ವಿವಾಹ ಸಂಸ್ಕಾರದಿಂದ ವಧು-ವರರೊಂದಿಗೆ ಉಪಸ್ಥಿತರಿಗೂ ಆನಂದ ಪ್ರಾಪ್ತಿಯಾಗುವಂತೆ ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.
೧. ಮದುವೆಯ ಮಂಟಪದಲ್ಲಿ ಎಲ್ಲರಿಗೂ ಕಾಣಿಸುವಂತಹ ಒಂದು ಜಾಗವನ್ನು ಆರಿಸಿ, ಅದನ್ನು ಹೂವುಗಳಿಂದ ಅಲಂಕರಿಸಿ ಅಲ್ಲಿ ಶ್ರೀ ಗಣಪತಿ, ಕುಲದೇವತೆ, ಉಪಾಸ್ಯದೇವತೆ ಮತ್ತು ಗುರುಪ್ರಾಪ್ತಿಯಾಗಿದ್ದಲ್ಲಿ ಗುರುಗಳ ಚಿತ್ರ / ಛಾಯಾಚಿತ್ರವನ್ನು ಇಟ್ಟು ಅವರ ಪೂಜೆ ಮಾಡಬೇಕು. ಆ ಸ್ಥಳದಲ್ಲಿ ಅಖಂಡವಾಗಿ ದೀಪವನ್ನು ಉರಿಸಿಡಬೇಕು.
೨. ವಧು-ವರ ಮತ್ತು ಅವರ ಕುಟುಂಬದವರು, ಆಪ್ತೇಷ್ಟರು, ಅತಿಥಿಗಳು ಮದುವೆಗೆ ಬರುವಾಗ ಪುರುಷರು ಜುಬ್ಬಾ ಹಾಗು ಧೋತಿ/ಪಾಯಜಾಮಾ ಮತ್ತು ಮಹಿಳೆಯರು ಆರು ಗಜದ ಅಥವಾ ಒಂಬತ್ತು ಗಜದ ಸೀರೆಯನ್ನುಡಬೇಕು.
೩. ವಿವಾಹದ ಸ್ಥಳದಲ್ಲಿ ‘ಬ್ಯಾಂಡ್’, ಚಲನಚಿತ್ರಗಳಲ್ಲಿನ ತಾಮಸಿಕ ಅಥವಾ ಅಳುಬುರುಕ ಗೀತೆಗಳನ್ನು ಹಾಕುವುದಕ್ಕಿಂತ ಶೆಹನಾಯಿ ವಾದನ, ಸಾತ್ತ್ವಿಕ ಭಜನೆ ಇತ್ಯಾದಿಗಳನ್ನು ಹಾಕಿ.
೪. ವಿವಾಹ ಸಂಸ್ಕಾರಕ್ಕೆ ಬಂದವರೆಲ್ಲರಿಗೂ ಕುಂಕುಮದ ತಿಲಕವನ್ನು ಹಚ್ಚಬೇಕು.
೫. ವಿವಾಹದಲ್ಲಿನ ವಿಧಿಗಳನ್ನು ಮುಗಿಸಿದಂತೆ (ಗಡಿಬಿಡಿಯಿಂದ) ಮಾಡದೇ, ಅಥವಾ ಈ ರೀತಿ ಮಾಡಲು ಪುರೋಹಿತರನ್ನು ಹೇಳಬೇಡಿ, ವಿಧಿಗಳನ್ನು ಧರ್ಮಶಾಸ್ತ್ರಕ್ಕನುಸಾರ ಅಚ್ಚುಕಟ್ಟಾಗಿ ಮಾಡಿರಿ.
೬. ಮಂಗಲಾಷ್ಟಕಗಳನ್ನು ಹೇಳುವಾಗ ವಧೂ-ವರರ ಮೇಲೆ ಅಕ್ಷತೆಗಳನ್ನು ಹಾಕಬೇಡಿರಿ. ವಧೂ-ವರರು ಪರಸ್ಪರ ಪುಷ್ಪಹಾರ ವನ್ನು ಹಾಕಿದ ನಂತರ ಅವರ ಹತ್ತಿರ ಹೋಗಿ ಅವರ ಮಸ್ತಕದ ಮೇಲೆ ಅಕ್ಷತೆಗಳನ್ನು ಹಾಕಿರಿ.
೭. ವಧು-ವರರಿಗೆ ಶುಭಾಶಯಗಳನ್ನು ಕೊಡುವಾಗ ಎಲ್ಲರೂ ಪಾದರಕ್ಷೆಗಳನ್ನು ತೆಗೆದಿಡಬೇಕು.
೮. ವಧು-ವರರಿಗೆ ಶುಭಾಶಯಗಳನ್ನು ಕೊಡುವಾಗ ಹಸ್ತಲಾಘವ (ಶೇಕ್‌ಹ್ಯಾಂಡ್) ಮಾಡದೇ ಕೈ ಜೋಡಿಸಿ ನಮಸ್ಕಾರ ಮಾಡಬೇಕು.
೯. ವಿವಹ ವಿಧಿಗಳು ನಡೆಯುತ್ತಿರುವಾಗ ಆಯಾ ವಿಧಿಯ ಅರ್ಥ ಮತ್ತು ಮಹತ್ವವನ್ನು ಉಪಸ್ಥಿತರಿಗೆ ತಿಳಿಸಿ ಹೇಳಲು ಪುರೋಹಿತರಿಗೇ ಹೇಳಬೇಕು
೧೦. ಯಾವುದೇ ಧಾರ್ಮಿಕ ಕಾರ್ಯದ ಸಮಯದಲ್ಲಿ ಗಲಾಟೆ ಮಾಡುವುದು ಅಯೋಗ್ಯವಾಗಿದೆ, ಆದುದರಿಂದ ವಿವಹ ನಡೆಯುತ್ತಿರುವಾಗ ಗಲಾಟೆ ಆಗದ ಹಾಗೆ ಕುಟುಂಬದವರು, ಸಂಬಂಧಿಕರು, ಉಪಸ್ಥಿತರೆಲ್ಲರೂ ದಕ್ಷತೆ ವಹಿಸಬೇಕು.
೧೧. ಅತಿ ಎಣ್ಣೆಯುಕ್ತ, ಖಾರ, ಮಸಾಲೆ ಹೆಚ್ಚಿರುವ ಪದಾರ್ಥಗಳು, ಬ್ರೆಡ್, ಕೃತಕ ತಂಪು ಪಾನೀಯಗಳಂತಹ ತಾಮಸಿಕ ಪದಾರ್ಥಗಳನ್ನು ಭೋಜನದಲ್ಲಿ ಇಡಬೇಡಿ. ಇದರ ಬದಲು ಅನ್ನ- ತೊವ್ವೆ-ತುಪ್ಪ, ಕೋಸಂಬರಿ, ಲಾಡು ಇವುಗಳಂತಹ ಸಾತ್ತ್ವಿಕ ಪದಾರ್ಥಗಳನ್ನಿಡಿ.
೧೨. ಪಾಶ್ಚಾತ್ಯ ರೂಢಿಯನ್ನು ತೋರಿಸುವ ಸ್ವಸಹಾಯ- ಭೋಜನ (ಬಫೆ) ಪದ್ಧತಿಯಿರದೇ, ಪಾರಂಪರಿಕ ಭಾರತೀಯ ಪದ್ಧತಿಯಿರಬೇಕು.
೧೩. ಅನ್ನವು ಪೂರ್ಣಬ್ರಹ್ಮವಾಗಿರುವುದರಿಂದ ಆಹಾರ ಪದಾರ್ಥಗಳನ್ನು ತಟ್ಟೆಯಲ್ಲಿ ಬಿಡುವಷ್ಟು ಬಡಿಸಬೇಡಿರಿ ಅಥವಾ ಬಡಿಸಿಕೊಳ್ಳಬೇಡಿರಿ.
೧೪. ಹಾರ ಹಾಕುವಾಗ ವಧು-ವರರನ್ನು ಮೇಲೆತ್ತುವುದು, ವಧು-ವರನನ್ನು ತಳ್ಳಾಡುವುದು ಇತ್ಯಾದಿ ಅಪಪ್ರಕಾರಗಳು ನಡೆಯದಂತೆ ಕಾಳಜಿ ವಹಿಸಿ.
೧೫. ವಿವಾಹದ ಸಮಯದಲ್ಲಿ ಮತ್ತು ನಂತರ ದಿಬ್ಬಣದ ಮೆರವಣಿಗೆಯಲ್ಲಿಯೂ ಪಟಾಕಿಗಳನ್ನು ಸಿಡಿಸಬೇಡಿ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಕಿರುಗ್ರಂಥ ‘ವಿವಾಹಸಂಸ್ಕಾರ’)
ಎಲ್ಲ ಲೇಖನಗಳು ಅರ್ಥಪೂರ್ಣ ಹಾಗೂ ಸನಾತನದ ಸೊಗಡನ್ನು ಸಾರಿ ಸಾರಿ ಹೇಳುತ್ತೆ, ,ಜ್ಞಾನ ಕ್ಕೆ ಮೂಲ ವೈರಾಗ್ಯ, ವೈರಾಗ್ಯಕ್ಕೆ ಕಾಮಸಾಧನೆ, ಕಾಮಕ್ಕೆ ಪ್ರೇಮ ಪ್ರತಿಯೊಂದು ನಮ್ಮೊಳಗೆ ಇರೋದೇ ಅದನ್ನ ಬಿಡಬೇಕು ಬಿಡದೇನೆ ಇರಲುಬೇಕು… ಸಕಲವು ಶ್ರದ್ಧೆ ಭಕ್ತಿ ನಂಬಿಕೆ ಇಂದ ಕೂಡಿ ಮಾಡಿದಾಗ ಅದು ನಿಜ ಸಾಧನೆ… ಸಕಲ ಲೇಖನವನ್ನು ಕೊಟ್ಟ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು….