ಹಿಂದೂ ಪಂಚಾಂಗದಲ್ಲಿ ೫ ಅಂಗಗಳಿವೆ. ಅವುಗಳೆಂದರೆ ವಾರ, ತಿಥಿ, ನಕ್ಷತ್ರ, ಯೋಗ ಮತ್ತು ಕರಣ. ಇದರಲ್ಲಿ ವಾರ ಎಂಬ ಶಬ್ದವು ‘ಹೋರಾ’ ಎಂಬ ಶಬ್ದದಿಂದ ಉತ್ಪನ್ನವಾಗಿದೆ. ಹಗಲು ಮತ್ತು ರಾತ್ರಿ ಸೇರಿ ಒಂದು ‘ಅಹೋರಾತ್ರ’ ಆಗುತ್ತದೆ. ಒಂದು ಅಹೋರಾತ್ರದಲ್ಲಿ, ಅಂದರೆ ಒಂದು ಸೂರ್ಯೋದಯದಿಂದ ಮುಂದಿನ ದಿನದ ಸೂರ್ಯೋದಯದ ವರೆಗೆ, ೨೪ ಗಂಟೆಗಳು ಅಥವಾ ೨೪ ಹೋರಾ ಇರುತ್ತವೆ. ಒಂದೊಂದು ಹೋರಾ, ಒಂದೊಂದು ಗ್ರಹಕ್ಕೆ ಸಂಬಂಧಪಟ್ಟಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯೋದಯದ ಸಮಯದಲ್ಲಿ ಯಾವ ಗ್ರಹದ ಹೋರಾ ಇರುತ್ತದೆಯೋ, ಅದೇ ಗ್ರಹದ ಹೆಸರನ್ನು ಆ ದಿನಕ್ಕೆ ನೀಡಲಾಗಿದೆ. ಏಕೆಂದರೆ ಆ ದಿನದ ಪ್ರಾರಂಭವು ಸೂರ್ಯೋದಯದೊಂದಿಗೆ ಆಗುತ್ತದೆ.
೧. ದಿನಗಳ ಕ್ರಮ ಏಕೆ ಬದಲಾಗುವುದಿಲ್ಲ ?
‘ಮಂದಾತ್ ಶೀಘ್ರಪರ್ಯಂತಂ ಹೋರೇಶಾಃ’ ಅಂದರೆ ಮಂದವಾಗಿ ಚಲಿಸುವ ಗ್ರಹದಿಂದ ವೇಗವಾಗಿ ಚಲಿಸುವ ಗ್ರಹದ ವರೆಗೆ ‘ಹೋರಾ’ ಇರುತ್ತದೆ. ಬುಧ ಮತ್ತು ಶುಕ್ರ ಗ್ರಹಗಳ ಚಲಿಸುವ ಗತಿಯು ಹೆಚ್ಚಾಗಿದೆ. ಪೃಥ್ವಿಯಿಂದ ಗ್ರಹಗಳು ದೂರವಾಗುತ್ತಿದ್ದಂತೆ ಅವುಗಳ ವೇಗವೂ ಕಡಿಮೆಯಾಗುತ್ತದೆ. ಉದಾಹರಣೆಗೆ, ಮಂದ ಗ್ರಹವಾದ ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಕಳೆಯುತ್ತದೆ. ಅದೇ ಚಂದ್ರ (ಸೋಮ) ಗ್ರಹವು ಶೀಘ್ರ ಗ್ರಹವಾಗಿರುವುದರಿಂದ ಒಂದು ರಾಶಿಯಲ್ಲಿ ಸುಮಾರು ಎರಡೂಕಾಲು ದಿನಗಳನ್ನು ಕಳೆಯುತ್ತಾನೆ. ಒಂದು ಗ್ರಹವು ಸೂರ್ಯನ ಸುತ್ತ ಸುತ್ತುವ ವೇಗದಿಂದ ಅದು ಒಂದು ರಾಶಿಯಲ್ಲಿ ಎಷ್ಟು ಸಮಯ ಕಳೆಯುತ್ತದೆ ಎಂದು ತಿಳಿಯಬಹುದು.
೨. ಮಂದ ಮತ್ತು ಶೀಘ್ರ ಗ್ರಹಗಳ ಕ್ರಮ
ಶನಿ, ಗುರು, ಮಂಗಳ, ರವಿ, ಶುಕ್ರ, ಬುಧ, ಚಂದ್ರ (ಸೋಮ) ಈ ರೀತಿ ಇದೆ. ಉದಾ. : ಶನಿವಾರದಂದು ಮೊದಲನೇ ಹೋರಾ (ಗಂಟೆ) ಶನಿ ಗ್ರಹದ್ದಾಗಿರುತ್ತದೆ, ಎರಡನೆಯದು ಗುರು, ಮೂರನೆಯದು ಮಂಗಳ, ೪ ನೇ ಹೋರಾ ರವಿ, ೫ ನೇ ಹೋರಾ ಶುಕ್ರ, ೬ ನೇ ಹೋರಾ ಬುಧ, ೭ ನೇ ಹೋರಾ ಚಂದ್ರನದ್ದಾಗಿರುತ್ತದೆ. ಇದೇ ರೀತಿ ೭ ಸಾಲು ಅಂದರೆ ೨೧ ಗಂಟೆಗಳ ಕಾಲ ಮೀರಿದ ಮೇಲೆ ೨೨ ನೇ ಹೋರಾ ಪುನಃ ಶನಿ, ೨೩ ನೇ ಹೋರಾ ಗುರು ಮತ್ತು ೨೪ ನೇ ಹೋರಾ ಮಂಗಳ ಗ್ರಹದ್ದಾಗಿರುತ್ತದೆ. ಈ ರೀತಿ ೨೪ ಗಂಟೆಗಳು ಕಳೆದ ಮೇಲೆ ಮುಂದಿನ ದಿನದ ಸೂರ್ಯೋದಯವಾಗುತ್ತದೆ, ಅದು ಮುಂದಿನ ಹೋರಾದಿಂದ, ಅಂದರೆ ರವಿಯಿಂದ ಪ್ರಾರಂಭವಾಗುತ್ತದೆ.
೩. ಹೋರಾ ತಖ್ತೆ
ಪಂಚಾಂಗದಲ್ಲಿ ಹೋರಾ ತಖ್ತೆಯನ್ನು ನೀಡಿರುತ್ತಾರೆ. ಆದರೆ ಪಂಚಾಂಗವಿಲ್ಲದಿದ್ದರೆ ಮೇಲೆ ನೀಡಿರುವ ನಿಯಮದಂತೆ ಹೋರಾ ಯಾವುದೆಂದು ಗುರುತಿಸಲು ಸುಲಭವಾಗುತ್ತದೆ. ಪಂಚಾಂಗದಲ್ಲಿ ನೀಡುವ ಹೋರಾ ತಖ್ತೆ ಮುಂದಿನಂತಿರುತ್ತದೆ.
ಗಂಟೆ (ಟಿಪ್ಪಣಿ) | ರವಿ ವಾರ |
ಸೋಮ ವಾರ |
ಮಂಗಳ ವಾರ |
ಬುಧ ವಾರ |
ಗುರು ವಾರ |
ಶುಕ್ರ ವಾರ |
ಶನಿ ವಾರ |
---|---|---|---|---|---|---|---|
1 | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ |
2 | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು |
3 | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ |
4 | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ |
5 | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ |
6 | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ |
7 | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ |
8 | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ |
9 | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು |
10 | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ |
11 | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ |
12 | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ |
13 | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ |
14 | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ |
15 | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ |
16 | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು |
17 | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ |
18 | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ |
19 | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ |
20 | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ |
21 | ಮಂಗಳ | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ |
22 | ರವಿ | ಚಂದ್ರ | ಮಂಗಳ | ಬುಧ | ಗುರು | ಶುಕ್ರ | ಶನಿ |
23 | ಶುಕ್ರ | ಶನಿ | ರವಿ | ಚಂದ್ರ | ಮಂಗಳ | ಬುಧ | ಗುರು |
24 | ಬುಧ | ಗುರು | ಶುಕ್ರ | ಶನಿ | ರವಿ | ಚಂದ್ರ | ಮಂಗಳ |
ಟಿಪ್ಪಣಿ : ಸೂರ್ಯೋದಯದಿಂದ ಗಂಟೆಗಳು
೪. ಹೋರಾ ಬಗ್ಗೆ ಏಕೆ ತಿಳಿದುಕೊಳ್ಳಬೇಕು ?
ಪ್ರತಿಯೊಂದು ಹೊರಾದಲ್ಲಿ ಅದಕ್ಕೆ ಸಂಬಂಧಿಸಿದ ಕೃತಿಯನ್ನು ಮಾಡಿ ಅದರ ಲಾಭವನ್ನು ಪಡೆಕೊಳ್ಳಬಹುದು. ಮುಂದಿನ ತಖ್ತೆಯಲ್ಲಿ ಯಾವ ಹೊರಾದಲ್ಲಿ ಯಾವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಲಾಗಿದೆ.
ಹೋರಾ | ಕೃತಿ |
---|---|
ರವಿ | ರಾಜಸೇವೆ ಮತ್ತು ಔಷಧಿಗಳ ಸೇವನೆ |
ಚಂದ್ರ | ಎಲ್ಲ ಕಾರ್ಯಗಳು |
ಮಂಗಳ | ಯುದ್ಧ ಮತ್ತು ಚರ್ಚೆ |
ಬುಧ | ಜ್ಞಾನಾರ್ಜನೆ / ಕಲಿಕೆ |
ಗುರು | ಮಂಗಳ ಕಾರ್ಯಗಳು |
ಶುಕ್ರ | ಪ್ರಯಾಣ |
ಶನಿ | ದ್ರವ್ಯಸಂಗ್ರಹ |
– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ)
ಹೋರದಿಂದಲೇ ವಾರಗಳು ನಿರ್ಧರಿಸಲಾಗುತ್ತದೆ ಎಂಬುವುದನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಮತ್ತು ಯಾವ ವಾರದಲ್ಲಿ ಯಾವ ಕಾರ್ಯಗಳನ್ನು ಮಾಡಬೇಕು ಎಂಬುವುದನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ ತುಂಬಾ ಧನ್ಯವಾದಗಳು