‘ಇತ್ತೀಚೆಗಷ್ಟೇ ಮಹಾರಾಷ್ಟ್ರ, ಕರ್ನಾಟಕ, ಕೇರಳ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನೆರೆಹಾವಳಿಯು ಭೀಕರ ರೂಪ ತಾಳಿತ್ತು. ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಈ ಆಪತ್ಕಾಲದ ಕುರಿತು ಮಹಾರಾಷ್ಟ್ರದ ಒಬ್ಬ ಮಹಾನ್ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿಯೇ ಬರೆದಿಟ್ಟಿದ್ದರು. ಈ ಭೀಕರ ಕಾಲದ ಕುರಿತು ಕಾವ್ಯಪಂಕ್ತಿಗಳ ಮೂಲಕ ಅವರು ಮಾಡಿರುವ ವರ್ಣನೆ ಯನ್ನು ಅವರ ‘ಚೈತನ್ಯಲಹರಿ’ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿಯ ಕೆಲವು ಆಯ್ದ ಕಾವ್ಯಪಂಕ್ತಿಗಳನ್ನು ಕನ್ನಡದಲ್ಲಿ ಅನುವಾದಿಸಿ ನೀಡುತ್ತಿದ್ದೇವೆ.
ಮಹಾಯುದ್ಧ, ಭೂಕಂಪ ಮತ್ತು ಜಲಪ್ರಳಯ ಆಗಲಿದೆ !
ನೆರೆಯಿಂದ ಭೂಮಿ ಕೊಚ್ಚಿ ಹೋಗಿ ಹೊಸದು ಮೇಲೆ ಬರಲಿದೆ ||
ಸಮುದ್ರ ದಡದಲ್ಲಿರುವ ಭಾರತದ ಭೂಮಿಯು ಜಲದಲ್ಲಿ ಮುಳುಗಲಿದೆ |
ಸುಮಾರು ೬ ಮೈಲಿ ದೂರದ ವರೆಗೆ ಜಲ ಮುಂದೆ ಬಂದು ಜಲಪ್ರಳಯವಾಗಲಿದೆ ||
ಕೃಷ್ಣೆಯ ಆಣೆಕಟ್ಟು ಎಲ್ಲವೂ ನಾಶವಾಗಲಿದೆ |
ಈ ಕಾರಣದಿಂದ ಕೃಷ್ಣೆಯ ಜಲವು ಆಕಾಶದೊಂದಿಗೆ ಹೋರಾಡುವುದು ||
ಶ್ರೀಶೈಲ ಮತ್ತು ಕನಕದುರ್ಗಾ ಜಲದಲ್ಲಿ ಮುಳುಗಲಿದೆ |
ಅಸಂಖ್ಯ ನಗರಗಳೂ ನೀರಿನಲ್ಲಿ ಮುಳುಗಲಿದೆ ||
ಅತಿಯಾದ ಉಷ್ಣತೆಯಿಂದ ಹಿಮ ಕರಗಿ ಜಲ ಕೆಳಗೆ ಇಳಿಯಲಿದೆ |
ಇದರಿಂದ ಅಪಾರ ಜೀವಹಾನಿ ಆಗಲಿದೆ ||
ವಿಂಧ್ಯಪರ್ವತಕ್ಕೆ ಹಿಮಾಲಯದ ಜಲ ಬಂದು ಅಪ್ಪಳಿಸಲಿದೆ |
ಆ ಕಾರಣದಿಂದ ಅನೇಕ ನಗರಗಳು ಜಲಮಯ ವಾಗಲಿದೆ ||
ನದಿಯ ಮೇಲಿನ ಆಣೆಕಟ್ಟು ಒಡೆದು ಹೋಗಲಿದೆ |
ಜಗತ್ತಿನಲ್ಲಿ ಈ ರೀತಿ ಜಲಪ್ರಳಯ ನೋಡಲು ಸಿಗಲಿದೆ ||
ಪ.ಪೂ. ಗಗನಗಿರಿ ಮಹಾರಾಜರು