ಭಾರತ ಸೇನೆಯ ಮೊದಲನೇ ಕಮಾಂಡರ್-ಇನ್-ಚೀಫ್ ಆಗಿದ್ದ ಕರಿಯಪ್ಪ ಪ್ರತಿ ತಿಂಗಳಿನ ೧೦ ದಿನಗಳನ್ನು ಕಾಶ್ಮೀರದಲ್ಲಿ ಕಳೆಯುತಿದ್ದರು. ಒಮ್ಮೆ ಉರಿ (ಬಾರಾಮುಲ್ಲಾದಲ್ಲಿ) ಯಲ್ಲಿ ಜೀಪಿನಲ್ಲಿ ಹೋಗುತ್ತಿರುವಾಗ ಅವರಿಗೆ ಬ್ರಿಗೇಡ್ ಕಮಾಂಡರ್ ಇವರು ‘ಸಮೀಪದಲ್ಲಿಯೇ ಶತ್ರುಗಳ ಗುಪ್ತಚರ ಕೇಂದ್ರವಿದೆ. ಆದ್ದರಿಂದ ಜೀಪಿನ ಮೇಲಿರುವ ಭಾರತೀಯ ಧ್ವಜವನ್ನು ಮತ್ತು ‘ಸ್ಟಾರ್ ಪ್ಲೇಟ್’ನ್ನು ತೆಗೆದಿಟ್ಟು ಪ್ರವಾಸ ಮಾಡಬೇಕು’ ಎಂದು ಹೇಳಿದರು; ಆದರೆ ಕರಿಯಪ್ಪರವರು ಅದನ್ನು ನಿರಾಕರಿಸಿದರು. ಅವರು ‘ಶತ್ರುಗಳ ಸೈನಿಕರು ಎಷ್ಟು ನಿಖರವಾಗಿ ಗುರಿಯಿಟ್ಟು ಗುಂಡುಗಳನ್ನು ಹಾರಿಸುತ್ತಾರೆ ಎಂಬುದನ್ನು ನೋಡೋಣ’, ಎಂದು ಹೇಳಿದರು.
ಒಮ್ಮೆ ಕರಿಯಪ್ಪ ಇವರಿಗೆ ಸೈನಿಕರ (ಸರಕಾರದ) ವಾಹನದಿಂದ ಶಾಲೆಯ ಮಕ್ಕಳು ಇಳಿಯುತ್ತಿರುವುದು ಕಾಣಿಸಿತು. ಅವರ ಶಾಲೆಯ ಬಸ್ ತಪ್ಪಿದ್ದರಿಂದ ಅಲ್ಲಿನ ಅಧಿಕಾರಿ ಅವರನ್ನು ತರಲು ಕಾರ್ಯಾಲಯದ ಸೈನಿಕರ ವಾಹನವನ್ನು ಕಳುಹಿಸಿದ್ದರು. ಕಾರ್ಯಾಲಯದ ವಾಹನವನ್ನು ಖಾಸಗಿ ಕೆಲಸಕ್ಕಾಗಿ ಉಪಯೋಗ ಮಾಡಿದುದರಿಂದ ಕರಿಯಪ್ಪನವರು ಸಿಟ್ಟಿಗೆದ್ದರು. ಅವರು ಆ ಅಧಿಕಾರಿಯ ವಿರುದ್ಧ ಶಿಸ್ತುಭಂಗ ಕ್ರಮತೆಗೆದುಕೊಳ್ಳಲು ಆದೇಶ ನೀಡಿದರು ಹಾಗೂ ಪುನಃ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂದು ಬೆಂಬೆತ್ತಿಕೊಂಡರು. ಆ ಅಧಿಕಾರಿಗೆ ಕೇವಲ ಗದರಿಸಿ ಬಿಡಲಾಗಿತ್ತು ಎಂಬುದು ಅವರಿಗೆ ತಿಳಿದಾಗ ಅವರು ಆ ಪ್ರವಾಸಕ್ಕೆ ಖರ್ಚಾದ ಪೆಟ್ರೋಲ್‌ನ ಹಣವನ್ನು ಸರಕಾರಕ್ಕೆ ಜಮೆ ಮಾಡಲು ಆದೇಶ ನೀಡಿದರು. ಇಂತಹ ಪ್ರಾಮಾಣಿಕತೆಯ ಆದರ್ಶವನ್ನು ಅವರು ಎಲ್ಲರ ಮುಂದಿಟ್ಟಿದ್ದಾರೆ.