ಧನತ್ರಯೋದಶಿಯ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆಯನ್ನು ಸಂಪಾದಿಸಿ !
೧. ಧನತ್ರಯೋದಶಿಯ ಮಹತ್ವ
ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿಯಂದು ‘ಧನತ್ರಯೋದಶಿ’ ಇದೆ. ‘ಧನ’ ಅಂದರೆ ಶುದ್ಧ ಲಕ್ಷ್ಮೀ ! ಮನುಷ್ಯನ ಪೋಷಣೆಯು ಸುಗಮವಾಗಲು ಸಹಾಯ ಮಾಡುವ ಧನದ (ಸಂಪತ್ತುಗಳ) ಪೂಜೆ ಈ ದಿನ ಮಾಡಲಾಗುತ್ತದೆ. ವ್ಯಾಪಾರಿ ಜನರ ದೃಷ್ಟಿಯಿಂದ ಧನತ್ರಯೋದಶಿಯಂದು ಹೊಸವರ್ಷವು ಆರಂಭವಾಗುವುದರಿಂದ ಅವರು ಈ ದಿನ ಕೋಶಾಗಾರದ ಪೂಜೆಯನ್ನು ಮಾಡುತ್ತಾರೆ. ಸತ್ಕಾರ್ಯಕ್ಕೆ ಧನ ಅರ್ಪಣೆ ಮಾಡುವುದು, ಇದೇ ಲಕ್ಷ್ಮೀಯ ನಿಜವಾದ ಪೂಜೆಯಾಗಿದೆ. ಧರ್ಮಶಾಸ್ತ್ರಕ್ಕನುಸಾರ ‘ಮನುಷ್ಯನು ತಾನು ಗಳಿಸಿದ ೧/೬ ಪಾಲು ಈಶ್ವರನ ಕಾರ್ಯಕ್ಕಾಗಿ ವಿನಿಯೋಗಿಸಬೇಕು’, ಎಂದು ಹೇಳಲಾಗುತ್ತದೆ. ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಪ್ರಭು ಕಾರ್ಯಕ್ಕಾಗಿ, ಅಂದರೆ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು. ಧನದ ವಿನಿಯೋಗವು ಸತ್ಕಾರ್ಯಕ್ಕಾಗಿ ಆಗುವುದರಿಂದ ಧನಲಕ್ಷ್ಮೀಯು ಲಕ್ಷ್ಮೀರೂಪದಿಂದ ಸದಾಕಾಲ ಜೊತೆಗೆ ಇರುವಳು !
೨. ಸತ್ಕಾರ್ಯಕ್ಕಾಗಿ, ಅಂದರೆ ಧರ್ಮಪ್ರಸಾರದ ಕಾರ್ಯಕ್ಕಾಗಿ ಧನದ ಉಪಯೋಗವಾಗಬೇಕು, ಅದಕ್ಕಾಗಿ ‘ಸತ್ಪಾತ್ರೆ ದಾನ’ ಮಾಡಿ !
ಸದ್ಯ ಧರ್ಮದ ಸ್ಥಿತಿ ಹದಗೆಟ್ಟಿದೆ. ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂಗಳಲ್ಲಿ ಧರ್ಮದ ಅಭಿಮಾನ ಇಲ್ಲವಾಗಿದೆ. ಆದುದರಿಂದ ಧರ್ಮದ ಪುನರ್ ಸ್ಥಾಪನೆಯ ಕಾರ್ಯ ಮಾಡುವುದು ಪ್ರಸ್ತುತ ಕಾಲದ ಪ್ರಭು ಕಾರ್ಯವಾಗಿದ್ದು ಅದಕ್ಕೆ ಆದ್ಯತೆ ನೀಡುವುದು ಆವಶ್ಯಕವಿದೆ. ಆದುದರಿಂದ ಧರ್ಮಪ್ರಸಾರ ಮಾಡುವ ಸಂತರು, ಹಾಗೆಯೇ ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಕಾರ್ಯ ಮಾಡುವ ಸಂಸ್ಥೆ ಅಥವಾ ಸಂಘಟನೆ ಇವುಗಳ ಕಾರ್ಯಕ್ಕಾಗಿ ದಾನ ಮಾಡುವುದು ಕಾಲಾನುಸಾರ ಎಲ್ಲಕ್ಕಿಂತ ಶ್ರೇಷ್ಠವಾದ ದಾನವಾಗಿದೆ. ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯು ಧರ್ಮಜಾಗೃತಿಯ ಕಾರ್ಯವನ್ನು ನಿರಪೇಕ್ಷವಾಗಿ ಮಾಡುತ್ತಿದೆ. ಆದ್ದರಿಂದ ಅರ್ಪಣೆದಾರರು ಸನಾತನ ಸಂಸ್ಥೆಗೆ ಮಾಡಿದ ದಾನದ(ಅರ್ಪಣೆಯ) ಉಪಯೋಗವು ಧರ್ಮದ ಪುನರ್‌ಸ್ಥಾಪನೆಗಾಗಿಯೇ ಆಗುತ್ತದೆ, ಎಂಬುದು ಖಚಿತವಾಗಿದೆ !
ಧನತ್ರಯೋದಶಿಯ ನಿಮಿತ್ತ ಧನವನ್ನು ದಾನ ಮಾಡಲು ಇಚ್ಛಿಸುವ ದಾನಿಗಳು ತಮ್ಮ ಮಾಹಿತಿಯನ್ನು ತಿಳಿಸಿರಿ
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – 7058885610
ವಿ. ಅಂಚೆ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401
https://www.sanatan.org/en/donate ಇಲ್ಲಿಯೂ ದಾನ (ಅರ್ಪಣೆ) ಮಾಡುವ ಸೌಲಭ್ಯವಿದೆ.
– ಶ್ರೀ. ವೀರೇಂದ್ರ ಮರಾಠೆ, ಕಾರ್ಯಕಾರಿ ವಿಶ್ವಸ್ಥರು, ಸನಾತನ ಸಂಸ್ಥೆ.