ಪರಾತ್ಪರ ಗುರು ಪಾಂಡೆ ಮಹಾರಾಜರಂತೆ ಅನೇಕ ಗುಣಸಂಪನ್ನ ಮತ್ತು ಚೈತನ್ಯಭರಿತ ವಿಭೂತಿಯ ಜೀವನವನ್ನು ಅರ್ಥೈಸಿಕೊಳ್ಳುವುದು ಸಮುದ್ರದ ಅಲೆಗಳನ್ನು ಎಣಿಸುವಷ್ಟು ಅಸಾಧ್ಯ ! ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಅವರ ಜೀವನದ ಕೆಲವು ಆಯ್ದ ಚಿತ್ರಗಳನ್ನು ಕೃತಜ್ಞತಾಭಾವದಿಂದ ಅರ್ಪಿಸುತ್ತಿದ್ದೇವೆ !
ಜೀವ-ಶಿವ ಭೇಟಿಯ ಅಮೂಲ್ಯ ಕ್ಷಣ !
ಪರಾತ್ಪರ ಗುರು ಡಾ. ಆಠವಲೆಯವರು ೧೮.೨.೨೦೦೫ ರಂದು ಪರಾತ್ಪರ ಗುರು ಪಾಂಡೆ ಮಹಾರಾಜರ (ಮಹಾರಾಷ್ಟ್ರದ ಅಕೋಲಾದಲ್ಲಿರುವ) ಮನೆಯಲ್ಲಿ ಅವರನ್ನು ಭೇಟಿ ಮಾಡಿದ ಕ್ಷಣವಿದು ! ಭೇಟಿಯಾದ ತಕ್ಷಣ ಪರಾತ್ಪರ ಗುರು ಪಾಂಡೆ ಮಹಾರಾಜರ ಭಾವ ಜಾಗೃತವಾಯಿತು, ಪರಾತ್ಪರ ಗುರು ಪಾಂಡೆ ಮಹಾರಾಜರು ಈ ದಿನದಂದೇ ತನ್ನ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದರು.
ಮೇ ೨೦೧೦ ರಲ್ಲಿ ಯೋಗತಜ್ಞ ದಾದಾಜಿ ವೈಶಂಪಾಯನ ಇವರ ೯೧ನೇ ಹುಟ್ಟುಹಬ್ಬದಂದು ದಿನದಂದು ಅವರ ಆರತಿ ಬೆಳಗುತ್ತಿರುವ ಪರಾತ್ಪರ ಗುರು ಪಾಂಡೆ ಮಹಾರಾಜ !
೨೦೦೪ ನೇ ಇಸವಿಯಲ್ಲಿ ಯೋಗತಜ್ಞ ದಾದಾಜಿ ವೈಶಂಪಾಯನ ಇವರು ‘ಮುಂದೆ ಪ. ಪೂ. ಪಾಂಡೆ ಮಹಾರಾಜರು ಸನಾತನದ ದೇವದ ಆಶ್ರಮದಲ್ಲಿ ವಾಸ್ತವ್ಯವಿದ್ದು ಸಾಧಕರಿಗೆ ಆಧ್ಯಾತ್ಮಿಕ ಉಪಾಯಗಳನ್ನು ಹೇಳಿಕೊಡಲಿದ್ದಾರೆ’ ಎಂದು ಭವಿಷ್ಯವನ್ನು ನುಡಿದಿದ್ದರು. ಅದರಂತೆಯೇ ನಡೆಯಿತು !
ಪುರಸ್ಕಾರವನ್ನು ಸ್ವೀಕರಿಸುತ್ತಿರುವ ಆ ಅಮೂಲ್ಯ ಕ್ಷಣ !
ಪರಾತ್ಪರ ಗುರು ಪಾಂಡೆ ಮಹಾರಾಜರು ಬರೆದ ‘ಶ್ರೀ ಗಣೇಶ ಅಧ್ಯಾತ್ಮ ದರ್ಶನ’ ಗ್ರಂಥಕ್ಕೆ ಇಂದೋರಿನ ಸ್ವಾಮಿ ಶ್ರೀ ವಿಷ್ಣುತೀರ್ಥ ಶಿಕ್ಷಾ ಪ್ರತಿಷ್ಠಾನದಿಂದ ಆವರನ್ನು ೧೬.೧೦.೨೦೦೫ ರಂದು ಪುರಸ್ಕರಿಸಿ ಸನ್ಮಾನಿಸಲಾಯಿತು.
ಎಡಗಡೆಯಿಂದ (ಕುಳಿತವರು) ಪತ್ನಿ ಸೌ. ಆಶಾ ಪಾಂಡೆ, ಪರಾತ್ಪರ ಗುರು ಪಾಂಡೆ ಮಹಾರಾಜ. ಎಡಗಡೆಯಿಂದ (ನಿಂತವರು) ಸೊಸೆ ಸೌ. ದೇವಯಾನಿ ಪಾಂಡೆ, ಮೊಮ್ಮಗ ಕು. ಸೌರಭ, ಮೊಮ್ಮಗಳು ಕು. ಗೌರಿ, ಮತ್ತು ಮಗ ಶ್ರೀ. ಅಮೋಲ್ ಪಾಂಡೆ (೨೦೦೭ರ ಛಾಯಾಚಿತ್ರ)
೨೦೧೨ ರಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೃತ ಹಸ್ತಗಳಿಂದ sanatanshop.com ಜಾಲತಾಣವನ್ನು ಉದ್ಘಾಟಿಸಲಾಯಿತು. ಮಾತ್ರವಲ್ಲ, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ, ಆಪ್ ಗಳನ್ನೂ ಅವರು ಅನಾವರಣಗೊಳಿಸಿದ್ದಾರೆ.
ಪರಾತ್ಪರ ಗುರು ಪಾಂಡೆ ಮಹಾರಾಜ ಮತ್ತು ಸೌ. ಆಶಾ ಪಾಂಡೆ ಇವರ ವಿವಾಹದ ವಾರ್ಷಿಕೋತ್ಸವದ ನಿಮಿತ್ತ ಸನಾತನದ ದೇವದ ಆಶ್ರಮದಲ್ಲಿ ಅವರಿಗೆ ಶ್ರೀಕೃಷ್ಣಾರ್ಜುನರ ಚಿತ್ರವನ್ನು ನೀಡಿ ಸನ್ಮಾನಿಸಲಾಯಿತು. (೨೦೧೨ ಛಾಯಾಚಿತ್ರ)
ಪರಾತ್ಪರ ಗುರು ಪಾಂಡೆ ಮಹಾರಾಜರ ಹತ್ತಿರ ವಿವಿಧ ಆಕೃತಿಗಳ ಮತ್ತು ಜೀವಗಳಿರುವ ಕಲ್ಲುಗಳ ಒಂದು ವಿಭಿನ್ನ ಸಂಗ್ರಹವಿತ್ತು. ದೇವದ ಆಶ್ರಮದಲ್ಲಿ ಈ ಸಂಗ್ರಹವನ್ನು ಪ್ರದರ್ಶಿಸಿದಾಗ ಕಲ್ಲುಗಳ ಮಾಹಿತಿಯನ್ನು ಮೊಮ್ಮಗಳಾದ ಕು. ಗೌರಿ ಮತ್ತು ಮಗ ಶ್ರೀ. ಅಮೋಲ್ ಪಾಂಡೆ ಇವರಿಗೆ ಮಾಹಿತಿಯನ್ನು ನೀಡುತ್ತಿರುವ ಪರಾತ್ಪರ ಗುರು ಪಾಂಡೆ ಮಹಾರಾಜರು, ಪಕ್ಕದಲ್ಲಿ ಸೌ. ಆಶಾ ಪಾಂಡೆ (೨೦೧೫ರ ಛಾಯಾಚಿತ್ರ)
ನಿಸರ್ಗದೊಂದಿಗೆ ಒಂದಾಗುವ ಪರಾತ್ಪರ ಗುರು ಬಾಬಾ !
ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ಸಾಧಕರ ಮೇಲೆ ಎಷ್ಟು ಪ್ರೀತಿಯಿತ್ತೋ ಅವರು ನಿಸರ್ಗವನ್ನು ಅಷ್ಟೇ ಪ್ರೀತಿಸುತ್ತಿದ್ದರು. ಅವರು ದೇಹ ತ್ಯಜಿಸಿದ ನಂತರ ಸುತ್ತಮುತ್ತಲಿನ ಗಿಡಗಳಲ್ಲಿ ಆದ ದೈವೀ ಬದಲಾವಣೆಗಳು ಇದಕ್ಕೆ ಸಾಕ್ಷಿ !
ದಸರೆಗೆ ಸಾಧಕರಿಗೆ ಮತ್ತು ಸಂತರಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರಿಂದ ದೊರೆಯುವ ಪ್ರಸಾದವೆಂದರೆ ಅವರ ಅಮೃತ ಹಸ್ತದಿಂದ ಆಶೀರ್ವಾದ ಬರೆದಂತಹ ಮಂದಾರದ ಎಳೆಗಳು ! ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಕಳಿಸಿರುವ ಅನೇಕ ಎಲೆಗಳಲ್ಲಿ ಇದೊಂದು. ಪರಾತ್ಪರ ಗುರು ಪಾಂಡೆ ಮಹಾರಾಜರು ಪ್ರತಿ ದಸರೆಗೆ ಬೇರೆ ಬೇರೆ ಸಂಕಲ್ಪನೆಗನುಸಾರ ಮಂದಾರದ ಎಲೆಗಳನ್ನು ತಯಾರಿಸಿ ಕಳಿಸುತ್ತಿದ್ದರು.
೨೦೧೭ರಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರ ೯೦ನೇ ಹುಟ್ಟಿದ ಹಬ್ಬದಂದು ಅವರನ್ನು ಸನ್ಮಾನಿಸಲು ಆಯೋಜಿಸಲದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವಾಗ ಸಾಧಕರು ಅವರಮೇಲೆ ಪುಷ್ಪವೃಷ್ಟಿಯನ್ನು ಮಾಡಿದ ಭಾವ ಕ್ಷಣ !
ಒಂದು ಭಾವಮಯ ಕ್ಷಣ !
ಶ್ರೀ ಗುರುಗಳು ಜೀವನದಲ್ಲಿ ಒಂದು ಸಲ ಬಂದರೆ ಸಾಕು, ಅವರ ಪ್ರೀತಿಯ ಹೊಳೆಯು ಕೊನೆಯ ಕ್ಷಣದ ವರೆಗೂ ಹರಿಯುತ್ತಿರುತ್ತದೆ ಎಂಬುವುದಕ್ಕೆ ಒಂದು ಉದಾಹರಣೆ
ಪರಾತ್ಪರ ಗುರು ಡಾ. ಆಠವಲೆಯವರು ಸ್ಪರ್ಶಿಸಿದ ಹೂವಿನ ಹಾರವನ್ನು ಪರಾತ್ಪರ ಗುರು ಪಾಂಡೆ ಮಹಾರಾಜರ ಪಾರ್ಥಿವ ಶರೀರಕ್ಕೆ ಅರ್ಪಿಸುತ್ತಿರುವ ಪೂ. ರಮೇಶ ಗಡಕರಿ
ದೇವದ ಆಶ್ರಮದ ಆತ್ಮವಾಗಿರುವ ಪರಾತ್ಪರ ಗುರು ಪಾಂಡೆ ಮಹಾರಾಜರ ಕೋಣೆ
ಪರಾತ್ಪರ ಗುರು ಪಾಂಡೆ ಮಹಾರಾಜರ ಚೈತನ್ಯಮಯ ಅಸ್ತಿತ್ವದ ಅನುಭೂತಿಯನ್ನು ನೀಡುವ ಅವರ ಕೋಣೆ ಮತ್ತು ಚೈತನ್ಯದಿಂದ ತುಂಬಿರುವ ಅವರು ಉಪಯೋಗಿಸುತ್ತಿದ್ದ ವಸ್ತುಗಳು ! ಬನ್ನಿ, ಈ ಚೈತನ್ಯದ ಲಾಭವನ್ನು ಪಡೆದುಕೊಳ್ಳೋಣ !
ಪರಾತ್ಪರ ಗುರು ಪಾಂಡೆ ಮಹಾರಾಜರ ಅಂತ್ಯವಿಧಿಯ ಸಮಯದಲ್ಲಿ ಗೋಚರಿಸಿದ ವಿವಿಧ ದೈವೀ ಆಕೃತಿಗಳು !
ಪಾರ್ಥಿವ ಶರೀರಕ್ಕೆ ಹಚ್ಚಿದ ಅಗ್ನಿಯಲ್ಲಿ ಕಂಡ ಶ್ರೀ ವಿಠಲನ ಆಕೃತಿ
ಕೈಮುಗಿದು ನಿಂತಿರುವ ಭಂಗಿಯಲ್ಲಿ ಓರ್ವ ದೇವತೆಯ ಆಕೃತಿ
ಪರಾತ್ಪರ ಗುರು ಪಾಂಡೆ ಮಹಾರಾಜರು ದೇಹ ತ್ಯಜಿಸಿದ ೧೦ ದಿನಗಳ ನಂತರದ ವಿಧಿಯಲ್ಲಿ ತಯಾರಿಸಿದ ಪಿಂಡ ಮತ್ತು ರೊಟ್ಟಿಯಲ್ಲಿ ಮೂಡಿಬಂದ ‘ಓಂ’ !