ಈಗ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿರುವುದರಿಂದ ಸಾಧಕರ ಮೇಲೆ ಸೂಕ್ಷ್ಮ ಮತ್ತು ಸ್ಥೂಲದಲ್ಲಿ ಹಲ್ಲೆಗಳಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಆದುದರಿಂದ ಎಲ್ಲ ಸಾಧಕರು ಪ್ರತಿದಿವಸ ತಮ್ಮೊಂದಿಗೆ ರಕ್ಷಾಯಂತ್ರವನ್ನು ಇಟ್ಟುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಮುಂದೆ ನೀಡಲಾಗಿದೆ.
೧. ಎರಡೂ ಬದಿಯಲ್ಲಿ ಬಿಳಿಯಿರುವ ಹಾಳೆಯ ಮೇಲೆ ಈ ರಕ್ಷಾಯಂತ್ರವನ್ನು ಮುದ್ರಿಸಿಕೊಳ್ಳಿ. ಮಧ್ಯದಲ್ಲಿರುವ (ನಾಮ ಎಂದು ಬರೆದಿರುವ ಜಾಗದಲ್ಲಿ) ಗೋಲಾಕಾರದಲ್ಲಿ ತಮ್ಮ ಹೆಸರನ್ನು ಬರೆಯಿರಿ.
೨. ಈ ರಕ್ಷಾಯಂತ್ರದ ಸ್ಪರ್ಶವು ಸತತವಾಗಿ ನಿಮ್ಮ ಶರೀರಕ್ಕೆ ಆಗುತ್ತಿರಬೇಕು. ಆದುದರಿಂದ ಈ ರಕ್ಷಾಯಂತ್ರವನ್ನು ಒಂದು ತಾಯಿತದಲ್ಲಿ ಕಟ್ಟಿ ಅದನ್ನು ಕೆಂಪು ಅಥವಾ ಕಪ್ಪು ದಾರದಿಂದ ಕೈ ಅಥವಾ ಕೊರಳಿಗೆ ಕಟ್ಟಿಕೊಳ್ಳಿ.
೩. ಪ್ರತಿದಿವಸ ಊದುಬತ್ತಿಯ ಧೂಪದಿಂದ ಈ ಯಂತ್ರವನ್ನು ಶುದ್ಧೀಕರಿಸಿ.
೪. ಮಾಸಿಕ ಸರದಿಯ ಸಮಯದಲ್ಲಿ ಸಾಧಿಕೆಯರು ಈ ಯಂತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳಬಾರದು. ಮಾಸಿಕ ಸರದಿ ಮುಗಿದ ನಂತರ ಊದುಬತ್ತಿಯಿಂದ ಶುದ್ಧೀಕರಿಸಿ ಉಪಯೋಗಿಸಿ.
– (ಪರಾತ್ಪರ ಗುರು) ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ (೩೦.೮.೨೦೧೮)