ಅಪೌರುಷೇಯ ಹಿಂದೂ ಧರ್ಮದ ಮಹತ್ವವನ್ನು ಹೇಳುವುದು ವಾಸ್ತವದಲ್ಲಿ ಶಬ್ದಗಳ ಆಚೆಗಿನದ್ದಾಗಿದೆ. ‘ಈ ವಿಶ್ವವೇ ನನ್ನ ಮನೆ’ ಎನ್ನುವ ಮಹಾನ ಶಿಕ್ಷಣವನ್ನು ನೀಡುವ ಹಿಂದೂ ಧರ್ಮವು ಈ ಜಗತ್ತಿನ ಏಕೈಕ ಧರ್ಮವಾಗಿದೆ. ವ್ಯಕ್ತಿ, ಸಮಾಜ, ರಾಷ್ಟ್ರ ಮತ್ತು ಸಂಪೂರ್ಣ ಪೃಥ್ವಿಯ ಕಲ್ಯಾಣದ ಸರ್ವವ್ಯಾಪಿ ವಿಚಾರ ಇದರಲ್ಲಿ ಅಡಕವಾಗಿದೆ. ಇಂತಹ ಮಹಾನ ಸನಾತನ ವೈದಿಕ ಹಿಂದೂ ಧರ್ಮ ಮತ್ತು ಇತರ ಪಂಥಗಳಲ್ಲಿರುವ ವ್ಯತ್ಯಾಸವನ್ನು ಪುರೋಹಿತ ಶ್ರೀ. ಅಮರ ಜೋಶಿಯವರು ಮಂಡಿಸಿದ್ದಾರೆ. ಇಲ್ಲಿ ಯಾರ ಧಾರ್ಮಿಕ ಭಾವನೆಯನ್ನು ನೋಯಿಸುವ ಉದ್ದೇಶವಿಲ್ಲದೇ ವಸ್ತುನಿಷ್ಠ ವಿಚಾರವನ್ನು ಮಂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ ಎನ್ನುವುದನ್ನು ಓದುಗರು ಗಮನಿಸಬೇಕು.
ಇತರ ಪಂಥಗಳಲ್ಲಿರುವ ಆಚಾರ ಮತ್ತು ಕರ್ಮಕಾಂಡ | ಹಿಂದೂ ಧರ್ಮದ ಆಚಾರ ಮತ್ತು ಕರ್ಮಕಾಂಡ | |
೧. ಜನನದ ಬಳಿಕ ವ್ಯಕ್ತಿ ನಿರ್ದಿಷ್ಟ ಧರ್ಮದವನಾಗಲು ಕರ್ಮಕಾಂಡಗಳಿರುವುದು / ಇಲ್ಲದಿರುವುದು | ‘ಇತರ ಪಂಥೀಯರಲ್ಲಿ ಜನಿಸಿದ ಶಿಶು ಅದೇ ಪಂಥದವರಾಗಿರಬೇಕು’, ಎಂದು ಕೆಲವು ಧಾರ್ಮಿಕ ವಿಧಿಗಳನ್ನು ಮಾಡಬೇಕಾಗುತ್ತದೆ | ಪ್ರತಿಯೊಬ್ಬ ವ್ಯಕ್ತಿಯು ಜನ್ಮತಃ ಹಿಂದೂವೇ ಆಗಿರುವುದರಿಂದ ‘ಶಿಶು ಹಿಂದೂ ಆಗಿರಬೇಕೆಂದು’ ಯಾವುದೇ ಕರ್ಮಕಾಂಡಗಳು ಇಲ್ಲದಿರುವುದು. |
೨. ಸಾಧನೆ | ವಾರದಲ್ಲಿ ಕೇವಲ ಒಮ್ಮೆ ಪ್ರಾರ್ಥನಾ ಸ್ಥಳಕ್ಕೆ ಹೋಗುವುದು ಅಥವಾ ಕೇವಲ ಧಾರ್ಮಿಕ ಗ್ರಂಥಗಳನ್ನು ಓದುವುದು | ಪ್ರತಿದಿನ ಪೂಜೆ, ಪಂಚಮಹಾಯಜ್ಞ ಇತ್ಯಾದಿ ಮಾಡಲು ಹೇಳಿರುವುದು |
೩. ಸ್ನಾನದ ವಿಷಯದಲ್ಲಿ ಆಚಾರಧರ್ಮ | ನದಿ ಮತ್ತು ಸಮುದ್ರಗಳಿಗೆ ಮಹತ್ವ ಇಲ್ಲದಿರುವುದು, ಪ್ರತಿದಿನ ಸ್ನಾನವನ್ನು ಬಾತ್‌ಟಬ್‌ನಲ್ಲಿ ಮತ್ತು ಧಾರ್ಮಿಕ ವಿಧಿಗಳನ್ನು ಕೊಳದಲ್ಲಿ ಮಾಡುವುದು. | ಆಚಾರಗಳಲ್ಲಿ ಹರಿಯುವ ನೀರಿಗೆ ಮಹತ್ವ ನೀಡಿರುವುದರಿಂದ ನದಿಸ್ನಾನ, ಸಮುದ್ರಸ್ನಾನ ಇತ್ಯಾದಿ ಆಚಾರಧರ್ಮಗಳಿರುವುದು. |
೪. ಜನಿಸುವ ಪೂರ್ವದಿಂದ ಮೃತ್ಯುವಿನವರೆಗಿನ ಸಂಸ್ಕಾರಗಳು | ಸಂಸ್ಕಾರ ಆಗದಿರುವುದು. | ಹದಿನಾರು ಸಂಸ್ಕಾರ ಮಾಡುತ್ತಾರೆ. (ಟಿಪ್ಪಣಿ ೧) |
೫. ಮರಣೋತ್ತರ ವಿಧಿ | ದೇಹವನ್ನು ಹೂಳುವುದರಿಂದ ಶರೀರದಲ್ಲಿರುವ ರಜ-ತಮಗಳು ಉಳಿದುಕೊಂಡು ಪೃಥ್ವಿಯ ಮೇಲಿನ ರಜ-ತಮಗಳಲ್ಲಿ ವೃದ್ಧಿಯಾಗುತ್ತದೆ. ಲಿಂಗದೇಹ ಭೂಲೋಕದಲ್ಲಿ ಸಿಲುಕಿರುವುದರಿಂದ ಸಂಬಂಧಿಗಳಿಗೆ ಪಿತೃದೋಷ ತಗಲುವುದು. | ‘ಮೃತ್ಯುವಿನ ಬಳಿಕ ಮುಂದಿನ ಲೋಕ ಗಳಿಗೆ ಹೋಗುವ ಮಾರ್ಗ ಸುಖವಾಗ ಬೇಕು’ ಎಂದು ಆಳವಾದ ಅಧ್ಯಯನದೊಂದಿಗೆ ರಚಿಸಲಾಗಿರುವ ಔರ್ಧ್ವ ದೇಹಿಕ ವಿಧಿಯನ್ನು ಮಾಡಲಾಗುವುದು. |
೬. ಮರಣೋತ್ತರ ವಿಧಿಯ ಸಮಯದಲ್ಲಿ ಉಪಯೋಗಿಸಲಾಗುವ ಬಟ್ಟೆಗಳ ಬಣ್ಣ | ವ್ಯಕ್ತಿಯ ಮೃತ್ಯುವಿನ ಬಳಿಕ ಕಾರ್ಯಕ್ರಮಗಳಿಗೆ ಕಪ್ಪು ಬಟ್ಟೆ ಹಾಕಿ ಹೋಗುವುದು | ವಿಧಿಯನ್ನು ಮಾಡುವಾಗ ಮತ್ತು ಅಂತಿಮಯಾತ್ರೆಯ ಸಮಯದಲ್ಲಿ ಬಿಳಿ ವಸ್ತ್ರವನ್ನು ಉಪಯೋಗಿಸುವುದು. (ಟಿಪ್ಪಣಿ ೨) |
೭. ಪಿತೃಗಳ ಮುಂದಿನ ಲೋಕಗಳಿಗೆ ಶೀಘ್ರಗತಿಯಲ್ಲಿ ಪ್ರಯಾಣ ಮಾಡಬೇಕು ಎಂದು ಕೈಗೊಳ್ಳುವ ವಿಧಿಗಳು | ಇತರ ಪಂಥಗಳಲ್ಲಿ ವರ್ಷಕ್ಕೊಮ್ಮೆ ವ್ಯಕ್ತಿ ಮರಣ ಹೊಂದಿದ ದಿನಾಂಕದಂದು ಸ್ಮಶಾನ ಭೂಮಿಗೆ ಹೋಗಿ ಅವನನ್ನು ನೆನಪಿಸುತ್ತಾರೆ | ಅಮಾವಾಸ್ಯೆ, ಹುಣ್ಣಿಮೆ ಮತ್ತು ಮಹಾಲಯ ಸಮಯದಲ್ಲಿ ಮೃತ ವ್ಯಕ್ತಿಯ ತಿಥಿಯ ದಿನದಂದು ಶ್ರಾದ್ಧವನ್ನು ಮಾಡುವುದು. |
೮. ವಿವಾಹವಿಧಿ | ವಿವಾಹವಿಧಿ ಸ್ವಲ್ಪದರಲ್ಲಿ ಮಾಡುವುದು | ಹಿಂದೂ ಧರ್ಮದಲ್ಲಿ ‘ವಿವಾಹ’ವು ಒಂದು ಸಂಸ್ಕಾರವಾಗಿರುವುದು (ಟಿಪ್ಪಣಿ ೩) |
೯. ಕುಟುಂಬದಲ್ಲಿ ಜನನ ಅಥವಾ ಮರಣವಾದರೆ ಪಾಲಿಸುವ ಪುರುಡು ಸೂತಕ | ಕೇವಲ ಆನಂದ ಅಥವಾ ಶೋಕವನ್ನು ವ್ಯಕ್ತಪಡಿಸಲಾಗುತ್ತದೆ. | ಸಂಬಂಧಿಕರಲ್ಲಿ ರಜ ಮತ್ತು ತಮ ವೃದ್ಧಿಸುವುದರಿಂದ ಪುರುಡು ಅಥವಾ ಸೂತಕ ಪಾಲಿಸುವುದು. |
೧೦. ಈಶ್ವರಪ್ರಾಪ್ತಿ | ಕರ್ಮಕಾಂಡ ಇಲ್ಲದಿರುವುದು, ಈಶ್ವರಪ್ರಾಪ್ತಿಯ ಸಂಕಲ್ಪನೆ ಕೇವಲ ಸ್ವರ್ಗದ ವರೆಗೆ ಮಾತ್ರ ಸೀಮಿತ | ಕರ್ಮಕಾಂಡಕ್ಕನುಗುಣವಾಗಿ ಸಾಧನೆಯಾಗಿ ಈಶ್ವರಪ್ರಾಪ್ತಿಯಾಗಲು ಸಾಧ್ಯವಾಗುವುದು |
೧೧. ಮನುಷ್ಯ ಅಯೋಗ್ಯ ಕರ್ಮದಿಂದ ವಿಮುಖವಾಗುವುದು/ಆಗದಿರುವುದು | ಒಂದು ಪಂಥದಲ್ಲಿ ‘ಅಯೋಗ್ಯ ಕರ್ಮ ಮಾಡಿದರೆ ಧಾರ್ಮಿಕ ವ್ಯಕ್ತಿಯೆದುರಿಗೆ ಒಪ್ಪಿಕೊಳ್ಳುವುದರಿಂದ ಪಾಪ ಇಲ್ಲವಾಗುತ್ತದೆ’ ಎನ್ನುವ ತಿಳುವಳಿಕೆಯಿದೆ, ಇದರಿಂದ ಮನುಷ್ಯ ಅಯೋಗ್ಯ ಕರ್ಮದಿಂದ ವಿಮುಖನಾಗುವುದಿಲ್ಲ. | ಕರ್ಮಕಾಂಡದ ಅಥವಾ ಆಚಾರಧರ್ಮದ ಪಾಲನೆಯನ್ನು ಮಾಡದಿದ್ದರೆ ಅದರ ಪಾಪ ತಗುಲಿ ಜನ್ಮಜನ್ಮಾಂತರದ ದೋಷ ತಗಲುತ್ತದೆ. ಅದನ್ನು ದೂರಗೊಳಿಸಲು ಕಠಿಣ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕಾಗುತ್ತದೆ ಇದರಿಂದ ಹಿಂದೂಗಳು ಪಾಪಪ್ರಜ್ಞೆಯುಳ್ಳವರಾಗಿದ್ದಾರೆ. |
೧೨. ಪ್ರತಿಯೊಂದು ಕರ್ಮಕ್ಕನುಸಾರ ಅಗ್ನಿಗೆ ವಿವಿಧ ಹೆಸರುಗಳಿರುವುದು/ ಇಲ್ಲದಿರುವುದು | ಇತರ ಪಂಥಗಳಲ್ಲಿ ಅಗ್ನಿಗೆ ‘ಅಗ್ನಿ’ ಹೆಸರು ಹೊರತುಪಡಿಸಿ ಇತರ ಶಬ್ದಗಳಿಲ್ಲದಿರುವುದು (ಪ್ರತಿಯೊಂದು ಭಾಷೆಯಂತೆ ಹೆಸರುಗಳಿವೆ.) | ಹಿಂದೂ ಧರ್ಮದಲ್ಲಿ ಯಜ್ಞ ಇತ್ಯಾದಿಗಳಿಗಾಗಿ ಯಾವ ಅಗ್ನಿಯನ್ನು ಪ್ರಜ್ಞಲಿತಗೊಳಿಸಲಾಗುತ್ತದೆಯೋ, ಅದಕ್ಕೆ ಪ್ರತಿಯೊಂದು ಕರ್ಮಾನುಸಾರ ವಿವಿಧ ಹೆಸರುಗಳಿರುವುದು. (ಟಿಪ್ಪಣಿ ೪) |
ಟಿಪ್ಪಣಿ ೧ : ಮನುಷ್ಯದೇಹದ ಉತ್ತಮ ವಿಕಾಸ ಮತ್ತು ದೋಷಗಳ ನಿವಾರಣೆಗಳಿಗಾಗಿ ಜನಿಸುವ ಮೊದಲಿನಿಂದಲೂ ಮೃತ್ಯುವಿನವರೆಗೆ ಗರ್ಭದಾನ ಇತ್ಯಾದಿ.
ಟಿಪ್ಪಣಿ ೨ : ಮೃತ್ಯುವಿನ ಸಮಯದಲ್ಲಿ ವಾತಾವರಣದಲ್ಲಿ ವೃದ್ಧಿಸುವ ತಮೋಗುಣಗಳಿಂದ ತೊಂದರೆಯಾಗಬಾರದು, ಎಂದು ವಿಧಿಗಳನ್ನು ಮಾಡುವಾಗ ಮತ್ತು ಅಂತಿಮಯಾತ್ರೆಯ ಸಮಯದಲ್ಲಿ ಬಿಳಿ ವಸ್ತ್ರಗಳನ್ನು ಉಪಯೋಗಿಸುವುದು ಮತ್ತು ವಿಧಿ ಮಾಡುವವರು ಮುಂಡನ ಮಾಡಿಕೊಳ್ಳುವುದು.
ಟಿಪ್ಪಣಿ ೩ : ಹಿಂದೂ ಧರ್ಮದಲ್ಲಿ ವಿವಾಹ ಒಂದು ಸಂಸ್ಕಾರವಿರುವುದು, ಅದರಲ್ಲಿ ವಧು ಮತ್ತು ವರನನ್ನು ಅವರ ಮನಸ್ಸು ಒಂದಾಗಲು ವಿಶಿಷ್ಟಮಂತ್ರಗಳಿರುವುದು, ವಿವಾಹವಿಧಿಯು ದೇವರು, ಅಗ್ನಿ ಮತ್ತು ಬ್ರಾಹ್ಮಣ ಇವರ ಸಾಕ್ಷಿಯಿಂದ ಆಗುತ್ತಿರುವುದು.
ಟಿಪ್ಪಣಿ ೪ : ಉದಾ. ವಿವಾಹಕ್ಕಾಗಿ ಯೋಜಕ ಅಗ್ನಿ, ವೈಶ್ವದೇವರಿಗಾಗಿ ರುಕ್ಮಕ ಅಗ್ನಿ, ಎಲ್ಲ ಶಾಂತಿ ಕರ್ಮಕ್ಕಾಗಿ ವರದ ಅಗ್ನಿ, ಅಂತಿಮಸಂಸ್ಕಾರಕ್ಕಾಗಿ ಕ್ರವ್ಯಾದ ಹೆಸರಿನ ಅಗ್ನಿ (ಕ್ರವ್ಯಾದ ಎಂದರೆ ಮಾಂಸ ಭಕ್ಷಿಸುವವನು) ಈ ರೀತಿ ಪ್ರತಿಯೊಂದು ಕರ್ಮಕ್ಕಾಗಿ ಆವಶ್ಯಕ ತತ್ತ್ವಕ್ಕನುಸಾರ ಅಗ್ನಿಯ ಹೆಸರುಗಳಿರುವುದು (ಇದರಿಂದ ‘ಹಿಂದೂ ಧರ್ಮ ಎಷ್ಟು ಪರಿಪೂರ್ಣವಾಗಿದೆ’, ಎನ್ನುವುದು ಗಮನಕ್ಕೆ ಬರುತ್ತದೆ. ಯಾವ ರೀತಿ ಮಾನವರ ಹೆಸರು ಇರುವುದೋ ಅದೇ ರೀತಿ ಅಗ್ನಿಯ ಹೆಸರುಗಳೂ ಇವೆ)
ಮೇಲಿನ ಕೋಷ್ಟಕದಿಂದ ಹಿಂದೂ ಧರ್ಮದಲ್ಲಿರುವ ಕರ್ಮಕಾಂಡ ಮತ್ತು ಆಚಾರಧರ್ಮಗಳ ತುಲನೆಯಲ್ಲಿ ಇತರ ಪಂಥದಲ್ಲಿ ಜ್ಞಾನ ಮತ್ತು ಆಚರಣೆ ಶಿಶುವಿಹಾರದಂತೆ ಬಹುತೇಕ ನಗಣ್ಯವೇ ಆಗಿದೆ. ಹಿಂದೂ ಧರ್ಮದಿಂದಲೇ ಉಪಪಂಥವೆಂದು ಉದಯಿಸಿರುವ ಬೌದ್ಧ, ಜೈನ ಮತ್ತು ಸಿಖ್ಖರು ಈ ಸಂಪ್ರದಾಯದಲ್ಲಿ ಕೆಲವು ಪ್ರಮಾಣದಲ್ಲಿ ಕರ್ಮಕಾಂಡ ಮತ್ತು ಆಚಾರಗಳ ಸ್ಥಾನವಿದೆ. ಆದರೆ ಅವರು ಹಿಂದೂ ಧರ್ಮದಲ್ಲಿರುವ ವೇದಗಳ ಪ್ರಮಾಣವನ್ನು ನಿರಾಕರಿಸಿ, ವ್ಯಕ್ತಿನಿಷ್ಠವಾಗಿರುವುದರಿಂದ ಕರ್ಮಕಾಂಡ ಮತ್ತು ಆಚಾರಧರ್ಮದ ಮೂಲಕ ಈಶ್ವರಪ್ರಾಪ್ತಿಯಾಗುವಲ್ಲಿ ಒಂದು ಕೊರತೆ ಬಂದಿದೆ. ಇದರಿಂದಲೇ ಅನಾದಿ ಮತ್ತು ಅಪೌರುಷೇಯವಾದಂತಹ ಹಿಂದೂ ಧರ್ಮದ ಮಹತ್ವ ಗಮನಕ್ಕೆ ಬರುತ್ತದೆ.
ಈಶ್ವರನ ಕೃಪೆಯಿಂದ ಮೇಲಿನ ಅಂಶಗಳ ಸಂಕಲನ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಶ್ರೀ. ಅಮರ ಜೋಶಿ, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ನವೆಂಬರ್ ೨೦೧೭)