ಕೇರಳದ ಅನೇಕ ದೇವಾಲಯಗಳ ಗೋಡೆಗಳ ಮೇಲೆ ಒಂದು ವಿಶಿಷ್ಟ ಶೈಲಿಯ ಚಿತ್ರಗಳು ಕಂಡು ಬರುತ್ತವೆ. ಅವು ದೇವಾಲಯಗಳ ಕೇವಲ ಶೋಭೆಯನ್ನು ಹೆಚ್ಚಿಸದೇ, ಭಕ್ತರಿಗೆ ಪುರಾಣಗಳಲ್ಲಿನ ಪ್ರಸಂಗಗಳನ್ನು ನೆನಪಿಸುತ್ತವೆ. ಈ ಚಿತ್ರಗಳು ಬಣ್ಣದ ಕಲ್ಲು ಹಾಗೂ ವನಸ್ಪತಿಗಳಿಂದ ತಯಾರಿಸಿದ ನೈಸರ್ಗಿಕ ರಂಗೋಲಿಯಿಂದ ಚಿತ್ರಿಸಲಾಗುತ್ತದೆ. ನೂರಾರು ವರ್ಷಗಳ ಹಿಂದಿನ ಆದರೆ ಇಂದಿಗೂ ಸುಂದರವಾಗಿರುವ ಕೇರಳ ಶೈಲಿಯ ಮ್ಯೂರಲ್(ಗೋಡೆ) ಚಿತ್ರಗಳನ್ನು ಇಲ್ಲಿ ಮುದ್ರಿಸುತ್ತಿದ್ದೇವೆ. ಕೇರಳ ಶೈಲಿಯಲ್ಲಿನ ಎಲ್ಲಕ್ಕಿಂತ ಪ್ರಾಚೀನ ಭಿತ್ತಿಚಿತ್ರಗಳು ಪ್ರಸ್ತುತ ತಮಿಳುನಾಡಿನಲ್ಲಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಶ್ರೀ ಥಿರುನಂದಿಕರಾ ಗುಹೆಯಲ್ಲಿನ ದೇವಾಲಯಗಳಲ್ಲಿ ಕಂಡುಬರುತ್ತವೆ.
ನೈಸರ್ಗಿಕ ಸಂಪನ್ಮೂಲಗಳಿಂದ ವಿಕಸಿತಗೊಂಡ ಹಾಗೂ ನೂರಾರು ವರ್ಷ ದೀರ್ಘಕಾಲ ಬಾಳುವ ಕೇರಳ ಶೈಲಿಯ ಮ್ಯೂರಲ್ (ಭಿತ್ತಿ) ಚಿತ್ರಗಳು !
ಕೇರಳದ ಅನೇಕ ದೇವಾಲಯಗಳ ಗೋಡೆಗಳ ಮೇಲೆ ಒಂದು ವಿಶಿಷ್ಟ ಶೈಲಿಯ ಚಿತ್ರಗಳು ಕಂಡು ಬರುತ್ತವೆ. ಅವು ದೇವಾಲಯಗಳ ಕೇವಲ ಶೋಭೆಯನ್ನು ಹೆಚ್ಚಿಸದೇ ಭಕ್ತರಿಗೆ ಪುರಾಣಗಳಲ್ಲಿನ ಪ್ರಸಂಗಗಳನ್ನು ನೆನಪಿಸುತ್ತವೆ. ಈಗಿನ ಕಾಲದಲ್ಲಿ ಮನೆಗಳಲ್ಲಿನ ಗೋಡೆಗಳ ಬಣ್ಣವೂ ಕೆಲವು ವರ್ಷಗಳಲ್ಲಿ ಮಸುಕಾಗುತ್ತದೆ. ಅದಕ್ಕೆ ಹೋಲಿಸಿದರೆ ಕೆಲವು ಶತಮಾನಗಳು ಹಳೆಯದಾಗಿರುವ ಈ ಚಿತ್ರಗಳು ಇಂದಿಗೂ ಉಳಿದುಕೊಂಡಿವೆ, ಇದು ಆಶ್ಚರ್ಯವಲ್ಲವೇ ? ಈ ವೈಶಿಷ್ಟ್ಯಪೂರ್ಣ ಹಾಗೂ ಪ್ರಾಚೀನ ಕಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ೨೧ ಮಾರ್ಚ್ ೨೦೧೯ ರಂದು ಕೇರಳದಲ್ಲಿನ ಸುಪ್ರಸಿದ್ಧ ಮ್ಯೂರಲ್ ಆರ್ಟ್ ಗ್ಯಾಲರಿ’ಗೆ ಭೇಟಿ ನೀಡಿದರು. ಅಲ್ಲಿನ ಕೇರಳ ಶೈಲಿಯ ಮ್ಯೂರಲ್ (ಗೋಡೆಯ ಮೇಲಿನ) ಚಿತ್ರಕಲೆಯ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಪಡೆದರು. ‘ಯು.ಎ.ಎಸ್.’ (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಪ್ರಭಾವಲಯವನ್ನು ಅಳೆಯುವ ವೈಜ್ಞಾನಿಕ ಉಪಕರಣದ ಮೂಲಕ ಮ್ಯೂರಲ್ ಚಿತ್ರಗಳು, ಅದಕ್ಕಾಗಿ ಬಳಸಲಾಗುವ ಬಣ್ಣ ಹಾಗೂ ಚಿತ್ರಕಾರರ ಪರೀಕ್ಷೆ ಮಾಡಿ ಅವರಲ್ಲಿನ ಊರ್ಜೆಗಳ ಅಧ್ಯಯನ ಮಾಡಿದರು. ಅದರ ನಿಷ್ಕರ್ಷ, ಮ್ಯೂರಲ್ ಚಿತ್ರಗಳ ಬಗೆಗಿನ ಸಂಕ್ಷಿಪ್ತ ಮಾಹಿತಿ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಮ್ಯೂರಲ್ ಚಿತ್ರಗಳ ಬಗ್ಗೆ ಮಾಡಿದ ಅಧ್ಯಯನ ಇತ್ಯಾದಿ ಮಾಹಿತಿಯನ್ನು ಲೇಖನದಲ್ಲಿ ಕೊಡಲಾಗಿದೆ.
೧. ಮ್ಯೂರಲ್ ಚಿತ್ರಗಳೆಂದರೇನು ?
ಮ್ಯೂರಲ್ ಚಿತ್ರಗಳು ಅಂದರೆ ಭಿತ್ತಿಚಿತ್ರಗಳು, ಅಂದರೆ ಗೋಡೆಯ ಮೇಲೆ ಬಿಡಿಸುವ ಚಿತ್ರಗಳು. ಇವುಗಳನ್ನು ಬಣ್ಣದ ಕಲ್ಲು ಹಾಗೂ ವನಸ್ಪತಿಗಳ ಎಲೆಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳಿಂದ ಬಿಡಿಸಲಾಗುತ್ತದೆ. ಹಿಂದೆ ಅರಮನೆ, ಶ್ರೀಮಂತರ ಭವನ, ದೇವಾಲಯಗಳ ಗೋಡೆಗಳ ಮೇಲೆಯು ಸಹ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಇದು ಒಂದು ಪಾರಂಪರಿಕ ಕಲೆಯಾಗಿದೆ. ಇಂದಿಗೂ ಈ ಚಿತ್ರಗಳನ್ನು ಬಿಡಿಸುವಾಗ, ‘ಅದನ್ನು ಚಿತ್ರಿಸುವ ಪ್ರಕ್ರಿಯೆ, ಅದರ ವಿವಿಧ ಹಂತಗಳು, ಅವುಗಳ ಕ್ರಮ’ ಮುಂತಾದವುಗಳ ಬಗ್ಗೆ ಲಭ್ಯವಿರುವ ಪುರಾತನ ಗ್ರಂಥಗಳಲ್ಲಿ ಹೇಳಿರುವ ಮಾಹಿತಿಯಂತೆ ಬಿಡಿಸಲಾಗುತ್ತದೆ.
೨. ಭಿತ್ತಿಚಿತ್ರಗಳ ಇತಿಹಾಸ
ಭಾರತದಲ್ಲಿ ಎಲ್ಲಕ್ಕಿಂತ ಪುರಾತನ ಭಿತ್ತಿಚಿತ್ರಗಳು ಮಧ್ಯಪ್ರದೇಶದಲ್ಲಿನ ಭೀಮಬೆಠಕಾ ಹಾಗೂ ಮಹಾರಾಷ್ಟ್ರದಲ್ಲಿರುವ ಅಜಂತಾ ಹಾಗೂ ಎಲೋರಾದಲ್ಲಿನ ಗುಹೆಗಳಲ್ಲಿ ಕಂಡು ಬರುತ್ತವೆ. ಕೇರಳದಲ್ಲಿ ಈ ಕಲೆಗೆ ರಾಜಾಶ್ರಯ ಸಿಕ್ಕಿತು ಹಾಗೂ ಗುರುಕುಲ ಪದ್ಧತಿಯ ಶಿಕ್ಷಣದಲ್ಲಿ ಈ ಕಲೆಯು ವಿಕಸಿತಗೊಂಡಿತು. ಕೇರಳದಲ್ಲಿನ ಭಿತ್ತಿಚಿತ್ರಗಳ ಇತಿಹಾಸವನ್ನು ನೋಡಿದರೆ, ಅತ್ಯಧಿಕ ಭಿತ್ತಿಚಿತ್ರ ಗಳನ್ನು ೧೫ ಹಾಗೂ ೧೯ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಭಿತ್ತಿಚಿತ್ರಗಳ ಸಂಖ್ಯೆಯ ವಿಚಾರ ಮಾಡುವಾಗ ಭಾರತದಲ್ಲಿ ರಾಜಸ್ಥಾನದ ಬಳಿಕ ಕೇರಳವು ಎರಡನೇ ಕ್ರಮಾಂಕದಲ್ಲಿದೆ. ಕೇರಳ ಶೈಲಿಯಲ್ಲಿನ ಎಲ್ಲಕ್ಕಿಂತ ಪ್ರಾಚೀನ ಭಿತ್ತಿಚಿತ್ರಗಳು ಪ್ರಸ್ತುತ ತಮಿಳುನಾಡಿನಲ್ಲಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಶ್ರೀ ಥಿರುನಂದಿಕರಾ ಗುಹೆಯಲ್ಲಿನ ದೇವಾಲಯಗಳಲ್ಲಿ ಕಂಡುಬರುತ್ತವೆ. ಕೇರಳದಲ್ಲಿನ ‘ಅಲಪ್ಪುಳಾ ಜಿಲ್ಲೆಯಲ್ಲಿನ ಕಾಯಮಕುಲಮ್ನಲ್ಲಿರುವ ಕೃಷ್ಣಪುರಮ್ ಅರಮನೆಯಲ್ಲಿ ‘ಗಜೇಂದ್ರ ಮೋಕ್ಷದ ಒಂದು ದೊಡ್ಡ ಭಿತ್ತಿಚಿತ್ರವಿದೆ. ಎರ್ನಾಕುಲಮ್ ಜಿಲ್ಲೆಯಲ್ಲಿನ ಸುಪ್ರಸಿದ್ಧ ‘ಮಟ್ಟೆನಚರೀ ಪ್ಯಾಲೆಸ್ನಲ್ಲಿ ರಾಮಾಯಣ ಹಾಗೂ ಭಾಗವತ ಇವುಗಳಲ್ಲಿನ ಪ್ರಸಂಗಗಳನ್ನು ತೋರಿಸುವ ವೈಶಿಷ್ಟ್ಯಪೂರ್ಣ ಭಿತ್ತಿಚಿತ್ರಗಳಿವೆ.
೩. ಭಿತ್ತಿಚಿತ್ರಗಳನ್ನು ತಯಾರಿಸುವ ಪ್ರಕ್ರಿಯೆ
ಭಿತ್ರಿಚಿತ್ರಕಲೆಯಲ್ಲಿ ಗೆರೆ ಹಾಕುವುದರಿಂದ ಹಿಡಿದು ಅಂತಿಮ ಚಿತ್ರವನ್ನು ತಯಾರಿಸುವ ವರೆಗಿನ ಸಂಪೂರ್ಣ ಪ್ರಕ್ರಿಯೆಯು ದೀರ್ಘ ಹಾಗೂ ಕಠಿಣವಿರುತ್ತದೆ. ಅದರಲ್ಲಿ ಸಾಮಾನ್ಯವಾಗಿ ಮುಂದಿನ ಹಂತಗಳಿರುತ್ತದೆ.
೩ ಅ. ಚಿತ್ರವನ್ನು ಬಿಡಿಸಲು ಯೋಗ್ಯವಾದ ಗೋಡೆಯನ್ನು ಆಯ್ಕೆ ಮಾಡುವುದು : ಈ ಪ್ರಕ್ರಿಯೆಯ ಪ್ರಾರಂಭವೆಂದರೆ, ಯಾವುದರ ಮೇಲೆ ಚಿತ್ರ ಬಿಡಿಸಬೇಕೋ ಆ ಗೋಡೆಯ ಆಯ್ಕೆ ಮಾಡಲಾಗುತ್ತದೆ. ನೇರವಾಗಿ ಸೂರ್ಯಪ್ರಕಾಶ ಬೀಳದಂತಹ, ಗಟ್ಟಿಮುಟ್ಟಾದ, ಸಮತಟ್ಟಾಗಿರುವ ಹಾಗೂ ಉಬ್ಬು ತಗ್ಗುಗಳಿಲ್ಲದಿರುವ, ಗಾಳಿಯಾಡುವ ಸ್ಥಳದ, ಕಡಿಮೆ ಆರ್ದ್ರತೆಯಿರುವ ಗೋಡೆಯನ್ನು ಆರಿಸುತ್ತಾರೆ. ಆರ್ದ್ರತೆ ಹೆಚ್ಚಾಗಿದ್ದರೆ ಭಿತ್ತಿಚಿತ್ರಗಳಲ್ಲಿ ಬಳಸಿರುವ ನೈಸರ್ಗಿಕ ಬಣ್ಣಗಳಿಗೆ ಮುಗ್ಗಲು ಹಿಡಿಯಬಹುದು.
೩ ಆ. ಗೋಡೆಯ ಮೇಲೆ ವಿಶೇಷ ಘಟಕಗಳ ಮಿಶ್ರಣದ ಲೇಪನವನ್ನು ನೀಡಿ ಅದರ ಮೇಲೆ ರೇಖೆಗಳಿಂದ ಚಿತ್ರವನ್ನು ಬಿಡಿಸುವುದು : ಆಯ್ಕೆ ಮಾಡಿದ ಗೋಡೆಯ ಮೇಲೆ ಸುಣ್ಣ, ತೆಂಗಿನ ಕಾಯಿಯ ನೀರು ಇತ್ಯಾದಿಗಳ ಮಿಶ್ರಣವನ್ನು ಮೆತ್ತಲಾಗುತ್ತದೆ. ಅನಂತರ ಗೋಡೆಯ ಮೇಲೆ ಚಿತ್ರದ ರೇಖೆಗಳನ್ನು ಬಿಡಿಸಲಾಗುತ್ತದೆ.
೩ ಇ. ಕೇವಲ ನೈಸರ್ಗಿಕ ಬಣ್ಣಗಳನ್ನು ಬಳಸಿ ಚಿತ್ರಗಳಿಗೆ ಬಣ್ಣ ಹಚ್ಚುವುದು : ಬಿಡಿಸಿದ ನಂತರ ಚಿತ್ರಗಳಿಗೆ ಬಣ್ಣವನ್ನು ಹಚ್ಚಲಾಗುತ್ತದೆ. ಬಣ್ಣ ಹಚ್ಚಲು ಬಳಸಲಾಗುವ ಕುಂಚ (ಬ್ರಶ್) ಹಾಗೂ ಬಣ್ಣ ಇವೆರಡೂ ನೈಸರ್ಗಿಕವಾಗಿರುತ್ತದೆ. ಅನುಭವಿ ತಜ್ಞ ವ್ಯಕ್ತಿಯು ವನಸ್ಪತಿಗಳ ಸಾರ, ಎಲೆಗಳು, ದುರ್ಲಭ ಮಣ್ಣು ಹಾಗೂ ಕಲ್ಲು ಇವುಗಳಿಂದ ವಿಶಿಷ್ಟ ಪದ್ಧತಿಯಲ್ಲಿ ಈ ಬಣ್ಣವನ್ನು ತಯಾರಿಸುತ್ತಾನೆ. ಕೆಂಪು, ಹಸಿರು, ಹಳದಿ, ನೀಲಿ, ಕಪ್ಪು ಹಾಗೂ ಬಿಳುಪು ಈ ಬಣ್ಣಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಕುಂಚ ಹಾಗೂ ಬಣ್ಣವನ್ನು ಯಾವುದರಿಂದ ತಯಾರಿಸುತ್ತಾರೆ, ಎಂಬುದು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ. ಟಿಪ್ಪಣಿ : ಈಗಿನ ಕಲಾವಿದರು ಮಾರುಕಟ್ಟೆಯಲ್ಲಿ ಸಿಗುವ ಲೇಖನಿಗಳನ್ನು ಬಳಸುತ್ತಾರೆ.
೪. ಭಿತ್ತಿಚಿತ್ರಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿನ ಕೆಲವು ವೈಶಿಷ್ಟ್ಯಗಳು
೪ ಅ. ದೇವತೆಯ ಧ್ಯಾನಮಂತ್ರದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವುದು : ಯಾವ ದೇವತೆಯ ಚಿತ್ರವನ್ನು ಬಿಡಿಸಲಿಕ್ಕಿದೆಯೋ, ಆ ದೇವತೆಯ ಮುಖಮಂಡಲದ ಮೇಲಿರುವ ಭಾವವು ವ್ಯವಸ್ಥಿತವಾಗಿ ಬರಬೇಕೆಂದು, ಅದೇ ರೀತಿ ಚಿತ್ರದಲ್ಲಿನ ಬಣ್ಣದ ಛಾಯೆ, ದೇವತೆಗಳು ಧರಿಸಿರುವ ಅಲಂಕಾರಗಳ ನಕ್ಷೆ, ವಿವಿಧ ಭಾವಮುದ್ರೆ ಇತ್ಯಾದಿ ಪ್ರಸಂಗಾನುರೂಪ ಯೋಗ್ಯವಿರಬೇಕೆಂದು, ಕಲಾವಿದರು ಆ ದೇವತೆಯ ಧ್ಯಾನಮಂತ್ರದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿ ಬಣ್ಣದ ಕೆಲಸ ಮಾಡುತ್ತಾರೆ.
೪ ಆ. ಕಲಾವಿದರು ಧಾರ್ಮಿಕ ಆಚಾರಗಳನ್ನು ಪಾಲಿಸುವುದು ಆವಶ್ಯಕವಾಗಿರುವುದು : ಚಿತ್ರವನ್ನು ಬಿಡಿಸುವಾಗ ನಿರ್ಧರಿಸಿದ ಧಾರ್ಮಿಕ ಆಚಾರಗಳ ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ವ್ರತಸ್ಥರಾಗಿರುವುದು, ಇದು ಕಲಾವಿದರಿಗಾಗಿ ಆವಶ್ಯಕವಿರುತ್ತದೆ.
೪ ಇ. ಭಿತ್ತಿಚಿತ್ರದಲ್ಲಿನ ವ್ಯಕ್ತಿರೇಖೆಗಳ ಬಣ್ಣವು ಅವರ ತ್ರಿಗುಣಾತ್ಮಕ ಪ್ರಕೃತಿಗನುಸಾರ ಇರುವುದು : ಭಿತ್ತಿಚಿತ್ರದಲ್ಲಿನ ವ್ಯಕ್ತಿರೇಖೆಗಳ ಬಣ್ಣವು ಆ ವ್ಯಕ್ತಿರೇಖೆಗಳ ತ್ರಿಗುಣಾತ್ಮಕ ಪ್ರಕೃತಿಗನುಸಾರ ಇರುತ್ತದೆ. ಸಾತ್ತ್ವಿಕ ಅಥವಾ ಆಧ್ಯಾತ್ಮಿಕ ವ್ಯಕ್ತಿರೇಖೆಯನ್ನು (ಉದಾ. ಶ್ರೀರಾಮ) ಹಸಿರು ಬಣ್ಣದ ಮಿಶ್ರಣಗಳಿಂದ ತುಂಬುತ್ತಾರೆ. ರಾಜಸಿಕ ವ್ಯಕ್ತಿರೇಖೆಯನ್ನು ಕೆಂಪು ಅಥವಾ ಬಂಗಾರದ ಬಣ್ಣದ ಮಿಶ್ರಣದಿಂದ ಹಚ್ಚುತ್ತಾರೆ. ತಾಮಸಿಕ ಅಥವಾ ಕೆಟ್ಟ ವ್ಯಕ್ತಿರೇಖೆಗಳನ್ನು (ಉದಾ. ರಾವಣ) ಕಪ್ಪು ಅಥವಾ ಬಿಳಿ ಬಣ್ಣದ ಮಿಶ್ರಣದಿಂದ ತುಂಬುತ್ತಾರೆ.
೫. ಕಾಲಾನುಸಾರ ಈ ಕಲೆಯಲ್ಲಾದ ಬದಲಾವಣೆಗಳು
ಹಿಂದೆ ಈ ಶೈಲಿಯಲ್ಲಿನ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸುತ್ತಿದ್ದರು; ಆದರೆ ಈಗ ಅದನ್ನು ಕಾಗದ, ಕ್ಯಾನ್ವಾಸ್, ಹೂಕುಂಡ ಇವುಗಳ ಮೇಲೆಯೂ ಬಿಡಿಸಲಾಗುತ್ತಿದೆ.
೬. ಕಣ್ಮರೆಯಾಗುತ್ತಿರುವ ಆದರೆ ಪ್ರವಾಸಿಗರನ್ನು ಆಕರ್ಷಿಸುವ ಭಿತ್ತಿಚಿತ್ರಕಲೆಯ ಭವಿಷ್ಯವು ಉಜ್ವಲವಾಗಿರುವುದು
ದೇಶವಿದೇಶಗಳಿಂದ ಕೇರಳಕ್ಕೆ ಬರುವ ಪ್ರವಾಸಿಗರಿಗೆ ಭಿತ್ತಿಚಿತ್ರಗಳ ಆಕರ್ಷಣೆಯ ಒಂದು ಮುಖ್ಯ ವಿಷಯವಾಗಿದೆ. ಈ ಕಲೆಯ ಸಂವರ್ಧನೆಗಾಗಿ ‘ವಾಸ್ತುವಿದ್ಯಾ ಗುರುಕುಲಮ್’ ಹಾಗೂ ಇತರ ಸಮವಿಚಾರಿ ಸಂಘಟನೆಗಳು ಹಾಗೂ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಸ್ವದೇಶಿ ಹಾಗೂ ವಿದೇಶಿ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹದಿಂದ ಕಣ್ಮರೆಯಾಗುತ್ತಿರುವ ಈ ಪ್ರಾಚೀನ ಕಲೆಯು ಈಗ ಸ್ಥಿರವಾಗಿದ್ದು ಭವಿಷ್ಯದಲ್ಲಿ ಅದು ವಿಕಾಸಗೊಳ್ಳುವುದೆಂಬುದು ಖಚಿತ.
೭. ಭಿತ್ತಿಚಿತ್ರಗಳನ್ನು ಯು.ಎ.ಎಸ್. (ಯುನಿವರ್ಸ್‌ಲ್ ಔರಾ ಸ್ಕ್ಯಾನರ್) ಎಂಬ ವೈಜ್ಞಾನಿಕ ಉಪಕರಣದ ಮೂಲಕ ಪರೀಕ್ಷಿಸುವುದು
೭ ಅ. ಯು.ಎ.ಎಸ್. ಉಪಕರಣದ ಪರಿಚಯ : ಈ ಉಪಕರಣವನ್ನು ‘ಔರಾ ಸ್ಕ್ಯಾನರ್’ ಎಂದು ಸಹ ಕರೆಯುತ್ತಾರೆ. ಈ ಉಪಕರಣದ ಮೂಲಕ ಘಟಕದ (ವಸ್ತು, ವಾಸ್ತು, ಪ್ರಾಣಿ ಹಾಗೂ ವ್ಯಕ್ತಿ ಇವುಗಳ) ಊರ್ಜೆ ಹಾಗೂ ಪ್ರಭಾವಲಯವನ್ನು ಅಳೆಯಲಾಗುತ್ತದೆ. ಈ ಉಪಕರಣವನ್ನು ತೆಲಂಗಾಣದ ಭಾಗ್ಯನಗರದಲ್ಲಿನ ಮಾಜಿ ಪರಮಾಣು ವಿಜ್ಞಾನಿ ಡಾ. ಮನ್ನಮ್ ಮೂರ್ತಿಯವರು ೨೦೦೫ ನೇ ಇಸವಿಯಲ್ಲಿ ವಿಕಸಿತಗೊಳಿಸಿದರು. ವಾಸ್ತುಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಪಶುವೈದ್ಯಕೀಯ ಶಾಸ್ತ್ರ ಹಾಗೂ ವೈದಿಕ ಶಾಸ್ತ್ರ ಇವುಗಳಲ್ಲಿ ಬರುವ ಅಡಚಣೆಗಳ ಮೂಲ ಕಾರಣವನ್ನು ಕಂಡು ಹಿಡಿಯಲು ಈ ಉಪಕರಣವನ್ನು ಬಳಸಬಹುದು, ಎಂದು ಅವರು ಹೇಳುತ್ತಾರೆ. (ಯು.ಎ.ಎಸ್ ಉಪಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ ಮಾಡಿ.)
೭ ಆ. ಭಿತ್ರಿಚಿತ್ರಗಳು ಹಾಗೂ ಭಿತ್ತಿಚಿತ್ರಕಲೆಯಲ್ಲಿ ಬಳಸಲಾಗುವ ಬಣ್ಣ, ಕುಂಚ ಇತ್ಯಾದಿ ನೈಸರ್ಗಿಕ ಘಟಕಗಳಲ್ಲಿ ಸಕಾರಾತ್ಮಕ ಊರ್ಜೆಯಿರುವುದು ಹಾಗೂ ಅವುಗಳ ಪ್ರಭಾವಲಯವು ತತ್ಸಮ ಸರ್ವಸಾಮಾನ್ಯ ವಸ್ತುಗಳಿಗೆ ಹೋಲಿಸಿದರೆ ಹೆಚ್ಚಾಗಿರುವುದು : ೨೧.೩.೨೦೧೯ ರಂದು ‘ವಾಸ್ತುವಿದ್ಯಾ ಗುರುಕುಲಮ್ ನಲ್ಲಿ ಕೆಲವು ಭಿತ್ತಿಚಿತ್ರಗಳ ಹಾಗೂ ಭಿತ್ತಿಚಿತ್ರಕಲೆಯಲ್ಲಿ ಬಳಸಲಾಗುವ ನೈಸರ್ಗಿಕ ಬಣ್ಣ ಹಾಗೂ ಕುಂಚ (ಬ್ರಶ್) ಗಳ ಯುನಿವರ್ಸಲ್ ಔರಾ ಸ್ಕ್ಯಾನರ್ ಉಪಕರಣದ ಮೂಲಕ ಪರಿಶೀಲಿಸಿದಾಗ ಸಿಕ್ಕಿದ ಅಳತೆಗಳ ನೋಂದಣಿಯನ್ನು ಈ ಕೆಳಗೆ ನೀಡಲಾಗಿದೆ.
ಮೇಲಿನ ನೋಂದಣಿಯನ್ನು ನೋಡಿದಾಗ ಭಿತ್ತಿಚಿತ್ರಗಳು, ಬಣ್ಣ ಹಾಗೂ ಕುಂಚ ಇತ್ಯಾದಿಗಳ ಪೈಕಿ ಯಾವುದರಲ್ಲಿಯೂ ನಕಾರಾತ್ಮಕ ಊರ್ಜೆಯು ಮೂಲದಲ್ಲಿಯೇ ಇಲ್ಲ. ಈ ಎಲ್ಲ ಘಟಕಗಳಲ್ಲಿ ಸಕಾರಾತ್ಮಕ ಊರ್ಜೆಯಿದೆ ಹಾಗೂ ಎಲ್ಲ ಘಟಕಗಳ ಒಟ್ಟು ಪ್ರಭಾವಳಿಯು ಸರ್ವಸಾಮಾನ್ಯ ವಸ್ತುಗಳ ಒಟ್ಟು ಪ್ರಭಾವಳಿಗಿಂತ (ಒಂದು ಮೀಟರ್‌ಗಿಂತ) ಹೆಚ್ಚಿದೆ. ನೈಸರ್ಗಿಕ ಬಣ್ಣಗಳಿಂದ ಪಾರಂಪರಿಕ ಪದ್ಧತಿಯಿಂದ ತಯಾರಿಸಲಾದ ಶ್ರೀವಿಷ್ಣುವಿನ ಭಿತ್ತಿಚಿತ್ರದ ಪ್ರಭಾವಳಿಯು ಕೃತಕ ಬಣ್ಣಗಳಿಂದ ತಯಾರಿಸಲಾದ ಶ್ರೀ ಗಣಪತಿಯ ಚಿತ್ರದ ಪ್ರಭಾವಳಿಗಿಂತ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ‘ಕೃತಕ ಘಟಕಗಳಿಗಿಂತ ನೈಸರ್ಗಿಕ ಘಟಕಗಳಲ್ಲಿ ಸಾತ್ತ್ವಿಕತೆಯಿರುತ್ತದೆ’. ಈ ಸಾತ್ತ್ವಿಕ ಕಲೆಯನ್ನು ಸಂರಕ್ಷಿಸುವ ಚಿತ್ರಕಾರನಲ್ಲಿಯೂ ಸಕಾರಾತ್ಮಕ ಸ್ಪಂದನಗಳಿದೆ, ಅದೇ ರೀತಿ ಈ ಕಲೆಯ ಶಿಕ್ಷಣವನ್ನು ನೀಡಲಾಗುವ ಸ್ಥಳದ ಮಣ್ಣಿನಲ್ಲಿಯೂ ಸಕಾರಾತ್ಮಕ ಸ್ಪಂದನಗಳು ದೊಡ್ಡ ಪ್ರಮಾಣದಲ್ಲಿದೆ, ಇದು ಸಹ ವೈಶಿಷ್ಟ್ಯಪೂರ್ಣವಾಗಿದೆ.
೮. ಭಿತ್ತಿಚಿತ್ರಗಳಲ್ಲಿ ಸಾತ್ತ್ವಿಕತೆ ಇರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ
‘ಭಿತ್ತಿಚಿತ್ರಗಳನ್ನು ಬಿಡಿಸುವುದು, ಇದು ಕೇವಲ ಒಂದು ಹವ್ಯಾಸವಾಗಿರದೇ, ಅದಕ್ಕೂ ಆಚೆಗೆ ಹೋಗಿ ಅದರಿಂದ ಆ ಕಲಾವಿದನ ಸಾಧನೆಯಾಗುತ್ತಿತ್ತು. ಸಾಧನೆಯೆಂದು ಮಾಡಿದ ಕೃತಿಗಳಲ್ಲಿ ಈಶ್ವರನ ಅಧಿಷ್ಠಾನವಿರುತ್ತದೆ. ಆದ್ದರಿಂದ ಇಂತಹ ಕಲಾಕೃತಿಗಳಲ್ಲಿ ತುಂಬಾ ಚೈತನ್ಯವು ನಿರ್ಮಾಣವಾಗುತ್ತದೆ. ಅದರ ಲಾಭ ಆ ಕಲಾಕೃತಿಯನ್ನು ತಯಾರಿಸುವ ಕಲಾವಿದನಿಗಷ್ಟೇ ಅಲ್ಲದೇ, ಆ ಕಲಾಕೃತಿಯನ್ನು ನೋಡುವವರಿಗೂ ಆಗುತ್ತದೆ. ಚೈತನ್ಯಯುಕ್ತ ಕಲಾಕೃತಿಯ ಕಡೆಗೆ ನೋಡಿ ಆನಂದವೆನಿಸುವುದು, ಭಾವಜಾಗೃತಿಯಾಗುವುದು, ಧ್ಯಾನ ತಗಲುವುದು, ಕಲಾಕೃತಿಯ ವಿಷಯವಿರುವ ದೇವತೆಯ ಅಸ್ತಿತ್ವದ ಅರಿವಾಗುವುದು ಇತ್ಯಾದಿ ಅನುಭೂತಿಗಳು ಬರುತ್ತವೆ. ‘ಭಿತ್ತಿಚಿತ್ರಗಳನ್ನು ಬಿಡಿಸುವುದು ಇದರಿಂದ ಕಲಾವಿದನ ಸಾಧನೆಯು ಹೇಗೆ ಆಗುತ್ತಿತ್ತು, ಎಂಬುದು ಮುಂದಿನ ಅಂಶಗಳಿಂದ ಗಮನಕ್ಕೆ ಬರುತ್ತದೆ.
೮ ಅ. ಕಲಾಕೃತಿಯ ನಿರ್ಮಾಣದಲ್ಲಿನ ಘಟಕಗಳು ಸಾತ್ತ್ವಿಕವಾಗಿರುವುದು
೮ ಆ. ಕಲಾವಿದನು ಧಾರ್ಮಿಕ ಆಚಾರಗಳ ಪಾಲನೆ ಮಾಡುವುದು
೮ ಇ. ಕಲಾಕೃತಿಯ ವಿಷಯವು ಸಾತ್ತ್ವಿಕವಿರುವುದು : ಅಧ್ಯಾತ್ಮಶಾಸ್ತ್ರ ಕ್ಕನುಸಾರ ಯಾರು ಯಾರ ಚಿಂತನೆ ಮಾಡುತ್ತಾರೋ, ಅವರ ಗುಣವು ಚಿಂತನೆ ಮಾಡುವವರಲ್ಲಿ ಹೆಚ್ಚಾಗತೊಡಗುತ್ತದೆ. ಕೇರಳ ಶೈಲಿಯಲ್ಲಿನ ಭಿತ್ತಿಚಿತ್ರಗಳ ವಿಷಯವು ಪ್ರಾಮುಖ್ಯವಾಗಿ ದೇವತೆಗಳು, ಸಂತರು, ಪುರಾಣಗಳಲ್ಲಿನ ಪ್ರಸಂಗಗಳು ಹೀಗೆ ಸಾತ್ತ್ವಿಕವಾಗಿದ್ದವು. ಇಂತಹ ಸಾತ್ತ್ವಿಕ ವಿಷಯಗಳ ಚಿತ್ರಗಳನ್ನು ಬಿಡಿಸುವಾಗ ‘ವಿಷಯಕ್ಕೆ ಸಂಬಂಧಿಸಿದ ದೇವತೆಯ ಧ್ಯಾನಮಂತ್ರದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವುದು, ಇದರಿಂದ ಸಾತ್ತ್ವಿಕ ವಿಷಯಗಳ ಮತ್ತು ದೇವತೆಯ ಸತತ ಚಿಂತನೆಯಾಗುತ್ತದೆ. ಇದು ಕಲಾವಿದನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗುತ್ತದೆ.
೯. ಭಾರತದ ಪ್ರಾಚೀನ ಕಲೆಗೆ ಅಧ್ಯಾತ್ಮದ ಬುನಾದಿ ಇರುವುದು
೧೦. ರಾಷ್ಟ್ರಪುರುಷ, ಗಣ್ಯ ವ್ಯಕ್ತಿಗಳು ಇತ್ಯಾದಿ ರಜಗುಣಯುಕ್ತ ವಿಷಯದ ಮೇಲೆ ಭಿತ್ತಿಚಿತ್ರಗಳು ಕಲಾವಿದರು ಹಾಗೂ ವೀಕ್ಷಿಸುವವರಿಗಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಲ್ಲ : ಕಾಲಾನುಸಾರ ಭಿತ್ತಿಚಿತ್ರಗಳ ವಿಷಯ ಬದಲಾಗುತ್ತಾ ಬಂದಿದೆ. ದೇವತೆ, ಸಂತರಿಗಿಂತ ರಾಷ್ಟ್ರಪುರುಷರು, ಗಣ್ಯವ್ಯಕ್ತಿಗಳು ಇತ್ಯಾದಿ ರಜಗುಣಪ್ರಧಾನ ವಿಷಯದ ಆಧಾರದ ಮೇಲೆ ಭಿತ್ತಿಚಿತ್ರವನ್ನು ಬಿಡಿಸುವ ರೂಢಿಯತ್ತ ಸಾಗುತ್ತಿರುವುದು ಕೆಲವು ಕಲಾವಿದರಲ್ಲಿ ಕಂಡು ಬಂದಿತು. ‘೮ ಇ ಅಂಶದಲ್ಲಿ ಹೇಳಿದಂತೆ ಕಲಾಕೃತಿಯ ವಿಷಯವು ಸಾತ್ತ್ವಿಕ ಇಲ್ಲದಿದ್ದರೆ ಕಲಾವಿದರಿಗೆ ಹಾಗೂ ನೋಡುಗರಿಗೆ ಆ ಕಲಾಕೃತಿಯಿಂದ ಆಧ್ಯಾತ್ಮಿಕದೃಷ್ಟಿಯಲ್ಲಿ ಲಾಭ ವಾಗುವುದಿಲ್ಲ. ಆದ್ದರಿಂದ ಇತ್ತೀಚಿನ ಕಲಾಕೃತಿಯನ್ನು ನೋಡಿದಾಗ ಆನಂದವಾಗುವುದು, ಭಾವಜಾಗೃತಿಯಾಗುವುದು ಇತ್ಯಾದಿ ಅನುಭೂತಿಗಳು ಬರುವುದಿಲ್ಲ.
– ಕು. ಪ್ರಿಯಾಂಕಾ ವಿಜಯ ಲೋಟಲಿಕರ ಹಾಗೂ ಶ್ರೀ. ರೂಪೇಶ ರೇಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ