ಕೊರೋನಾದಿಂದ ಇಡೀ ಜಗತ್ತೇ ದುಃಖದಲ್ಲಿ ಮುಳುಗಿರುವಾಗ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಂತೆ ಸಾಧನೆ ಮಾಡುವ ಸಾಧಕರು ‘ಶ್ರೀಗುರುಗಳು ಬೆಂಬಲಕ್ಕಿರುವಾಗ’ ಎಂಬ ವಚನದ ಅನುಭವ ಪಡೆಯುವುದರಿಂದ ಸ್ಥಿರವಾಗಿರುವುದು
ಆಪತ್ಕಾಲೀನ ಸ್ಥಿತಿಯಿಂದ ಸರ್ವಸಾಮಾನ್ಯ ನಾಗರಿಕರ ಮಾನಸಿಕ ಸಮಸ್ಯೆಗಳಲ್ಲಿ ಹಾಗೂ ಕೌಟುಂಬಿಕ ಕಲಹಗಳಲ್ಲಿ ಹೆಚ್ಚಳವಾಗಿರುವುದು
ಇತ್ತೀಚೆಗೆ ಕೊರೋನಾದಿಂದ ಎಲ್ಲೆಡೆ ಆಪತ್ಕಾಲೀನ ಪರಿಸ್ಥಿತಿ ಉದ್ಭವಿಸಿದೆ. ಸಂಚಾರ ನಿಷೇಧವಿರುವುದರಿಂದ ಸರ್ವಸಾಮಾನ್ಯ ನಾಗರಿಕರ ಮಾನಸಿಕ ಮಟ್ಟದ ಸಮಸ್ಯೆಗಳಲ್ಲಿ ವೃದ್ಧಿಯಾಗಿದೆ. ಅಸುರಕ್ಷಿತವೆನಿಸುವುದು, ನಿರಾಶೆ ಬರುವುದು, ಉದಾಸೀನತೆ, ಅನಾವಶ್ಯಕ ವಿಚಾರಗಳಲ್ಲಿ ಹೆಚ್ಚಳ, ಭವಿಷ್ಯದ ಬಗ್ಗೆ ಚಿಂತೆ, ಆತ್ಮಹತ್ಯೆಯ ವಿಚಾರ ಬರುವುದು ಇತ್ಯಾದಿ ಲಕ್ಷಣಗಳು ಅನೇಕರಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸತೊಡಗಿವೆ. ಕೌಟುಂಬಿಕ ಕಲಹ, ಅದೇರೀತಿ ವಾದವಿವಾದಗಳ ಪ್ರಮಾಣ ಕೂಡ ಹೆಚ್ಚಾಗಿದೆ. ‘ಮನೆಯಲ್ಲಿ ಹೇಗೆ ಸಮಯ ಕಳೆಯುವುದು?’ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಪರಾತ್ಪರ ಗುರು ಡಾಕ್ಟರರು ನೀಡಿದ ಸಾಧನೆಯ ಅಮೂಲ್ಯ ಬೋಧನೆಯನ್ನು ಅನುಸರಿಸುವ ಸನಾತನದ ಸಾಧಕರು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರುವುದು
ಅದೇ ಸನಾತನದ ಸಾಧಕರು ಮಾತ್ರ ಪರಾತ್ಪರ ಗುರು ಡಾಕ್ಟರರು ನೀಡಿರುವ ಬೋಧನೆಯಂತೆ ಬಂದಿರುವ ಪರಿಸ್ಥಿತಿಯನ್ನು ‘ಈಶ್ವರೇಚ್ಛೆ’ ಎಂಬ ಭಾವದಿಂದ ನೋಡಿ ಅದನ್ನು ಸ್ವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಭಗವಂತನ ಮೇಲಿರುವ ಶ್ರದ್ಧೆಯಿಂದ ಅವರು ನಿಶ್ಚಿಂತರಾಗಿದ್ದು ‘ಶ್ರೀಗುರುಗಳು ಬೆಂಬಲಕ್ಕಿರುವಾಗ| ಇತರರನ್ನು ಯಾರು ಲೆಕ್ಕಿಸುವರು | ಜ್ಞಾನದೇವ ನುಡಿಯುತ್ತಾರೆ ಉಳಿದೆನು ಉಳಿದೆನು | ಈಗ ಉದ್ಧಾರಿಸಿದನು ಗುರುಕೃಪೆಯಿಂದ||’ ಎಂಬ ವಚನದ ಅನುಭೂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಾಧನೆಯ ಹಾಗೂ ಸಾಧಕರ ಜೀವನದಲ್ಲಿ ಪರಾತ್ಪರ ಗುರುದೇವರಿರುವ ಅಸಾಧಾರಣ ಮಹತ್ವವು ಗಮನಕ್ಕೆ ಬರುತ್ತದೆ.
ಸಾಧಕರೇ, ‘ವಿಷ್ಣುಸ್ವರೂಪಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನ ಮತ್ತು ಗುರುಕೃಪೆಯ ಅಮೂಲ್ಯ ಛತ್ರ ಲಭಿಸಿದ್ದರಿಂದ ಈ ಭಯಾನಕ ಆಪತ್ಕಾಲೀನ ಸ್ಥಿತಿಯಲ್ಲಿಯೂ ಸ್ಥಿರವಾಗಿರಲು ಸಾಧ್ಯವಿದೆ’, ಇದರ ಬಗ್ಗೆ ಗುರುಗಳ ಪಾವನ ಚರಣಗಳಲ್ಲಿ ಅಖಂಡ ಕೃತಜ್ಞರಾಗಿರಿ !
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೦)
ಲಾಕ್‌ಡೌನ್ ಸಮಯದಲ್ಲಿ ಜನಸಾಮಾನ್ಯರಿಗೆ ದಿನವಿಡೀ ಮನೆಯಲ್ಲಿ ಸಮಯ ಕಳೆಯಲು ಕಠಿಣವಾಗಿರುವಾಗ ಸನಾತನದ ಸಾಧಕರಿಗೆ ಮಾತ್ರ ಸಾಧನೆಗೆ ಸಮಯ ಸಾಕಾಗದೇ ಇರುವುದು
೧. ಜನಸಾಮಾನ್ಯರು ಹಲವಾರು ಗಂಟೆ ದೂರದರ್ಶನದಲ್ಲಿ ಧಾರಾವಾಹಿಗಳನ್ನು ಅಥವಾ ಚಲನಚಿತ್ರ ನೋಡುವುದು, ಸಂಚಾರವಾಣಿಯಲ್ಲಿ ಸಾಮಯ ಕಾಳೆಯುವುದು ಇತ್ಯಾದಿಗಳನ್ನು ಮಾಡಿದರೂ ಅವರಿಗೆ ಸಮಯ ಕಳೆಯುವುದು ಕಠಿಣವಾಗುತ್ತಿರುವುದು
ಜನಸಾಮಾನ್ಯರಿಗೆ ದಿನವಿಡೀ ಮನೆಯಲ್ಲಿ ಕುಳಿತು ಸಮಯ ಹೇಗೆ ಕಳೆಯುವುದು?, ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಎಷ್ಟೋ ಜನರು ಗಂಟೆಗಟ್ಟಲೆ ಕಾಲ ದೂರದರ್ಶನದಲ್ಲಿ ಬರುವ ಧಾರಾವಾಹಿಗಳನ್ನು ಅಥವಾ ಚಲನಚಿತ್ರಗಳನ್ನು ನೋಡುವುದು, ಸಂಚಾರವಾಣಿಯಲ್ಲಿ ವಾಟ್ಸಾಪ್ ಫೇಸ್ಬುಕ್ ನೋಡುವುದು, ಸಂಚಾರವಾಣಿಯಲ್ಲಿ ಗೇಮ್ ಆಡುವುದು, ಹೆಚ್ಚು ಸಮಯ ನಿದ್ರಿಸುವುದು, ಹಾಳು ಹರಟೆಯಲ್ಲಿ ಹೇಗೋ ಸಮಯ ಕಳೆಯುತ್ತಿದ್ದಾರೆ. ಈ ರೀತಿಯಲ್ಲಿ ಭೌತಿಕ ವಿಶ್ವದಲ್ಲಿ ರಮಿಸಿದರೂ ಅವರ ಮನಸ್ಸಿಗೆ ಬಂದಂತೆ ನಡೆದುಕೊಂಡರೂ ಅನೇಕರು ದುಃಖ ಹಾಗೂ ನಿರಾಶೆಯಲ್ಲಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಅನೇಕರಿಗೆ ಮಾನಸಿಕ ಸಮಸ್ಯೆಗಳು, ಕೌಟುಂಬಿಕ ಕಲಹ, ಅದೇ ರೀತಿ ಮನೆಮನೆಗಳಲ್ಲಿ ವಿವಾದಗಳ ಪ್ರಮಾಣವು ಹೆಚ್ಚಾಗಿದೆ, ಎಂಬುದು ಗಮನಕ್ಕೆ ಬರುತ್ತಿದೆ.
೨. ಮನೆಯಲ್ಲಿಯೇ ಕುಳಿತುಕೊಂಡು ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡುವ ಸನಾತನದ ಸಾಧಕರಿಗೆ ದಿನದಲ್ಲಿ ಸಮಯವೇ ಸಾಕಾಗದಿರುವುದು
ಆದರೆ ಇದೇ ಅವಧಿಯಲ್ಲಿ ಸನಾತನದ ಸಾಧಕರು ದಿನವಿಡೀ ಹೆಚ್ಚು ಹೆಚ್ಚು ಸಮಯ ಸತ್‌ನಲ್ಲಿರಲು ಪ್ರಯತ್ನಿಸುತ್ತಿದ್ದಾರೆ. ನಾಮಸ್ಮರಣೆ, ಪ್ರಾರ್ಥನೆ, ಆಧ್ಯಾತ್ಮಿಕ ಉಪಾಯ ಇತ್ಯಾದಿ ವ್ಯಷ್ಟಿ ಸಾಧನೆಯ ಜೊತೆಗೆ ಮನೆಯಲ್ಲಿಯೇ ಕುಳಿತುಕೊಂಡು ಸಮಷ್ಟಿ ಸೇವೆಯನ್ನು ಕೂಡ ಮಾಡುತ್ತಿದ್ದಾರೆ. ದಿನವಿಡೀ ಸಾಧನೆಯಲ್ಲಿರುವುದರಿಂದ ಭಗವಂತನ ಚೈತನ್ಯವನ್ನು ಅನುಭವಿಸುತ್ತಿರುವ ಈ ಸಾಧಕರಿಗೆ ದಿನದ ೨೪ ಗಂಟೆಗಳು ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ದೇವರು ನಮಗೇನು ಕಲಿಸುತ್ತಿದ್ದಾರೆ ? ಎಂಬ ಬಗ್ಗೆ ಚಿಂತನೆ ಮಾಡಿ ಕಲಿಯುವ ಸ್ಥಿತಿಯಲ್ಲಿರುವುದರಿಂದ ಸಾಧಕರು ಸ್ಥಿರವಾಗಿದ್ದಾರೆ.
ಇದರಿಂದ ‘ಮನಸ್ಸಿಗೆ ಬಂದಂತೆ ನಡೆದುಕೊಂಡು ಸ್ವಚ್ಛಂದವಾಗಿ ಜೀವನ ನಡೆಸುವುದಲ್ಲ’ ಬದಲಾಗಿ ‘ಸಾಧನೆ ಮಾಡುವುದರಿಂದಲೇ ನಿಜವಾದ ಆನಂದ ಸಿಗುತ್ತದೆ’ ಎಂಬುದು ಗಮನಕ್ಕೆ ಬರುತ್ತದೆ. ಜೀವನದಲ್ಲಿ ‘ನಿಜವಾದ’ ಆನಂದವನ್ನು ಅನುಭವಿಸಲು ಸಾಧನೆಯನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ!
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೪.೨೦೨೦)