ಸ್ತ್ರೀಯರು ಮದರಂಗಿಯನ್ನು ಬಿಡಿಸುವುದು ಏಕೆ ಯೋಗ್ಯವಾಗಿದೆ

‘ಮದರಂಗಿ’ಯು ಸ್ತ್ರೀಯರ ಪ್ರಕೃತಿಪ್ರಧಾನ ಕಾರ್ಯವನ್ನು ಮಾಡಲು ಹೆಚ್ಚು ಪುಷ್ಟಿಯನ್ನು ನೀಡುವುದರಿಂದ ಅದು ಸ್ತ್ರೀಯರ ಸೌಂದರ್ಯ, ಮೋಹಕತೆ ಮತ್ತು ಅವರ ಕೋಮಲತೆಯನ್ನು ಅರಳಿಸುವಂತಹದ್ದಾಗಿದ್ದರಿಂದ ಅದು ಪುರುಷರಿಗಿಂತ ಸ್ತ್ರೀಯರ ಪ್ರಕೃತಿಗೆ ಹೆಚ್ಚು ಪೋಷಕವಾಗಿರುತ್ತದೆ.

ಮದರಂಗಿಯಲ್ಲಿರುವ ಸ್ತ್ರೀತ್ವಕ್ಕೆ ಪೋಷಕವಾಗಿರುವ ಗುಣಧರ್ಮ ಮತ್ತು ಅವುಗಳ ಕಾರ್ಯ

೧. ಸ್ತ್ರೀಶಕ್ತಿಯ ಕಾರ್ಯಕ್ಕೆ ಪುಷ್ಟಿ ಕೊಡುವ ಕ್ಷಮತೆ

೨. ಸ್ತ್ರೀಯ ಸೌಂದರ್ಯ, ಮೋಹಕತೆ ಮತ್ತು ಕೋಮಲತೆಯನ್ನು ಅರಳಿಸುವ ಶಕ್ತಿಯನ್ನು ಪ್ರದಾನಿಸುವ ಕ್ಷಮತೆ

೩. ಸ್ತ್ರೀಯರ ತ್ವಚೆಯು ಮದರಂಗಿಯಲ್ಲಿನ ಸೂಕ್ಷ  ಲಹರಿಗಳನ್ನು ಗ್ರಹಿಸಲು ಪುರುಷರಿಗಿಂತ ಹೆಚ್ಚು ಸಂವೇದನಾಶೀಲವಾಗಿದೆ

೪. ಮದರಂಗಿಯ ಸೂಕ್ಷ ಗಂಧವು ಸ್ತ್ರೀಯರ ಗರ್ಭಶಕ್ತಿಯನ್ನು ಜಾಗೃತಗೊಳಿಸುತ್ತದೆ

೪ ಅ. ಮದರಂಗಿಯ ಸೂಕ್ಷ ಗಂಧವು ಸ್ತ್ರೀಯರ ಗರ್ಭಶಕ್ತಿಯನ್ನು ಜಾಗೃತಗೊಳಿಸುತ್ತದೆ

೪ ಆ. ಮದರಂಗಿಯ ಎಲೆಗಳ ಸುಗಂಧವು ಸ್ತ್ರೀಯರ ಸ್ಥೂಲದೇಹವನ್ನು ಶುದ್ಧ ಗೊಳಿಸುವುದರಿಂದ ಅವರ ಆಧ್ಯಾತ್ಮಿಕ ಸೌಂದರ್ಯವು ತಾನಾಗಿಯೇ ಹೆಚ್ಚುತ್ತದೆ

೪ ಇ. ಮದರಂಗಿಯ ಗಂಧದಲ್ಲಿ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಮಾರಕ ಗಣೇಶತತ್ತ್ವ ವಿರುತ್ತದೆ. ಸ್ಥೂಲದೇಹದ ಶುದ್ಧಿಗಾಗಿ ಈ ತತ್ತ್ವದ ಲಾಭವೂ ಆಗುತ್ತದೆ.

ಕೆಲವು ಕಡೆಗಳಲ್ಲಿ ವಿವಾಹ ಮುಂತಾದ ಪ್ರಸಂಗಗಳಲ್ಲಿ ಪುರುಷರ ಕೈ-ಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸುವುದು ಕಂಡುಬಂದರೂ ಅದು ಕೇವಲ ರೂಢಿಯಾಗಿದೆ, ಅದಕ್ಕೆ ಶಾಸ್ತ್ರಾಧಾರವಿಲ್ಲ.

ಟಿಪ್ಪಣಿ – ಐದು ವರ್ಷದ ವರೆಗಿನ ಮಕ್ಕಳಲ್ಲಿ ಸ್ತ್ರೀ-ಪುರುಷ ಎಂಬ ಭೇದದ ಅರಿವಿರದಿರುವುದರಿಂದ ಐದು ವರ್ಷದ ವರೆಗಿನ ಹುಡುಗರ ಕೈ-ಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸಬಹುದು.

ಮದರಂಗಿಯನ್ನು ಹಚ್ಚುವುದರ ಹಿಂದಿನ ಉದ್ದೇಶ

ಅ. ಶೃಂಗಾರ : ಕೈಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸುವುದು ಸ್ತ್ರೀಯರ ಅಲಂಕಾರದ ಒಂದು ಭಾಗವಾಗಿದೆ.

ಆ. ಧಾರ್ಮಿಕ ಪರಂಪರೆಯ ಪಾಲನೆ : ಭಾರತದಲ್ಲಿ ಎಲ್ಲ ಕಡೆಗಳಲ್ಲಿ ಪ್ರಚಲಿತ ವಾಗಿರುವ ಪ್ರಾಚೀನ ಧಾರ್ಮಿಕ ಪರಂಪರೆಯ ಪಾಲನೆಯೆಂದು ಮಂಗಲ ಪ್ರಸಂಗಗಳಲ್ಲಿ ಸ್ತ್ರೀಯರ ಕೈ-ಕಾಲುಗಳ ಮೇಲೆ ಮದರಂಗಿಯನ್ನು ಬಿಡಿಸಲಾಗುತ್ತದೆ.

ಇ. ಔಷಧವೆಂದು ಉಪಯೋಗಿಸುವುದು

ಇ ೧. ಮದರಂಗಿಯು ತಂಪಾಗಿರುವುದರಿಂದ ಅದನ್ನು ಹಚ್ಚಿದರೆ ಕೈ-ಕಾಲುಗಳ ಉಷ್ಣತೆ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಕೈ, ಕಾಲು ಮತ್ತು ತಲೆಗೆ ಮದರಂಗಿಯ ಲೇಪವನ್ನು ಹಚ್ಚುವುದು ಲಾಭದಾಯಕವಾಗಿದೆ.

ಇ ೨. ತ್ವಚೆಯ ಕೆಲವು ರೋಗಗಳಿಗೆ ಮದರಂಗಿ ಗುಣಕಾರಿಯಾಗಿದೆ.

ಇ ೩. ವಿಶಿಷ್ಟ ರೀತಿಯ ಮದರಂಗಿಯನ್ನು ಕೂದಲುಗಳಿಗೆ ಹಚ್ಚುವುದರಿಂದ ಕೂದಲುಗಳ ಗುಣಮಟ್ಟ ಸುಧಾರಿಸುತ್ತದೆ, ಹಾಗೆಯೇ ಅವುಗಳಿಗೆ ಬೇರೆಯೇ ಬಣ್ಣ ಬರುತ್ತದೆ.

ಮದರಂಗಿ ಬಿಡಿಸುವುದರಿಂದಾಗುವ ವಿವಿಧ ಲಾಭಗಳು

ಅ. ಶಾರೀರಿಕ ಸ್ತರ – ಸೌಂದರ್ಯವೃದ್ಧಿ : ಮದರಂಗಿಯಿಂದ ಸ್ತ್ರೀಯರ ಸೌಂದರ್ಯ ಹೆಚ್ಚಾಗಿ ಅವರು ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ.

ಆ. ಮಾನಸಿಕ ಸ್ತರ – ಮನಸ್ಸು ಉತ್ಸಾಹಿಯಾಗುತ್ತದೆ : ಮದರಂಗಿಯ ಸಹಾಯದಿಂದ ಕೈ-ಕಾಲುಗಳ ಮೇಲೆ ವಿನ್ಯಾಸಗಳನ್ನು (ಆಕೃತಿಗಳನ್ನು) ಬಿಡಿಸಿದರೆ ಅದರಿಂದ ಪ್ರಕ್ಷೇಪಿಸುವ ಸ್ಪಂದನಗಳಿಂದ ಮನಸ್ಸು ಉತ್ಸಾಹಿಯಾಗುತ್ತದೆ.

ಇ. ಆಧ್ಯಾತ್ಮಿಕ ಸ್ತರ

ಇ ೧. ಮದರಂಗಿಯ ಪರಿಮಳದಿಂದ ಮಾರಕ ಶಕ್ತಿ ಪ್ರಕ್ಷೇಪಿಸುವುದರಿಂದ ದೇಹದ ರಕ್ಷಣೆಯಾಗುತ್ತದೆ

ಇ ೨. ಮದರಂಗಿಯ ಸಾತ್ತ್ವಿಕ ವಿನ್ಯಾಸಗಳಿಂದ ಬ್ರಹ್ಮಾಂಡಮಂಡಲದಲ್ಲಿನ ವಿವಿಧ ದೇವತೆಗಳ ತತ್ತ್ವಗಳು ದೇಹದ ಕಡೆಗೆ ಆಕರ್ಷಿಸುತ್ತವೆ

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸಾತ್ತ್ವಿಕ ಮದರಂಗಿಗಳು (ಅಯೋಗ್ಯ ಮದರಂಗಿಗಳ ದುಷ್ಪರಿಣಾಮಗಳ ಸಹಿತ)’, ‘ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು (ವಿನ್ಯಾಸಗಳ ಸಾತ್ತ್ವಿಕತೆಯ ಹಿಂದಿನ ಕಾರಣಮೀಮಾಂಸೆಗಳೊಂದಿಗೆ)’ ಗ್ರಂಥಗಳು)

Leave a Comment