೧. ಮನುಷ್ಯನ ಅವಯವಗಳು ತ್ರಿಮಿತಿ ಆಗಿರುವುದರಿಂದ ಗ್ರಂಥದ ಚಿತ್ರಗಳಲ್ಲಿ ಬೆರಳು ಮತ್ತು ಮಣಿಗಂಟಿನ ಮೇಲಿನ ಮದರಂಗಿಯ ಅಡ್ಡ ರೇಖೆಗಳನ್ನು ವೃತ್ತಾಕಾರವಾಗಿ ತೋರಿಸಲಾಗಿದೆ. ಪ್ರತ್ಯಕ್ಷದಲ್ಲಿ ಕೈ-ಕಾಲುಗಳ ಮೇಲೆ ವಿನ್ಯಾಸಗಳನ್ನು ಬಿಡಿಸುವಾಗ ಅವುಗಳನ್ನು ನೇರವಾಗಿ ಬಿಡಿಸಬೇಕು.
೨. ಇಲ್ಲಿ ಕೊಟ್ಟಿರುವ ಕೈ-ಕಾಲುಗಳ ಮೇಲಿನ ಮದರಂಗಿಯ ಸಂಪೂರ್ಣ ವಿನ್ಯಾಸ (ಆಕಾರ), ಹಾಗೆಯೇ ವಿನ್ಯಾಸಗಳಲ್ಲಿರುವ ಕೆಲವು ಆಕೃತಿಗಳಲ್ಲಿನ ಸ್ವತಂತ್ರ ಚಿತ್ರಗಳನ್ನು ಸಾಮಾನ್ಯವಾಗಿ ಎಲ್ಲ ಸ್ತ್ರೀಯರ ಕೈ-ಕಾಲುಗಳ ಆಕಾರಗಳನ್ನು ಗಮನದಲ್ಲಿಟ್ಟುಕೊಂಡು ಬಿಡಿಸಲಾಗಿದೆ. ಆದ್ದರಿಂದ ಅವು ಯಾವ ಆಕಾರದಲ್ಲಿವೆಯೋ, ಆ ಆಕಾರದಲ್ಲಿಯೇ ಅವುಗಳನ್ನು ಬಿಡಿಸಬೇಕು. ಅವುಗಳ ಆಕಾರವನ್ನು ತುಂಬಾ ಚಿಕ್ಕದು ಅಥವಾ ದೊಡ್ಡದು ಮಾಡಬಾರದು.
೩. ಮದರಂಗಿ ಬಿಡಿಸುವವರು ಇಲ್ಲಿ ಕೊಟ್ಟಿರುವ ವಿವಿಧ ವಿನ್ಯಾಸಗಳ ವಿವಿಧ ಆಕೃತಿಗಳನ್ನು ಒಟ್ಟಿಗೆ ಮಾಡಿ ಸ್ವತಂತ್ರ ವಿನ್ಯಾಸಗಳನ್ನು ತಯಾರಿಸಬಹುದು ಅಥವಾ ಇರುವ ವಿನ್ಯಾಸಗಳ ಕೆಲವು ಆಕೃತಿಗಳನ್ನು ತೆಗೆದು ಅದರ ಬದಲು ಇತರ ವಿನ್ಯಾಸಗಳ ಕೆಲವು ಆಕೃತಿಗಳನ್ನು ಸೇರಿಸಬಹುದು; ಆದರೆ ಹೀಗೆ ಮಾಡುವಾಗ ಹೊಸ ವಿನ್ಯಾಸದ ಆಕಾರ ಪರಸ್ಪರ ಹೊಂದಾಣಿಕೆ ಯಾಗಬೇಕು ಮತ್ತು ಆ ಸಂಪೂರ್ಣ ವಿನ್ಯಾಸದಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿಸಬೇಕು.
೪. ಕೇವಲ ಒಂದು ಕೈ ಅಥವಾ ಒಂದು ಕಾಲಿಗಾಗಿರುವ ಯಾವುದಾದರೊಂದು ವಿನ್ಯಾಸದಲ್ಲಿ ದೇವತೆಯ ತತ್ತ್ವ ಎಷ್ಟು ಬರಬಹುದೋ, ಅದಕ್ಕಿಂತ ಸ್ವಲ್ಪ ಹೆಚ್ಚು ಅಥವಾ ಕಡಿಮೆ ತತ್ತ್ವವು ಆ ವಿನ್ಯಾಸವನ್ನು ಎರಡೂ ಕೈಗಳು ಮತ್ತು ಎರಡೂ ಕಾಲುಗಳ ಮೇಲೆ ಬಿಡಿಸಿದ ಒಟ್ಟು ಚಿತ್ರಗಳಲ್ಲಿ ಬರಬಹುದು, ಉದಾ. ಒಂದು ಕೈಮೇಲಿನ ಒಂದು ವಿನ್ಯಾಸದಲ್ಲಿ ಶೇ. ೨ ರಷ್ಟು ದೇವತೆಯ ತತ್ತ್ವ ಬರುತ್ತದೆ; ಆದರೆ ಆ ವಿನ್ಯಾಸವನ್ನೇ ಎರಡೂ ಕೈ ಮತ್ತು ಆ ದೇವತೆಯ ತತ್ತ್ವವಿರುವ ಇತರ ವಿನ್ಯಾಸವನ್ನು ಎರಡೂ ಕಾಲುಗಳ ಮೇಲೆ ಬಿಡಿಸಿದರೂ ದೇವತೆಯ ತತ್ತ್ವವು ಶೇ. ೨ ಕ್ಕಿಂತ ಸ್ವಲ್ಪ ಕಡಿಮೆ ಅಥವಾ ಸ್ವಲ್ಪ ಹೆಚ್ಚು ಬರಬಹುದು.
೫. ಯಾವಾಗ ಯಾವುದಾದರೊಂದು ವಿನ್ಯಾಸವನ್ನು ನೋಡಿ ‘ಮನಸ್ಸು ಸ್ಥಿರವಾಗುತ್ತದೆ ಮತ್ತು ಮನಸ್ಸಿಗೆ ಏನೂ ಅನಿಸುವುದಿಲ್ಲವೋ’, ಆಗ ಆ ವಿನ್ಯಾಸದಿಂದ ಶಾಂತಿಯ ಅನುಭೂತಿ ಬರುತ್ತದೆ. ಇಂತಹ ವಿನ್ಯಾಸವನ್ನು ಬಿಡಿಸುವುದರಿಂದ ವಾತಾವರಣದಲ್ಲಿಯೂ ಶಾಂತಿಯ ಅನುಭೂತಿ ಬರುತ್ತದೆ. ಉತ್ಸವಗಳ ಸಮಯದಲ್ಲಿ ಚೈತನ್ಯ ಮತ್ತು ಆನಂದದ ಆವಶ್ಯಕತೆಯಿರುವುದರಿಂದ ಇಂತಹ ಸಮಯದಲ್ಲಿ ಶಾಂತಿಯ ಅನುಭೂತಿಯನ್ನು ಕೊಡುವ ವಿನ್ಯಾಸವನ್ನು ಹೆಚ್ಚಾಗಿ ಬಿಡಿಸುವುದಿಲ್ಲ; ಆದುದರಿಂದ ಇಂತಹ ವಿನ್ಯಾಸಗಳನ್ನು ಈ ಇಲ್ಲಿ ಸೇರಿಸಿಲ್ಲ. ಶಾಂತಿಯ ಅನುಭೂತಿಯನ್ನು ಪಡೆಯುವ ಆಕೃತಿಯು ಹೇಗಿರುತ್ತದೆ ಎಂಬುದನ್ನು ಸನಾತನದ ‘ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.
ಸಮಾಜದಲ್ಲಿನ ಮದರಂಗಿಗಳನ್ನು ಬಿಡಿಸುವ ವ್ಯಕ್ತಿಗಳು ಮತ್ತು ಬಿಡಿಸಿಕೊಳ್ಳುವ ಸ್ತ್ರೀಯರು, ಹಾಗೆಯೇ ಆ ವಿನ್ಯಾಸಗಳನ್ನು ನೋಡುವವರಿಗೆ ಇಲ್ಲಿ ನೀಡಿರುವ ಸಾತ್ತ್ವಿಕ ವಿನ್ಯಾಸಗಳಿಂದ ಆಧ್ಯಾತ್ಮಿಕ ಲಾಭವಾಗಬೇಕು ಮತ್ತು ಅವರಲ್ಲಿ ಸಾತ್ತ್ವಿಕತೆಯ ಸೆಳೆತ ನಿರ್ಮಾಣವಾಗಬೇಕೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸಾತ್ತ್ವಿಕ ಮದರಂಗಿಗಳು (ಅಯೋಗ್ಯ ಮದರಂಗಿಗಳ ದುಷ್ಪರಿಣಾಮಗಳ ಸಹಿತ)’, ‘ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು (ವಿನ್ಯಾಸಗಳ ಸಾತ್ತ್ವಿಕತೆಯ ಹಿಂದಿನ ಕಾರಣಮೀಮಾಂಸೆಗಳೊಂದಿಗೆ)’ ಗ್ರಂಥಗಳು)