೧. ಸೇವೆಯ ಸಂದರ್ಭದಲ್ಲಿ ಸಾಧಕರಿಂದಾಗುವ ಅಯೋಗ್ಯ ವಿಚಾರಪ್ರಕ್ರಿಯೆ
ಅನೇಕ ಸಾಧಕರಿಗೆ ಸೇವೆಯಲ್ಲಿ ತಪ್ಪುಗಳಾದಾಗ ಅವರ ಆತ್ಮವಿಶ್ವಾಸವು ಕಡಿಮೆಯಾಗುತ್ತದೆ ಮತ್ತು ಇದರಿಂದಾಗಿ ಅವರು ತಮ್ಮ ಕ್ಷಮತೆಯಂತೆ ಅಥವಾ ಮುಂದಾಳುತ್ವ ವಹಿಸಿ ಸೇವೆ ಮಾಡಲು ಹಿಂಜರಿಯುತ್ತಾರೆ. ಕೆಲವು ಸಾಧಕರು ಹಿಂದಿನ ಅನುಭವದಿಂದ ‘ಇಂತಹ ಸೇವೆ ಮಾಡಲು ನಮಗೆ ಆಗುವುದೇ ಇಲ್ಲ’ ಎಂಬ ನಿಷ್ಕರ್ಷಕ್ಕೆ ಬರುತ್ತಾರೆ ಮತ್ತು ಸೇವೆಯನ್ನು ನಿರಾಕರಿಸುತ್ತಾರೆ. ಕೆಲವು ಸಾಧಕರು ಅವರಿಗೆ ಗೊತ್ತಿರುವ ಸೇವೆಯನ್ನು ಬಿಟ್ಟು ಬೇರೆ ಸೇವೆ ಕೊಟ್ಟರೆ, ‘ನಮಗೆ ಈ ಸೇವೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗಬಹುದೇ?’ ಎಂದು ಭಯಪಡುತ್ತಾರೆ. ಈ ಕಾರಣಗಳಿಂದಾಗಿ ಸಾಧಕರು ಸಾಧನೆಯಲ್ಲಿ ಎರಡು ಹೆಜ್ಜೆ ಹಿಂದೆ ಬೀಳುತ್ತಾರೆ.
೨. ಸಾಧಕರು ಸೇವೆಯಲ್ಲಿನ ಕ್ಷಮತೆವನ್ನು ಹೆಚ್ಚಿಸುವ ವಿಷಯದಲ್ಲಿ ಗಮನದಲ್ಲಿಡಬೇಕಾದ ದೃಷ್ಟಿಕೋನ
೨ ಅ. ಸಕ್ಷಮವಾಗಿ ಸೇವೆ ಮಾಡುವವರ ಆಧ್ಯಾತ್ಮಿಕ ಪ್ರಗತಿ ಶೀಘ್ರವಾಗಿ ಆಗುತ್ತದೆ !
೧. ದೇವರು ಎಲ್ಲಾ ಸೇವೆಗಳನ್ನು ಮಾಡಲು ಸಕ್ಷಮನಾಗಿದ್ದಾನೆ; ಆದುದರಿಂದ ಸಕ್ಷಮವಾಗಿ ಸೇವೆ ಮಾಡುವವನು ದೇವರೊಂದಿಗೆ ಬೇಗನೆ ಏಕರೂಪನಾಗುತ್ತಾನೆ. ಆದುದರಿಂದ ಆ ಸಾಧಕನ ಆಧ್ಯಾತ್ಮಿಕ ಪ್ರಗತಿ ಶೀಘ್ರವಾಗಿ ಆಗುತ್ತದೆ.
೨. ಸಕ್ಷಮವಾಗಿ ಸೇವೆ ಮಾಡುವುದು ಎಂದರೆ ‘ನಮ್ಮ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಸಂಪೂರ್ಣವಾಗಿ ದೇವರ ಚರಣಗಳಿಗೆ ಅರ್ಪಿಸುವುದು’, ಇದರಿಂದ ನಮ್ಮ ಮೇಲೆ ದೇವರ ಕೃಪೆ ಬೇಗನೆ ಆಗುವುದರಿಂದ ನಮ್ಮ ಆಧ್ಯಾತ್ಮಿಕ ಪ್ರಗತಿ ಶೀಘ್ರವಾಗಿ ಆಗುತ್ತದೆ.
೨ ಆ. ‘ಗುರುಗಳೇ ನನ್ನಿಂದ ಸೇವೆಯನ್ನು ಸರಿಯಾಗಿ ಮಾಡಿಸಿಕೊಳ್ಳುವವರಿದ್ದಾರೆ’, ಎಂಬ ದೃಢ ಶ್ರದ್ಧೆಯನ್ನಿಟ್ಟರೆ ಸೇವೆಯು ಯೋಗ್ಯ ರೀತಿಯಲ್ಲಿ ಆಗುತ್ತದೆ ! : ಎಲ್ಲ ಸೇವೆಗಳು ಗುರು ಅಥವಾ ಈಶ್ವರನ ಆಯೋಜನೆಯಲ್ಲಿಯೇ ಇರುತ್ತವೆ. ಮಹಾಭಾರತದ ಯುದ್ಧದ ಸಮಯದಲ್ಲಿ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ, ‘ನಾನು ಸೂಕ್ಷ್ಮದಲ್ಲಿ ಕೌರವರನ್ನು ಮೊದಲೇ ನಾಶ ಮಾಡಿದ್ದೇನೆ. ಈಗ ನೀನು ಕೇವಲ ನಿಮಿತ್ತ ಮಾತ್ರನಾಗು’, ಎಂದು ಹೇಳಿದ್ದನು. ಇದರಂತೆಯೇ ಸಾಧಕನಿಗೆ ದೊರಕಿದ ಎಲ್ಲ ಸೇವೆ ಗುರುಗಳ ಸೂಕ್ಷ್ಮದಲ್ಲಿನ, ಅಂದರೆ ಅವ್ಯಕ್ತ ಸಂಕಲ್ಪದ ಮೂಲಕ ಮೊದಲೇ ಆಗಿರುತ್ತವೆ; ಸಾಧಕರು ಕೇವಲ ಸ್ಥೂಲದಲ್ಲಿ ನಿಮಿತ್ತ ಮಾತ್ರರಾಗಬೇಕಿದೆ. ಇದಕ್ಕಾಗಿಯೇ ಸಾಧಕರು ‘ಗುರುಗಳೇ ನನ್ನಿಂದ ಸಕ್ಷಮವಾಗಿ ಸೇವೆ ಮಾಡಿಸಿಕೊಳ್ಳುವವರಿದ್ದಾರೆ’, ಎಂಬ ದೃಢ ಶ್ರದ್ಧೆಯನ್ನಿಟ್ಟರೆ ಅವರ ಸೇವೆ ಸಕ್ಷಮವಾಗಿ ಆಗುತ್ತದೆ.
೩. ಸೇವೆಯಲ್ಲಿನ ಕ್ಷಮತೆಯನ್ನೇ ವಿಕಾಸ ಮಾಡಲಿಕ್ಕಾಗಿಯೇ ಕೆಲವು ಪ್ರಯತ್ನಗಳು
೩ ಅ. ತಪ್ಪುಗಳನ್ನು ಸುಧಾರಿಸುವ ಸಂಸ್ಕಾರವು ಮನಸ್ಸಿನ ಮೇಲಾಗಲು ತಪ್ಪುಗಳನ್ನು ತತ್ಪರತೆಯಿಂದ ಬರೆಯುವುದು : ಬಹಳಷ್ಟು ಸಾಧಕರು ತಪ್ಪುಗಳಾದ ಬಳಿಕ ‘ತಪ್ಪುಗಳನ್ನು ಆಮೇಲೆ ಬರೆಯೋಣ’, ಎಂಬ ವಿಚಾರ ಮಾಡುತ್ತಾರೆ ಹಾಗೂ ಮುಂದೆ ಸೇವೆಗಳ ಅವಸರದಲ್ಲಿ ಅವುಗಳನ್ನು ಬರೆಯುವುದು ಮತ್ತು ಅವುಗಳ ಮೇಲೆ ಚಿಂತನ-ಮನನ ಮಾಡುವುದು ಉಳಿದು ಹೋಗುತ್ತದೆ. ಇದರಿಂದಾಗಿ ತಪ್ಪುಗಳನ್ನು ಸುಧಾರಿಸುವ ಸಂಸ್ಕಾರಗಳು ಮನಸ್ಸಿನಲ್ಲಿ ಆಗುವುದಿಲ್ಲ. ಆದುದರಿಂದ ಪುನಃಪುನಃ ಅದೇ ತಪ್ಪುಗಳು ಆಗುತ್ತವೆ. ಪ್ರತಿದಿನ ವ್ಯಾಯಾಮ ಮಾಡುವುದು, ಕುಟುಂಬದವರೊಂದಿಗೆ ಮತ್ತು ಸಾಧಕರೊಂದಿಗೆ ಹರಟೆ ಹೊಡೆಯುವುದು, ಹೊರಗೆ ತಿರುಗಾಡುವುದು ಇತ್ಯಾದಿ ವಿಷಯಗಳಿಗೆ ನಾವು ಸಮಯ ತೆಗೆಯುತ್ತೇವೆ, ಹಾಗಾದರೆ ತಪ್ಪುಗಳನ್ನು ಬರೆಯಲು ಏಕೆ ಸಮಯ ಕೊಡಲು ಸಾಧ್ಯವಿಲ್ಲ ?
೩ ಆ. ಸೇವೆಯಲ್ಲಿನ ಕೌಶಲ್ಯವನ್ನು ಹೆಚ್ಚಿಸಲು ನಿಯಮಿತವಾಗಿ ಅಧ್ಯಯನ ಮತ್ತು ಪ್ರಯತ್ನಗಳನ್ನು ಮಾಡುವುದು ಅಥವಾ ತಿಳಿದವರಿಂದ ಕಲಿಯುತ್ತಿರುವುದು : ಬಹುತೇಕ ಸಾಧಕರು ನಿರ್ಧರಿಸಿದ ಸೇವೆಯನ್ನು ಮಾಡುತ್ತಾರೆ; ಆದರೆ ದಿನವಿಡಿ ೧೦-೧೫ ನಿಮಿಷವೂ ಸೇವೆಯಲ್ಲಿನ ಕೌಶಲ್ಯವನ್ನು ಹೆಚ್ಚಿಸಲು ಅಧ್ಯಯನ ಮತ್ತು ಪ್ರಯತ್ನಗಳನ್ನು ಮಾಡುವುದಿಲ್ಲ ಅಥವಾ ತಿಳಿದವರಿಂದ ಕಲಿಯಲು ಸಮಯ ಕೊಡುವುದಿಲ್ಲ. ಇದರಿಂದಲೂ ಅವರ ಕ್ಷಮತೆ ಹೆಚ್ಚಿಸಲು ಒಂದು ಮಿತಿಯು ಬರುತ್ತದೆ. ಸಾಧಕರ ಸೇವೆಗಳ ಜವಬ್ದಾರಿ ಇರುವವರು ಅದರೆಡೆಗೆ ಗಮನ ನೀಡಬೇಕು; ಏಕೆಂದರೆ ಸಾಧಕರ ಸೇವೆ ಕ್ಷಮತೆಯಿಂದಾದರೆ, ಅವರ ಸೇವೆಯ ಫಲನಿಷ್ಪತ್ತಿಯು ಹೆಚ್ಚುವುದಲ್ಲದೇ ಒಟ್ಟು ಕಾರ್ಯದ ಅಥವಾ ವಿಭಾಗದ ಫಲನಿಷ್ಪತ್ತಿಯು ಹೆಚ್ಚಾಗುತ್ತದೆ.
೩ ಇ. ಭಾವದ ಸ್ತರದಲ್ಲಿ ಮಾಡುವ ಪ್ರಯತ್ನಗಳು
೩ ಇ ೧. ‘ಪ್ರತಿಯೊಂದು ತಪ್ಪು ನನ್ನ ಕ್ಷಮತೆಯನ್ನು ಹೆಚ್ಚಿಸುವುದಕ್ಕಾಗಿಯೇ ದೇವರು ಗಮನಕ್ಕೆ ತಂದು ಕೊಟ್ಟಿದ್ದಾನೆ’, ಎಂಬ ಭಾವ ಇಡಬೇಕು ! : ಹೆಚ್ಚಿನ ಸಾಧಕರು ಅವರ ಕ್ಷಮತೆಯ ವ್ಯಾಪ್ತಿಯಲ್ಲಿನ ತಪ್ಪುಗಳನ್ನು ‘ತಪ್ಪುಗಳು’ ಎಂದು ನೋಡುತ್ತಾರೆ; ಆದರೆ ಅವರ ಕ್ಷಮತೆಯ ವ್ಯಾಪ್ತಿಯ ಹೊರಗಿರುವ ತಪ್ಪುಗಳ ಕಡೆಗೆ ‘ತಪ್ಪುಗಳು’ ಎಂದು ನೋಡುವುದಿಲ್ಲ. ‘ಇದು ನಮ್ಮ ಕ್ಷಮತೆಗೆ ಮೀರಿ ಇರುತ್ತದೆ’, ಎಂದು ಅವರಿಗೆ ಅನಿಸುತ್ತದೆ, ಆದುದರಿಂದ ಅವರ ಬುದ್ಧಿಗೆ ಆಳವಾಗಿ ಅಥವಾ ಮುಂದೆ ಮುಂದಿನ ಹಂತದ ವಿಚಾರ ಮಾಡುವ ರೂಢಿಯೇ ಆಗುವುದಿಲ್ಲ. ಆದುದರಿಂದ ಅವರ ಬೌದ್ಧಿಕ ಕ್ಷಮತೆಯನ್ನು ಹೆಚ್ಚಿಸಲು ಮಿತಿ ಬರುತ್ತದೆ. ತದ್ವಿರುದ್ದ ಪ್ರತಿಯೊಂದು ತಪ್ಪು ನನ್ನ ಕ್ಷಮತೆಯನ್ನು ಹೆಚ್ಚಿಸಲು ದೇವರು ಗಮನಕ್ಕೆ ತಂದು ಕೊಟ್ಟಿದ್ದಾನೆ, ಎಂಬ ಭಾವವನ್ನಿಟ್ಟರೆ ಸ್ವಂತ ಕ್ಷಮತೆಯ ವಿಕಾಸ ಮಾಡುವ ಪ್ರಯತ್ನಗಳಿಗೆ ಚಾಲನೆ ದೊರಕುತ್ತದೆ.
೩ ಇ ೨. ‘ಗುರುಗಳೇ ನನ್ನಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬ ಭಾವ ಸತತವಾಗಿ ಇಡಬೇಕು.
– (ಪೂ.) ಶ್ರೀ. ಸಂದೀಪ ಆಳಶಿ (೮.೧.೨೦೨೦)