ಯಾವಾಗ ಪ್ರತಿಯೊಂದು ವಿಷಯವನ್ನು ಸತ್ತ್ವಗುಣದ ಸಹಾಯದಿಂದ ಮಾಡಲಾಗುತ್ತದೆಯೋ, ಆಗ ಅದು ಆ ಜೀವವನ್ನು ಕಡಿಮೆ ಕಾಲಾವಧಿಯಲ್ಲಿ ದೇವತೆಯ ಹತ್ತಿರಕ್ಕೆ ಕರೆದೊಯ್ಯುತ್ತದೆ
ಯಾವಾಗ ಪ್ರತಿಯೊಂದು ವಿಷಯವನ್ನು ಸತ್ತ್ವಗುಣದ ಸಹಾಯದಿಂದ ಮತ್ತು ಯೋಗ್ಯ ರೀತಿಯಲ್ಲಿಯೇ ಮಾಡಲಾಗುತ್ತದೆಯೋ, ಆಗ ಅದು ಆ ಜೀವವನ್ನು ಕಡಿಮೆ ಕಾಲಾವಧಿಯಲ್ಲಿ ದೇವತೆಯ ಹತ್ತಿರ ಕರೆದೊಯ್ಯುತ್ತದೆ, ಅಂದರೆ ಅದು ಅದಕ್ಕೆ ದೇವತೆಯ ತತ್ತ್ವದ ಅನುಭೂತಿಯನ್ನು ಕೊಡುತ್ತದೆ. ಎಲ್ಲಿ ಅನುಭೂತಿಜನ್ಯ ವಿಶ್ವ ಪ್ರಾರಂಭವಾಗುತ್ತದೆಯೋ, ಅಲ್ಲಿ ಮಾಯೆಯ ಜಗತ್ತಿನಿಂದ ಅಲಿಪ್ತತೆ ಬರುವುದರಿಂದ ಜೀವವು ನಶ್ವರ ಸುಖದಿಂದ ಶಾಶ್ವತ ಆನಂದದ ಕಡೆಗೆ ಹೋಗತೊಡಗುತ್ತದೆ.
೧. ರೂಪ ಮತ್ತು ಬಣ್ಣ ಇವುಗಳ ಮಹತ್ವ
೧ ಅ. ರೂಪದ ಮಹತ್ವ
೧ ಅ ೧. ತೇಜಸ್ಸಿನ ಪೂಜೆ : ರೂಪದ ಪೂಜೆಯೆಂದರೆ ಬ್ರಹ್ಮಾಂಡದಲ್ಲಿನ ತೇಜಸ್ಸಿನ ಪೂಜೆ.
೧ ಅ ೨. ದೇವತೆಗಳ ತತ್ತ್ವಗಳ ಲಹರಿಗಳು ಆಕರ್ಷಿಸುವುದು : ರೂಪದಿಂದ ತೇಜತತ್ತ್ವದ ಲಹರಿಗಳನ್ನು ಆಕರ್ಷಿಸಲು ಸಹಾಯವಾಗುತ್ತದೆ. ರೂಪವು ಸತ್ತ್ವಗುಣದ ಕಡೆಗೆ ಎಷ್ಟು ಧಾವಿಸುತ್ತದೆಯೋ, ಅಷ್ಟು ಹೆಚ್ಚು ಪ್ರಮಾಣದಲ್ಲಿ ಅದು ದೇವತೆಗಳ ತತ್ತ್ವಗಳ ಸತ್ತ್ವಗುಣಿ ಲಹರಿಗಳನ್ನು ಆಕರ್ಷಿಸಲು ಪೂರಕವಾಗಿರುತ್ತದೆ.
೧ ಅ ೩. ರೂಪಜನ್ಯ ಆಕೃತಿಬಂಧದಲ್ಲಿ ನಿರ್ಗುಣಜನ್ಯತೆಯು ಹೆಚ್ಚಿರುತ್ತದೆ.
೧ ಆ. ಬಣ್ಣದ ಮಹತ್ವ
೧ ಆ ೧. ದೇವತೆಯ ತತ್ತ್ವ ಜಾಗೃತವಾಗುತ್ತದೆ : ರೂಪದಲ್ಲಿರುವ ಬಣ್ಣದಿಂದ ದೇವತೆಯ ತತ್ತ್ವ ಜಾಗೃತವಾಗುತ್ತದೆ; ಆದುದರಿಂದ ರೂಪದೊಂದಿಗೆ ಬಣ್ಣಕ್ಕೂ ಮಹತ್ವವಿದೆ.
೧ ಆ ೨. ಸಾತ್ತ್ವಿಕ ರೂಪದಲ್ಲಿರುವ ಬಣ್ಣವು ದೇವತೆಗಳಿಗೆ ಅವರ ಗುಣಗಳೊಂದಿಗೆ ಕಾರ್ಯವನ್ನು ಮಾಡಲು ಉದ್ಯುಕ್ತಗೊಳಿಸುತ್ತವೆ.
೧ ಆ ೩. ಸಾತ್ತ್ವಿಕ ಬಣ್ಣದಲ್ಲಿ ಸಗುಣಜನ್ಯತೆ ಹೆಚ್ಚಿರುತ್ತದೆ.
೨. ಅಯೋಗ್ಯ ಆಕಾರದ ಮದರಂಗಿಗಳಿಂದ ಜೀವದ ಮೇಲಾಗುವ ದುಷ್ಪರಿಣಾಮಗಳು
೨ ಅ. ದೇಹಕ್ಕೆ ಕೆಟ್ಟ ಶಕ್ತಿಗಳ ತೊಂದರೆಯಾಗಬಹುದು : ಅಯೋಗ್ಯ ಆಕಾರಗಳು ಬ್ರಹ್ಮಾಂಡದಲ್ಲಿನ ಅಯೋಗ್ಯ, ಅಂದರೆ ತ್ರಾಸದಾಯಕ ಸ್ಪಂದನಗಳನ್ನು ಆಕರ್ಷಿಸುವುದರಿಂದ ದೇಹಕ್ಕೆ ಕೆಟ್ಟ ಶಕ್ತಿಗಳ ತೊಂದರೆಯಾಗಬಹುದು; ಆದುದರಿಂದ ಸಾತ್ತ್ವಿಕ ಮದರಂಗಿಯ ಆಕಾರಗಳನ್ನೇ ಬಿಡಿಸಬೇಕು.
೨ ಆ. ಮನಸ್ಸಿನಲ್ಲಿ ‘ವಿಕಾರ ಮತ್ತು ವಿಕಲ್ಪ’ಗಳು ನಿರ್ಮಾಣವಾಗುತ್ತವೆ : ಅಯೋಗ್ಯ ವಿನ್ಯಾಸಗಳು ರಜ-ತಮಾತ್ಮಕ ಸ್ಪಂದನಗಳನ್ನು ನಿರ್ಮಿಸಿ ವ್ಯಕ್ತಿಯ ಮನಸ್ಸಿನಲ್ಲಿ ವಿಕಾರ ಮತ್ತು ವಿಕಲ್ಪಗಳನ್ನು ನಿರ್ಮಿಸುತ್ತವೆ.
(ಓದಿ ಸನಾತನ ನಿರ್ಮಿತ ‘ಸಾತ್ತ್ವಿಕ ಮದರಂಗಿಗಳು (ಅಯೋಗ್ಯ ಮದರಂಗಿಗಳ ದುಷ್ಪರಿಣಾಮಗಳ ಸಹಿತ)’, ‘ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು (ವಿನ್ಯಾಸಗಳ ಸಾತ್ತ್ವಿಕತೆಯ ಹಿಂದಿನ ಕಾರಣಮೀಮಾಂಸೆಗಳೊಂದಿಗೆ)’ ಗ್ರಂಥಗಳು)