ಪ್ರಸಾದದ ರೂಪದಲ್ಲಿ ಸ್ವೀಕರಿಸಬಹುದು ಮತ್ತು ನಾವು ದೇವತಾ ತತ್ತ್ವದ ತರಂಗಗಳ ಲಾಭ ಪಡೆಯಬಹುದು. ಇದೇ ಕಾರಣದಿಂದಾಗಿ ದೇವತೆಗಳಿಗೆ ಅರ್ಪಿಸಿದ ಅಕ್ಕಿ ಅಥವಾ ಪ್ರಸಾದ ರೂಪದಲ್ಲಿ ಕೊಡಲ್ಪಟ್ಟ ಅಕ್ಕಿಯನ್ನು ಬಹುತೇಕ ಮನೆಗಳಲ್ಲಿ ಭಂಡಾರದಲ್ಲಿ ಇಡಲಾಗುತ್ತದೆ.

ಪೂಜೆಯಲ್ಲಿ ಅಖಂಡ ಅಕ್ಕಿ ಕಾಳನ್ನು ಉಪಯೋಗಿಸುವ ಕಾರಣ

ಪೂಜೆಯಿಂದ ನಾವು ಸತ್ತ್ವಗುಣವನ್ನು ಪ್ರಾಪ್ತಮಾಡಿಕೊಳ್ಳಲು ಇಚ್ಛಿಸುತ್ತೇವೆ. ಆದುದರಿಂದ ದೇವತಾಪೂಜೆಯಂತಹ ಧಾರ್ಮಿಕ ವಿಧಿಗಳಲ್ಲಿ ದೇವತಾತತ್ತ್ವ ಹಾಗೂ ಸಾತ್ತ್ವಿಕತೆಯ ತರಂಗಗಳನ್ನು ಆಕರ್ಷಿಸಿ, ಗ್ರಹಿಸಿ, ಪ್ರಕ್ಷೇಪಿಸುವ ಅಖಂಡ ಅಕ್ಕಿಯನ್ನೇ ಉಪಯೋಗಿಲಾಗುತ್ತದೆ. ಅಕ್ಷತೆ ಶಬ್ದದ ಅರ್ಥ ಯಾವುದು ‘ಕ್ಷತ’ವಾಗದೋ ಅದು. ಸಾಮಾನ್ಯವಾಗಿ ಯಾವುದೇ ದೇವತಾಪೂಜೆ ಅಥವಾ ಶುಭ ಕಾರ್ಯಗಳಲ್ಲಿ  ಕೆಂಪು ಬಣ್ಣದ ಅಕ್ಷತೆಯನ್ನು ಉಪಯೋಗಿಸಲಾಗುತ್ತದೆ. ಕೆಂಪು ಅಕ್ಷತೆಯು ಮನೋಕಾಮನೆಗಳನ್ನು ಪೂರ್ಣಗೊಳಿಸಲು ಮಾಡಲಾಗುವ ಸಕಾಮ ಸಾಧನೆಯ ಪ್ರತೀಕವಾಗಿದೆ. ಕುಂಕುಮ ಲೇಪಿಸಿರುವ ಅಕ್ಷತೆಯೆಡೆಗೆ ಆಕರ್ಷಿಸಲ್ಪಡುವ ದೇವತಾತತ್ತ್ವದ ತರಂಗಗಳು ಸೂಕ್ಷ್ಮವಿರುತ್ತವೆ. ಶ್ರೀಗಣೇಶನ ತತ್ತ್ವ ಅಥವಾ ದೇವಿತತ್ತ್ವವು ಕೆಂಪು ಬಣ್ಣದೆಡೆಗೆ ಶೀಘ್ರವಾಗಿ ಆಕರ್ಷಿತವಾಗುತ್ತದೆ. ಶಿವನಿಗೆ ಶ್ವೇತ (ಬಿಳಿ) ಅಕ್ಷತೆಗಳನ್ನು ಅರ್ಪಿಸಲಾಗುತ್ತದೆ. ಶ್ವೇತ ಅಕ್ಷತೆಯು ವೈರಾಗ್ಯ, ಅರ್ಥಾತ್ ನಿಷ್ಕಾಮ ಸಾಧನೆಯ ಪ್ರತೀಕವಾಗಿದೆ.

2 thoughts on “ಪೂಜೆಯಲ್ಲಿ ಉಪಯೋಗಿಸುವ ಕೆಲವು ಪೂಜಾಸಾಮಗ್ರಿಗಳು”

  1. ಅರ್ಚನೆಯವಿಧಾನ, ಪೂಜಾವಿಧಾನ, ಪೂಜೆಸಾಮಗ್ರಿಗಳ ಬಳಕೆ, ಧೂಪ, ದೀಪ, ಗಂಧದಕಡ್ಡಿ ಬೆಳಗುವ ಪ್ರಸಾದಅರ್ಪಿಸುವ ಕ್ರಮಬದ್ಧ ವಿಧಾನಗಳನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಲಾಗಿದೆ. 🙏🙏🙏🙏🙏ಅನಂತ ಧನ್ಯವಾದಗಳು.

    Reply

Leave a Comment